ಪ್ರಚಲಿತ

ಹೆಗ್ಡೆ ಘರ್ಜನೆಗೆ ತತ್ತರಿಸಿದ ರಾಜ್ಯ ಸರಕಾರ..! ಸಿದ್ದರಾಮಯ್ಯ ವಿರುದ್ಧ ಆರ್ಭಟಿಸಿದ ಹಿಂದೂ ಫೈರ್ ಬ್ರಾಂಡ್..!

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಪಕ್ಷಗಳ ನಾಯಕರ ಪರಸ್ಪರ ಮಾತಿನ ಚಕಮಕಿಯೂ ಹೆಚ್ಚಾಗುತ್ತಿದೆ. ಎಲ್ಕಾ ರೀತಿಯಲ್ಲೂ ಈ ಬಾರಿಯ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ವಾಕ್ಸಮರವೂ ಜೋರಾಗುತ್ತಿದೆ. ಈ ಹಿಂದಿನಿಂದಲೂ ಕಾಂಗ್ರೆಸ್ ವಿರುದ್ಧ ಖಡಕ್ಕಾಗಿ ಮಾತನಾಡುತ್ತಲೇ ಬಂದಿರುವ ಕೇಂದ್ರ ಸಚಿವ, ಕರ್ನಾಟಕ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗ್ಡೆ ಇದೀಗ ಮತ್ತೆ ಸಿದ್ದರಾಮಯ್ಯನವರ ಮತ್ತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ತನ್ನ ಮಾತಿನ ಛಾಟಿಯಿಂದಲೇ ಕಾಂಗ್ರೆಸ್ ನ ಛಳಿ ಬಿಡಿಸುವ ಅನಂತ್ ಕುಮಾರ್ ಹೆಗ್ಡೆ ಇದೀಗ ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳು ಅಮಿತ್ ಷಾ ಬಳಿ ಕ್ಷಮೆ ಕೇಳಲೇಬೇಕು..!

ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಗ್ಗೆ ಕೀಳಾಗಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೆಂಡಾಮಂಡಲವಾದ ಅನಂತ್ ಕುಮಾರ್ ಹೆಗ್ಡೆ , ಸಿದ್ದರಾಮಯ್ಯನವರು ಅಮಿತ್ ಷಾ ಮತ್ತು ರಾಜ್ಯದ ಜನತೆಯ ಬಳಿ ಕ್ಷಮೆ ಕೇಳಲೇಬೇಕು. ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಒಬ್ಬರ ಬಗ್ಗೆ ಮಾತನಾಡುವುದು ಶೋಭೆ ತರುವಂತದ್ದಲ್ಲ. ಸಿದ್ದರಾಮಯ್ಯನವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು, ಆದ್ದರಿಂದ ರಾಜ್ಯದ ಜನತೆಯ ಮಯಂದೆ ಸುಳ್ಳು ಒಪ್ಪಿಕೊಳ್ಳಬೇಕು ಎಂದು ಖಾರವಾಗಿ ನುಡಿದ ಹೆಗ್ಡೆ ಬಾಗಲಕೋಟೆಯಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಗುಡುಗಿದರು..!

ಅಭಿವೃದ್ಧಿಯ ಆಧಾರದಲ್ಲಿ ವೋಟ್ ಕೇಳುತ್ತೆವೆ..!

ಬಾಗಲಕೋಟೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶಭರಿತ ಮಾತನಾಡಿದ ಹೆಗ್ಡೆ , ಭಟ್ಕಳದಲ್ಲೂ ಇದೇ ರೀತಿ ಮಾತನಾಡಿದರು. ಕಾಂಗ್ರೆಸ್ ಇತ್ತೀಚೆಗೆ ಬಿಜೆಪಿಯನ್ನು ಹಿಂದುತ್ವದ ಆಧಾರದಲ್ಲಿ ವೋಟ್ ಕೇಳುವ ಪಕ್ಷ ಎಂದು ಟೀಕಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅನಂತ್ ಕುಮಾರ್ ಹೆಗ್ಡೆ , ‘ ನಾವು ಅಭ್ಯರ್ಥಿಯ ಆಧಾರದ ಮೇಲೆ ವೋಟ್ ಕೇಳುತ್ತೇವೆ. ಹಿಂದುತ್ವವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವಷ್ಟು ಕೀಳು ಮಟ್ಟಕ್ಕೆ ನಾವಿನ್ನೂ ಇಳಿದಿಲ್ಲ. ಕೇಂದ್ರದ ಮೋದಿ ಸರಕಾರದ ಅಭಿವೃದ್ಧಿಯ ಕಾರ್ಯಗಳನ್ನೇ ಹಿಡಿದು , ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಜನರಿಗೆ ತಿಳಿಸಿ ನಾವು ವೋಟ್ ಕೇಳುತ್ತೇವೆ” ಎಂದು ಕಾಂಗ್ರೆಸ್ ಗೆ ತನ್ನ ತೀಕ್ಷ್ಣವಾದ ಮಾತುಗಳಿಂದಲೇ ಪ್ರತಿಕ್ರಿಯಿಸಿದರು.!

ವಾಚ್ ವಿಚಾರ ಇನ್ನೂ ನಿಗೂಢ..!

ತಾನೊಬ್ಬ ಬಡವರ ಪರ ಇರುವ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯನವರು ಕೈಗೆ ೬೦ ಲಕ್ಷ ಬೆಲೆಬಾಳುವ ವಾಚ್ ಧರಿಸಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಇನ್ನೂ ಸ್ಪಷ್ಟನೆ ನೀಡದ ಸಿದ್ದರಾಮಯ್ಯನವರು ಚುನಾವಣೆಯ ನಾಮಪತ್ರದಲ್ಲೂ ವಾಚ್ ಬಗ್ಗೆ ಉಲ್ಲೇಖಿಸಿಲ್ಲ. ಹಾಗಿದ್ದರೆ ಸಿಎಂ ಸಲ್ಲಿಸಿರುವ ನಾಮಪತ್ರ ಪ್ರಶ್ನಾರ್ಥಕವಾಗಿಯೆ ಉಳಿಯುತ್ತದೆ.! ಎಂದು ಹೇಳಿದ ಹೆಗ್ಡೆ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು.!

ಈ ಹಿಂದಿನಿಂದಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ ಅನಂತ್ ಕುಮಾರ್ ಹೆಗ್ಡೆ ಇದೀಗ ಮತ್ತೆ ರಾಜ್ಯ ಸರ್ಕಾರದ ಮತ್ತು ಸಿದ್ದರಾಮಯ್ಯ ವಿರುದ್ಧ ಆಕ್ರೋಶಗೊಂಡಿದ್ದು, ಬಿಜೆಪಿ ನಾಯಕರ ಬಗ್ಗೆ ಮಾತನಾಡುವಾಗ ಸ್ವಲ್ಪ ನೋಡಿಕೊಂಡು ಮಾತನಾಡುವಂತೆ ಎಚ್ಚರಿಕೆ ನೀಡಿದರು..!

–ಅರ್ಜುನ್

Tags

Related Articles

Close