ಪ್ರಚಲಿತ

ಮತ್ತೆ ಘರ್ಜಿಸಿತು ಹಿಂದೂ ಸಿಂಹ, ಏಟಿಗೆ ಇದಿರೇಟು ನೀಡಿ ಪ್ರಕಾಶ್ ರಾಜ್ ಮುಖದ ಬೆವರಿಳಿಸಿದ ಸುಬ್ರಮಣ್ಯನ್ ಸ್ವಾಮಿ, ಕಕ್ಕಾಬಿಕ್ಕಿಯಾದ “ಜಸ್ಟ್ ಆಸ್ಕಿಂಗ್” ಜಾತ್ಯಾತೀತ ಖಳನಾಯಕ!!

#ಜಸ್ಟ್ ಆಸ್ಕಿಂಗ್. #ಏನಾಗ್ತಿದೆ ಕರ್ನಾಟಕದಲ್ಲಿ? ಕರ್ನಾಟಕದಲ್ಲಿ ಉಸಿರುಗಟ್ಟುತ್ತಿದೆ ಎಂದು ಟ್ವಿಟರಿನಲ್ಲಿ ರಾತ್ರಿ ಹಗಲು ‘ಕೈ’ ಕೆರೆತ ನೀಗಿಸಿಕೊಂಡು “ಮೋದಿಶಾ” ಜೋಡಿಗೆ ಬೈದು ಕೊಂಡು ಸೈಟು ಗಿಟ್ಟಿಸಿಕೊಂಡ ಜಾತ್ಯಾತೀತ ಬ್ರಿಗೇಡ್ ನ ಪ್ರಕಾಶ್ ರಾಜ್ ಮುಟ್ಟಿಕೊಂಡು ನೋಡಬೇಕು ಅಂತಹ ಮಾತಿನೇಟು ಕೊಟ್ಟಿದ್ದಾರೆ ಹಿಂದೂ ಸಿಂಹ ಸುಬ್ರಮಣ್ಯನ್ ಸ್ವಾಮಿ!! ಮತ್ತೆ ಹಿಂದುತ್ವದ ಬಗ್ಗೆ, ಹಿಂದೂಗಳ ಬಗ್ಗೆ ನಾಲಗೆ ಹರಿಯ ಬಿಟ್ಟರೆ ಸ್ವಾಮಿಜಿ ಸುಮ್ಮನೆ ಬಿಟ್ಟಾರೆಯೆ? ಕಾಂಗ್ರೆಸಿನ ರಾಜಮಾತೆ-ಯುವರಾಜನನ್ನೇ ಬಿಟ್ಟಿಲ್ಲ ಇನ್ನು ಪುಟಗೋಸಿ ಪರ್ಕಟ್ ಗಳನ್ನು ಬಿಡುತ್ತಾರಾ? ತಿಮಿಂಗಲಗಳೊಡನೆ ಸೆಣಸಾಡಿದವರು ಸಿಗಡಿಗಳಿಗೆ ಹೆದರುತ್ತಾರೆಯೆ?

ತನ್ನ ಮಾತಿನ ವರಸೆಯಿಂದ ಪ್ರಕಾಶ್ ರಾಜ್ ನ ಚೀರ ಹರಣ ಮಾಡಿಬಿಟ್ಟರಲ್ಲ ಸ್ವಾಮಿಜಿ, ಅವರಿಗೊಂದು ಸಾಷ್ಟಾಂಗ ನಮಸ್ಕಾರ. ‘ಟೈಮ್ಸ್ ನೌ’ ಏರ್ಪಡಿಸಿದ ಚರ್ಚೆಯಲ್ಲಿ ಅಪ್ಪಟ ದೇಶ ಪ್ರೇಮಿ ಸಿಂಹವನ್ನು ದೇಶದ್ರೋಹಿ ಗುಳ್ಳೆ ನರಿಯೊಂದು ಎದುರಿಸಿ, ತತ್ತರಿಸಿ ಹೋಯಿತು. ಮೊದ ಮೊದಲು ಗುರ್ರ್ ಎನ್ನುತ್ತಿದ್ದ ಗುಳ್ಳೆನರಿ ತದನಂತರ ಹಿಂದೂ ಸಿಂಹದ ಘರ್ಜನೆಯೆದುರು ಕುಂಯಿ ಕುಂಯಿ ಎಂದಿತು. ಚರ್ಚೆಯ ಒಂದು ಹಂತದಲ್ಲಿ ಮಾತನಾಡುತ್ತಾ ಸ್ವಾಮಿ ಅವರು ಮುಗಲರ ಕಾಲದಲ್ಲಿ 47 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಪುಡಿಗಟ್ಟಲಾಗಿದೆ ಅದನ್ನು ನೀವು ಖಂಡಿಸುತ್ತೀರಾ ಎಂದು ರಾಜ್ ಗೆ ಸವಾಲೆಸೆದಾಗ ರಾಗ ಎಳೆಯುತ್ತಾ ತಮ್ಮ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಹೇಳಿದಾಗ, ತಿರುಗೇಟು ನೀಡಿದ ಸ್ವಾಮಿ “ನಾನೆಲ್ಲಿ ತಪ್ಪು ಮಾಡಿದ್ದೇನೆ? ನನ್ನ ಮೇಲೆ ಒಂದೇ ಒಂದು ಕ್ರಿಮಿನಲ್ ಕೇಸು ಇಲ್ಲ. ನೀವು ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಪ್ರಯತ್ನಿಸಿ ನೋಡಿ ನಿಮಗೆ ಸರಿಯಾದ ಪಾಠ ಕಲಿಸುತ್ತೇನೆ” ಎಂದು ಗುಡುಗಿದಾಗ ಗುಳ್ಳೆನರಿಗೆ ಬಾಯೆ ಬರಲಿಲ್ಲ!

ಹೌದು, ಸ್ವಾಮಿ ಅವರ ಮೇಲೆ ಒಂದೆ ಒಂದು ಆರೋಪವಿಲ್ಲ. ರಾಜಕೀಯದಲ್ಲಿ ಅವರಷ್ಟು ನಿರ್ಭೀತಿಯಿಂದ ಸತ್ಯ ಮಾತನಾಡುವ ವ್ಯಕ್ತಿ ಅಂತು ಇಲ್ಲವೇ ಇಲ್ಲ. ಚರ್ಚೆಯ ನಿರೂಪಕ ರಾಜ್ ರಲ್ಲಿ ಉಮರ್ ಖಾಲಿದ್ ಜೊತೆ ಸ್ಟೇಜ್ ಹಂಚಿಕೊಂಡ ವಿಚಾರದ ಬಗ್ಗೆ ಕೇಳಿದಾಗ ರಾಜ್ ನಯವಾಗಿ ನುಣುಚಿಕೊಳ್ಳುತ್ತಾ ತಾನು ಸ್ಟೇಜ್ ಹಂಚಿಕೊಂಡದ್ದು ನಿಜ ಆದರೆ ಅದು ಬೇರೆ ಉದ್ದೇಶಕ್ಕಾಗಿತ್ತು ಎಂದರು. ಆಗ ಸ್ವಾಮಿ ಥಟ್ಟನೆ ನೀವು ಬೆಂಬಲ ನೀಡಿಲ್ಲ, ಆದರೆ ಅವರನ್ನು ಖಂಡಿಸಿಯೂ ಇಲ್ಲ ಎಂದಾಗ ಅನಿವಾರ್ಯವಾಗಿ ಧರ್ಮ ರಾಜಕೀಯ ಮಾಡುವವರನ್ನು ಖಂಡಿಸ ಬೇಕಾಯಿತು ರಾಜ್. ಪ್ರಕಾಶ್ ಅವರಲ್ಲಿ “ಕೇಸರಿ ಭಯೋತ್ಪಾದನೆ” ಅಥವಾ “ಹಿಂದೂ ಭಯೋತ್ಪಾದನೆ” ಯಂತಹ ಪದಗುಚ್ಛಗಳ ಬಳಕೆಯನ್ನು ಖಂಡಿಸಿದ್ದೀರಾ ಎಂದು ಕೇಳಿದಾಗ, ಇತ್ತೀಚಿನ ಚರ್ಚೆಯಲ್ಲಿ ಇಂತಹ ವಾಕ್ಯಗಳನ್ನು ಬಳಸುವುದನ್ನು ನಿಲ್ಲಿಸಲು ತಾನು ಕಮಲ್ ಹಾಸನ್ನನ್ನು ಕೇಳಿಕೊಂಡಿದ್ದೇನೆ ಎಂದು ರಾಜ್ ಉತ್ತರಿಸಿದರು.

ಆದರೆ 2010 ರಲ್ಲಿ ಕಾಂಗ್ರೆಸ್ ಇಂತಹ ಪದಗಳನ್ನು ದೇಶಾದ್ಯಂತ ತೇಲಿ ಬಿಟ್ಟಾಗ ನೀವು ಇದನ್ನು ಖಂಡಿಸಿದ್ದೀರಾ ಎಂದು ಕೇಳಿದಾಗ ಪ್ರಕಾಶ್ ರಾಜ್ ತಮ್ಮ ತಾಳ್ಮೆ ಕಳೆದುಕೊಂಡರು. ಅವರ ನೋಯುತ್ತಿರುವ ನರಕ್ಕೆ ಕೈ ಇಟ್ಟಂತಾಗಿ ತಮ್ಮ ಧ್ವನಿಯನ್ನು ತೀವ್ರಗೊಳಿಸಿದರು. ಕೊನೆಗೆ ಭಯೋತ್ಪಾದನೆ ಮಾಡುವವರು ಒಂದು ಧರ್ಮಕ್ಕೆ ಸೇರಿರದವರು ಎಂದು ಹೇಳಿ ಈ ವಿಷಯಕ್ಕೆ ಮುಕ್ತಾಯ ಹಾಡಿದರು. ಡಾ.ಸ್ವಾಮಿ ಜೊತೆ ಚರ್ಚೆಗೆ ಬರುವುದರಿಂದ ನನ್ನ ಮಾತು ಕೇಳಲ್ಪಡುವುದು ಮತ್ತು ಇಡಿಯ ಕಥಾ ನಿರೂಪಣೆಯನ್ನು ಬದಲಾಯಿಸಬಹುದೆಂದು ಕೊಂಡಿದ್ದೆ ಎಂದಾಗ ಸ್ವಾಮಿ ಅವರು “ಹಿಂದುತ್ವ” ಇರುವುದರಿಂದಲೆ ಆತನಿಗೆ ತನ್ನ ಮಾತನ್ನು ಮುಂದಿಡಲಾಗುತ್ತಿರುವುದು ಏಕೆಂದರೆ ಹಿಂದುತ್ವ ಯಾರದೆ ಧ್ವನಿಯನ್ನು ನಿಗ್ರಹಿಸುವುದನ್ನು ನಿರಾಕರಿಸುತ್ತದೆ ಎಂದು ತಿರುಗೇಟು ನೀಡಿದರು.

ಮುಂದೆ ಚರ್ಚೆಯಲ್ಲಿ ಮಾತನಾಡುತ್ತಾ ತಾನು ಜನರ ಪ್ರತಿ ಜವಾಬ್ದಾರಿ ಉಳ್ಳವರಾಗಿರಲು ಮತ್ತು ಉತ್ತರದಾಯಿಯಾಗಿರಲು ನಾಯಕರನ್ನು ಪ್ರಶ್ನಿಸಲು ನಿರ್ಧರಿಸಿದ್ದೇನೆ ಎಂದಾಗ ಸ್ವಾಮಿ ಅವರು, ಹೀಗೆ ನೀವು ಭಾರತದಲ್ಲಿ ಮಾತ್ರ ಮಾಡಬಹುದು ಪಾಕಿಸ್ತಾನದಲ್ಲಿ ಅಲ್ಲ ಎಂದು ರಾಜ್ ಗೆ ನೆನಪಿಸಿದರು. ಆಗ ರಾಜ್ ನಾನು ಯಾವಾಗ ಪ್ರಶ್ನೆ ಕೇಳಿದರೂ ನನಗೆ ಪಾಕಿಸ್ತಾನಕ್ಕೆ ಹೋಗಲು ಹೇಳಲಾಗುತ್ತದೆ ಎಂದಾಗ ತಿರುಗೇಟು ನೀಡಿದ ಸ್ವಾಮಿ “ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ನಾನು ಹೇಳಲಿಲ್ಲ. ಪಾಕಿಸ್ತಾನವು ನಿಮ್ಮನ್ನು ಇಟ್ಟುಕೊಳ್ಳುತ್ತದೆ ಎಂದು ನನಗೆ ಅನಿಸುತ್ತಿಲ್ಲ, ಅವರಿಗೂ ನಿಮ್ಮ ಜೊತೆ ಸರಿ ಬರಲಿಕ್ಕಿಲ್ಲ” ಎಂದು ಮಾತಿನೇಟು ನೀಡಿದರು. ಉತ್ತರವಿಲ್ಲದ ರಾಜ್ “ಕುಛ್ ಭೀ” ಎಂದಷ್ಟೆ ಹೇಳಿ ಸುಮ್ಮನಾದರು.

ಜಸ್ಟ್ ಆಸ್ಕಿಂಗ್ ಎಂದು ಬೊಬ್ಬೆ ಹೊಡೆಯುತ್ತಾ ತಿರುಗಾಡುತ್ತಿದ್ದ ಪ್ರಕಾಶ್ ಜೀವನದಲ್ಲಿ ಮರೆಯಬಾರದು ಅಂತಹ ಪಾಠ ಕಲಿಸಿದರು ಸುಬ್ರಮಣ್ಯನ್ ಸ್ವಾಮಿ. ಇಂತಹ ಒಂದು ವೇದಿಕೆ ಕಲ್ಪಿಸಿ ಕೊಟ್ಟ ಟೈಮ್ಸ್ ನೌ ಗೆ ಕೋಟ್ಯಂತರ ದೇಶಪ್ರೇಮಿಗಳ ಅನಂತಾನಂತ ಧನ್ಯವಾದಗಳು. ಇಂತಹ ಸೋಗಲಾಡಿ ಜಾತ್ಯತೀತರಿಗೆ ಬುದ್ದಿ ಕಲಿಸಲು ಸ್ವಾಮಿಯಂತಹ ಅಪ್ಪಟ ಹಿಂದೂ ಸಿಂಹವೆ ಸರಿಯಾದ ವ್ಯಕ್ತಿ. ದೇಶವನ್ನು, ಹಿಂದುತ್ವವನ್ನು ಪ್ರೀತಿಸುವ ಭಾರತೀಯರು ಸ್ವಾಮಿಗೆ ಚಿರರುಣಿ. ಧರ್ಮ-ಜಾತಿಯ ಆಧಾರದ ಮೇಲೆ ದೇಶವನ್ನು ಒಡೆದು ತನ್ನ ಜೇಬು ತುಂಬಿಸಿಕೊಳ್ಳುತ್ತಿರುವ ಇಂತಹ ಸೋಗಲಾಡಿಗಳಿಗೆ ಸರಿಯಾದ ಪಾಠ ಕಲಿಸಿಸದಿದ್ದರೆ ಮತ್ತೊಮ್ಮೆ ದೇಶ ಒಡೆಯುತ್ತಾರೆ ಈ ಅಡ್ಡ ಕಸುಬಿಗಳು. ಇವರ ಮೋಸದಾಟಕ್ಕೆ ಬಲಿಯಾಗದಿರಿ, ಅಖಂಡ ಹಿಂದೂ ರಾಷ್ಟಕ್ಕೆ ಮುನ್ನುಡಿ ಕರ್ನಾಟಕದಿಂದಲೆ ಬರೆಯಿರಿ.

-ಶಾರ್ವರಿ

Tags

Related Articles

Close