ಪ್ರಚಲಿತ

ಲಿಂಗಾಯತರ ಪ್ರತ್ಯೇಕ ಧರ್ಮದ ಅಮಲಿಗೆ ಚರ್ಚ್ ಮಿಷನರಿಗಳ ಕೈವಾಡ?! ಹಿಂದೂ ಧರ್ಮದ ನಾಶಕ್ಕೆ ಲಿಂಗಾಯತರನ್ನು ಬಳಸಿಕೊಂಡಿತೇ ಚರ್ಚ್?!

ಧರ್ಮವನ್ನಂತೂ ಒಡೆದಾಗಿದೆ!! ಅದರಲ್ಲೂ , ನ್ಯಾಯಾಂಗದ ವಿರುದ್ಧ ನಡೆದುಕೊಂಡ ಸಿದ್ಧರಾಮಯ್ಯ ಸರಕಾರ ಮೊನ್ನೆ ಸೋಮವಾರ ಯಶಸ್ವಿಯಾಗಿ, ಹಿಂದೂ ಧರ್ಮದಿಂದ ಲಿಂಗಾಯತರನ್ನು ಬೇರೆ ಬೇರೆ ಎಂದಯ ಪ್ರತ್ಯೇಕಿಸಿ ಬಹಳ ದೊಡ್ಡ ಸಾಧನೆ ಮಾಡಿದಂತೆ ಬೀಗಿದ್ದರೂ, ಆ ಪ್ರತ್ಯೇಕ ಧರ್ಮ ಬೇಕು ಎಂದು ಶಿಫಾರಸ್ಸಿಗೆ ಅರ್ಜಿ ಸಲ್ಲಿಸಿದವರ ಹಿಂದೆ ಬೇರೆಯದೇ ನೆರಳು ಕಂಡಿದೆ! ಅದರಲ್ಲಿಯೂ ಸಹ, ಚರ್ಚಿನ ಮಿಷನರಿಗಳ ಕೈವಾಡ!! ಇದು ಅತಿಶಯೋಕ್ತಿ ಖಮಡಿತಾ ಅಲ್ಲ! ಬದಲಾಗಿ, ಮುಂಚೆ ಇಂದಲೂ ಸಹ ಭಾರತವನ್ನು ಕ್ರೈಸ್ತೀಕರಣವನ್ನಾಗಿಸಬೇಕೆಂಬ ಮಹದಾಸೆ ಇಟ್ಟು ಭಾರತಕ್ಕೆ ಕಾಲಿಟ್ಟ ಚರ್ಚಿನ ಮಿಷನರಿಗಳು ಅವತ್ತಿನಿಂದ ಇವತ್ತಿನವರೆಗೂ ಸಹ ಮಾಡಿದ್ದು ವಿಭಜನೆ! ಮತಾಂತರದ ಮೂಲಕ, ದೇಶದ ಒಡಕು ನಿರ್ಧಾರದ ಮೂಲಕ, ಒಡೆದು ಆಳುವ ನೀತಿಯನ್ನು ಅನುಸರಿಸಿದ ಕ್ರೈಸ್ತರ ಪರವಾಗಿ ನಿಂತು ಕರ್ತವ್ಯ ನಿರ್ವಹಿಸಿದ್ದು ಮತ್ತಿದೇ ಕಾಂಗ್ರೆಸ್!! ನೆಹರೂವಿನಿಂದ ಹಿಡಿದು ಇವತ್ತಿನ ರಾಹುಲ್ ಗಾಂಧಿಯವರೆಗೂ ಸಹ ಹಿಂದೂ ಧರ್ಮದ ನಾಶಕ್ಕೆ ಪ್ರಯತ್ನಿಸಿದವರೇ! ಅದರಲ್ಲಿ, ಈ ಇಟಲಿ ಬೆಡಗಿ ಸೊಂಟ ಕುಣಿಸಿ ಬಂದಳಷ್ಟೇ ಭಾರತಕ್ಕೆ! ಅಲ್ಲಿಗೆ, ವ್ಯಾಟಿಕನ್ ನಗರದ ಸ್ಟ್ರಾಟೆಜಿಯೂ ಭಾರತಕ್ಕೆ ಕಾಲಿಟ್ಟಿತ್ತು!! ಅಷ್ಟೇ!

ಈಗ ಮೊನ್ನೆ ಮೊನ್ನೆ, ರಾಹುಲ್ ಗಾಂಧಿಯೂ ಮೈಕು ಸಿಕ್ಕಿದ್ದೇ, “ಇನ್ನು ಕರ್ನಾಟಕದಲ್ಲಿರುವ ಲಿಂಗಾಯತರು ಹಿಂದೂ ಧರ್ಮಕ್ಕೆ ಸೇರಿದವರಲ್ಲ!” ಎಂದು ಬಿಟ್ಟನಲ್ಲವಾ?! ನೈತಿಕತೆಯ ಪ್ರಶ್ನೆ ಬರುವಾಗಲೇ, ಈ ಲಿಂಗಾಯತರನ್ನು ಪ್ರತ್ಯೇಕ ಧರ್ಮದ ಬಗ್ಗೆ ಕಿವಿ ಕಚ್ಚಿದವರ್ಯಾರು ಎಂಬುದೊಂದರ ಅರಿವು ಆಗಲೇ ಆಗಿತ್ತು!!

ಅಷ್ಟಕ್ಕೂ, ಹಿಂದುತ್ವದ ಉಳಿವಿಗೆ ಶ್ರಮಿಸಿದ ಬಸವಣ್ಣನವರ ತತ್ವಗಳನ್ನು ಮುಂದಿಟ್ಟುಕೊಂಡೇ ಧರ್ಮ ವಿಭಜನೆ ಮಾಡಿದ ಕುತಂತ್ರದ ಹಿಂದಿತ್ತೇ ಚರ್ಚ್ ಮಿಷನರಿಗಳ ಕೈವಾಡ?!

ಸೂಚ್ಯವಾಗಿಯೇ ಉತ್ತರಿಸಬೇಕೆಂದರೆ ಉತ್ತರಿಸಿ ಬಿಡುತ್ತೇನೆ!!

೧. ಮೊದಲನೆಯದಾಗಿ, ಬಸವೇಶ್ವರರ ವಚನಗಳ ಆಧಾರವಾಗಿಟ್ಟುಕೊಂಡು ಅದೆಷ್ಟೋ ಕವಿಗಳು ಉಪನ್ಯಾಸ ಕಥಾ ಮಂಜರಿ ಬರೆದಿದ್ದಾರೆ, ಒಂದಷ್ಟು ಪುಸ್ತಕಗಳನ್ನೂ ಬರೆದಿದ್ದಾರೆ! ತಮ್ಮದೇ ಧಾಟಿಯಲ್ಲಿ ವಿಮರ್ಶೆಯನ್ನೂ ಮಾಡಿದ್ದಾರೆ! ಆದರೆ, ಬಸವೇಶ್ವರರ ಮೂಲ ವಚನಗಳಿರುವುದು ಸರ್ವಜ್ಞನ ಕವಿತೆಗಳಲ್ಲಿ ಅಷ್ಟೇ!! ಬಸವೇಶ್ವರರ ಪ್ರತೀ ತತ್ವಗಳನ್ನು ಸರ್ವಜ್ಞನರ ವಚನಗಳಲ್ಲಿ ಮಾತ್ರವೇ ಕಾಣಬಹುದಾಗಿದ್ದರೂ ಸಹ, ಪ್ರತೀ ತತ್ವಗಳಿಗೆ ಬೇರೆಯದೇ ಅರ್ಥ ಕೊಟ್ಟು ಸಮಾಜದ ದಿಕ್ಕು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕರ್ನಾಟಕದ ಕವಿವರ್ಯರಾಗಿದ್ದ ಚನ್ನಪ್ಪ ಉತ್ತಂಗಿ! ಅದರಲ್ಲೂ,
ಬ್ರಿಟಿಷರ ಕಾಲದಲ್ಲಿ ಹಲ್ಲು ಗಿಂಜಿ ನಿಂತ ಉತ್ತಂಗಿಯವರು, ಲಿಂಗಾಯತ ಸಮಾಜವನ್ನು ದಿಕ್ಕು ತಪ್ಪಿಸಲು ಟೊಂಕ ಕಟ್ಟಿ ನಿಂತರು! ಚರ್ಚುಗಳಿಂದ ಹಿಡಿದು, ಪ್ರತೀ ಮಿಷನರಿಗಳೂ ಸಹ ಉತ್ತಂಗಿಯವರಿಗೆ ಅಷ್ಟೇ ಪ್ರೋತ್ಸಾಹವನ್ನೂ ನೀಡಿದರು! ಹಿಂದುತ್ವವನ್ನು ಮಕಾಡೆ ಮಲಗಿಸಲು ಎಷ್ಟು ಬೇಕೋ ಅಷ್ಟು ಕವಿತೆಗಳು, ಪುಸ್ತಕಗಳು ಉತ್ತಂಗಿಯವರ ಕಡೆಯಿಂದಲೂ ಬಂದವು! ಇವತ್ತು, ಕರ್ನಾಟಕದಲ್ಲಾದ ಈ ರೀತಿಯ ಅಸಹ್ಯವಾದ ಬೇರ್ಪಡಿಕೆ ನೋಡಿದರೆ ಅರ್ಥವಾಗುವುದೊಂದೇ! ಬ್ರಿಟಿಷರ ಮತ್ತು, ಕ್ರೈಸ್ತ ಮಿಷನರಿಗಳ ಧೀರ್ಘಾವಧಿ ಉಪಾಯವೊಂದು ಕೊನೆಗೂ ಯಶಸ್ವಿಯಾಗಿದೆ!

೨. ಬಸವರ ತತ್ವಗಳನ್ನೊಳಗೊಂಡ ಪ್ರತೀ ವಚನಗಳನ್ನೂ ಅಭ್ಯಸಿಸಿದ ಚನ್ನಪ್ಪ ಬಸೆಲ್ ಮಿಷನ್ ನಿಂದ ಅದ್ಯಾವ ಪುರುಷಾರ್ಥಕ್ಕೆ ತನ್ನದೇ ಕುಲದ ಬಗ್ಗೆ ಮಿಥ್ಯೆಗಳನ್ನು ಸೃಷ್ಟಿಸಿದರೋ !! ಲಿಂಗಾಯತ ಸಮುದಾಯವನ್ನಷ್ಟೇ ಹಿಂದೂ ವಿರೋಧಿಯಾಗಿಸಬೇಕು ಎಂಬ ಉತ್ತಂಗಿಯಂತಹವರ ಹುಚ್ಚು ಆಸೆಗಳು ಎಲ್ಲಿಯವರೆಗೆ ಅವರನ್ನು ಪ್ರೇರೇಪಿಸದವೆಂದರೆ, ಲಿಂಗಾಯತ ಮತವನ್ನು ಕ್ರೈಸ್ತ ಮತಕ್ಕೂ, ಗುರು ಬಸವರನ್ನು ಕ್ರಿಸ್ತನಿಗೆ ಹೋಲಿಸುವ ತನಕ ಬೆಳೆಯುತ್ತಲೇ ಹೋಯಿತು!! ಯಾವುದೇ ರೀತಿಯ ಆಧಾರವಿಲ್ಲದೆ, ಇದೇ ಉತ್ತಂಗಿ ತಮ್ಮದೊಂದು ಪುಸ್ತಕದಲ್ಲಿ ಬರೆಯುತ್ತಾರೆ!! “ಬಸವನೇ ಶ್ರೇಷ್ಟ ಕ್ರೈಸ್ತ! ಜೀಸಸ್ ನೇ ಶ್ರೇಷ್ಠ ಲಿಂಗಾಯತ!” ವ್ಹಾ!! ಇವತ್ತು ಒಂದಷ್ಟು ವೇಷಧಾರಿಗಳು ಮತ್ತದೇ ಉತ್ತಂಗಿಯನ್ನು ಅಭ್ಯಸಿಸಿ ತಾನು ಹಿಂದೂ ವಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಾರೆಂದರೆ ಅದಕ್ಕೊಂದು ಅರ್ಥವಿದೆಯೇ?! ಅದಲ್ಲದೇ, ಹಿಂದೂ ಗಳ ಮನಃಪರಿವರ್ತನೆ ಮಾಡಬೇಕೆಂದರೆ, ಅವರಂತೆಯೇ
ನೀವೂ ಬದುಕುವಂತೆ ನಾಟಕವಾಡಿ! ಸಂಪ್ರದಾಯಗಳಲ್ಲಿ ಹೋಲಿಕೆಯಿದ್ದರೆ, ಹಿಂದೂಗಳು ಸಲೀಸಾಗಿ ಮತಾಂತರವಾಗುತ್ತಾರೆ ಎನ್ನುವಂತಹ ಆಲೋಚನೆಗಳು ಇವತ್ತು ಯಾವ ರೀತಿಯ ಪರಿಣಾಮ ಬೀರಿವೆ ಗೊತ್ತಾ?!

೩. ಬಿಡಿ! ಈ ಉತ್ತಂಗಿ ಎನ್ನುವ ಧರ್ಮಭ್ರಷ್ಟನೊಬ್ಬ ೧೯೪೦ ರಲ್ಲಿಯೇ ಬಸೆಲ್ ಮಿಷನ್ ನ ಜೊತೆ ಸೇರಿ, ಲಿಂಗಾಯತರಿಗೆ ಸ್ವತಂತ್ರ ಧರ್ಮ ಬೇಕು! ಅವರ್ಯಾರೂ ಹಿಂದೂಗಳಲ್ಲ ಎನ್ನುವ ಚಳುವಳಿಯನ್ನೂ ಪ್ರಾರಂಭಿಸಿದ್ದರಷ್ಟೇ!! ಇದರ ಬಗ್ಗೆ ಹೆಚ್ಚು ಮಾಹಿತಿಗಳಿಲ್ಲದಿದ್ದರೂ ಸಹ, ಇವತ್ತಿಗೂ ಈ ಪ್ರತ್ಯೇಕ ಧರ್ಮದ ಧ್ವನಿ ಎತ್ತಿರುವವರು ಮತ್ತಿದೇ ಉತ್ತಂಗಿಯ ಪರಂಪರಾಗತವಾದ ಬೆಂಬಲಿಗರು!!

೪. ಮುಖ್ಯವಾದ ವಿಷಯವದೇ!! ಹಿರೇಮಲ್ಲೂರು ಈಶ್ವರಣ್ಣ ಮತ್ತು ಎಮ್ ಎಮ್ ಕಲಬುರ್ಗಿಯಂತಹ ಸೋ ಕಾಲ್ಡ್ ಇತಿಹಾಸಕಾರರು ಪ್ರತ್ಯೇಕ ಧರ್ಮದ ಬೇಡಿಕೆಯಿಡುವಲ್ಲಿ ಮೊದಲ ಹೆಜ್ಜೆ ಇಟ್ಟವರು! ಇರಬಹುದು! ಉತ್ತಂಗಿಯ ಆಧಾರಗಳ ಮೇಲೆ, ಲಿಂಗಾಯತ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎನ್ನುವ ಒಂದಷ್ಟು ತುಕ್ಕು ಹಿಡಿದ ಅಸಂಬದ್ಧವಾದ ಸಾಕ್ಷ್ಯಗಳನ್ನು ಪ್ರಸ್ತುತ ಪಡಿಸಿದವರಲ್ಲಿ ಇವರೇ ಮೊದಲಿಗರು!! ಅದನ್ನೇ ಇಟ್ಟುಕೊಂಡು ಇವತ್ತು, ಸಿದ್ಧರಾಮಯ್ಯ ಸರಕಾರ ಮತ್ತು ಈ ಪ್ರತ್ಯೇಕ ಧರ್ಮದ ಅಮಲು ಹಿಡಿದಿರುವವರು ಸಾಕ್ಷ್ಯವನ್ನಾಗಿಸಿ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಅರ್ಜಿ ಹಾಕಿರುವುದು!

೫. ಉತ್ತಂಗಿಯ ಪುಸ್ತಕಗಳು ಮತ್ತು ಬಸವೇಶ್ವರರ ತತ್ವಗಳ ಬಗ್ಗೆ ಬರೆದಂತಹ ಉಪನ್ಯಾಸ ಮಂಜರಿಗಳೆಲ್ಲವೂ ಸಹ ಕ್ರೈಸ್ತ ಧರ್ಮಕ್ಕೆ ಪೂರ್ವಕವಾಗಿಯೇ ಬರೆದಂತಹದ್ದು! ಅದರಲ್ಲೂ,  ಮೃತ್ಯುಂಜಯ (ಯೇಸುಕ್ರಿಸ್ತನ ಕೊನೆಯ ದಿನಗಳು) (1963), ಲಿಂಗಾಯಿಸಂ ಮತ್ತು ಕ್ರಿಶ್ಚಿಯಾನಿಟಿ (1969), ಅನುಭವಾ ಮಂಟಪ: ವಿರೋಷಿವಿಜಂನ ಹೃದಯ (1932) ಎಂಬಂತಹ ಪುಸ್ತಕಗಳಿವೆಯಲ್ಲವಾ?! ಅದಷ್ಟೂ ಕೂಡ ಹಿಂದೂ ಸಮಾಜವನ್ನು ವಿಭಜಿಸುವ ಗುರಿಯನ್ನು ಹೊಂದಿದ್ದವಷ್ಟೇ!! ಬಸವ ತತ್ವದ ನಿಜವಾದ ಅರ್ಥವನ್ನೇ ಬದಲು ಮಾಡಿ ಹಾಕಿದವು!! ಅದನ್ನು ಓದಿದ ಪ್ರತೀಯೊಬ್ಬನೂ ಸಹ, ನಾನು ಹಿಂದೂವಲ್ಲ ಎನ್ನತೊಡಗಿದ! ನಾನೊಬ್ಬ ಜೀಸಸ್ ನ ಅನುಯಾಯಿ ಎಂದ! ನಾನು ಕ್ರಿಸ್ತನ ಲಿಂಗಾಯತ ಎಂದ! ಅಂದರೆ, ಕಲ್ಪಿಸಿಕೊಳ್ಳಿ! ಉತ್ತಂಗಿಯ ದರಿದ್ರ ಸಿದ್ಧಾಂತಗಳು ಹಿಂದುತ್ವವಕ್ಕೆ ಒಳಗಿನಿಂದ ತುಕ್ಕು ಹಿಡಿಸ ತೊಡಗಿತ್ತು!

೬. ಡಾ. ಎನ್.ಜಿ.ಮಹದೇವಪ್ಪ, ಸಂಜಯ್ ಮಕಲ್, ವ್ಲಾಸವತಿ ಕೂಬಾ, ಆಶಾ ಕೂಬಾ ಮಂಜುನಾಥ ಕಲೆ, ಚಂದ್ರ ಶೇಖರ್ ತಲ್ಲಾಯ್ ಎಂಬಂತವರು ಇವತ್ತಿನ ಪ್ರತ್ಯೇಕ ಧರ್ಮದ ಕೂಗಿಗೆ ಪ್ರಮುಖ ಪಾತ್ರ ವಹಿಸಿದವರು ಅಷ್ಟೇ! ಇವರ ಬದುಕನ್ನು ಒಮ್ಮೆ ನೋಡಿದರೆ ಸಾಕು! ಹೇಗೆ, ಕ್ರೈಸ್ತ ಧರ್ಮಕ್ಕೂ ಲಿಂಗಾಯತಕ್ಕೂ ಹೋಲಿಕೆ ಮಾಡುತ್ತಲೇ ಹಿಂದೂ ಧರ್ಮದಿಂದ ಬೇರ್ಪಡಲು ಕೊಕ್ಕೆ ಹಾಕಿದರೆನ್ನುವುದು ತಿಳಿದು ಹೋಗುತ್ತದೆ!

೭. ಹಿಂದೂಗಳನ್ನು ಮರುಳು ಮಾಡಲು ಕ್ರೈಸ್ತನನ್ನು ಹಿಂದೂ ದೇವರ ಹಾಗೆಯೇ ಪೂಜಿಸಿ, ಆಚರಣೆಗಳನ್ನೂ ಸೃಷ್ಟಿ ಮಾಡಿ ಎಂದ ಹೊಡೆತಕ್ಕೆ, ಸ್ವತಃ ಕ್ರೈಸ್ತ ಕೃಷ್ಣನಾಗಿ ಕಂಗೊಳಿಸಿದ!! ಆರತಿ, ಪಲ್ಲಕ್ಲಿ, ಉತ್ಸವ, ಪೂಜೆ ಪುನಸ್ಕಾರಗಳೂ ಶುರುವಾದವು! ವ್ಹಾ! ನಂಬಿದ ಅದೆಷ್ಟೋ ಲಕ್ಷ ಕೋಟಿ ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತ ಬಂದರು! ಅದರಲ್ಲೆಲ್ಲ, ಉತ್ತಂಗಿಯ ಈ ಬಸೆಲ್ ಮಿಷನ್ ಪ್ರಮುಖ ಪಾತ್ರ ವಹಿಸಿದೆ!!

೮. ಅದರಲ್ಲೂ, ಈ ಜೊಶುವಾ ಮಿಷನ್ ಒಂದು ತತ್ವ ಮುಂದಿಟ್ಟಿತು! ಲಿಂಗಾಯತರು ವೇದವನ್ನು ಒಪ್ಪುವುದಿಲ್ಲ! ಅದಕ್ಕೇ, ಅವರು ಹಿಂದೂಗಳಲ್ಲ ಎನ್ನುವ ತತ್ವಕ್ಕೆ ಗುಂಡಿಗೆ ಬಿದ್ದವರು ಮಾತ್ರ ಸಾಸಿರ ಮಂದಿ! ಈ ಜೊಶುವಾ ಮಿಷನ್ ಕೂಡಾ, ಒಂದು ಕೈಯ್ಯಲ್ಲಿ ಬೈಬಲ್ ಹಿಡಿಯಿತು! ಇನ್ನೊಂದು ಕೈಯ್ಯಲ್ಲಿ ಉತ್ತಂಗಿಯ ಕ್ರೈಸ್ತ ಮತ್ತು ಲಿಂಗಾಯತ ಎನ್ನುವ ಪುಸ್ತಕ ನೀಡಿತು! ಅಲ್ಲಿಗೆ ಪ್ರಾರಂಭವಾಗಿತ್ತು ಪ್ರತ್ಯೇಕ ಧರ್ಮದ ಕೂಗು!

೯. ದಕ್ಷಿಣದ ಬ್ಯಾಪ್ಟಿಸ್ಟ್ ಚರ್ಚಿನ ಪ್ರಕಾರ, ೧೯೯೦ ರಲ್ಲಿ ಅಮೇರಿಕಾದಿಂದ ಬಂದ ಬ್ಯಾಪ್ಟಿಸ್ ಮಿಷನರಿಗಳು ಲಿಂಗಾಯತ ಫೆಲ್ಲೋಶಿಪ್ ಗಳನ್ನು ಪರಿಚಯಿಸಿ, ಮೊದಲ ಗುರಿ ಇಟ್ಟಿದ್ದೇ ಲಿಂಗಾಯಿತರಿಗೆ!! ಬೈಬಲ್ಲನ್ನೂ ತಿರುಚಿದ ಇದೇ ಬ್ಯಾಪ್ಟಿಸ್ ಮಿಷನರಿಗಳ ಸತ್ಯ ಗೊತ್ತಿದ್ದದ್ದು ಕೆಲವೇ ಕೆಲವು ಜನರಿಗೆ ಮಾತ್ರ!!

ನೋಡಿ!! ಲಿಂಗಾಯತ ಪಂಗಡ ಸಣ್ಣದಲ್ಲ! ಅದೊಂದು ಸಮುದ್ರ! ಅದನ್ನೇ ಗುರಿಯಾಗಿಸಿತ್ತು ಈ ಚರ್ಚುಗಳು! ಜಾಟರು, ವಕ್ಕಲಿಗರು, ಲಿಂಗಾಯತರು, ರೆಡ್ಡಿಗಳು ಎಂಬೆಲ್ಲ ದೊಡ್ಡದಾದ ಪಂಗಡಗಳಿವೆಯಾದರೂ ಇವತ್ತು, ಅಂತಹದೇ ಪಂಗಡಗಳಲ್ಲಿ ಹೆಚ್ಚು ಹೆಚ್ಚು ಮತಾಂತರವಾಗುತ್ತಿರುವುದು ಅಷ್ಟೇ! ಇನ್ನಾದರೂ ಲಿಂಗಾಯತರು ಎಚ್ಚೆತ್ತುಕೊಂಡರೆ ಬಹುಷಃ ಮುಂದಿನ ಪೀಳಿಗೆ ಶಿವನಿಗೆ ತಕ್ಕನಾಗಿ ಬದುಕಬಹುದೇನೋ! ಇಲ್ಲವಾದರೆ, ಮುಂದೊಂದಿನ ಲಿಂಗಾಯತರು ಕ್ರೈಸ್ತರಾಗುವುದಲ್ಲಿ ಯಾವ ಸಂಶಯವೂ ಉಳಿಯುವುದಿಲ್ಲ! ಧರ್ಮವನ್ನುಳಿಸಿಕೊಳ್ಳಿ!! ಹಿಂದುತ್ವದ ಉಳಿವಿಗೆ ಒಂದಾಗಿ! ಅದು ಬಸವೇಶ್ವರರ ತತ್ವ!

Source :http://rightactions.in/2018/03/20/exclusive-how-church-played-key-role-in-separating-lingayat-from-hindus/

– ಅಜೇಯ ಶರ್ಮಾ

Tags

Related Articles

Close