ಪ್ರಚಲಿತ

ಜೈ ಹೋ ಯೋಗಿ!! ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಹೆದರಿ ಜಾಮೀನನ್ನು ಸ್ವತಃ ರದ್ದುಗೊಳಿಸಿಕೊಂಡ ಉತ್ತರ ಪ್ರದೇಶದ ೫೫೦೦ ಅಪರಾಧಿಗಳು!!

ಹಾ! ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರ ಖದರ್ರೇ ಹಾಗಿದೆ!! ಅಪರಾಧ ಮಾಡಿದವರು ಒಂದೋ ಜೈಲಿಗೆ ಹೋಗುತ್ತಾರೆ, ಇಲ್ಲವೇ ಯಮನ ಪಾದ ಸೇರುತ್ತಾರೆ ಎಂದಬ್ಬರಿಸಿದ್ದ ಯೋಗಿ ಆದಿತ್ಯನಾಥ್ ಮಾತಿಗೆ ತಕ್ಕ ಹಾಗೆ ನಡೆದುಕೊಂಡಿದ್ದಾರಷ್ಟೆ!! ಅಧಿಕಾರ ಬಂದಾಗಿನಿಂದ, ಸ್ವಚ್ಛ ಉತ್ತರ ಪ್ರದೇಶಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನ್ಯಾಯ ಕೊಡಿಸುವಲ್ಲಿ ಎಂದೂ ತಪ್ಪಿದವರಲ್ಲ! ಸ್ವಚ್ಛವನ್ನು ಎಲ್ಲ ರೀತಿಯಲ್ಲಿಯೂ ಮಾಡುತ್ತಿರುವ ಯೋಗಿ ಆದಿತ್ಯನಾಥ್ ರವರಿಗೆ ಪ್ರಜೆಗಳೂ ಸಹ ಅಷ್ಟೇ ಸಹಕರಿಸುತ್ತಿದ್ದಾರೆ!!

ಉತ್ತರ ಪ್ರದೇಶದ ಡಿಜಿಪಿ ಯಾದ ಓಂ ಪ್ರಕಾಶ್ ಸಿಂಗ್ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಹೇಳಿಕೆ ಪ್ರಕಾರ, ೫೫೦೦ ಕ್ರಿಮಿನಲ್ ಅಪರಾಧಿಗಳು ಪೋಲಿಸರಿಂದಾಗಬಹುದಾದ ಕ್ರಮಕ್ಕೆ ಹೆದರಿ, ತಮ್ಮ ಜಾಮೀನನ್ನು ರದ್ದುಗೊಳಿಸಿಕೊಂಡಿದ್ಧಾರೆ!! ಭಾನುವಾರ, ಆಗ್ರಾದಲ್ಲಿ ನಡೆದ ಅಪರಾಧ ತಡೆ ಸಭೆಯಲ್ಲಿ ಡಿಜಿಪಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ!

ಮಾರ್ಚ್ ೨೦೧೭ ರಿಂದ , ಜನವರಿ ೨೦೧೮ ರ ವರೆಗೆ, ಒಟ್ಟಾರೆಯಾಗಿ ೧೩೩೧ ರಷ್ಟು ಎನ್ ಕೌಂಟರ್ ಗಳು ನಡೆದಿದೆ! ಅದರ ಪ್ರತಿಫಲವಾಗಿ, ಉತ್ತರ ಪ್ರದೇಶದ ಪೋಲಿಸರು ೩೦೯೧ ಅಪರಾಧಿಗಳನ್ನು ಬಂಧಿಸಿದ್ದರೆ, ೪೩ ಅಪರಾಧಿಗಳನ್ನು ಎನ್ ಕೌಂಟರ್ ಮಾಡಲಾಗಿದೆ! ಅರ್ಧಕ್ಕರ್ಧ ಕ್ರಿಮಿನಲ್ ಅಪಾರಾಧಿಗಳ ತಲೆ ಮೇಲೆ ಈಗಾಗಲೇ ಬಂಟಿಗಳನ್ನು ಯುಪಿ ಪೋಲಿಸ್ ಘೋಷಿಸಿದೆ! ಅದರ ಫಲವಾಗಿ, ೫೪೦೯ ಅಪರಾಧಿಗಳಿಗೆ ಜಾಮೀನು ಸಿಕ್ಕಿದ್ದರೂ ಸಹ, ಸ್ವೀಕರಿಸದೇ ತಮ್ಮ ಜಾಮೀನನ್ನು ಸ್ವತಃ ತಾವೇ ರದ್ದುಗೊಳಿಸಿಕೊಂಡಿದ್ದಾರೆ!! ಅದೂ ಸಹ, ಉತ್ತರ ಪ್ರದೇಶದ ಪೋಲಿಸರಿಗೆ ಹೆದರಿ ನಡುಗಿ!!

From March 2017 to January 2018, a whopping 1331 encounters were conducted by the UP police, as a result of which 3091 criminals were arrested and 43 were killed. Half of the criminals already had rewards declared against their name. As a result, fearing action by the police, a total of 5409 criminals have got their bails cancelled.

ಜೀವ ಉಳಿದರೆ ಬೇಡಿಯಾದರೂ ತಿಂದೇನು ಎನ್ನುವಂಹ ಸ್ಥಿತಿಗೆ ತಲುಪಿರುವ ಅತಿ ಭಯಂಕರ ರೌಡಿಗಳು, ಅಪರಾಧಿಗಳು ಈಗಾಗಲೇ ಹೆದರಿ ಕಂಗಾಲಾಗಿದ್ದಾರೆ! ಯಾಕೆಂದರೆ, ಇರುವುದು ಯೋಗಿ ಆದಿತ್ಯನಾಥ್ ಸರಕಾರ! ಇಷ್ಟು ದಿನ ಕೊಲೆ ಸುಲಿಗೆ ಮಾಡಿ, ಪೋಲಿಸರನ್ನೇ ಒದ್ದು ಬರುತ್ತಿದ್ದವರಿಗೆ ಈಗ ಪೋಲಿಸರು ಗನ್ನು, ಬುಲೆಟ್ಟುಗಳ ರುಚಿ ತೋರಿಸತೊಡಗಿದ್ದಾರೆ! ಕರುಣೆ ದಾಕ್ಷಿಣ್ಯ ಇಲ್ಲದೇ, ರೌಡಿಗಳ ಹೆಸರಿನ ಮೇಲೆ ಇಷ್ಟಿಷ್ಟು ಎಂದು ರಿವಾರ್ಡು ಗಳನ್ನು ಘೋಷಿಸಿರುವ ಉತ್ತರ ಪ್ರದೇಶ ಪೋಲಿಸ್ ಇಲಾಖೆ ಜಿದ್ದಿಗೆ ಬಿದ್ದವರಂತೆ ಅಪರಾಧಿಗಳ ಹಿಂದೆ ಬಿದ್ದಿದ್ದಾರೆ!!

ಇದಲ್ಲದೇ, ೨೦೧೩ ರಲ್ಲಿ ಹೋಳಿ ಆಚರಿಸುವ ಸಮಯದಲ್ಲಿ ೬೦ ಕೋಮು ಗಲಭೆಯ ಪ್ರಕರಣಗಳು ದಾಖಲಾಗಿತ್ತು. ಆದರೆ, ಈ ಸಲ ೧೪ ಕ್ಕೆ ಇಳಿದಿದೆ ಎಂದಿರುವ ಡಿಜಿಪಿ, ಉತ್ತರ ಪ್ರದೇಶ ಸರಕಾರ ಸಮಾಜವನ್ನು ಉತ್ತಮವಾಗಿ ನಿಭಾಯಿಸುತ್ತಿದೆ ಎಂದು ಪ್ರಶಂಸಿಸಿದ್ದಾರೆ!! ನ್ಯೂಸ್ ೧೮ ನ ವರದಿಯ ಪ್ರಕಾರ, ೫೪೦೯ ಅಪರಾಧಿಗಳು ತಮ್ಮ ಜಾಮೀನನ್ನು ರದ್ದುಗೊಳಿಸಿಕೊಂಡಿದ್ದಾರೆ! ಅದರಲ್ಲೂ, ತಲೆ ಮೇಲೆ ೫೦,೦೦೦ ರೂಗಳ ಬೌಂಟಿ ಹೊತ್ತಿದ್ದ ಭಯಂಕರ ರೌಡಿಯಾದ ಕೌಲಾ ಅಲಿಯಾಸ್ ಅಮಿತ್ ನನ್ನು ಇತ್ತೀಚೆಗಷ್ಟೇ ಉತ್ತರ ಪ್ರದೇಶ ಪೋಲಿಸ್ ಎನ್ ಕೌಂಟರ್ ಮಾಡಿತ್ತು!! ಈ ಘಟನೆಯಿಂದ ಬೆಚ್ಚಿಬಿದ್ದ ರೌಡಿಗಳು, ಅಪರಾಧಿಗಳು ಸ್ವತಃ ಇಲಾಖೆಯೇ ಜಾಮೀನು ಕೊಡುತ್ತೇನೆಂದರೂ ಸಹ ಸ್ವೀಕರಿಸಲಾಗದಷ್ಟು ನಡುಗಿ ಹೋಗಿದ್ದಾರೆ! ಅದರಲ್ಲೂ, ಯೋಗಿ ಆದಿತ್ಯನಾಥ್ ಸರಕಾರವೊಂದು ಉತ್ತರ ಪ್ರದೇಶದಲ್ಲಿ ರಚನೆಯಾದಾಗಿನಿಂದಲೂ ಸಹ ಅಪರಾಧಗಳನ್ನು ತನ್ನ ಕಬ್ಬಿಣದ ಮುಷ್ಟಿಯಿಂದ ತಡೆಗಟ್ಟುತ್ತ ಬರುತ್ತಿದ್ದು, ಅಪರಾಧಗಳ ರಾಜ್ಯವಾಗಿದ್ದ ಉತ್ತರ ಪ್ರದೇಶ ಈಗ ಅಪರಾಧ ರಹಿತ ರಾಜ್ಯವಾಗತೊಡಗಿದೆ!!

Another report by News18, which carried the figure of 5409 cancelled bail applications, talked about a successful encounter carried out by the UP police on Sunday. In the encounter the police managed to gun down a goon named Kalua A.K.A. Amit who carried a reward of Rs 50,000 over
his head.

ಯೋಗಿ ಆದಿತ್ಯನಾಥ್ ಸರಕಾರದ ಎನ್ ಕೌಂಟರ್ ಆಪರೇಶನ್ನಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಈಗಾಗಲೇ ೯ ಕ್ಕೂ ಹೆಚ್ಚು ಬಾರಿ ವಿರೋಧಿಸಿ ನೋಟೀಸ್ ಕಳುಹಿಸಿದ್ದರೂ ಕ್ಯಾರೇ ಎನ್ನದ ಯೋಗಿ ಸರಕಾರ, ನೀವು ನೋಟೀಸ್ ಕಳಿಸಿ, ನಾವು ನಮ್ಮ ಕೆಲಸ ಮುಂದುವರೆಸುತ್ತೇವೆ ಎಂದಿದೆ! ಈ ಹಿಂದೆಯೂ ಸಹ ಎನ್ ಕೌಂಟರ್ ನ ವಿಚಾರಕ್ಕೆ ವಿರೋಧ ವ್ಯಕ್ತವಾಗಿದ್ದಕ್ಕೆ ತೀರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಯೋಗಿ ಆದಿತ್ಯನಾಥ್, “ಆ ರೌಡಿಗಳು ನನ್ನ ಸರಕಾದ ಪೋಲಿಸರ ಮೇಲೆ, ಯೋಧರ ಮೇಲೆ ಗುಂಡು ಹಾರಿಸುವಾಗ ಪೋಲಿಸರನ್ನು ಸಾಯಲಿಕ್ಕೆ ಬಿಟ್ಟು ನಾನು ಕೈ ಕಟ್ಟಿ ಕೂರಬೇಕೇನು?! ಅಪರಾಧಿ ಒಂದೋ ಜೈಲಿಗೆ ಹೋಗಬೇಕು, ಇಲ್ಲವೇ ಯಮ ಸದನಕ್ಕೆ ಹೋಗಬೇಕು! ಇವೆರಡನ್ನೂ ಮಾಡದೇ ನಾನು ಅಪರಾಧಿಗೆ ಆರತಿ ಎತ್ತಬೇಕೇ?!” ಎಂದ ಅಬ್ಬರಕ್ಕೆ ವಿರೋಧಿಸುವವರು ಹೇಳ ಹೆಸರಿಲ್ಲದಂತಾಗಿದ್ದರು! ಅದೆಷ್ಟೋ ರೌಡಿಗಳು ಭೂಗತರಾಗಿ ಹೋಗಿದ್ದರು! ಅಂತಹ ಒಬ್ಬೊಬ್ಬರನ್ನೂ ಸಹ ಬಿಡದೇ ಹುಡುಕಿ ಹುಡುಕಿ ಅಟ್ಟಾಡಿಸುತ್ತಿರುವ ಯೋಗಿ ಸರಕಾರ ಸ್ವಚ್ಛ ಉತ್ತರ ಪ್ರದೇಶವನ್ನು ಗಂಭೀರವಾಗಿ ತೆಗೆದುಕೊಂಡಂತಿದೆ!!

It was reported how despite the National Human Rights Commission’s (NHRC) disapproval, Yogi government continued to be relentless in its encounters against notorious criminals. The NHRC’s disapproval of the UP government’s methods had resulted in the latter getting about 9 notices till January. One such notice was issued to the chief secretary of UP after dreaded gangster Sumit Gurjar, who had a bounty of Rs. 50000 on his head, was killed in an encounter.

ಅದರಲ್ಲೂ ಸಹ, ರೌಡಿಗಳಿಗೆ ಅದೆಷ್ಟು ಹೀನಾಯ ಪರಿಸ್ಥಿತಿ ಬಂದೊದಗಿದೆಯೆಂದರೆ, ತಮ್ಮ ಕುತ್ತಿಗೆಗೆ “ನಾವು ಯಾವುದೇ ರೀತಿಯ ಅಪರಾಧಗಳಲ್ಲಿ ಎಂದಿಗೂ ಇನ್ನು ಭಾಗವಹಿಸುವುದಿಲ್ಲ! ಮತ್ತು, ಶ್ರಮದಿಂದ ನ್ಯಾಯವಾಗಿ ದುಡಿದು ತಿನ್ನುತ್ತೇವೆ! ನಮ್ಮನ್ನು ದಯವಿಟ್ಟು ಕ್ಷಮಿಸಿ” ಎಂಬ ಬರಹವನ್ನು ಬರೆದ ಸ್ಲೇಟ್ ನೇತು ಹಾಕಿಕೊಂಡು ರಸ್ತೆಯುದ್ದಕ್ಕೂ ತಿರುಗುತ್ತಿದ್ದಾರೆಂದರೆ, ಒಮ್ಮೆ ಯೋಚಿಸಿ!! ಯೋಗಿ ಆದಿತ್ಯನಾಥ್ ರವರದ್ದು ರಾಮ ರಾಜ್ಯದ ಸ್ಥಾಪನೆಯ ಸಂಕಲ್ಪ! ಬದಲಾಗಿ, ರಾವಣ ರಾಜ್ಯದ ಸಂಕಲ್ಪವಲ್ಲ!!

ಆದರೆ, ಉತ್ತರ ಪ್ರದೇಶ ಪೋಲಿಸರು ಮಾತ್ರ ಹೇಳುತ್ತಲೇ ಇದ್ದಾರೆ!! “ಭಾಯಿ! ಪಾರ್ಟಿ ಅಭಿ ಬಾಕಿ ಹೈ! ”

– ಪೃಥು ಅಗ್ನಿಹೋತ್ರಿ

Tags

Related Articles

Close