ಪ್ರಚಲಿತ

ಮುಸ್ಲಿಂ ದೇಶದಲ್ಲಿ ತಲೆ ಎತ್ತಲಿರುವ ಮೊದಲ ದೇವಸ್ಥಾನ!! ಅಡಿಪಾಯ ಹಾಕಿದ ಮೋದಿ!! ಮುಸ್ಲಿಂ ಮೂಲಭೂತವಾದಿಗಳಿಗೆ ಭಾರೀ ಮುಖಭಂಗ!!

ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಯುನೈಟೆಡ್ ಅರಬ್ ಎಮರೈಟ್ಸ್ (ಯುಎಇ) ಜತೆ ಐದು ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರಲ್ಲದೇ ಮುಸ್ಲಿಂ ರಾಷ್ಟ್ರ ಯುಎಇಯಲ್ಲಿ ಮೊದಲ ಹಿಂದೂ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದ್ದಾರೆ.

ಅಬುದಾಬಿ ರಾಜ ಮೊಹಮ್ಮದ್-ಬಿನ್-ಜಾಯೇದ್ ಪ್ರಧಾನಿ ಮೋದಿಗೆ ಇಂದು ಭವ್ಯ ಸ್ವಾಗತ ಕೋರಿದ್ದು, ತದನಂತರ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚೆ ನಡೆಸಲಾಯಿತು. ಇಂಧನ ಶಕ್ತಿ, ರೈಲ್ವೆ, ಮಾನವ ಸಂಪನ್ಮೂಲ ಹಾಗೂ ಹಣಕಾಸು ವಲಯಕ್ಕೆ ಸಂಬಂಧಿಸಿ ಐದು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದರ ಜೊತೆಗೆ ಪಶ್ಚಿಮ ಏಷ್ಯಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಅಬುದಾಬಿಯಲ್ಲಿ ಮೊದಲ ಬಾರಿಗೆ ಹಿಂದೂ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ 2015ರ ನಂತರ ಎರಡನೇ ಬಾರಿಗೆ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ದುಬೈನ ಒಪೇರಾ ಹೌಸ್ ನಲ್ಲಿ ಭಾರತೀಯ ಸಮುದಾಯಗಳೊಂದಿಗೆ ನರೇಂದ್ರಮೋದಿ ಮಾತುಕತೆ ನಡೆಸಿದ್ದು, ವಿವಿಧ ವೃತ್ತಿಪರ ಹಾಗೂ ಸಂಘಟನೆಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರಮೋದಿ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅತೀ ದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕೆ ಇಂದು ಅಡಿಗಲ್ಲು ಹಾಕಿದ ಪ್ರಧಾನಿ ನರೇಂದ್ರ ಮೋದಿ ದುಬೈನ ‘ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾ (ಬಿಎಪಿಎಸ್)’ ದೇವಾಲಯ ನಿರ್ಮಾಣ ಯೋಜನೆಯನ್ನು ಪ್ರಧಾನಿ ಉದ್ಘಾಟನೆ ಮಾಡಿದರು. ನಂತರ ದುಬೈನ ಪ್ರಖ್ಯಾತ ‘ಒಪೆರಾ ಹೌಸ್’ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

ಸುಮಾರು 14 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ದೇವಾಲಯ!!

ಮುಸ್ಲಿಂ ದೇಶದಲ್ಲಿ ತಲೆ ಎತ್ತಲಿರುವ ಮೊದಲ ದೇವಸ್ಥಾನ ಎಂದೆನಿಸಿಕೊಳ್ಳಲಿರುವ ಈ ದೇವಾಲಯವು ಯುಎಇನ ಅತೀ ದೊಡ್ಡ ಹಿಂದೂ ದೇವಾಲಯವಾಗಲಿದೆ!! ಈ ಕುರಿತು ಮಾತಾನಾಡಿದ ಪ್ರಧಾನಿ ಮೋದಿ, “ಸುಮಾರು 30 ಲಕ್ಷ ಭಾರತೀಯರಿಗೆ ಮನೆಯ ವಾತಾವರಣ ನಿರ್ಮಿಸಿಕೊಟ್ಟ ಅರಬ್ ದೇಶಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅದ್ಭುತ ದೇವಸ್ಥಾನ ನಿರ್ಮಾಣ ಮಾಡಲು ಅನುಮತಿ ನೀಡಿದ್ದಕ್ಕೆ ನಾನು 125 ಕೋಟಿ ಭಾರತೀಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, 55 ಸಾವಿರ ಚದರ ಮೀಟರ್ ವಿಸ್ತೀರ್ಣ ಜಾಗದಲ್ಲಿ ಅಬುದಾಬಿಯಲ್ಲಿ ಸ್ವಾಮೀ ನಾರಾಯಣ ದೇವಾಲಯ ನಿರ್ಮಾಣವಾಗಲಿದೆ. ಶಂಕುಸ್ಥಾಪನೆ ಸಮಾರಂಭ ಐತಿಹಾಸಿಕವಾದದ್ದು, ಅದನ್ನು ಪ್ರಧಾನಿ ಮೋದಿ ಅವರು ನೆರವೇರಿಸಿದ್ದಾರೆ ಎಂದು ಯುಎಇನ ಭಾರತೀಯ ರಾಯಬಾರಿ ನವ್ ದೀಪ್ ಸಿಂಗ್ ಸೂರಿ ತಿಳಿಸಿದ್ದಾರೆ.

ಭಾರತೀಯ ಮೂಲದ ಮೂವತ್ತು ಲಕ್ಷ ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ದುಬೈ- ಅಬುದಾಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುವೆ ಸುಮಾರು 14 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ದೇವಾಲಯದ ನಿರ್ಮಾಣ ಕಾರ್ಯ 2020ರ ವೇಳೆಗೆ ಪೂರ್ಣವಾಗಲಿದೆ. ಪ್ರಾರ್ಥನಾ ಮಂದಿರ, ಅಧ್ಯಯನ ಕೊಠಡಿ, ಮಕ್ಕಳಿಗಾಗಿ ಕ್ರೀಡಾಂಗಣ, ಉದ್ಯಾನವನ, ನೀರಿನ ಕಾರಂಜಿ, ಆಹಾರ ಮಳಿಗೆ, ಪುಸ್ತಕ ಮತ್ತು ಉಡುಗೊರೆ ನೀಡಲು ಮಳಿಗೆಗಳು ಈ ದೇವಾಲಯದ ಜಾಗದಲ್ಲಿ ಇರಲಿದೆ.

ಇದೇ ಸಂದರ್ಭದಲ್ಲಿ ವಿಶ್ವಬ್ಯಾಂಕ್ ಸುಲಭ ವ್ಯವಹಾರ ನಡೆಸುವ ದೇಶಗಳ ಪಟ್ಟಿಯಲ್ಲಿ 142ನೇ ಸ್ಥಾನದಿಂದ 100ನೇ ಶ್ರೇಯಾಂಕಕ್ಕೆ ಭಾರತ ಜಿಗಿದಿದೆ. ಆದರೆ ನಾವು ಇಷ್ಟಕ್ಕೆ ತೃಪ್ತರಾಗಿಲ್ಲ. ನಾವು ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಬಯಸಿದ್ದೇವೆ. ಇದನ್ನು ಸಾಧಿಸಲು ಬೇಕಾಗಿದ್ದನ್ನೆಲ್ಲಾ ನಾವು ಮಾಡಲಿದ್ದೇವೆ ಎಂದು ಮೋದಿ ಭರವಸೆ ನೀಡಿದರು.

ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್) ಈ ದೇವಾಲಯದ ಆಡಳಿತವನ್ನು ನೋಡಿಕೊಳ್ಳಲಿದೆ. ಈ ಸಂಸ್ಥೆ ಈಗಾಗಲೇ ಇಂಗ್ಲೆಂಡ್, ಅಮೆರಿಕ, ಆಸ್ಟ್ರೆಲೀಯಾ, ಆಫ್ರಿಕ ಮತ್ತು ಕೆನಡಾ ಸೇರಿದಂತೆ 1200 ದೇವಾಲಯಗಳನ್ನು ನಿರ್ಮಾಣ ಮಾಡಿದೆ. ಗುಜರಾತ್ ರಾಜಧಾನಿಯಾದ ಗಾಂಧಿನಗರದಲ್ಲಿ ಮತ್ತು ದೆಹಲಿಯಲ್ಲಿ ಬಿಎಪಿಎಸ್ ಅಕ್ಷರಾಧಾಮ ದೇವಾಲಯವನ್ನು ನಿರ್ಮಿಸಿದ್ದು, ಅಮೆರಿಕದ ನ್ಯೂಜೆರ್ಸಿಯಲ್ಲೂ ದೇವಾಲಯ ನಿರ್ಮಾಣವಾಗುತ್ತಿದೆ.

ತ್ರಿವರ್ಣ ಬಣ್ಣಕ್ಕೆ ತಿರುಗಿದ ದುಬೈ ಕಟ್ಟಡಗಳು..!!

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯುಎಇಗೆ ಬೇಟಿ ನೀಡುವ ಹಿನ್ನಲೆಯಲ್ಲಿ ಜಗತ್ತಿನ ಅತೀ ಎತ್ತರದ ಕಟ್ಟಡ ದುಬೈನ್ ಬುರ್ಜ್ ಖಲೀಫಾ ತ್ರಿವರ್ಣ ಬಣ್ಣದೊಂದಿಗೆ ಕಂಗೊಳಿಸುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಹಲವು ಐತಿಹಾಸಿಕ, ಪ್ರಸಿದ್ಧ ಕಟ್ಟಡಗಳು ಭಾರತದ ಧ್ವಜದಿಂದ ಕಂಗೊಳಿಸಿದ್ದು, 828 ಮೀಟರ್ ಎತ್ತರದ ಕಟ್ಟಡ ದುಬೈನ ಬುರ್ಜ್ ಕಲಿಫಾ, ದುಬೈ ಫ್ರೇಮ್ ಸೇರಿದಂತೆ ಹಲವು ಐಕಾನಿಕ್ ಕಟ್ಟಡಗಳಲ್ಲಿ ಲೇಸರ್ ಮೂಲಕ ಭಾರತೀಯ ರಾಷ್ಟ್ರ ಧ್ವಜದ ಬಣ್ಣಗಳನ್ನು ಮೂಡಿಸಲಾಗಿತ್ತು!!

ಅಷ್ಟೇ ಅಲ್ಲದೇ, 2017 ರ ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವದಂದೂ ಇದೇ ರೀತಿ ಲೇಸರ್ ಶೋ ಮೂಲಕ ಈ ಗಗನಚುಂಬಿ ಕಟ್ಟಡದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಮೂಡಿಸಲಾಗಿತ್ತು. ಅರಬ್ ದೇಶದಲ್ಲಿರುವ ಲಕ್ಷಾಂತರ ಭಾರತೀಯರಿಗೆ ಈ ದೃಶ್ಯ ಅಮೋಘವೆನ್ನಿಸಿತ್ತು. ದೇಶಭಕ್ತಿಯನ್ನು ಸ್ಫುರಿಸುವ ಈ ದೃಶ್ಯವನ್ನು ಕಣ್ತುಂಬಿಕೊಂಡಷ್ಟೂ ಸಾಲದು ಅನ್ನಿಸಿತು. ಈ ಮನಮೋಹಕ ಚಿತ್ರಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನ ಭಾರತೀಯ ರಾಯಭಾರಿ ನವ್ದೀದ್ ಸುರಿ ಟ್ವಿಟ್ಟರ್ ನಲ್ಲಿ ಪೆÇೀಸ್ಟ್ ಮಾಡಿದ್ದಾರೆ.

ಆದರೆ ಮುಸ್ಲಿಂ ದೇಶದಲ್ಲಿ ತಲೆ ಎತ್ತಲಿರುವ ಮೊದಲ ದೇವಸ್ಥಾನ ಎಂದೆನಿಸಿಕೊಳ್ಳಲಿರುವ ಈ ದೇವಾಲಯವು ಭಾರತದಲ್ಲಿರುವ ಮೂಲಭೂತವಾದಿ ಮುಸ್ಲಿಂಗಳಿಗೆ ಬಾರಿ ಮುಖಭಂಗವಾಗಲಿರುವುದು ಮಾತ್ರ ಖಂಡಿತಾ!! ಯಾಕೆಂದರೆ ಭಾರತದಲ್ಲಿ ಜಾಗಟೆ, ಶಂಖನಾದಗಳು ದೇವಸ್ಥಾನಗಳಲ್ಲಿ ಮೊಳಗಿದರೆ ಉರಿದುಬೀಳುತ್ತಿರುವ ಪಾಕಿಸ್ತಾನಿ ಮನಸ್ಥಿತಿಯ ಭಾರತೀಯ ಮುಸಲ್ಮಾನರು ಇಂದು ಮುಸ್ಲಿಂ ರಾಷ್ಟ್ರವಾದ ಯುಎಇಯಲ್ಲಿ ಅತೀ ದೊಡ್ಡ ಹಿಂದೂ ದೇವಾಲಯವನ್ನು ನಿರ್ಮಿಸಲು ಹೊರಟಿದ್ದಾರೆ ಎಂದರೆ ನಿಜಕ್ಕೂ ಗ್ರೇಟ್!!

– ಅಲೋಖಾ

Tags

Related Articles

Close