ಪ್ರಚಲಿತ

ನಾವೊಬ್ಬ ಜವಾಬ್ದಾರಿಯುತ ಭಾರತೀಯರಾಗಿ ದೇಶಭಕ್ತ ಮಾಧ್ಯಮದವರಿಗೆ ಅದೆಷ್ಟು ಬೆಂಬಲ ನೀಡುತ್ತಿದ್ದೇವೆ?!

ನಮಸ್ತೆ!

ಪ್ರಸ್ತುತ ಸನ್ನಿವೇಶದಲ್ಲಿ ಬಹುಷಃ ಕೆಲವು ವಾಸ್ತವಗಳನ್ನು ಅವಲೋಕಿಸುವ ಅಗತ್ಯವಿದೆ! ಅದು ಇನ್ಯಾತಕ್ಕೋ ಅಲ್ಲ,ಬದಲಿಗೆ ನ್ಯಾಯ ಅನ್ಯಾಯಗಳ, ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಮರ್ಶೆ ನಡೆಯಬೇಕಿದೆ! ನಮ್ಮೊಳಗೇ ಸರಿ ತಪ್ಪುಗಳ ಆತ್ಮಾವಲೋಕನ ನಡೆಯಬೇಕಿದೆ ಅಷ್ಟೇ!

ಕೆಲ ಸಮಯಗಳ ಹಿಂದೆ, ಕಾರವಾನ ಎಂಬ ಪತ್ರಿಕೆಯ ಮೇಲೆ, ipc ಸೆಕ್ಷನ್ 499 ರ ಆಧಾರದ ಮೇಲೆ ಅದ್ಯಾವುದೋ ಕಂಪೆನಿ ಬರೋಬ್ಬರಿ 250 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಕೇಸನ್ನು ದಾಖಲಿಸಿತ್ತು! ಕಾರಣವಿಷ್ಟೇ! ಕಂಪೆನಿಯ ಬೃಹತ್ ಅವ್ಯವಹಾರಗಳನ್ನು ಸಾಕ್ಷ್ಯ ಸಮೇತವಾಗಿ ವಿಸ್ತೃತ ವರದಿಯಾಗಿ 14000 ಪದಗಳಲ್ಲಿ ಪ್ರಕಟಿಸಿತ್ತು! ಬಿಡಿ! ಒಂದು ರಾಜ್ಯದ ಹೆಸರಾಂತ ರಾಜಕಾರಣಿಯೊಬ್ಬರು, ಕೇವಲ ಸರಕಾರದ ಭ್ರಷ್ಟಾಚಾರಗಳ ವಿರುದ್ಧ ಧ್ವನಿಯೆತ್ತಿದರೆಂಬ ಕಾರಣಕ್ಕೆ, ಸುಮಾರು 250 ಕ್ಕೂ ಅಧಿಕ ಮಾನನಷ್ಟ ಮೊಕದ್ದಮೆ ಹೂಡಿದ್ದರು! ಕೇವಲ ತಮ್ಮ ಅವ್ಯವಹಾರದ ಬಗ್ಗೆ ಧ್ವನಿ ಎತ್ತುತ್ತಾರೆಂಬ ಒಂದೇ ಕಾರಣಕ್ಕೆ ಮೊಕದ್ದಮೆ ಹೂಡುತ್ತಾರೆಂದರೆ, ಭಾರತದಲ್ಲಿ ಪತ್ರಿಕಾ ಅಥವಾ ಮಾಧ್ಯಮ ಸ್ವಾತಂತ್ರ್ಯ ಯಾವ ಮಟ್ಟಿಗಿವೆ?! ಭಾರತದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮ ಸಮೂಹದ ಪರಿಸ್ಥಿತಿ ಹೇಗಾಗಿಗೆ ಗಮನಿಸಿ! 1990 ರಿಂದ ಮೊನ್ನೆ ಮೊನ್ನೆ ಗೌರೀ ಲಂಕೇಶ್ ಹತ್ಯೆಯಾಗುವ ತನಕವೂ ಸಹ, ಬರೋಬ್ಬರಿ 80 ಕ್ಕೂ ಹೆಚ್ಚು ಪತ್ರಕರ್ತರ ಕಗ್ಗೊಲೆ ನಡೆದು ಹೋಗಿದೆ ಭಾರತದಲ್ಲಿ! ದುರಂತ ವೆಂದರೆ ಇದೇ ನೋಡಿ! ಅದರಲ್ಲಿ ಒಬ್ಬರ ಹತ್ಯೆಯೂ ಸಹ ಪರಿಹಾರ ಕಂಡಿಲ್ಲ! ಕಳೆದ ಎರಡು ವರ್ಷಗಳಲ್ಲಿ, ಭಾರತಾದ್ಯಂತ ಪತ್ರಿಕೋದ್ಯಮದವರ ಮೇಲೆ 142 ಕ್ಕೂ ಹೆಚ್ಚು ಹತ್ಯೆಯಾಗಿವೆ! ವ್ಹಾ! ಇದು, ಇವತ್ತಿನ ಭಾರತದಲ್ಲಿ ಮಾಧ್ಯಮದವರಿಗಿರುವ ಬೆಲೆ ಎಷ್ಡು?!

ವಿಚಾರವಿಷ್ಟೇ! ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಮಾಧ್ಯಮಗಾರರನ್ನು ಬಂಧಿಸಲಾಗುತ್ತದೆ!! ಕೇವಲ, ಅಕಸ್ಮಾತ್, ಅದಾವುದೋ ಸುದ್ದಿಯೊಂದನ್ನು ಪ್ರಕಟಿಸಿದ ಕ್ಷುಲ್ಲಕ ಕಾರಣಕ್ಕೆ!! ಅಥವಾ ‘ಸೌಹಾರ್ದತೆಗೆ ಧಕ್ಕೆ’ಯಾಯಿತೆಂಬ ಕಾರಣವನ್ನಿಟ್ಟು ಬಂಧಿಸಲಾಗುತ್ತದೆ!!

ಯೋಚಿಸಿ! ಇವತ್ತು ನಾವು ಅದೆಷ್ಡು ಪತ್ರಕರ್ತರ ಪರ ನಿಂತಿದ್ದೇವೆ?! ಈ ಎಡಪಂಥೀಯ ಪತ್ರಕರ್ತರನ್ನು ಬಿಟ್ಟು ಬಿಡಿ! ಅವರ್ಯಾವತ್ತೂ, ಭಾರತದ ಶ್ರೇಯಸ್ಸಿಗೆ ಹರಸಿದ್ದೇ ಇಲ್ಲ‌! ಯಾಕೆಂದರೆ, ಸದಾಕಾಲವೂ ದಲಿತ, ಮುಸಲ್ಮಾನ ತಂತ್ರಗಳನ್ನೇ ಅನುಸರಿಸುತ್ತಾ, ಹಿಂದೂ ವಿರೋಧಿ ನೀತಿಯನ್ನು ಒಪ್ಪುವ ಮಾಧ್ಯಮಾಧಮರನ್ನು ಬಿಡಿ! ಆದರೆ, ವಂಚನೆಗಳನ್ನು ಬಯಲಿಗೆಳೆಯುವ, ಅಥವಾ ಭಾರತವನ್ನು ಪ್ರೀತಿಸುವಂತಹ ಅದೆಷ್ಟು ದೇಶಭಕ್ತ ಪತ್ರಕರ್ತರಿಗೆ ನಾವಿವತ್ತು ಬೆಂಬಲಿಸಿದ್ದೇವೆ?!

ಇವತ್ತೂ ನಾವ್ಯಾರಾದರೂ ಬೆಂಬಲಿಸುತ್ತಿದ್ದೀವಾ?! ಒಬ್ಬ ನಿರಪರಾಧಿಗೆ ಶಿಕ್ಷೆಯಾಗುವುದನ್ನು ನೋಡಿಯೂ ನೋಡದ ಹಾಗೆ ನಾವಿದ್ದೇವೆಂದಾದರೆ, ನಾವು ಒಬ್ಬರು ಭಾರತೀಯರಾ?! ನಾವೊಬ್ಬರು ಸಾಮಾಜಿಕ ಕಳಕಳಿ ಇರುವವರಾ?! ನಾವೊಬ್ಬರು ಮಾಧ್ಯಮಗಾರರಾ?! ಅವಲೋಕಿಸ ಬೇಕಿದೆ!

ಒಮ್ಮೆ ಯೋಚಿಸಿ! ಕೇವಲ ನಮ್ಮ ಬೆಂಬಲಗಳು ಟ್ವಿಟ್ಟರಿನ ಅಥವಾ ಫೇಸ್ ಬುಕ್ಕಿನ ಹ್ಯಾಷ್ ಟ್ಯಾಗುಗಳಿಗೇ ಮುಗಿದು ಹೋಗುವುದಾದರೆ, ಕೇವಲ ನಮ್ಮ ಹೋರಾಟ, ‘ಇದು ಸರಕಾರಕ್ಕೆ ಮುಟ್ಟುವ ತನಕ ಶೇರ್ ಮಾಡಿ’ ಎನ್ನುವದಷ್ಟಕ್ಕೇ ಮುಗಿದು ಹೋಗುವುದಾದರೆ, ಕೇವಲ ನಮ್ಮ ಬೆಂಬಲ ಲೈಕು ಕಮೆಂಟುಗಳಿಗೆ ಸೀಮಿತವಾದರೆ, ಕೇವಲ ನಮ್ಮ ದೇಶಭಕ್ತಿ ಎನ್ನುವುದು ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾದರೆ ಅದಕ್ಕಿಂತ ದೊಡ್ಡದಾದ ದುರಂತ ಭಾರತದ ಇತಿಹಾಸದಲ್ಲಿ ಇನ್ನೊಂದಿಲ್ಲ!

ಇವತ್ತೂ ಸಹ, ಒಬ್ಬ ನಿರಪರಾಧಿಗೆ, ಒಬ್ಬ ದೇಶಭಕ್ತನಿಗೆ ಸತ್ಯವನ್ನು ನುಡಿದನೆಂಬ ಕಾರಣಕ್ಕೆ, ಅವ್ಯವಹಾರಗಳ ವಿರುದ್ಧ ಧ್ವನಿ ಎತ್ತಿದನೆಂಬ ಕಾರಣಕ್ಕೆ ಶಿಕ್ಷೆಯಾಗುವಾಗ, ಸಮಾಜವೊಂದು ಗಪ್ಪನೆ ಬಾಯಿ ಮುಚ್ಚಿ ಕುಳಿತಿರುತ್ತದಲ್ಲವಾ?! ಯಾವ ಬೆಂಬಲ ನೀಡುತ್ತಿದ್ದೇವೆ?! ಹೇಗೆ ಒಬ್ಬ ಕಲಾವಿದನಿಗೆ ಪ್ರೇಕ್ಷಕರ ಚಪ್ಪಾಳೆಯೊಂದು ಮತ್ತೊಂದಷ್ಟು ಸಾಧನೆಗೆ ಸ್ಫೂರ್ತಿ ಕೊಡುತ್ತದೆಯೋ, ಅದೇ ರೀತಿ ಒಬ್ಬ ಮಾಧ್ಯಮಗಾರನಿಗೆ ಸಮಾಜದಿಂದಲೂ ಅದೇ ರೀತಿ ಯಾದಂತಹ ಬೆಂಬಲ ಅಗತ್ಯ! ಇವತ್ತು, ಪತ್ರಕರ್ತರೆನ್ನಿಸಿಕೊಂಡವರು, ಅಥವಾ ಸಾಮಾಜಿಕ ಕಳಕಳಿಯಿರುವವರು ಆ ಬೆಂಬಲ ನೀಡುತ್ತಿದ್ದೇವಾ?!

ಇಲ್ಲಿ, ಪ್ರಮುಖವಾದ ವಿಚಾರವೊಂದನ್ನು ಪ್ರಸ್ತುತ ಪಡಿಸಲೇ ಬೇಕಿದೆ! ಸರಕಾರೀ ಪ್ರಾಯೋಜಕತ್ವಗಳಲ್ಲಿಯೇ ಸ್ವತಃ ಸುಳ್ಳಿನ ಕಂತೆಗಳನ್ನು ತುಂಬಿಸಿ ಸಮಾಜದ ಮುಂದಿಡುತ್ತಿರುವ ಸನ್ನಿವೇಶದಲ್ಲಿ, ಓರ್ವ ಮಾಧ್ಯಮಗಾರ ಒಂದು ವಿಚಾರವನ್ನು, ತನಗೆ ಲಭಿಸಿದ ಮಾಹಿತಿ ಮೂಲ ಸರಿಯಾಗಿಲ್ಲದಿದ್ದುದರ ಪರಿಣಾಮವಾಗಿ ಒಂದು ಸುದ್ದಿಯನ್ನು ತಪ್ಪಿ ಪ್ರಕಟಿಸಿದನೆಂಬ ಕಾರಣಕ್ಕೆ ಬಂಧಿಸಿ, ಶಿಕ್ಷೆ ನೀಡುವಂತಹ ಸಂದರ್ಭ ಬಂದಿದೆಯೆಂದಾದರೆ, ಇಲ್ಲಿ ಸರಕಾರವು ಪ್ರಜಾ ಸೇವಕರೋ, ಅಥವಾ ಪ್ರಜಾ ಶಿಕ್ಷಕರೋ ಎಂಬುದನ್ನು ಗಮನಿಸಬೇಕಾಗಿದೆ! ಇದು ಕೇವಲ ಪ್ರಸ್ತುತ ಸನ್ನಿವೇಶವಲ್ಲ‌! ಬದಲಿಗೆ, ಯಾವತ್ತು ಈ
ಕಾಂಗ್ರೆಸ್ ಎನ್ನುವುದು ಪ್ರಾರಂಭವಾಯಿತೋ ಅವತ್ತಿನಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯವೊಂದು ಹತ್ಯೆಗೀಡಾಗುತ್ತಲೇ ಬಂದಿದೆ!

ಇವಿಷ್ಟನ್ನೂ ಬಿಡಿ! ಎಲ್ಲರಿಗೂ ಒಂದೇ ನ್ಯಾಯವೆನ್ನುವ ನಮ್ಮ ಪ್ರಜಾ ಪ್ರಭುತ್ವ ಇವತ್ತು ಎಷ್ಟರ ಮಟ್ಟಿಗಿದೆ?! ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಅಶ್ಲೀಲವಾದ ಸುಳ್ಳು ಸುದ್ದಿ ಪ್ರಕಟಿಸಿದಾಗ ಯಾಕೆ ಯಾವ ಸೌಹಾರ್ದತೆ ನೆನಪಾಗುವುದಿಲ್ಲ?! ಅದಾವುದೋ ರಾಜ್ಯದಲ್ಲಿ ನಡೆದ ಘಟನೆಯೊಂದನ್ನು ‘ದಲಿತನ ಮೇಲೆ ಹಲ್ಲೆ’ ಎಂದು ಸುಳ್ಳು ಸುದ್ದಿ ಪ್ರಕಟಿಸಿ, ಆ ರಜಪೂತನನ್ನು ದಲಿತನೆಂದು ಒಬ್ಬ ರಾಜ್ಯದ ಪ್ರತಿನಿಧಿ ಬಿಂಬಿಸುವಾಗ ಯಾಕೆ ಸೌಹಾರ್ದತೆ ಎನ್ನುವುದರ ಪ್ರಶ್ನೆ ಏಳಲಿಲ್ಲ?!

ನೋಡಿ! ವಿಚಾರವಿಷ್ಟೇ! ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವುದು ಕೇವಲ ಸಂವಿಧಾನದ ಕಾನೂನಲ್ಲ, ಬದಲಿಗೆ ನಿರಪರಾಧಿಗೆ ಶಿಕ್ಷೆಯಾಗದಂತೆ ತಡೆಯುವುದೂ ಸಹ ಪ್ರತಿಯೊಬ್ಬ ಭಾರತೀಯನ ಕರ್ತವ್ಯ! ಯೋಚಿಸಿ! ಒಬ್ಬ ಸಚ್ಚಾರಿತ್ರ್ಯ ಭಾರತೀಯನಾಗಿ! ಒಬ್ಬ ನಿಷ್ಟಾವಂತ ಮಾಧ್ಯಮಗಾರನಾಗಿ! ಬೆಂಬಲಿಸಿ! ಹಾಗಾದಾಗಾದರೂ, ನಮ್ಮ ಮಾಧ್ಯಮದವರ ಪರಿಸ್ಥಿತಿ ಸ್ವಲ್ಪವಾದರೂ ಸುಧಾರಿಸೀತು!

– ತಪಸ್ವಿ

Tags

Related Articles

Close