ಪ್ರಚಲಿತ

ಪವರ್ ಫುಲ್ ಮಿನಿಸ್ಟರ್ ಗೆ ದಿಗ್ಭಂಧನ ಹಾಕಿದ ಕೋರ್ಟ್! ಸಾಕಪ್ಪಾ ಇವರ ಸಹವಾಸ ಎಂದ ಡಿಕೆಶಿ!

ಗ್ರಹಚಾರ ಕೆಟ್ಟರೆ ಅದ್ಯಾವ ಅಧಿಕಾರವೂ ಕೈ ಹಿಡಿಯುವುದಿಲ್ಲ ಎಂಬುದು ಈ ಕಾಂಗ್ರೆಸಿಗರನ್ನು ನೋಡಿದರೆ ಹೇಳಬಹುದು. ಮೇಲಿಂದ ಮೇಲೆ ಏನಾದರೊಂದು ಹೊಡೆತ ತಿನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ಯಾವ ದಿಕ್ಕಿನಲ್ಲೂ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತಿಲ್ಲ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಖಜಾನೆ ತುಂಬಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಈದೀಗ ಬಲೆಯಲ್ಲಿ ಸಿಕ್ಕ ಮೀನಿನಂತೆ ಒದ್ದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ತಮಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡಿಟ್ಟುಕೊಂಡಿದ್ದು ಇದೀಗ ಕೇಂದ್ರದ ಐಟಿ ಅಧಿಕಾರಿಗಳ ಬೇಟೆಗೆ ಸಿಲುಕಿದ್ದಾರೆ.

ಪವರ್ ಮಿನಿಸ್ಟರ್ ಗೆ ಐಟಿ ಶಾಕ್..!

ಕರ್ನಾಟಕದ ಪವರ್ ಫುಲ್ ಲೀಡರ್ ಕಾಂಗ್ರೆಸ್ ನ ಪವರ್ ಮಿನಿಸ್ಟರ್ ಡಿ ಕೆ ಶಿವಕುಮಾರ್ ಮೇಲೆ ಕಳೆದ ಬಾರಿ ಐಟಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ಕಪ್ಪು ಹಣ ಸಿಕ್ಕಿಬಿದ್ದಿತ್ತು. ಕೇಂದ್ರ ಸರಕಾರ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲೂ ತಾನು ಐಶಾರಾಮಿ ಜೀವನ ನಡೆಸುತ್ತಿದ್ದ ಡಿಕೆ ಶಿವಕುಮಾರ್ ತನ್ನ ಹಾಗೂ ಪತ್ನಿಯ ಮನೆಯಲ್ಲಿ ಕೋಟಿ ಕೋಟಿ ಹಣವನ್ನು ಇಟ್ಟುಕೊಂಡಿದ್ದು, ಇಡೀ ದೇಶವೇ ಈ ಹಣವನ್ನು ಕಂಡು ಬೆಚ್ಚಿಬಿದ್ದಿತ್ತು. ಯಾಕೆಂದರೆ ಜನಸಾಮಾನ್ಯರು ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ಮಾತ್ರ ತಮ್ಮ ಮನೆಯಲ್ಲೇ ಕೋಟಿ ಕೋಟಿ ಹಣ ಇಟ್ಟುಕೊಂಡು ಆರಾಮಾಗಿದ್ದರು. ಇಂತಹ ಕದೀಮರಲ್ಲಿ ಐಟಿ ಅಧಿಕಾರಿಗಳ ಕಣ್ಣಿಗೆ ಬಿದ್ದ ಡಿಕೆ ಶಿವಕುಮಾರ್ ಮೇಲೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದರು.

ಐಟಿ ಅಧಿಕಾರಿಗಳ ದಾಳಿಗೆ ಬೆಚ್ಚಿಬಿದ್ದಿದ್ದ ಡಿಕೆ ಶಿವಕುಮಾರ್ ಮತ್ತು ಇಡೀ ಕಾಂಗ್ರೆಸ್ ನಾಯಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಬಳಿ ಅಪಾರ ಪ್ರಮಾಣದ ಆಸ್ತಿ, ಹಣ , ಬಂಗಾರ ಇತ್ಯಾದಿ ಪತ್ತೆಯಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ಖಜಾನೆ ತುಂಬಿಸಿಕೊಂಡಿದ್ದ ಡಿಕೆಶಿ ಯಾವುದೇ ದಾಖಲೆ ಪತ್ರ ಇಟ್ಟುಕೊಂಡಿರಲಿಲ್ಲ. ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿದ ಅಧಿಕಾರಿಗಳು ಡಿಕೆಶಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಈ ಎಲ್ಲಾ ಪ್ರಕರಣಗಳಿಗೂ ಅಂತ್ಯ ಹಾಡಲಿರುವ ಕೋರ್ಟ್ ಕೊನೆಯ ತೀರ್ಪು ಪ್ರಕಟಿಸಿದೆ.

ಅಧಿಕಾರಿಗಳ ಎದುರೇ ಸಾಕ್ಷ್ಯ ನಾಶ.!

ಅಧಿಕಾರದ ಅಹಂಕಾರದಲ್ಲಿ ತೇಲುತ್ತಿರುವ ಕಾಂಗ್ರೆಸ್ ನಾಯಕರಿಗೆ ತಾವು ಏನೇ ಮಾಡಿದರು ಅದರಿಂದ ತಪ್ಪಿಸಿಕೊಳ್ಳಬಹುದು ಎಂಬ ಕೆಟ್ಟ ನಂಬಿಕೆಯಿದೆ. ಆದರೆ ಕಾನೂನು ಮುಂದೆ ಎಲ್ಲರೂ ತಲೆಬಾಗಲೇಬೇಕು. ತನ್ನ ಮನೆಯ ಮೇಲೆ ನಡರಸಿದ ಐಟಿ ಅಧಿಕಾರಿಗಳ ದಾಳಿಗೆ ಕಂಗಾಲಾದ ಡಿಕೆಶಿ ತನ್ನ ಹೆಸರಿನಲ್ಲಿರುವ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುವ ವಿಚಾರ ತಿಳಿದು ಅಲ್ಲಿದ್ದ ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಿದ್ದರು. ಐಟಿ ಅಧಿಕಾರಿಗಳ ಎದುರೇ ಈ ರೀತಿ ವರ್ತಿಸಿದ್ದ ಡಿಕೆಶಿ ಮೇಲೆ ಅಧಿಕಾರಿಗಳು ೩ ಪ್ರಕರಣ ದಾಖಲಿಸಿಕೊಂಡಿದ್ದರು. ಅಕ್ರಮ ಆಸ್ತಿ ಸಂಪಾದನೆ, ತೆರಿಗೆ ವಂಚನೆ ಮತ್ತು ಸಾಕ್ಷ್ಯ ನಾಶ ಮಾಡಿರುವ ವಿಚಾರವಾಗಿ ಪ್ರಕರಣ ದಾಖಲಿಸಿದ್ದ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇಂದು ಈ ಪ್ರಕರಣದ ಬಗ್ಗೆ ಹೆಚ್ಚ ತೀರ್ಪು ಪ್ರಕಟವಾಗಲಿದ್ದು ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿದೆ.!

ಜಾಮೀನು ಕೋರಿ ಡಿಕೆಶಿ ಅರ್ಜಿ..!

ಅಕ್ರಮ ಆಸ್ತಿ ಸಂಪಾದನೆ , ತೆರಿಗೆ ವಂಚನೆ ಮತ್ತು ಸಾಕ್ಷ್ಯ ನಾಶದ ವಿಚಾರವಾಗಿ ಆಪಾದನೆ ಹೊತ್ತಿರುವ ಡಿಕೆಶಿ ಗೆ ಇಂದು ಅಂತಿಮ ವಿಚಾರಣೆ
ನಡೆಸಲಾಗುತ್ತಿದೆ. ಈ ಬಗ್ಗೆ ಇಂದು ಕೋರ್ಟ್ ಕೊನೆಯ ತೀರ್ಪು ನೀಡಲಿದ್ದು , ನ್ಯಾಯಾಧೀಶರು ಕೋರ್ಟ್ ಗೆ ಬರುವ ಅರ್ಧ ಗಂಟೆ ಮೊದಲೇ ಕೋರ್ಟ್ ಗೆ ಹಾಜರಾದ ಡಿಕೆಶಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಡಿಕೆಶಿ ಪರ ವಕೀಲ ಶೇಚಾಚಲ ವಾದ ಮಂಡಿಸಿದ್ದು , ಡಿಕೆಶಿ ಗೆ ಸಾಕ್ಷ್ಯ ನಾಶ ಮಾಡುವ ಯಾವುದೇ ಆಲೋಚನೆ ಇರಲಿಲ್ಲ. ಅವರು ಈ ಪ್ರಕರಣದ ವಿಚಾರಣೆಯ ವೇಳೆ ಇವೆಲ್ಲದರ ಬಗ್ಗೆ ವಿವರಣೆ ನೀಡಿದ್ದು, ಇದನ್ನೆಲ್ಲಾ ಗಮನಿಸಿ ಕೋರ್ಟ್ ಡಿಕೆಶಿ ಗೆ ಜಾಮೀನು ನೀಡಬೇಕೆಂದು ತಮ್ಮ ವಾದ ಮಂಡಿಸಿದ್ದಾರೆ. ಇದೀಗ ಈಡಿ ಕೋರ್ಟ್ ನಲ್ಲಿಈ ಬಗ್ಗೆ ಡಿಕೆಶಿ ಪರ – ವಿರೋಧ ವಾದ ಮಂಡನೆಯಾಗುತ್ತಿದ್ದು ಕೋರ್ಟ್ ಯಾವ ರೀತಿಯ ತೀರ್ಪು ನೀಡಲಿದೆ ಎಂದು ಕಾದು ನೋಡಬೇಕಾಗಿದೆ.!

ಡಿಕೆಶಿ ಗೆ ಯಾವುದೇ ಕಾರಣಕ್ಕೂ ಜಾಮೀನು ಸಾಧ್ಯವಿಲ್ಲ..!

ಅಕ್ರಮ ಆಸ್ತಿ ಸಂಪಾದನೆ ಮಾಡಿ ಯಾವುದೇ ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ನೀಡದೆ ವಂಚಿಸಿದ ಡಿಕೆ ಶಿವಕುಮಾರ್ ಗೆ ಇಂದು ಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಕೋರ್ಟ್ ನಲ್ಲಿ ಐಟಿ ಪರ ವಾದ ಮಂಡಿಸಿದ ವಕೀಲ ಪ್ರಭುಲಿಂಗ ನಾವಡಗಿ ಡಿಕೆ ಶಿವಕುಮಾರ್ ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ಕೇಳಿಕೊಂಡಿದ್ದಾರೆ. ೩ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಿವಕುಮಾರ್ ನನ್ನು ಇನ್ನೂ ವಿಚಾರಣೆ ಮಾಡುವ ಅಗತ್ಯವಿದೆ. ಈ ಕಾರಣದಿಂದ ಕೋರ್ಟ್ ಜಾಮೀನು ನೀಡದೆ , ಆರೋಪಿಯ ಅರ್ಜಿ ತಿರಸ್ಕರಿಸಬೇಕೆಂದು ಹೇಳಿದರು. ಐಟಿ ಪರ ವಕೀಲರ ವಾದವನ್ನು ಪರಿಗಣಿಸಿದ ನ್ಯಾಯಾಧೀಶರು ಯಾರ ಪರ ತೀರ್ಪು ನೀಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ ತನ್ನ ವಿರುದ್ಧ ನಡೆಸಿದ ವಾದವನ್ನು ಕಂಡು ಕಂಗಾಲಾಗಿರುವ ಡಿಕೆ ಶಿವಕುಮಾರ್ ಗೆ ಬಂಧನದ ಭೀತಿ ಹೆಚ್ಚಾಗಿದೆ.

ಬಂಧನವಿಲ್ಲದಿದ್ದರೂ ದಿಗ್ಭಂಧನ..!

ಅಕ್ರಮ ಆಸ್ತಿ ಹೊಂದಿದ್ದ ಅಪರಾಧಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಐಟಿ ಇಲಾಖೆ ಪವರ್ ಫುಲ್ ಮಿನಿಸ್ಟರ್ ಗೆ ಭಾರೀ ಕಂಟಕ ತಂದಿರಿಸಿದ್ದರು. ಇಂದು ೩ ಪ್ರಕರಣಗಳ ಬಗ್ಗೆ ತೀರ್ಪು ನೀಡಿದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಡಿಕೆ ಶಿವಕುಮಾರ್ ಗೆ ಶರತ್ತುಬದ್ದ ಜಾಮೀನು ನೀಡಿದೆ. ೨೫,೦೦೦ ರೂಪಾಯಿ ಮತ್ತು ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಪಡೆದು ಜಾಮೀನು ನೀಡಿದ ಕೋರ್ಟ್ ಸದ್ಯ ಕಂಗಾಲಾಗಿದ್ದ ಶಿವಕುಮಾರ್ ಗೆ ಸದ್ಯ ರಿಲೀಫ್ ನೀಡಿದೆ. ಹೊಸ್ತಿಲಲ್ಲೇ ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದ ಡಿಕೆಶಿ ಯ ಈ ಪ್ರಕರಣದಿಂದ ರಾಜ್ಯ ಮಾತ್ರವಲ್ಲದೆ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರೂ ಚಿಂತೆಗೀಡಾಗಿದ್ದರು.

ಕೋರ್ಟ್ ನಲ್ಲಿ ಜಾಮೀನು ಮಂಜುರಾಗುತ್ತಿದ್ದಂತೆ ಚಿಂತೆಯಲ್ಲಿದ್ದ ಡಿಕೆಶಿ ‘ಸಾಕಪ್ಪಾ ಈ ಐಟಿ ಇಲಾಖೆಯ ಸಹವಾಸ’ ಎಂದು ತಲೆ ಮೇಲೆ ಕೈ ಹೊತ್ತು ಕೋರ್ಟ್ ನಿಂದ ಹೊರ ನಡೆಸಿದ್ದಾರೆ.!

ತಮ್ಮದೇ ಆಡಳಿತ ಇರುವ ರಾಜ್ಯಗಳಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಸಂಪಾದಿಸಿ ಕೊಳ್ಳೆಹೊಡೆಯುತ್ತಿರುವ ಡಿಕೆಶಿಯಂತಹ ದೋಚುಕೋರರ ಕೈಗೆ ಕೋಳ ಹಾಕಿದ ಐಟಿ ಇಲಾಖೆ , ಸದ್ಯ ಕರ್ನಾಟಕದ ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣು ಇಟ್ಟು ಬೇಟೆಗೆ ಸಜ್ಜಾಗಿದೆ.!

–ಅರ್ಜುನ್

Tags

Related Articles

Close