ಪ್ರಚಲಿತ

ಹಿಂದಿ ಭಾಷೆಯ ಮೇಲೆ ಸಿದ್ದು ಕೆಂಗಣ್ಣು ಬೀರಿದ್ದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಸಿಎಂರ ಹಿಂದಿ ಸ್ಟೋರಿ!

ಮುಖ್ಯಮಂತ್ರಿ ಸಿದ್ದರಾಮಯ್ಯ. ಕರ್ನಾಟಕದ ಮುಖ್ಯಮಂತ್ರಿ. ಕಳೆದ 5 ವರ್ಷಗಳ ಹಿಂದೆ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ, ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರವನ್ನು ಹಿಡಿದವರು. ಆದರೆ ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ ಅದೇನೇನು ಕಾಣಬಾರದೋ ಅದನ್ನೆಲ್ಲಾ ಕಂಡಾಗಿತ್ತು. ರಾಮರಾಜ್ಯ ಮಾಡುತ್ತೇನೆ ಎಂದು ಅಧಿಕಾರ ಹಿಡಿದವರು ರಾವಣ ರಾಜ್ಯ ಮಾಡಿದ್ದು ಮಾತ್ರ ವಿಪರ್ಯಾಸ.

ಧರ್ಮ ವಿಭಜನೆ, ಭಾಷೆ ವಿಭಜನೆ, ಜಾತಿ ವಿಭಜನೆ, ಧ್ವಜ ವಿಭಜನೆ, ಕಾನೂನು ವಿಭಜನೆ, ಹೀಗೆ ತನ್ನ ಪಕ್ಷಕ್ಕಾಗಿ ಅದೇನೇನು ವಿಭಜನೆ ಮಡಬೇಕೋ ಅದನ್ನೆಲ್ಲಾ ಮಾಡಿಯಾಗಿತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ. ಈಗ ಸರ್ಕಾರ 5 ವರ್ಷಗನ್ನು ಅದೇಗೋ ಪೂರೈಸಿ ಮತ್ತೆ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ. ಹೇಗದರೂ ಮಾಡಿ 5 ವರ್ಷ ಪೂರೈಸಿ ಬಿಟ್ಟರು. ಆದರೆ ಈ 5 ವರ್ಷಗಳು ಮುಖ್ಯಮಂತ್ರಿಗಳು ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ. ಒಂದು ಕಡೆ
ಭ್ರಷ್ಟಾಚಾರದ ಪ್ರಕರಣಗಳು ಮತ್ತೊಂದೆಡೆ ಸ್ವಪಕ್ಷೀಯರ ದಾಳಿ. ಹೀಗೆ ಅದೇಗೋ 5 ವರ್ಷಗಳನ್ನೂ ಪೂರೈಸಿ ಮುಂದಿನ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ.

ಹಿಂದಿ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ..!

ಅದ್ಯಾಕೋ ಗೊತ್ತಿಲ್ಲ. ನಮ್ಮ ಮುಖ್ಯಮಂತ್ರಿಗಳಿಗೆ ಹಿಂದಿ ಭಾಷೆ ಅಂದರೆ ಕೆಟ್ಟ ಕೋಪ. ಕೇಂದ್ರಸರ್ಕಾರ ರಾಜ್ಯದ ಯಾವುದೇ ಮೂಲದಲ್ಲಿಯೂ ಹಿಂದಿ ಭಾಷೆಯನ್ನು ಅಳವಡಿಸಿದರೆ ಅದರ ಬಗ್ಗೆ ಟೀಕೆ ಮಾಡಿ, ಪ್ರತಿಭಟನೆ ಮಾಡಿ ಖಂಡಿಸುವಲ್ಲಿ ಮೊದಲಿಗರಾಗಿ ನಿಂತು ಬಿಡುತ್ತಾರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಈ ಹಿಂದೆ ಮೆಟ್ರೋ ರೈಲು, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ಸಹಿತ ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ
ಸಂಸ್ಥೆಗಳಲ್ಲಿ ಹಿಂದಿ ಭಾಷೆಯಲ್ಲಿ ಪದಗಳನ್ನು ಬರೆದರೆ ಸಿದ್ದರಾಮಯ್ಯನವರಿಗೆ ಕೆಟ್ಟಕೋಪ ಬರುತ್ತೆ. ಆದರೆ ಮುಖ್ಯಮಂತ್ರಿಗಳಿಗೆ ಹಿಂದಿಯನ್ನು ಕಂಡರೆ ಯಾಕೆ ಅಷ್ಟು ಕೆಟ್ಟಕೋಪ ಬರುತ್ತೆ ಅನ್ನುವ ಸತ್ಯವನ್ನು ನಾವು ಬಹಿರಂಗ ಪಡಿಸುತ್ತೇವೆ ನೋಡಿ.

ಮುಖ್ಯಮಂತ್ರಿಗಳಿಗೆ ಹಿಂದಿಯೇ ಬರಲ್ವಂತೆ..!

ಮುಖ್ಯಮಂತ್ರಿಗಳು ಹಿಂದಿಯನ್ನು ಅಷ್ಟೊಂದು ವಿರೋಧಿಸಲೂ ಕಾರಣವಿದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿಂದಿನೇ ಬರಲ್ವಂತೆ. ಹೌದು ಆಶ್ಚರ್ಯವಾದರೂ ಸತ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿಂದೆ ಭಾಷೆ ಬಹಳನೇ ಕಗ್ಗಂಟು. ಕಾಂಗ್ರೆಸ್ ಸಹಿತ ರಾಷ್ಟ್ರೀಯ ನಾಯಕರೆಲ್ಲರೂ ಹೆಚ್ಚಾಗಿ ಹಿಂದಿಯಲ್ಲೇ ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿಗಳು ಮಾತ್ರ ಇಂಗ್ಲಿಷ್‍ನಲ್ಲಿ ಮತನಾಡುತ್ತಾರಂತೆ. ಪ್ರಧಾನಿ ನರೇಂದ್ರಮೋದಿಯವರು ಹೆಚ್ಚಾಗಿ ಹಿಂದಿಯನ್ನೇ ನೆಚ್ಚಿಕೊಂಡಿರುತ್ತಾರೆ. ಆದರೆ ಅವರ ಭೇಟಿ ವೇಳೆಯೂ ಸಿದ್ದರಾಮಯ್ಯನವರು ಇಂಗ್ಲಿಷ್‍ನಲ್ಲಿಯೇ ಮಾತನಾಡುತ್ತಾರಂತೆ. ಸಿದ್ದರಾಮಯ್ಯನವರಿಗೆ ಹಿಂದಿ ಸರಿಯಾಗಿ ಬರೋದಿಲ್ಲ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಬಿಡಿ.

ಎಐಸಿಸಿ ಅಧಿವೇಶನದಲ್ಲೂ ಇಂಗ್ಲಿಷ್ ಮಾತು…

ಎಸ್. ಮಾರ್ಚ್ 17ರಂದು ದೆಹಲಿಯಲ್ಲಿ ನಡೆದಿದ್ದ ಕಾಂಗ್ರೆಸ್‍ನ ರಾಷ್ಟ್ರೀಯ ಅಧಿವೇಶನದಲ್ಲಿಯೂ ಮುಖ್ಯಮಂತ್ರಿಗಳು ಹಿಂದಿಯನ್ನು ಬಿಟ್ಟು ಇಂಗ್ಲಿಷ್‍ಗೆ ಮೊರೆ ಹೋಗಿದ್ದರು. ಎಐಸಿಸಿ ರಾಷ್ಟ್ರೀಯ ಅಧಿವೇಶನದಲ್ಲಿ ಕಾಂಗ್ರೆಸ್‍ನ ಅಗ್ರಗಣ್ಯ ನಾಯಕರೆಲ್ಲಾ ಹಿಂದಿಯಲ್ಲೇ ಭಾಷಣ ಮಾಡಿದ್ದರು. ಆರಂಭಿಕ ಭಾಷಣ ಮಾಡಿದ್ದ ಕನ್ನಡಿಗರೇ ಆಗಿರುವ ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಿಂದಿಯಲ್ಲೇ ಭಾಷಣ ಮಾಡಿದ್ದರು. ಹೀಗೆ ಯಾರೆಲ್ಲಾ ಭಾಷಣ ಮಾಡಿದರೋ ಅವರೆಲ್ಲಾ ಹಿಂದಿಯಲ್ಲೇ ಭಾಷಣಮಾಡಿದ್ದರು. ಆದರೆ ನಂತರ ಭಾಷಣ ಮಾಡಿದ್ದ ಮುಖ್ಯ6ಮಂತ್ರಿ ಸಿದ್ದರಾಮಯ್ಯನವರು ಇಂಗ್ಲಿಷ್ ಭಾಷೆಯ ಮೊರೆ ಹೋಗಿದ್ದರು. ಈ ವೇಳೆ ತನ್ನ ಭಾಷೆಯನ್ನು ಅವರು ಸಮರ್ಥಿಸಿಕೊಂಡ ಘಟನೆಯೂ ನಡೆಯಿತು. ತನ್ನ ಭಾಷಣದ ಮಧ್ಯೆ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಮಯ್ಯ “ಭಾರತ ಒಂದು ಭಾಷೆಯಿಂದ ಕೂಡಿಲ್ಲ. ಇಲ್ಲಿ ಎಲ್ಲಾ ಭಾಷೆಯೂ ಒಂದೇ. ನಾವು ಎಲ್ಲಾ ಭಾಷೆಯನ್ನೂ ಗೌರವಿಸುತ್ತೇವೆ. ದೇಶದಲ್ಲಿ ಒಂದು ಭಾಷೆ ಅಥವಾ ಒಂದು ಧರ್ಮ ಅಂತ ಇರಬಾರದು. ಹಿಂದೂ ಧರ್ಮ ಇಂದು ಪ್ಯಾಸಿಸ್ಟ್ ಸಂಸ್ಕøತಿಯನ್ನು ಅನುಸರಿಸುತ್ತಿದೆ. ಇಟಲಿ
ಹಾಗೂ ಜರ್ಮನ್ ಮೂಲದ ಸಂಸ್ಲøತಿಯನ್ನು ಅನಸರಿಸುತ್ತಿದೆ” ಎಂದು ಹೇಳಿಕೆ ನೀಡಿದ್ದರು.

ಇದು ಕೇವಲ ಹಿಂದಿಯೇ ಮುಖ್ಯವಲ್ಲ. ಇತರೆ ಭಾಷೆಗಳೂ ಅಂದರೆ ಕನ್ನಡ ಹೊರತಾಗಿ ಇಂಗ್ಲಿಷ್ ಕೂಡಾ ಪ್ರಮುಖ ಭಾಷೆಯನ್ನೂ ಮಾತನಾಡಬಹುದು ಎಂಬುವುದನ್ನು ಪರೋಕ್ಷವಾಗಿ ಹೇಳಲು ಯತ್ನಿಸಿದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳ ಭಾಷಣವನ್ನು ಟ್ರೋಲ್ ಮಾಡಿದ್ದು ಮುಖ್ಯಮಂತ್ರಿಗಳಿಗೆ ಹಿಂದಿ ಬರೋದಿಲ್ಲೆಂದು ವ್ಯಂಗ್ಯವಾಡಿದ್ದಾರೆ. ಕನ್ನಡ ಭಾಷೆ ಎಂದು ಬೊಬ್ಬಿರಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿದ್ದು ಮಾತ್ರ ಇಂಗ್ಲಿಷ್ ಭಾಷೆಯಲ್ಲಿ.

ಸೋನಿಯಾ ರಾಹುಲ್ ಮಾತನಾಡಿದ್ದೂ ಹಿಂದೀನಲ್ಲಿ..!

ಹೇಳಿ ಕೇಳಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಇಂಗ್ಲಿಷ್ ಭಕ್ತರು. ಚಿಕ್ಕಂದಿನಿಂದಲೂ ವಿದೇಶದಲ್ಲೇ ಬೆಳೆದ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರದಲ್ಲಿ ರಾಜಕೀಯದ ಪಾರುಪತ್ಯ ಹಿಡಿದ ನಂತರ ಇಂಗ್ಲಿಷ್ ಭಾಷೆಯನ್ನು ದೂರಮಾಡಿ ಹಿಂದಿ ಭಾಷೆಯನ್ನು ಅಭ್ಯಾಸ ಮಾಡಲು ಆರಂಭಿಸುತ್ತಾರೆ. ಹಲವಾರು ಲೋಪದೋಷಗಳ ನಡುವೆಯೂ ಹಿಂದಿ ಭಾಷೆಯನ್ನು ಕರಗತ ಮಾಡಿಕೊಂಡು ಮಾತನಾಡುತ್ತಾರೆ. ಆದರೆ ದೇಶದವರೇ ಆದಂತಹ ಕೆಲ ಕಾಂಗ್ರೆಸ್ ನಾಯಕರಿಗೆ ಇನ್ನೂ ಹಿಂದಿ ಬರೋದಿಲ್ಲ ಅಂದರೆ ವಿಪರ್ಯಾಸವೇ ಸರಿ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರಾಜಕೀಯ ನಾಟಕವಾಡಲು ಹಿಂದಿಯನ್ನು ಅಭ್ಯಾಸ ಮಾಡಿದ್ದರೂ ಅವಾಂತರಗಳನ್ನು ಮಾಡುತ್ತಲೇ ಇರುತ್ತಾರೆ.
ಕಾಂಗ್ರೆಸ್ ಅಧಿವೇಶನದಲ್ಲೂ ಸೋನಿಯಾ ಗಾಂಧಿಯವರು ಇಂದಿರಾ ಗಾಂಧಿ ನಮ್ಮ ದೇಶದ ಮೇಲೆ ಬಲತ್ಕಾರ ಮಾಡಿದ್ದರು ಎಂದು ಹೇಳುವ ಮೂಲಕ ಭಾಷೆಯಲ್ಲಿ ಯಡವಟ್ಟು ಮಾಡಿಕೊಂಡಿದ್ದರು.

ಒಟ್ಟಾರೆ ನಮ್ಮ ಮುಖ್ಯಮಂತ್ರಿಗಳು ಈ ರೀತಿ ಯಾಕೆ ಹಿಂದಿಯನ್ನು ವಿರೋಧಿಸುತ್ತಾರೆ ಎಂಬ ವಿಚಾರ ಈಗ ಬಯಲಾಗಿದೆ. ಈವರೆಗೂನಮ್ಮ ಮುಖ್ಯಮಂತ್ರಿಗಳಿಗೆ ಕನ್ನಡದ ಮೇಲಿರುವ ಮಮಕಾರವೋ ಎಂದು ಅಂದುಕೊಂಡಿದ್ದೆವು. ಆದರೆ ಅವರ ಇಂಗ್ಲಿಷ್ ವ್ಯಾಮೋಹ ಹಿಂದಿ ಭಾಷೆಗೆ
ಅಡ್ಡಿ ಉಂಟುಮಾಡಿದ್ದರಿಂದ ಅವರು ಹಿಂದಿ ಭಾಷೆಯನ್ನು ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಎಂದು ಎತ್ತಿಕಟ್ಟಿ ವಿರೋಧಿಸುತ್ತಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ.

-ಸುನಿಲ್ ಪಣಪಿಲ

Tags

Related Articles

Close