ಪ್ರಚಲಿತ

ಕಾಶ್ಮೀರದಿಂದ-ತಮಿಳುನಾಡಿನವರೆಗೆ ಬಿ.ಜೆ.ಪಿ ವಿರುದ್ದ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸಿ 2019 ರಲ್ಲಿ ಮೋದಿಯನ್ನು ಸೋಲಿಸಲು ಚಕ್ರವ್ಯೂಹ ರಚಿಸಿದೆ ತೃತೀಯ ರಂಗ!! ವ್ಯೂಹ ಭೇಧಿಸಿ ಭಗವಾ ಹಾರಿಸುವರೆ ಚಾಣಕ್ಯ?

ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಿಯೇ ತೀರುತ್ತೇವೆ ಎಂದು ಪಣ ತೊಟ್ಟಿರುವ ತೃತೀಯ ರಂಗ ತನ್ನ ಚುನಾವಣಾ ರಣತಂತ್ರದ ಭಾಗವಾಗಿ ಬಿ.ಜೆ.ಪಿಯ ವಿರುದ್ದ ಚಕ್ರವ್ಯೂಹ ರಚಿಸುತ್ತಿದೆ. ಇದರ ಪ್ರಕಾರ ಕಾಶ್ಮೀರದಿಂದ-ತಮಿಳುನಾಡಿನವರೆಗೆ ಬಿ.ಜೆ.ಪಿಯ ಪ್ರತಿಯೊಂದು ಅಭ್ಯರ್ಥಿಯ ವಿರುದ್ದ ತನ್ನ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ತೃತೀಯ ರಂಗ! ಒಬ್ಬನಿಗೆ-ಒಬ್ಬ ಎನ್ನುವ ಈ ರಣತಂತ್ರದ ಭಾಗವಾಗಿ ತಮ್ಮ ತಮ್ಮೊಳಗಿನ ಎಲ್ಲಾ ಬೇಧಗಳನ್ನು ಬದಿಗಿರಿಸಿ ಕೇವಲ ಮೋದಿಯನ್ನು ಸೋಲಿಸುವುದೇ ಮಹಾ ಗಠ್ ಬಂಧನ್ ನ ಏಕೈಕ ಧ್ಯೇಯೋದ್ದೇಶ ಆಗಲಿದೆ ಎನ್ನಲಾಗಿದೆ.

543 ಲೋಕಸಭಾ ಕ್ಷೇತ್ರಗಳಲ್ಲಿ, ಕನಿಷ್ಠ 400 ಕ್ಷೇತ್ರಗಳಲ್ಲಿ ಬಿ.ಜೆ.ಪಿಯ ಎದುರು ತೃತೀಯ ರಂಗದ ಯಾವುದೆ ಒಂದು ಪಕ್ಷದ ಒಬ್ಬ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ರಂಗದ ಸದಸ್ಯ ಪಕ್ಷದವಾದ NCP ಹೇಳಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯೊಂದಿಗೆ “ತಮ್ಮ ಆಂತರಿಕ ವ್ಯತ್ಯಾಸಗಳನ್ನು ಹೂತುಹಾಕಲು” ವಿರೋಧ ಪಕ್ಷಗಳು ನಿರ್ಧರಿಸಿದ್ದೇವೆ ಎಂದು ಮಜೀದ್ ಮೆಮನ್ ಹೇಳಿದ್ದಾರೆ. ಸೀಟು ಹಂಚಿಕೆ ವಿಷಯದಲ್ಲಿ ತೃತೀಯ ರಂಗ ತಮ್ಮಲ್ಲೇ ಜಗಳಾಡಿಕೊಂಡು ಒಬ್ಬರಿನ್ನೊಬ್ಬರ ಕಾಲೆಳೆಯಲಿವೆ ಎಂದು ಇದುವರೆಗೂ ಭಾವಿಸಲಾಗಿತ್ತು. ಆದರೆ ಈಗ ಕಥೆ ಬೇರೆಯೆ ತಿರುವು ಪಡೆದು ಕೊಂಡಿದೆ.

ಕಾಶ್ಮೀರದ ಅಬ್ದುಲ್ಲಾನಿಂದ ಹಿಡಿದು, ತಮಿಳುನಾಡಿನ ಸ್ಟಾಲಿನ್ ವರೆಗೆ ಎಲ್ಲರೂ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಸ್ವಯಂ ಪ್ರೇರಿತರಾಗಿ ಒಟ್ಟುಗೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೇಲುನೋಟಕ್ಕೆ ಹೀಗೆ ಕಂಡರೂ ಅದು ಸುಲಭದ ವಿಷಯವಲ್ಲ ಎನ್ನುವುದು ತೃತೀಯ ರಂಗಕ್ಕೂ ಗೊತ್ತು. ಆದರೆ ಎಲ್ಲರ “ಗುರಿಯೂ ಒಂದೇ” ಆಗಿರುವಾಗ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು, ಮೋದಿಯನ್ನು ಸೋಲಿಸಲು ಒಗ್ಗಟ್ಟು ಸಾಧಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ. ಮೋದಿ ಅವರನ್ನು ಸೋಲಿಸಲು ಎಲ್ಲಾ ಪಕ್ಷಗಳು ‘ಒಗ್ಗಟ್ಟು ಮಂತ್ರ’ ಜಪಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಎಸ್.ಪಿ ಮತ್ತು ಬಿ.ಎಸ್.ಪಿ ಗಳು ಇದೆ ಸೂತ್ರ ಉಪಯೋಗಿಸಿ ಬಿ.ಜೆ.ಪಿ ವಿರುದ್ದ ಯಶಸ್ಸು ಕಂಡಿವೆ. ಇದೆ ಸೂತ್ರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಅಳವಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಅಭ್ಯರ್ಥಿಯ ಆಯ್ಕೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿದೆ ಹಾಗೂ ಯಾವ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಹೆಚ್ಚು ಬಲಶಾಲಿಯಾಗಿದ್ದಾರೋ ಅಲ್ಲಿ ಕಾಂಗ್ರೆಸ್ ಹಿಂದಿನ ಸೀಟಿನಲ್ಲಿ ಕೂರಲಿದೆ ಎನ್ನಲಾಗಿದೆ. ಹೀಗಾದಲ್ಲಿ ನಿಶ್ಚಿತವಾಗಿಯೂ ಇದು ಬಿ.ಜೆ.ಪಿಗೆ ತಲೆ ನೋವಿನ ವಿಚಾರವಾಗಲಿದೆ. ತೃತೀಯ ರಂಗದಲ್ಲಿ ಏಕಮತ ಹೆಚ್ಚುತ್ತಾ ಹೋದಂತೆ ಮೋದಿ ವಿರೋಧಿ ಮತಗಳೂ ಹೆಚ್ಚುತ್ತಾ ಹೋಗುತ್ತವೆ ಎಂದೆ ಲೆಕ್ಕ.

ಅದಾಗ್ಯೂ ಟಿಕೆಟ್ ಹಂಚಿಕೆ ವಿಷಯದಲ್ಲಿ ಈ ಎಲ್ಲಾ ಪಕ್ಷಗಳು ತಮ್ಮ ಸ್ವಾರ್ಥ ಮತ್ತು ಸ್ವಾಭಿಮಾನ ಬಿಟ್ಟು ಪಾರದರ್ಶಕತೆಯನ್ನು ಉಳಿಸಿಕೊಳ್ಳುತ್ತವೆಯೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಬರುವ ಡಿಸೆಂಬರ್ ಒಳಗೆ ಎಲ್ಲಾ ಊಹಾಪೋಹಗಳಿಗೂ ತೆರೆಬೀಳಲಿದೆ. ತೃತೀಯ ರಂಗ ಹೆಣೆಯುತ್ತಿರುವ ಚಕ್ರವ್ಯೂಹವನ್ನು ಭೇಧಿಸಿ ಭಾರತದಾದ್ಯಂತ ಭಗವಾ ಧ್ವಜ ಹಾರಿಸುವಲ್ಲಿ ಭಾಜಪ ಚಾಣಕ್ಯ ಸಫಲರಾಗುವರೆ ಎನ್ನುವುದನ್ನೂ ಕಾಲವೆ ಹೇಳಲಿದೆ. ಮೋದಿಗಿಂತಲೂ ಹೆಚ್ಚಾಗಿ ಇದು ದೇಶಭಕ್ತರಿಗೆ ಅಗ್ನಿಪರೀಕ್ಷೆಯ ಕಾಲ. ಮೋದಿ ಸೋತರೆ ದೇಶ ಸೋತಂತೆಯೆ. ಅಪ್ಪಿ ತಪ್ಪಿ ಯೂಪಿಎ-3 ಆಡಳಿತದ ಚುಕ್ಕಾಣಿ ಹಿಡಿದರೆ, ಭಾರತ ನಿರ್ನಾಮವಾಗುವುದಂತು ನಿಶ್ಚಿತ.

ಈಗ ಬಾಲ್ ಮತದಾರನ ಅಂಗಳದಲ್ಲಿದೆ. ಮೋದಿಯನ್ನು ಸೋಲಿಸಿ ದೇಶವನ್ನು ಛಿದ್ರ ಮಾಡುವವರ ಕೈಗೆ ಅಧಿಕಾರ ಕೊಟ್ಟು ನಮ್ಮ ಸರ್ವನಾಶಕ್ಕೆ ನಾವೆ ಮುನ್ನುಡಿ ಬರೆಯುವುದು ಬೇಡ. 2019 ರಲ್ಲಿ ತೃತೀಯ ರಂಗವನ್ನು ಸೋಲಿಸಿ ಭಾರಿ ಬಹುಮತದಿಂದ ಮೋದಿ ಗೆಲ್ಲಿಸೋಣ.

-ಶಾರ್ವರಿ

Tags

Related Articles

Close