ಪ್ರಚಲಿತ

ಮತ್ತೆ ಬಿಜೆಪಿಗೆ ಶರಣಾದ ಕೇಜ್ರಿವಾಲ್!! ಈ ಬಾರಿ ಕ್ಷಮೆ ಕೇಳಿದ್ದು ಯಾರಲ್ಲಿ?!

ಪ್ರತಿ ಬಾರಿ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ!! ಅರವಿಂದ್ ಕೇಜ್ರಿವಾಲ್ ಅನ್ನುವ ವ್ಯಕ್ತಿ ಯಾರೆಂದು ಯಾರಿಗೂ ಗೊತ್ತೇ ಇರಲಿಲ್ಲ. ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಒಂದೊಂದಾಗಿಯೇ ಬಯಲಿಗೆಳೆದ ಅಣ್ಣಾ ಹಜಾರೆಯವರ ಹೋರಾಟದಲ್ಲಿ ಕರೆಯದೆಯೇ ಬಂದ ಅತಿಥಿಯಾಗಿ ಆ ಹೋರಾಟಕ್ಕೆ ಕೈಜೋಡಿಸಿದವರು!! ಕೊನೆಗೆ ತಾನೊಬ್ಬ ಸೂಪರ್ ಸ್ಟಾರ್ ಆಗಿ ಮಿಂಚಿ, ಅದೇ ಅಣ್ಣಾ ಹಜಾರೆಯವರ ವಿರೋಧದ ನಡುವೆಯೂ ಆಮ್ ಆದ್ಮಿ ಪಕ್ಷವನ್ನು ಕಟ್ಟುತ್ತಾರೆ!! ನಂತರ ನಡೆದದ್ದೇ ಬೇರೆ!! ಯಾವ ಪಕ್ಷದ ವಿರುದ್ಧ ತೊಡೆ ತಟ್ಟಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರೋ , ಅದೇ ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ದೆಹಲಿಯಲ್ಲಿ ಸರ್ಕಾರವನ್ನು ರಚಿಸಿದರು ಕೇಜ್ರಿವಾಲ್! ಮೇಲಿಂದ ಮೇಲೆ ಸೋಲಾದರೂ ಅದೇಗೋ ಮತ್ತೆ ಬಂದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದರು!! ಇದೀಗ ಇದೇ ಕೇಜ್ರಿವಾಲ್ ತೀವ್ರ ಮುಖಭಂಗಕ್ಕೀಡಾಗಿದ್ದಾರೆ!!

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಅರುಣ್ ಜೇಟ್ಲಿ ಅವರು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಭ್ರಷ್ಟಾಚಾರಗಳನ್ನು ನಡೆಸಿದ್ದಾರೆಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಇದು ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿತ್ತು. ಸದನದಲ್ಲಿಯೂ ಭಾರೀ ಗದ್ದಲ ಏರ್ಪಟ್ಟಿತ್ತು. ದೇಶಾದ್ಯಂತ ವಿವಾದವನ್ನು ಅರವಿಂದ್ ಕೇಜ್ರಿವಾಲ್ ಈ ಆರೋಪದ ಮೂಲಕ ಸೃಷ್ಟಿಸಿದ್ದರು.

ಈ ಸುಳ್ಳು ಆರೋಪದಿಂದ ತೀವ್ರ ಅಸಮಾಧಾನಗೊಂಡಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಅಶುತೋಷ್, ಸಂಜಯ್ ಸಿಂಗ್, ದೀಪಕ್ ಬಾಜ್ ಪೈ, ಕುಮಾರ್ ವಿಶ್ವಾಸ್, ರಾಘವ ಚಾಂದಾ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು. ಬರೋಬ್ಬರಿ ಹತ್ತು ಕೋಟಿ ರೂಪಾಯಿ ಮಾನಹಾನಿ ತುಂಬಿಕೊಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು.

ಪಟಿಯಾಲ ಕೋರ್ಟ್ ನಲ್ಲಿ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರದ ಮೂಲಕ ಕ್ಷಮೆ ಕೋರಿದ್ದು, ಆಪ್ ಪಕ್ಷದ ಎಲ್ಲಾ ನಾಲ್ವರು ಮುಖಂಡರು ಪ್ರತ್ಯೇಕ ಪತ್ರ ಬರೆಯುವ ಮೂಲಕ ಕ್ಷಮೆ ಕೇಳಿದ್ದಾರೆ. ಅಲ್ಲದೇ ಈ ಪತ್ರವನ್ನು ಪ್ರತ್ಯೇಕವಾಗಿ ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ನಿಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆ.

Related image

ನನಗೆ ಆ ವೇಳೆ ಸಿಕ್ಕ ಮಾಹಿತಿಗೆ ಯಾವುದೇ ದಾಖಲೆಗಳು, ಆಧಾರಗಳು ಇಲ್ಲ. ನಾನು ತಪ್ಪು ಮಾಹಿತಿ ಪಡೆದು ಆರೋಪ ಮಾಡಿದೆ. ಇದರಿಂದ ನಿಮಗೇ ಹಾಗೂ ನಿಮ್ಮ ಕುಟುಂಬ ಸದಸ್ಯರ ಗೌರವಕ್ಕೆ ದಕ್ಕೆ ಉಂಟಾಗಿದ್ದಾರೆ ಕ್ಷಮಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ಅಶುತೋಷ್ ಹಾಗೂ ದೀಪಕ್ ಬಾಜ್ ಪೈ ಪೈವಿರುದ್ಧ 10 ಕೋಟಿ ರೂಪಾಯಿಗಳ ಮಾನಹಾನಿ ಪ್ರಕರಣವನ್ನು ಅರುಣ್ ಜೇಟ್ಲಿ ದಾಖಲಿಸಿದ್ದರು. ಇದೀಗ ಯಾವುದೇ ಯಾವುದೇ ದಾಖಲೆಗಳನ್ನು ಒದಗಿಸಲಾಗದೆ ಕ್ಷಮಾಪಣೆ ಕೇಳಿದ್ದಾರೆ!!

 

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಯವರ ಬಳಿ ಕ್ಷಮೆಯಾಚಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಳಿ ಕ್ಷಮೆ ಕೇಳಿದ್ದಾರೆ. ಕೇಜ್ರಿವಾಲ್ ಜೊತೆ ಆಪ್ ಮುಖಂಡರಾದ ಅಶುತೋಶ್, ರಾಘವ್ ಚಾಂದಾ, ಸಂಜಯ್ ಸಿಂಗ್ ಕೂಡ ತಮ್ಮ ವಿರುದ್ಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು 10 ಕೋಟಿ ರೂ. ಪರಿಹಾರ ಕೇಳಿ ದಾಖಲಿಸಿದ್ದು ಮಾನಹಾನಿ ಪ್ರಕರಣದಲ್ಲಿ ಕ್ಷಮೆ ಕೋರಿದ್ದಾರೆ. ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಆಡಳಿತ ವಿಷಯಗಳಲ್ಲಿ ಹೆಚ್ಚು ಗಮನಹರಿಸಲು ಕ್ರೇಜಿವಾಲ್ ತಮ್ಮ ವಿರುದ್ಧದ ದಾಖಲಾಗಿದ್ದ ಎಲ್ಲಾ ಮಾನನಷ್ಟ ಮೊಕದ್ದಮೆಗಳಿಗೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಕೇಜ್ರಿವಾಲರ ವಿರುದ್ಧ ದಾಖಲಾಗಿದ್ದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸುಮಾರು 20 ಪ್ರಕರಣಗಳು ಬಾಕಿ ಉಳಿದಿದೆ.

ಕೇಜ್ರಿವಾಲ್ ಸುಖಾಸುಮ್ಮನೆ ತಾನು ಶೈನ್ ಆಗಲು ಹೋಗಿ ತಾನೇ ಪೇಚೆಗೆ ಸಿಲುಕಿರುವುದು ಎಲ್ಲರಿಗೂ ನಗುವನ್ನು ತರಿಸುವಂತೆ ಮಾಡಿದೆ!!

ಪವಿತ್ರ

Tags

Related Articles

Close