ಪ್ರಚಲಿತ

ವಿದ್ಯಾರ್ಥಿ ಜೀವನದಲ್ಲೇ ಬಂಗಾರಪ್ಪ ಅವರಿಂದ ರಾಜೀನಾಮೆ ಕೊಡಿಸಿದ, ಅಂದು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿದ ವಿದ್ಯಾರ್ಥಿ ನಾಯಕ, ಇಂದು ಕರ್ನಾಟಕದ ನಂ1 ಶಾಸಕ!

ಹೀಗೆ ಕೆಲವು ವರ್ಷಗಳ ಹಿಂದಿನ ಮಾತು. ಝಗ ಮಗಿಸುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂಲೆಗುಂಪಾಗಿ ಅನಾಥರಂತೆ ಅಸ್ತಿತ್ವವೇ ಇಲ್ಲದಂತಿತ್ತು ಆ ಕುಗ್ರಾಮ ಮಹದೇವಪುರ. ಮೂಲ ಸೌಕರ್ಯವೇ ಇರದಿದ್ದ ಆ ಊರಿನ ಬವಣೆ ಕೇಳುವ ಪುರುಸೊತ್ತು ಯಾರಿಗೂ ಇರಲಿಲ್ಲ. ಅಭಿವೃದ್ದಿಯೆಂದರೆ ಏನೆಂದು ಗೊತ್ತೆ ಇಲ್ಲದ ಆ ಊರಿನ ಜನ ತಮ್ಮ ಭಾಗ್ಯದಲ್ಲಿ ಬರೆದದ್ದೇ ಇಷ್ಟೆಂದು ಬಗೆದು ವ್ಯವಸ್ಥೆಯ ಜೊತೆಗೆ ರಾಜಿ ಮಾಡಿಕೊಂಡಿದ್ದರು. ಆದರೆ ಅವರ ನಿರೀಕ್ಷೆಗೂ ಮೀರಿ ಕನಸಿನಲ್ಲೂ ಊಹಿಸಲಾಗದ ಬದಲಾವಣೆಯೊಂದು ಆ ಗ್ರಾಮದಲ್ಲಿ ನಡೆದೇ ಬಿಟ್ಟಿತು. ಒಬ್ಬ ಅಪ್ಪಟ ಸಮಾಜ ಸೇವಕ, ದೇಶ ಪ್ರೇಮಿ ಸಹೃದಯ ವ್ಯಕ್ತಿ ಮಹದೇವಪುರದ ಶಾಸಕನಾಗಿ ಯಾವ ಘಳಿಗೆಯಲ್ಲಿ ಮಹದೇವಪುರದಲ್ಲಿ ಕಾಲಿಟ್ಟರೋ, ಆವತ್ತಿನಿಂದಲೇ ಆ ಊರಿನ ಮತ್ತು ಅಲ್ಲಿನ ಜನರ ಭಾಗ್ಯವೇ ಬದಲಾಗಿ ಹೋಯಿತು.

ತನ್ನ ಮೊದಲನೆ ಆಡಳಿತಾವಧಿಯಲ್ಲಿ ಆ ವ್ಯಕ್ತಿ ಮಾಡಿದ ಅಭಿವೃದ್ದಿ ಯಾವ ಪರಿಯಿತ್ತೆಂದರೆ ಮತ್ತೆ ಎರಡನೆ ಬಾರಿಗೆ ಮಹದೇವಪುರದ ಮತದಾರರು ಅವರ ಕೈ ಹಿಡಿದು ಗೆಲ್ಲಿಸಿ ಬಿಟ್ಟರು. ತನ್ನನ್ನು ಗೆಲ್ಲಿಸಿದ ಮತದಾರಾರ ಏಳಿಗೆಗಾಗಿ ಸರ್ವಸ್ವವನ್ನೇ ಪಣಕ್ಕಿಟ್ಟ ಆ ಜನನಾಯಕ ಯಾರೆಂದು ಗೊತ್ತಾಯಿತಲ್ಲ? ಹೌದು, ಅವರೇ ಅರವಿಂದ ಲಿಂಬಾವಳಿ. ಸದಾ ಚಟುವಟಿಕೆಯಿಂದ ಕೂಡಿದ ಪಾದರಸದಂತಹ ವ್ಯಕ್ತಿತ್ವದ ಜನಾನುರಾಗಿ ಜನ ಸೇವಕ ಅರವಿಂದ ಲಿಂಬಾವಳಿ ಅವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೃಷ್ಠ ಭೂಮಿಯಿಂದ ಬಂದ ಲಿಂಬಾವಳಿ ಅವರ ರಕ್ತದಲ್ಲಿ ದೇಶ ಪ್ರೇಮವೆ ಹರಿಯುತ್ತದೆ. ತನ್ನ ವಿದ್ಯಾರ್ಥಿ ಜೀವನದಿಂದಲೂ ನಾಯಕತ್ವ ಗುಣ ಮತ್ತು ದೇಶ ಪ್ರೇಮವನ್ನು ಮೈಗೂಡಿಸಿಕೊಂಡ ಲಿಂಬಾವಳಿಯವರ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ.

ಸಂಘರ್ಷ ಇವರಿಗೆ ಹೊಸದೇನಲ್ಲ. 1992-1995ವರೆಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಸರಕಾರಗಳನ್ನೇ ಎದುರು ಹಾಕಿಕೊಂಡವರಿವರು. “ಸೇವ್ ಕ್ಯಾಂಪಸ್” ಎಂಬ ಚಳುವಳಿಯ ಕಿಚ್ಚು ಹೊತ್ತಿಸಿ ರಾಜ್ಯಕ್ಕೆ ಕಿರುಕುಳ ಕೊಡುವ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಿದವರು ಇವರು. ಈ ಆಂದೋಳನದ ಕಿಚ್ಚು ಹೇಗಿತ್ತೆಂದರೆ ಆಗಿನ ಮುಖ್ಯ ಮಂತ್ರಿಯಾಗಿದ್ದ ಬಂಗಾರಪ್ಪ ನವರು “ಕ್ಲಾಸಿಕ್ ಕಂಪ್ಯೂಟರ್” ಹಗರಣದ ಜವಾಬ್ದಾರಿ ಹೊತ್ತುಕೊಂಡು ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು!! ಎ.ಬಿ.ವಿ.ಪಿಯ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ ವಿದ್ಯಾರ್ಥಿ ನ್ಯಾಯಕ್ಕಾಗಿ ಕೆಲಸ ಮಾಡಿ, ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿದ್ದ ಅನ್ಯಾಯಗಳ ವಿರುದ್ಧ ಹೋರಾಡಿದ್ದರು ಲಿಂಬಾವಳಿಯವರು.

Image result for aravinda limbavali

ಹೋರಾಟವೆ ಜೀವನ ಎನ್ನುವ ಮನೋಭಾವದ ಇವರು “ಕಶ್ಮೀರ್ ಚಲೋ” ರಾಷ್ಟ್ರವ್ಯಾಪಿ ಆಂದೋಳನದಲ್ಲಿಯೂ ಭಾಗಿಯಾಗಿದ್ದರು. ದೇಶಾದ್ಯಂತ ಹಮ್ಮಿಕೊಂಡಿದ್ದ ಈ ಚಳುವಳಿಯಲ್ಲಿ ಸಾವಿರಾರು ಬಿಸಿ ನೆತ್ತರಿನ ತರುಣರು ಭಾಗವಹಿಸಿದ್ದರು. ಕರ್ನಾಟಕದಿಂದ ಭಾಗಿಯಾಗಿದ್ದ ಯುವಕರ ತಂಡಕ್ಕೆ ಅರವಿಂದ ಲಿಂಬಾವಳಿಯವರದ್ದೇ ನಾಯಕತ್ವ. ನಿಮಗೆ ಗೊತ್ತೆ ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಲು ದೇಶದಾದ್ಯಂತ ಆಯ್ಕೆಯಾಗಿದ್ದ ಐದೇ ನಾಯಕರಲ್ಲಿ ಅರವಿಂದ ಲಿಂಬಾವಳಿಯವರು ಒಬ್ಬರು ಎಂದರೆ ಅವರ ಕೆಚ್ಚೆದೆ ಮತ್ತು ರಾಷ್ಟ್ರ ಪ್ರೇಮ ಎಂಥದ್ದಿರಬೇಕು! ಇಂತಹ ನಾಯಕ ಕರ್ನಾಟಕಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ.

ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ ಪದವೀಧರರಾದ ಲಿಂಬಾವಳಿಯವರು ತಮ್ಮ ಜೀವನದ 35 ವರ್ಷಗಳನ್ನು ಸಂಘಕ್ಕೆ ಮುಡುಪಾಗಿಟ್ಟು ಸಮಾಜ ಸೇವಾ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ. ಮಹದೇವಪುರ ಮೀಸಲು ಕ್ಷೇತ್ರದಲ್ಲಿ ಶಾಸಕರಾಗಿ 2008-13 ಮತ್ತು 2013-18 ರಲ್ಲಿ ಸತತ ಎರಡು ಬಾರಿ ಗೆದ್ದು ಬಂದಿದ್ದಾರೆ. ಒಂದು ಕಾಲದಲ್ಲಿ ಕುಗ್ರಾಮವಾಗಿದ್ದ ಮಹದೇವಪುರ ಇಂದು ಸಕಲ ಸೌಕರ್ಯಗಳಿಂದ ಕಂಗೊಳಿಸುತ್ತಿದೆ. ತಮ್ಮನ್ನು ಕೈ ಹಿಡಿದ ಮತದಾರರ ಕೈ ಬಿಡಲಿಲ್ಲ ಈ ಜನನಾಯಕ. ಜನರೇ ನನ್ನ ದೇವರೆನ್ನುವ ಇವರು ಅಭಿವೃದ್ದಿಯ ವಿಷಯದಲ್ಲಿ ರಾಜಕೀಯ ಮಾಡುವುದೇ ಇಲ್ಲ. ತನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಮಾಡುವ ಪಣ ತೊಟ್ಟ ಇವರು ಮಹದೇವಪುರಕ್ಕೆ ಬಹುರಾಷ್ಟೀಯ ಕಂಪನಿಗಳನ್ನು ಕರೆತಂದು ಯುವಕರಿಗೆ ಉದ್ಯೋಗ ದೊರಕಿಸಿ ಕೊಟ್ಟಿದ್ದಾರೆ. ಕ್ಷೇತ್ರದ ತುಂಬಾ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುವ ಇವರು ಕೆರೆ ಕಟ್ಟೆಗಳ ಅಭಿವೃದ್ದಿ, ಕ್ಷೇತ್ರಕ್ಕೆ ಹೊರ ವರ್ತುಲ ರಸ್ತೆ, ಆಸ್ಪತ್ರೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಮಂಡೂರಿನ ಅವೈಜ್ಞಾನಿಕ ತ್ಯಾಜ ಘಟಕವನ್ನು ಸ್ಥಳಾಂತರಿಸಿ ಅಲ್ಲಿ ಸುಸಜ್ಜಿತ ಬಸ್ಸು ತಂಗುದಾಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ವಿಧಾನಸಭೆಯಲ್ಲಿ ಇವರು ಕೇಳುವ ಪ್ರಶ್ನೆಗಳಿಗೆ ಆಡಳಿತ ಪಕ್ಷದ ನಾಯಕರು ತತ್ತರಿಸಿ ಹೋಗುತ್ತಾರೆ, ಅಧಿಕಾರಿಗಳು ಉತ್ತರ ಕೊಡಲಾಗದೆ ಕಕ್ಕಾ ಬಿಕ್ಕಿಯಾಗುತ್ತಾರೆ. ವಿಧಾನಸಭೆಯಲ್ಲಿ ತ್ಯಾಜ್ಯ, ವಿದ್ಯುತ್ ಮತ್ತು ಶಿಕ್ಷಣಕ್ಕೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದು ಮಾತ್ರವಲ್ಲದೆ ಅಧಿಕಾರಿಗಳ ಬೆನ್ನು ಬಿದ್ದು ಸಮಸ್ಯೆಗೆ ಪರಿಹಾರ ದೊರಕಿಸಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಶೃದ್ಧಾಂಜಲಿ ನೀಡಬೇಕೆಂದು ಕೋರಿ ವಿಧಾನಸಭೆಯಲ್ಲಿ ರೈತ ಕಾಳಜಿಯನ್ನು ಮೆರೆದಿದ್ದಾರೆ. ಇವರ ಈ ಕೋರಿಕೆಯಿಂದಾಗಿ ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಿತ್ತು. ಕೇಂದ್ರ ಸರಕಾರ ರೈತರ ಏಳಿಗೆಗಾಗಿ ತೆಗೆದುಕೊಳ್ಳುವ ಎಲ್ಲಾ ಯೋಜನೆಗಳ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲ ತಾಣದ ಖಾತೆಗಳಲ್ಲಿ ಹಂಚಿಕೊಂಡು ಜನರಿಗೆ ಮೋದಿ ಸರಕಾರದ ರೈತ ಪರ ಯೋಜನೆಗಳ ಮಾಹಿತಿ ನೀಡುತ್ತಿದ್ದಾರೆ. ಜಾಲತಾಣಗಳಲ್ಲಿಯೂ ಅತಿ ಕ್ರಿಯಾಶೀಲರಾಗಿರುವ ಇವರೆಂದರೆ ಜಾಲತಾಣಿಗರಿಗೆ ಅಚ್ಚು ಮೆಚ್ಚು.

ಸಾಮಾಜಿಕ ಕಲ್ಯಾಣ ಮಂತ್ರಿ ಆಂಜನೇಯ ಅವರ ಭ್ರಷ್ಟಾಚಾರ ಪ್ರಕರಣ, ಇಂಧನ ಸಚಿವ ಡಿಕೆಶಿಯವರ ಲೋಡ್ ಶೆಡ್ಡಿಂಗ್ ವಿಚಾರ, ಸಿದ್ದಾಪುರದಲ್ಲಿ ನೂರು ಹಾಸಿಗೆಗಳ ಸರಕಾರಿ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ ಬಿ.ಎಮ್.ಟಿ.ಸಿಯ ದರ್ಬಾರ್, ಮಹದೇವಪುರ ಚುನಾವಣಾ ಕ್ಷೇತ್ರದಲ್ಲಿ ಅಕ್ರಮ ಭೂ ಅತಿಕ್ರಮಣ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಸ್ಯೆ, ರಾಜಕಾಲುವೆಗಳ ತೆರವು, ರಸ್ತೆಗಳು ಮತ್ತು ಸಿಗ್ನಲ್ ಮುಕ್ತ ಕಾರಿಡಾರುಗಳು ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ ಮಾತ್ರವಲ್ಲ ಪರಿಹಾರ ಕಂಡುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇವರ ಈ ದಣಿವಿರದ ನಿರಂತರ ಕ್ರಿಯಾಶೀಲತೆಯಿಂದಾಗಿಯೆ ಭಾಜಪಾದ ವರಿಷ್ಟರಿಗೂ ಇವರನ್ನು ಕಂಡರೆ ಅಚ್ಚು ಮೆಚ್ಚು. ಇವರ ಸಾಮರ್ಥ್ಯದ ಅರಿವಿದ್ದೆ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ವರಿಷ್ಟರು 15 ಮೀಸಲು ಕ್ಷೇತ್ರಗಳ ನೊಗವನ್ನು ಇವರ ಹೆಗಲ ಮೇಲೆ ಹೊರಿಸಿ ಗೆಲ್ಲಿಸುವ ಜವಾಬ್ದಾರಿ ಕೊಟ್ಟಿದ್ದು!

ಯಡಿಯೂರಪ್ಪನವರ ಕ್ಯಾಬಿನೆಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿಯವರು ಮೂಲತಃ ಮೇಲ್ಮನೆ ಸದಸ್ಯರಾಗಿದ್ದವರು. ಆದರೆ ಕರ್ನಾಟಕದ ರಾಜ್ಯ ರಾಜಕಾರಣಕ್ಕೆ ಅಭಿವೃದ್ದಿಯ ಹರಿಕಾರ ಬೇಕೆನ್ನುವ ಕಾರಣಕ್ಕೆ ಪಕ್ಷ ಇವರನ್ನು ಮಂತ್ರಿಯನ್ನಾಗಿ ಮಾಡಿತು. ಶಾಸಕರಾಗಿಯೂ ಅಭಿವೃದ್ಧಿಗಾಗಿ ದುಡಿದ ಇವರು ಬರೋಬ್ಬರಿ 5 ಕೋಟಿಗೂ ಹೆಚ್ಚು ಅನುದಾನವನ್ನು ಬಸ್ ಗಳ ಆಶ್ರಯಕ್ಕಾಗಿ ಖರ್ಚು ಮಾಡಿರುತ್ತಾರೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ 8 ವಾರ್ಡ್​ಗಳ ಪೈಕಿ 4 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ್ದೇ ಲಿಂಬಾವಳಿಯವರು. ಸದಾ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ ಕರ್ನಾಟಕದ ನಂ1 ಶಾಸಕ ಲಿಂಬಾವಳಿಯವರು ಮೂರನೇ ಬಾರಿಗೆ ಭರ್ಜರಿ ಬಹುಮತದಿಂದ ಗೆದ್ದು ಬರುವಂತಾಗಲಿ. ಇವರ ಸೇವಾ ಮನೋಭಾವ ಮತ್ತು ರಾಷ್ಟ್ರ ಪ್ರೇಮ ಸದಾ ಹೀಗೆ ಇದ್ದು ವಿಜಯ ಲಕ್ಷ್ಮಿ ಇವರಿಗೊಲಿಯಲಿ. ಇವರ ಕೈಯಿಂದ ಅಭಿವೃದ್ದಿ ಕಾರ್ಯಗಳು ನೆರವೇರಿ ರಾಜ್ಯಕ್ಕೆ ಒಳಿತಾಗಲಿ.

-ಶಾರ್ವರಿ

Tags

Related Articles

Close