ಪ್ರಚಲಿತ

೨೦೧೯ರ ಲೋಕಸಭಾ ಚುನಾವಣೆಗೆ ಬಿಜೆಪಿ ಚಾಣಾಕ್ಯನ ಭರ್ಜರಿ ಟಿಪ್ಸ್.! ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ..!

೨೦೧೪ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸಿ, ಯಾರೂ ಊಹಿಸದ ರೀತಿಯಲ್ಲಿ ವಿಜಯ ಪತಾಕೆ ಹಾರಿಸಿ, ಇಡೀ ದೇಶವೇ ನಿಬ್ಬೆರಗಾಗುವಂತೆ ಮಾಡಿತ್ತು‌. ಇದೀಗ ಮುಂದಿನ ವರ್ಷ ಮತ್ತೊಮ್ಮೆ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಎಲ್ಲಾ ಪಕ್ಷಗಳು ಭಾರೀ ತಯಾರಿ ನಡೆಸಲು ಆರಂಭಿಸಿವೆ. ಪ್ರಧಾನಿ ಮೋದಿಯವರ ಗೆಲುವಿಗಾಗಿ ಬಿಜೆಪಿ ಸಕಲ ಸಿದ್ಧತೆಯನ್ನು ನಡೆಸುತ್ತಿದ್ದರೆ, ಇತ್ತ ಮೋದಿ ವಿರೋಧಿಗಳು ಒಟ್ಟಾಗಿ ಬಿಜೆಪಿಯನ್ನು ಸೋಲಿಸಲು ಸಜ್ಜಾಗಿವೆ. ಇದನ್ನೆಲ್ಲಾ ಅರಿತ ಭಾರತೀಯ ಜನತಾ ಪಕ್ಷದ ಹೈಕಮಾಂಡ್, ಪ್ರತೀ ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಬಿಜೆಪಿ ಚಾಣಕ್ಯ ಅಮಿತ್ ಷಾ , ಈಗಾಗಲೇ ಭಾರೀ ತಂತ್ರ ರೂಪಿಸಿದ್ದು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಸಿದ್ದಾರೆ. ಇದರಿಂದಾಗಿ ಬಿಜೆಪಿ ನಾಯಕರಿಗೂ ಇದೀಗ ಜವಾಬ್ದಾರಿ ಹೆಚ್ಚಿದ್ದು, ಈಗಿಂದಲೇ ಪಕ್ಷ ಬಲವರ್ಧನೆ ಮಾಡಲು ಶುರು ಮಾಡಿದ್ದಾರೆ. ಕೇಂದ್ರದ ಪ್ರತಿಯೊಂದು ಯೋಜನೆಗಳು ದೇಶದ ಮೂಲೆ ಮೂಲೆಗೂ ಜನರ ಬಳಿ ತಲುಪುವಂತೆ ಮಾಡಲು ಅಮಿತ್ ಷಾ ಸೂಚಿಸಿದ್ದು, ರಾಜ್ಯ ನಾಯಕರೂ ಕೂಡ ಭಾರೀ ಉತ್ಸಾಹದಿಂದ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಈಗಿಂದಲೇ ರಣಕಹಳೆ ಮೊಳಗಿಸಿದ ಬಿಜೆಪಿ ಚಾಣಕ್ಯ, ಗೆಲುವಿಗೆ ಬೇಕಾದ ತಂತ್ರ ರೂಪಿಸಿಕೊಂಡಿದ್ದಾರೆ.!

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಲು ಷಾ ಸೂಚನೆ..!

ಸದ್ಯ ಪ್ರತಿಯೊಂದು ವಿಚಾರಗಳು ಸಾಮಾಜಿಕ ಜಾಲತಾಣಗಳ ಮುಖಾಂತರವೇ ನಡೆಯುತ್ತದೆ. ಈ ಫೇಸ್‌ಬುಕ್‌, ವಾಟ್ಸಾಪ್, ಟ್ವಿಟ್ಟರ್ ನಂತಹ ಜಾಲತಾಣಗಳಲ್ಲಿ ಅತೀ ಹೆಚ್ಚು ವಿಚಾರಗಳು ವಿನಮಯವಾಗುವುದರಿಂದ ಅತೀ ಹೆಚ್ಚು ಜನರನ್ನು ತಲುಪಬಹುದು. ಆದ್ದರಿಂದಲೇ ಬಿಜೆಪಿಯ ಪ್ರತೀ ಶಾಸಕರು ಮತ್ತು ಸಂಸದರು ತಮ್ಮ ಸಾಮಾಜಿಕ ಜಾಲತಾಣಗಳನ್ನು ಬಲಗೊಳಿಸಬೇಕೆಂದು ಅಮಿತ್ ಷಾ ಸೂಚನೆ ನೀಡಿದ್ದಾರೆ.‌ ಬಿಜೆಪಿ ಶಾಸಕರು ಮತ್ತು ಸಂಸದರು ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಕೂಡ ಅದನ್ನು ಫೇಸ್‌ಬುಕ್‌ ವಾಟ್ಸಾಪ್ ಗಳಲ್ಲಿ ಹಾಕಿ, ಕ್ಷೇತ್ರದ ಜನರಿಗೆ ತಲುಪುವಂತೆ ಮಾಡಬೇಕು, ಇದರಿಂದಾಗಿ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯ ಯೋಜನೆಗಳು ಜನರಿಗೆ ಮುಟ್ಟುತ್ತದೆ ಮತ್ತು ಕೇಂದ್ರ ಸರಕಾರದ ಪ್ರತಿಯೊಂದು ಜನಪರ ಯೋಜನೆಗಳನ್ನು ಜನರು ಬಳಸುವಂತಾಗಬೇಕು ಎಂದು ಹೇಳಿಕೊಂಡಿದ್ದಾರೆ.!

ಮೂರು ಹಂತಗಳಲ್ಲಿ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಆಗಬೇಕಿದೆ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಇನ್ನು ಕೆಲವೇ ಕೆಲವು ತಿಂಗಳುಗಳು ಬಾಕಿ ಇರುವುದರಿಂದ ಮೋದಿ ಸರಕಾರದ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಜನರಿಗೆ ಮುಟ್ಟುವಂತೆ ಮಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ.!

ಬಿಜೆಪಿ ಐಟಿ ಸೆಲ್‌ಗಳು ಸೂತ್ರದ ಆಧಾರದಲ್ಲಿ ಕೆಲಸ ಮಾಡಲು ಆದೇಶ..!

ಭಾರತೀಯ ಜನತಾ ಪಕ್ಷದ ಐಟಿ ಸೆಲ್‌ಗಳು ಈಗಾಗಲೇ ಬಹಳ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನೇ ಇನ್ನೂ ಉತ್ತಮ ರೀತಿಯಲ್ಲಿ ಮುಂದುವರಿಸಲು ಷಾ ಸೂಚನೆ ನೀಡಿದ್ದಾರೆ. ಐಟಿ ಸೆಲ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಶೇರ್ ಮಾಡಬಹುದು ಮತ್ತು ಪ್ರತೀ ರಾಜ್ಯಗಳಲ್ಲೂ ಅತೀ ಹೆಚ್ಚಿನ ಜನರನ್ನು ತಲುಪಬಹುದು ಎಂಬ ಲೆಕ್ಕಾಚಾರದ ಪ್ರಕಾರ ಷಾ ಉಪಾಯ ಹೂಡಿದ್ದು, ಒಂದೊಂದೇ ಸೂತ್ರದ ಆಧಾರದಲ್ಲಿ ಕಾರ್ಯನಿರ್ವಹಿಸುವಂತೆ ಹೇಳಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ೨೬ ಸಾವಿರ ವಾಟ್ಸಾಪ್ ಗ್ರೂಪ್‌ಗಳ ರಚನೆಯಾಗಿತ್ತು. ಪ್ರತೀ ಬೂತ್ ಮಟ್ಟದಲ್ಲೇ ಪಕ್ಷವನ್ನು ಸಂಘಟಿಸುವ ಸಲುವಾಗಿ ವಾಟ್ಸಾಪ್ ಗಳಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮತ್ತು ಯೋಜನೆಗಳನ್ನು ಹಂಚಲಾಗುತ್ತಿದೆ. ಇದೀಗ ಮುಂದಿನ ಲೋಕಸಭಾ ಚುನಾವಣೆಗಿಂತ ಮೊದಲು ಈ ೨೬ ಸಾವಿರ ವಾಟ್ಸಾಪ್ ಗ್ರೂಪ್‌ಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಚನೆಯಾಗಬೇಕು ಎಂದು ಸೂಚಿಸಿದ್ದಾರೆ. ಆದ್ದರಿಂದ ಲೋಕಸಭಾ ಚುನಾವಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ಟ್ರೆಂಡ್ ಮಾಡಲು ಷ ಈಗಿಂದಲೇ ತಯಾರಿ ನಡೆಸಿದ್ದು, ಕಾರ್ಯಕರ್ತರ ಸಂಖ್ಯೆ ಇನ್ನೂ ಹೆಚ್ಚಾಗಬೇಕೆಂದು ಷಾ ಹೇಳಿದ್ದಾರೆ.!

ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಅಡೆತಡೆಗಳು ಪಕ್ಷಕ್ಕೆ ಉಂಟಾಗದಂತೆ ಈಗಿಂದಲೇ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್, ಪ್ರತೀ ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ , ಅದಕ್ಕೆ ಬೇಕಾದ ಸೂಚನೆಯನ್ನು ನೀಡುತ್ತಿದ್ದಾರೆ..!

–ಅರ್ಜುನ್

Tags

Related Articles

Close