ಪ್ರಚಲಿತ

ನಂಬರ್ ವನ್ ಶಾಸಕರನ್ನು ಸೋಲಿಸಲು ಕುತಂತ್ರ ನಡೆಸಲು ಹೋಗಿ ಸಿಕ್ಕಿಬಿದ್ಧ ಕಾಂಗ್ರೆಸ್ ಛೇಲಾಗಳು…! ಕೇಸ್…

ಕೊನೇ ಘಳಿಗೆಯಲ್ಲಿ ಚುನಾವಣೆಯಲ್ಲಿ ಎದುರಾಳಿಯನ್ನ ಸೋಲಿಸಲು ಕಾಂಗ್ರೆಸ್ ಪಕ್ಷ ಯಾವ ಹಂತಕ್ಕೆ ಇಳಿದು ತನ್ನ ನೀಚ ಬುಧ್ಧಿಯನ್ನು ಪ್ರದರ್ಶಿಸುತ್ತೆ ಅನ್ನೋದು ಇದೀಗ ದಾಖಲೆ ಸಮೇತ ಬಹಿರಂಗ ವಾಗಿದೆ. ರಾಜ್ಯದ ನಂಬರ್ ವನ್ ಶಾಸಕರನ್ನು ಸೋಲಿಸಲು ಕಾಂಗ್ರೆಸ್ ಹಿಡಿದ ವಾಮಮಾರ್ಗ ಇದೀಗ ಅತಿದೊಡ್ಡ ಬ್ರೇಕಿಂಗ್ ನ್ಯೂಸ್ ಆಗಿದೆ.

ಗೆಲ್ಲುವ ಕುದುರೆಗೆ ಲಗಾಮು ಹಾಕಲು ಯತ್ನ..!

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಈ ಬಾರಿಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಗಿರುವ ಅರವಿಂದ ಲಿಂಬಾವಳಿ ವಿರುದ್ಧ ಸೋಲಿನ ಭೀತಿಯಿಂದ ನಡೆಯುತ್ತಿದ್ದ ಭಾರೀ ಅಪ ಪ್ರಚಾರ ಇದೀಗ ಬಯಲಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕಿಡ್ಜಿ ಎಂಬ ಖಾಸಗಿ ನರ್ಸರಿ ಸ್ಕೂಲ್ ಇದೆ. ಈ ಸ್ಕೂಲಿನ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿತ್ತು. ಇದರಿಂದ ಸಿಡಿದೆದ್ದಿದ್ದ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಸಹಿತ ಸಾವಿರಾರು ಮಂದಿ ಆಕ್ರೋಶಿತರು ಪ್ರತಿಭಟನೆ ನಡೆಸಿದ್ದರು. ಕಿಡ್ಜಿ ನರ್ಸರಿ ಸ್ಕೂಲಿನ ಈ ಕಾಮಕಾಂಡ ಬಯಲಾಗಬೇಕು, ಅದರ ಬಗ್ಗೆ ತನಿಖೆ ನಡೆಯಬೇಕು ಎಂದು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು.

ಆದರೆ ಅಂದು ಪ್ರತಿಭಟನೆ ನಡೆಸಿದ್ದ ಅರವಿಂದ ಲಿಂಬಾವಳಿ ಸಹಿತ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ಕೇಸ್ ದಾಖಲಿಸಿದ್ದರು. ಕಾಂಗ್ರೆಸ್ ತಾಳಕ್ಕೆ ಕುಣಿಯವ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಸಹಿತ ಹಲವಾರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ಹೇಮಂತ್ ನಿಂಬಾಳ್ಕರ್ ಪತ್ನಿ ಕಾಂಗ್ರೆಸ್ ನ ಅಭ್ಯರ್ಥಿ. ಇದರಲ್ಲೇ ಅರ್ಥಮಾಡಿಕೊಳ್ಳಬಹುದು. ಕಾಂಗ್ರೆಸ್ ಪಕ್ಷ ಹೇಮಂತ್ ನಿಂಬಾಳ್ಕರ್ ಅವರನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಕಾಂಗ್ರೆಸ್ ಮಾಡಿದ್ದೇನು ಗೊತ್ತಾ…!

ಕಿಡ್ಜಿ ನರ್ಸರಿ ಸ್ಕೂಲಿನ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎನ್ನಲಾಗುತ್ತಿದ್ದು ಅದರ ವಿರುದ್ಧ ಧ್ವನಿ ಎತ್ತಿದ್ದ ಅರವಿಂದ ಲಿಂಬಾವಳಿ ಸಹಿತ ಸಾವಿರಾರು ಬಿಜೆಪಿ ಕಾರ್ಯಕರ್ತರಿಗೆ ಶಾಕ್ ಎದುರಾಗಿದೆ. ಯಾವ ಆರೋಪದ ವಿರುದ್ಧ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಸಹಿತ ಕಾರ್ಯಕರ್ತರು ಹೊರಟಿದ್ದರೋ ಅವರ ವಿರುದ್ಧ ಇದೀಗ ಅಂದರೆ ಚುನಾವಣೆ ಯ ಮುಂದಿನ ಅಪಪ್ರಚಾರದ ನಕಲಿ ನ್ಯೂಸ್ ವಿಡಿಯೋ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ.

ನ್ಯೂಸ್ 25 ಎಂಬ ಹೆಸರಿನ ಚಾನೆಲ್ ಅನ್ನು ಸೃಷ್ಟಿಸಿದ ಕಾಂಗ್ರೆಸ್ ಅರವಿಂದ ಲಿಂಬಾವಳಿ ಹಾಗೂ ಕೆಎಸ್ ಈಶ್ವರಪ್ಪ ಮಾತನಾಡಿದ ವಿಡಿಯೋ ಎಂಬಂತೆ ಬಿಂಬಿಸಿ ನಕಲಿ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟಿದ್ದಾರೆ. ಇದರಲ್ಲಿ ಕಿಡ್ಜಿ ನರ್ಸರಿ ಸ್ಕೂಲಿನ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದು ಅರವಿಂದ ಲಿಂಬಾವಳಿ ಯವರೇ ಎಂದು ಚಿತ್ರಿಸಲಾಗಿದೆ. ಅಸಲಿಗೆ ನ್ಯೂಸ್ 25 ಎನ್ನುವ ಸುದ್ದಿ ಮಾಧ್ಯಮವೇ ಇಲ್ಲ. ಆದರೆ ಚುನಾವಣೆ ಗೆ ಒಂದು ದಿನ ಇರುವಾಗ ಈ ವಿಡಿಯೋ ವನ್ನು ವೈರಲ್ ಮಾಡಿದ್ದು ಕಾಂಗ್ರೆಸ್ ಕುತಂತ್ರಿ ಬುಧ್ಧಿಯನ್ನು ತೋರಿಸಿದೆ. ಥೇಟ್ ನ್ಯೂಸ್ ಸಂಸ್ಥೆಯ ಡಿಸೈನ್ ನಿರ್ಮಾಣ ಮಾಡಿ ಅದರಲ್ಲಿ ಇಂತಹ ನಕಲಿ ಮಾನ ಹಾನಿ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ.

ಆರೋಪಿಗಳ ವಿರುದ್ಧ ಕೇಸ್…!

ಹೀಗೆ ನಕಲಿ ವಿಡಿಯೋ ಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟವರ ವಿರುದ್ಧ ಕೇಸ್ ನೀಡಿದ್ದಾರೆ. ರಘು ಎಂಬವನು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ಆತನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಕೆಳಗಿನ ವಿಡಿಯೋವನ್ನು ರಘು ಮೌರ್ಯ ಎಂಬುವವರು ಪ್ರಕಟಿಸಿರುತ್ತಾರೆ:

https://www.facebook.com/raghu.mourya.71/videos/181582419329351/

ಈ ವಿಡಿಯೋವು ಸಂಪೂರ್ಣ ಫೇಕ್‌ ಆಗಿದ್ದು ಇಂತಹ ಯಾವುದೇ ಟಿವಿ ಚಾನೆಲ್‌ ಕೂಡಾ ಇರುವುದಿಲ್ಲ ಮತ್ತು ಇದರಲ್ಲಿರುವ ಪೂರ್ತಿ ಸಂಗತಿಯು ಸುಳ್ಳು ಸುದ್ದಿ (ಫೇಕ್‌ ನ್ಯೂಸ್‌) ಆಗಿರುತ್ತದೆ.  ಮೇ 12 ರಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜನಪ್ರಿಯ ವ್ಯಕ್ತಿಯನ್ನು ಸುಳ್ಳು ಮತ್ತು ಜನರನ್ನು ದಾರಿ ತಪ್ಪಿಸುವ ಮೂಲಕ ಮಾನಹಾನಿ ಮಾಡುವ ಕೆಲಸ ಇದಾಗಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಹೀಗೆ ಫೇಕ್‌ ನ್ಯೂಸ್‌ ಮಾಡುವವರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗವೇ ಈ ಹಿಂದೆ ಸ್ಪಷ್ಟವಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಫೇಕ್‌ ನ್ಯೂಸ್‌ ಮತ್ತು ಫೇಕ್‌ ವಿಡಿಯೋ ಪ್ರಕಟಿಸಿದ್ದರ ವಿರುದ್ಧ ಬೆಂಗಳೂರು ಸೈಬರ್‌ಕ್ರೈಮ್‌ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಈ ದೂರಿನ ಪ್ರತಿಯನ್ನೂ ಈ ಪೋಸ್ಟ್‌ನೊಂದಿಗೆ ನೀಡಲಾಗಿದೆ.  ಆದ್ದರಿಂದ ಈ ಫೇಕ್‌ನ್ಯೂಸ್‌ ಹಾಕಿದವರು ಮತ್ತು ಅದನ್ನು ಶೇರ್‌ ಮಾಡುವವರು – ಎಲ್ಲರೂ ಈ ಈ ದೂರಿನ ಮತ್ತು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ. ಈ ಶಿಕ್ಷೆಯು ಕನಿಷ್ಟ 2 ವರ್ಷಗಳ ಸೆರೆವಾಸ ಆಗಿದೆ.  ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟ ವ್ಯಕ್ತಿಗಳ ಆಮಿಷಕ್ಕೆ ಒಳಪಟ್ಟು ಇಂಥ ಫೇಕ್‌ನ್ಯೂಸ್ ಪ್ರಕಟಿಸುವ ದುಷ್ಟ ಶಕ್ತಿಗಳನ್ನು ಎಲ್ಲರೂ ವಿರೋಧಿಸಬೇಕು ಮತ್ತು ಎಲ್ಲರೂ ಈ ಫೇಕ್‌ನ್ಯೂಸ್‌ ವಿರುದ್ಧ ದೂರು ಸಲ್ಲಿಸಬಹುದು.

ಒಟ್ಟಾರೆ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಇದೀಗ ಇಂತಹಾ ತಂತ್ರಗಳ ಮೊರೆ ಹೋಗಿದ್ದು ತನ್ನ ಕರಾಳ ಮುಖವನ್ನು ವ್ಯಕ್ತಪಡಿಸಿದೆ. ಅರವಿಂದ ಲಿಂಬಾವಳಿಯವರನ್ನು ಎದುರಿಸಲಾಗದ ಕಾಂಗ್ರೆಸ್ಸಿಗರು ಇದೀಗ ಇಂತಹಾ ತಂತ್ರಗಳ ಮೊರೆ ಹೋಗಿರುವುದು ವಿಪರ್ಯಾಸಲೇ ಸರಿ…

Tags

Related Articles

Close