ಪ್ರಚಲಿತ

ದಾಖಲೆ ಬರೆದ ಮುದ್ರಾ ಯೋಜನೆ!! 12 ಕೋಟಿ ಜನರಿಗೆ 6 ಲಕ್ಷ ಕೋಟಿ ಸಾಲ ನೀಡಿ ಸ್ವಾವಲಂಭಿಯಾಗಿಸಿದ ಮೋದಿ ಸರಕಾರ!!

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಜಾರಿಗೆ ತಂದಂತಹ ಮುದ್ರಾ ಯೋಜನೆ, ದೇಶದ ಯುವ ಸಮುದಾಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಈಗಾಗಲೇ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ಒದಗಿಸುವ ಸಲುವಾಗಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿ ಗೊಳಿಸಿದೆ. ಸೂಕ್ಷ್ಮ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಉತ್ತೇಜನ ನೀಡುವುದೇ ಮುದ್ರಾ ಯೋಜನೆಯ ಮುಖ್ಯ ಉದ್ದೇಶವಾಗಿದೆ!! ಭಾರತದ ಯುವಜನತೆ ಉದ್ಯೋಗ ಸೃಷ್ಟಿಕರ್ತರಾಗಬೇಕೇ ಹೊರತು ಉದ್ಯೋಗ ಅರಸಿ ಅಲೆಯುವ ಹಾಗೆ ಆಗಬಾರದು ಎನ್ನುವ ಧ್ಯೇಯದೊಂದಿಗೆ ಈ ಯೋಜನೆ ಆರಂಭಿಸಿರುವ ನರೇಂದ್ರಮೋದಿ ಯುವಜನತೆ ಇದರ ಸದುಪಯೋಗ ಪಡೆದುಕೊಂಡು ದೇಶದ ಭವಿಷ್ಯವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ಸ್ಪಷ್ಟ ನಿಲುವನ್ನು ಹೊಂದಿದ್ದಾರೆ!!

ಮುದ್ರಾ ಯೋಜನೆಯಡಿ 12 ಕೋಟಿ ಜನರಿಗೆ 6ಲಕ್ಷ ಕೋಟಿ ಸಾಲ!!

ಪ್ರಧಾನಿ ನರೇಂದ್ರ ಮೋದಿ  ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ನೇರ ಸಂವಾದ ನಡೆಸಿದರು!! ಈ ವೇಳೆ ಮಾತನಾಡಿದ ಮೋದೀಜೀ ಮುದ್ರಾ ಯೋಜನೆಯಡಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು 12 ಕೋಟಿ ಫಲಾನುಭವಿಗಳ ಪೈಕಿ 3.25 ರಷ್ಟು ಫಲಾನುಭವಿಗಳು ಮೊದಲ ಬಾರಿಗೆ ಉದ್ಯಮವನ್ನು ಮಾಡುತ್ತಿರುವವರು ಎಂದರು!! ಶೇಖಡ 74ರಷ್ಟು ಅಥವಾ 9 ಕೋಟಿ ಸಾಲ ಪಡೆದವರು ಮಹಿಳೆಯರಾಗಿದ್ದು, ಇವರಲ್ಲಿ ಶೇಖಡ 55 ರಷ್ಟು ಮಂದಿ ಎಸ್‍ಸಿ ಎಸ್‍ಟಿ ಮತ್ತು ಒಬಿಸಿ ಕೆಟಗರಿಯವರಿಗೆ ಸೇರಿದವರಾಗಿದ್ದಾರೆ ಎಂದರು!! 2015ರ ಎಪ್ರಿಲ್ 8 ರಂಂದು ಮೋದಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಚಾಲನೆಗೊಳಿಸಿದರು!! ಕಾರ್ಪೋರೇಟ್ ವಲಯದಿಂದ ಹೊರಗಿನವರೆಗೆ ಉದ್ಯಮ ಆರಂಭಿಸಲು ರೂ. 10 ಲಕ್ಷದವರೆಗೆ ಸಾಲ ನೀಡುವ ಯೋಜನೆ ಇದಾಗಿವೆ!!

Related image

ಸ್ವ ಉದ್ಯೋಗ ಮಾಡ್ಬೇಕು ಅಂತ ಆಸಕ್ತಿ ಹೊಂದಿರುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಮುದ್ರಾ ಬ್ಯಾಂಕ್ ಸ್ಥಾಪಿಸಿ, ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್‍ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತಿದೆ. ಮುದ್ರಾ ಯೋಜನೆಯು ದೇಶದ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂ.ವರೆಗೆ ಹಣಕಾಸಿನ ನೆರವು ಒದಗಿಸಲಿದ್ದು, ಇದರ ಜತೆಗೆ, ಸಣ್ಣ ಹಣಕಾಸು ಸಂಸ್ಥೆಗಳಿಗೆ ಮರುಹಣಕಾಸು ಸೌಲಭ್ಯ ಒದಗಿಸುವ ಗುರಿ ಇಟ್ಟುಕೊಂಡಿದೆ!!

ದೇಶದಲ್ಲಿ ಸೊರಗಿರುವ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸಾಮಥ್ರ್ಯ ಮತ್ತು ದಕ್ಷತೆ ಹೆಚ್ಚಿಸಲು, ಸಾಲದ ಸುಳಿಗೆ ಸಿಲುಕಿರುವ ಸಣ್ಣ ಉದ್ಯಮಶೀಲರಿಗೆ ಔಪಚಾರಿಕೆ ವ್ಯವಸ್ಥೆಯ ಮೂಲಕ ಹಣಕಾಸು ನೆರವು ಒದಗಿಸುವುದು ಇದರ ಉದ್ದೇಶ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ಪ್ರಮಾಣ ಹೆಚ್ಚಳಕ್ಕೆ ಮುದ್ರಾ ಆದ್ಯತೆಯ ಗಮನ ನೀಡಿದೆ. ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳು, ನಿರ್ದಿಷ್ಟ ಕ್ಷೇತ್ರದಲ್ಲಿ ಚಟುವಟಿಕೆ ಅಗತ್ಯಗಳನ್ನು ಪೂರೈಸಲು ಫಲಾನುಭವಿಗಳಿಗೆ ಬೇಕಾದ ಅಗತ್ಯತೆ ಕಡೆಗೆ ಗಮನ ಹರಿಸಲಾಗುತ್ತದೆ. ಮೊದಲಿಗೆ ಹೆಚ್ಚಿನ ಸಾಂದ್ರತೆಯ ಆಧಾರದ ಮೇಲೆ ಕೆಲವು ಚಟುವಟಿಕೆಗಳು / ಕ್ಷೇತ್ರಗಳಲ್ಲಿ ವ್ಯವಹಾರಗಳಿಗೆ, ಯೋಜನೆಗಳನ್ನು ಸೂಚಿಸಲಾಗುತ್ತದೆ. ಅಲ್ಲದೇ, ಸಾರಿಗೆ ವಲಯ / ಚಟುವಟಿಕೆ ಇದು ಆಟೋ ರಿಕ್ಷಾ, ಸಣ್ಣ ಸರಕುಗಳು ಸಾರಿಗೆ ವಾಹನ, 3 ಚಕ್ರ ವಾಹನ, ಇ-ರಿಕ್ಷಾ, ಕಾರು, ಟ್ಯಾಕ್ಸಿ, ಇತ್ಯಾದಿ ಸರಕು ಮತ್ತು ಸಾರಿಗೆ ವಾಹನಗಳ ಖರೀದಿಯನ್ನು ಬೆಂಬಲಿಸುತ್ತದೆ.

Image result for modi mudra yojana

ಅಷ್ಟೇ ಅಲ್ಲದೇ, ಇದು ಮಾಲಿಕತ್ವ, ಪಾಲುದಾರಿಕೆ ಹೊಂದಿರುವ ವ್ಯಾಪಾರಗಳು, ಉದ್ಯಮಶೀಲರು ಅಥವಾ ಘಟಕಗಳು ಮುದ್ರಾ ಯೋಜನೆಗೆ ಒಳಪಡುತ್ತವೆ. ಸಣ್ಣ ತಯಾರಿಕಾ ಘಟಕಗಳು, ಅಂಗಡಿಗಳು, ತರಕಾರಿ, ಹಣ್ಣು ಮಾರಾಟಗಾರರು, ಕ್ಷೌರಿಕ ಅಂಗಡಿಗಳು, ಬ್ಯೂಟಿ ಪಾರ್ಲರ್ಗಳು, ಸಾಗಣೆದಾರರು, ಟ್ರಕ್ ಆಪರೇಟರ್ಗಳು, ಸಂಚಾರಿ ವ್ಯಾಪಾರಿಗಳು, ಸಹಕಾರಿ ಸಂಸ್ಥೆಗಳು, ಆಹಾರ ಸೇವಾ ಘಟಕಗಳು, ರಿಪೇರಿ ಅಂಗಡಿಗಳು, ಮೆಷಿನ್ ಆಪರೇಟರ್ಗಳು, ಸಣ್ಣ ಕೈಗಾರಿಕೆಗಳು, ಕುಶಲಕರ್ಮಿಗಳು, ಆಹಾರ ಸಂಸ್ಕರಣೆಗಾರರು, ಸ್ವಸಹಾಯ ಗುಂಪುಗಳು, ವೃತ್ತಿಪರರು ಮತ್ತು ಸೇವಾ ಘಟಕಗಳು ಮತ್ತು ಉದ್ಯಮಶೀಲರಿಗೆ ಮುಂತಾದವರಿಗೆ ಹಣಕಾಸಿನ ನೆರವು ಸಿಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ನಗರ ಹಾಗೂ ಗ್ರಾಮೀಣ ಭಾಗಗಳೆರಡಕ್ಕೂ ಸಾಲ ಸೌಲಭ್ಯ ಲಭ್ಯವಾಗಲಿದೆ!!

ಒಟ್ಟಾರೆಯಾಗಿ, ಸ್ವ-ಉದ್ಯೋಗ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲು ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಅನಾವರಣಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯುವ ಸಮುದಾಯ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸ್ವಂತ ಉದ್ಯಮ ನಡೆಸಬೇಕು ಎಂಬುದು ಸರಕಾರದ ಬಯಕೆಯಾಗಿದ್ದು, ಮುದ್ರಾ ಯೋಜನೆಯಲ್ಲಿ ಈ ವರ್ಗದ ಜನರಿಗೂ ಕೂಡ ಆದ್ಯತೆಯನ್ನು ನೀಡಿ ಸಾಲ ಸೌಲಭ್ಯ ಒದಗಿಸುವ ಉದ್ದೇಶ ಇದರದ್ದಾಗಿದೆ!!

source: news13.in
– ಪವಿತ್ರ

Tags

Related Articles

Close