ಪ್ರಚಲಿತ

ಕಾಂಗ್ರೆಸ್ ನಾಯಕನ ನಿದ್ದೆಗೆಡಿಸಿದ ಈ ಹೆಣ್ಣು ಮಗಳು!! ಚಿದಂಬರ ರಹಸ್ಯಕ್ಕೆ ಕಂಟಕವಾದಳೇ ಈ ಬಾಲಕಿ?!

ಇತ್ತೀಚೆಗೆ, ಎನಫೋರ್ಸ್ ಮೆಂಟ್ ಡೈರೆಕ್ಟರೇಟ್ (ಜಾರಿ ನಿರ್ದೇಶನಾಲಯ) ಚಾರ್ಟರ್ಡ್ ಅಕೌಂಟ್ಯಾಂಟ್ ಆಗಿರುವ ಭಾಸ್ಕರ್ ರಮಣ್ ರನ್ನು ಬಂಧಿಸಿತ್ತಷ್ಟೇ!! ಆದರೆ, ಯಾವಾಗ ಭಾಸ್ಕರ್ ರಮಣ್ ರ ಜೊತೆ, ದಾಖಲೆಗಳನ್ನೂ ವಶಕ್ಕೆ ತೆಗೆದುಕೊಂಡ ತನಿಖಾಧಿಕಾರಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದರು!! ಭಾಸ್ಕರ್ ರಮಣ್ ರ ದಾಖಲೆಗಳಲ್ಲಿ ಪಿ ಚಿದಂಬರಮ್ ರ ರಹಸ್ಯವೊಂದು ಬಯಲಾಗಿತ್ತು!!

೨೧೦೫ ಡಿಸೆಂಬರ್ ತಿಂಗಳಿನಲ್ಲಿ, ಭಾಸ್ಕರ್ ರಮಣ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯಕ್ಕೆ ಭಾಸ್ಕೃ್ ರಮಣ್ ರ ಲಾಕರ್ ನಲ್ಲಿ ನಾಲ್ಕು ವಿಲ್ ಗಳು ಸಿಕ್ಕಿತ್ತು!! ಭಾಸ್ಕರ್ ರಮಣ್, ಸಿಬಿಎನ್ ರೆಡ್ಡಿ, ರವಿ ವಿಶ್ವನಾಥನ್ ಮತ್ತು ಪದ್ಮಾ ವಿಶ್ವನಾಥನ್ ಗೆ ಸೇರಿದ ವಿಲ್ ಗಳಾಗಿದ್ದು, ಒಂದೇ ದಿನಾಂಕದಂದು ಎಕ್ಸಿಕ್ಯೂಟ್ ಮಾಡಲಾಗಿತ್ತು! ೧೯ th ಜೂನ್ ೨೦೧೩ ರಂದು ಎಕ್ಸಿಕ್ಯೂಟ್ ಮಾಡಲಾಗಿದ್ದ ಈ ವಿಲ್ ಗಳಿಗೆ ಸಾರ್ವತ್ರಿಕವಾಗಿ ಸಾಕ್ಷೀದಾರರಾಗಿ ಸಹಿ ಹಾಕಿದ್ದು ವಿ ಮುರಳಿ! ಜೊತೆಗೆ, ಉಳಿದ ಸಾಕ್ಷೀದಾರರು ಸಿಬಿಎನ್ ರೆಡ್ಡಿ ಮತ್ತು ರವಿ ವಿಶ್ವನಾಥನ್!

ವಿಷಯ ಇಷ್ಟೇ ಆಗಿದ್ದರೆ, ಬೇರೇನೂ ಆಗುತ್ತಿರಲಿಲ್ಲ!! ಆದರೆ, ಸಾಕ್ಷೀದಾರರೆಲ್ಲ ನನಗೆ ನೀನು ನಿನಗೆ ನಾನು ಎನ್ನುವಂತೆ ಸಹಿ ಹಾಕಿದ್ದರೂ ಕೂಡ, ತೀರಾ ವಿಚಿತ್ರ ಎನ್ನಿಸುವಂತಹ ವಾಸ್ತವಗಳು ತನಿಖಾಧಿಕಾರಿಗಳಿಗೆ ಕಂಡು ಬಂದಿತ್ತು!! ಪ್ರತಿ ವಿಲ್ ಗಳನ್ನೂ ಸಹ ಎರಡು ಭಾಗಗಳನ್ನಾಗಿ ಮಾಡಲಾಗಿತ್ತು! ಒಂದು ಭಾಗದಲ್ಲಿ, ವೈಯುಕ್ತಿಕ ಆಸ್ತಿಗಳೆಂದು ಪರಿಗಣಿಸಲ್ಪಡುವ ಪ್ರಾಪರ್ಟಿಗಳು, ಆಭರಣಗಳು, ಹಣ, ಬ್ಯಾಂಕ್ ಖಾತೆಗಳನ್ನು ಮಡದಿ, ಮಕ್ಕಳು ಮತ್ತು ಮೊಮ್ಮಕ್ಕಳಿಗೆಂದು ಸಾಮಾನ್ಯವಾಗಿ ವಿಲ್ ಬರೆದಿಡುವ ಹಾಗೆ ಬರೆದಿಡಲಾಗಿತ್ತು! ಆದರೆ, ವಿಲ್ ನ ಎರಡನೇ ಭಾಗದಲ್ಲಿ ಮಾತ್ರ, ಏನೋ ಸರಿ ಇಲ್ಲ ಎಂದೆನಿಸಿತ್ತು ತನಿಖಾಧಿಕಾರಿಗಳಿಗೆ! ಯಾಕೆ ಗೊತ್ತಾ?!

ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ರಿಯಾ ಎಫ್ ಎಮ್ ಸಿಜಿ ಯ ಶೇರುಪಾಲುಗಳನ್ನು ಡಾ. ಶ್ರೀನಿಧಿಯವರ ಮಗಳು ಮತ್ತು ಡಾ. ಬಿ ರಂಗರಾಜನ್ ರವರ ಮೊಮ್ಮಗಳಾದ ಅದಿತಿ ಗೆ ಬರೆದಿಡಲಾಗಿತ್ತು! ಆ ನಾಲ್ಕೂ ವಿಲ್ ಗಳ ಎರಡನೇ ಭಾಗದ ವಿಲ್ ಸೇರಿದ್ದು ಕೇವಲ ಅದಿತಿಗೆ ಮಾತ್ರ!! ಅದೂ ಸಹ, ಡಾ.ರಂಗರಾಜನ್ ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಂಬ ಅಹವಾಲು ಕೂಡಾ ಇತ್ತು!!

ಹಾ! ಏನೂ ಅಚ್ಚರಿಯಿಲ್ಲ! ಆದರೆ, ಅಡ್ವಾಂಟೇಜ್ ಮತ್ತು ಕ್ರಿಯಾ ಕಂಪೆನಿಯ ಒಟ್ಟಾರೆ ಶೇರು ಪಾಲು ಸೇರಿದರಾಗುವುದು ೩೦೦೦೦೦ ಶೇರುಗಳು! ಅಂದರೆ, ಕಂಪೆನಿಯ ಶೇ.೬೦ ರಷ್ಟು!! ಅಂದರೆ, ವಿಲ್ ನ ಪ್ರಕಾರ, ಅಕಸ್ಮಾತ್ ಈ ನಾಲ್ಕೂ ಜನ ಏನಾದರೂ ತೀರಿದರೆ, ಅದಿತಿ ಕಂಪೆನಿಯ ಶೇ ೬೦ % ರಷ್ಟು ಶೇರಿನ ಒಡೆಯಳಾಗುತ್ತಾಳೆ! ಉಳಿದ ಶೇ ೪೦% ರಷ್ಟು ಶೇರುಗಳನ್ನು ಮೋಹನನ್ ರಾಜೇಶ್ ರ ಆಸ್ಬ್ರಿಡ್ಜ್ ಕಂಪೆನಿಯ ಹಿಡಿತದಲ್ಲಿದೆ!!

ಇನ್ನು ಅಡ್ವಾಂಟೇಜ್ ಕಂಪೆನಿಯ ವಿಚಾರಕ್ಕೆ ಬಂದರೆ, ಅಷ್ಟೇನೂ ಹೇಳಿಕೊಳ್ಳುವಂತಹದ್ದಿಲ್ಲ ಎನ್ನಿಸಬಹುದು! ಭಾರತದಲ್ಲಿ , ಈ ಕಂಪೆನಿ ವಾಸನ್ ಐ ಕೇರ್ ಎಂಬ ಇನ್ನೊಂದು ಕಂಪೆನಿಯ ಶೇರನ್ನು ಕೇವಲ ೫೦ ಲಕ್ಷ ರೂಗಳನ್ನು ಕೊಟ್ಟು ವಾಸನ್ ನ ೬೦% ರಷ್ಟು ಶೇರನ್ನು ತನ್ನದಾಗಿಸಿಕೊಂಡಿತಷ್ಟೇ! ಉಳಿದ ೪೦% ಶೇರನ್ನು ವಾಸನ್ ಐ ಕೇರ್, ಮಾರಿಷಸ್ ನ ಸೆಕೂಯ್ಯಾ ಕ್ಯಾಪಿಟಲ್ ಗೆ ೪೫ ಕೋಟಿ ರೂ ಗಳಷ್ಟಕ್ಕೆ ತನ್ನ ಉಳಿದ ಶೇರನ್ನು ಬಿಟ್ಟುಕೊಟ್ಟಿತು! ಅಂಕಿ ಅಂಶಗಳ ಪ್ರಕಾರ, ನಿಜವಾಗಲೂ ಹೇಳಬೇಕೆಂದರೆ, ವಾಸನ್ ನಲ್ಲಿರುವ ಅಡ್ವಾಂಟೇಜ್ ನ ಒಟ್ಟಾರೆ ಶೇರು ಅಲ್ಲಿಗೆ ೬೭.೫೦ ಕೋಟಿ ರೂಗಳಷ್ಟು ಎಂದಾಯಿತು!!

ಈ ಅಡ್ವಾಂಟೇಜ್ ಎನ್ನುವ ಕಂಪೆನಿಯೊಂದಿದೆಯಲ್ಲವಾ?! ಅದರ ಆಳ ಇರುವುದು ಅಷ್ಟಿಷ್ಟಲ್ಲ! ಸಿಂಗಾಪೂರ್ ನಲ್ಲಿ ಅಂಗ ಸಂಸ್ಥೆಯನ್ನೂ ಹೊಂದಿರುವ ಈ ಕಂಪೆನಿ, ಜಗತ್ತಿನಾದ್ಯಂತ ಅದೆಷ್ಟೋ ಕೋಟಿಗಟ್ಟಲೇ ಬೆಲ ಬಾಳುವ ಪ್ರೀಮಿಯಮ್ ಪ್ರಾಪರ್ಟಿಗಳನ್ನು ಹೊಂದಿದೆ! ಅಂಟಾರ್ಟಿಕಾವೊಂದನ್ನು ಬಿಟ್ಟು ಉಳಿದೆಲ್ಲಾ ಖಂಡಗಳಲ್ಲಿ ಅಡ್ವಾಂಟೇಜ್ ನ ನೂರಾರು ಅಂಗಸಂಸ್ಥೆಗಳಿವೆ ಎಂಬ ಮಾಹಿತಿ ಬಹಿರಂಗವಾಗಿದೆ!

ವಿಷಯ ಇಷ್ಟೇ!! ಇವಿಷ್ಟನ್ನೂ ಪರಿಗಣಿಸಿ ಒಂದು ಕನ್ ಕ್ಲೂಷನ್ನಿಗೆ ಬರುವುದಾದರೆ, ಆ ನಾಲ್ಕೂ ವಿಲ್ ಗಳನ್ನು ಬರೆದಿಟ್ಟವರಲ್ಲಿ ಭಾಸ್ಕರ್ ರಮಣ್ ಕೂಡಾ ಒಬ್ಬರು!! ಅದಲ್ಲದೇ, ನಾಲ್ಕೂ ವಿಲ್ ಗಳಲ್ಲಿ ಎರಡನೇ ಭಾಗದ ವಿಲ್ ನಲ್ಲಿರುವಷ್ಟನ್ನೂ ಸಹ, ಅದಿತಿ ಎಂಬ ಬಾಲಕಿಯ ಹೆಸರಿಗೆ ಬರೆಯಲಾಗಿದೆ! ಅದೂ ಕೂಡ, ಆಕೆಯ ದಿವಂಗತ ತಾತ ಡಾ. ಬಿ ರಂಗರಾಜನ್ ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಂಬ ಅಹವಾಲನ್ನಿಟ್ಟು!! ಆದರೆ, ತೀರಾ ಆಘಾತಕಾರಿಯಾಗಿದ್ದು ಆ ಬಾಲಕಿಯ ಪೂರ್ಣ ನಾಮಧೇಯ ಅದಿತಿ ನಳಿನಿ ಚಿದಂಬರಮ್ ಎಂದು ತಿಳಿದಾಗ! ಕಾರ್ತಿ ಚಿದಂಬರಮ್ ಮತ್ತು ಡಾ ಶ್ರೀನಿಧಿ ಚಿದಂಬರಮ್ ರ ಮಗಳು ಮತ್ತು, ಪಿ ಚಿದಂಬರಮ್ ನ ಮೊಮ್ಮಗಳು ಈ ಅದಿತಿ!!

ಕಥೆ ಇಲ್ಲಿಗೇ ಮುಗಿಯುವುದಿಲ್ಲ! ಅಡ್ವಾಂಟೇಜ್ ಕಂಪೆನಿಯ ಉಳಿದ ೪೦% ಪಾಲುದಾರರಾದ ಆಸ್ಬ್ರಿಡ್ಜ್ ಕಂಪೆಮಿಯ ಮಾಲೀಕರಾದ ಮೋಹನನ್ ರಾಜೇಶ್ ಕಾರ್ತಿ ಚಿದಂಬರಮ್ ರ ನೆರೆಯವರು! ೨೦೦೬ ರಲ್ಲಿ, ಮೋಹನನ್ ರಾಜೇಶ್ ರವರಿಂದ ಆಸ್ಬ್ರಿಡ್ಜ್ ನನ್ನು ವಶಪಡಿಸಿಕೊಂಡಿದ್ದ ಕಾರ್ತಿ, ಮತ್ತೆ ೨೦೧೧ ರಲ್ಲಿ ವಾಸನ್ ಐ ಕೇರ್ ಕಂಪೆನಿ ಹೊರಬಂದಾಗ ಮೋಹನನ್ ರಾಜೇಶ್ ಗೆ ಆಸ್ಬ್ರಿಡ್ಜ್ ನನ್ನು ಬಿಟ್ಟುಕೊಟ್ಟಿದ್ದರು!

ಅಲ್ಲಿಗೆ, ಇಲ್ಲಿ ವಿಲ್ ಪ್ರಕಾರದಿಂದ ಹಿಡಿದು ಪ್ರತಿಯೊಂದು ಕೂಡ ನಡೆದಿದ್ದು ಕೇವಲ ತೋರಿಕೆಗೋಸ್ಕರ ಅಷ್ಟೇ!! ಅಂದರೆ, ಆ ಎರಡೂ ಕಂಪೆನಿಗಳ ಪೂರ್ಣ ಶೇರುಗಳು ವಿವಿಧ ಹೆಸರುಗಳನ್ನು ಹೊತ್ತು, ಒಂದೇ ವ್ಯಕ್ತಿಗೆ ಸೇರುವಂತಹ ಚಾಣಾಕ್ಷ ವಿಲ್ ಗಳು ಅಷ್ಟೇ!

ಅಚ್ಚರಿಯೇನು ಗೊತ್ತಾ?!

ಚಿದಂಬರಮ್ ಯಾವುದೇ ಚುನಾವಣೆಗೆ ನಿಲ್ಲುವಾಗಲೂ, ಗೆದ್ದ ಮೇಲೂ, ಎಲ್ಲೂ ಕೂಡ ಆಸ್ತಿಯ ವಿವರ ಬಿಚ್ಚಿಡಲಿಲ್ಲ! 2016 ಮೇ ತಿಂಗಳಿನಲ್ಲಿ, ರಾಜ್ಯ ಸಭಾದ ಅಫಿಡವಿಟ್ಟಿನಲ್ಲಿ ತನ್ನ ಹೆಂಡತಿಯ ಹೆಸರಿನಲ್ಲಿ 1.55 ಕೋಟಿ ರೂಗಳ ಆಸ್ತಿ ಇದೆ ಎಂದಷ್ಟೇ ನಮೂದಿಸಿದ್ದಾದರೂ, ಅತ್ತ ಲಂಡನ್ ನ ಅದೇ ಮನೆ 85 ಕೋಟಿಗಳಿಗಳಿಗಿಂತಲೂ ಬೆಲೆ ಬಾಳುತ್ತದೆ ಎಂಬುದು ಅಲ್ಲಿನ ಮಾಧ್ಯಮಗಳು ಪ್ರಕಟಿಸಿತ್ತು!

ರಿಯಲ್ ಎಸ್ಟೇಟ್ ಮೂಲಕ ಜಗದುದ್ದಗಲಕ್ಕೂ ಮಗ ಕಾರ್ತಿ ಆಸ್ತಿಗಳನ್ನು ಮಾಡಿಟ್ಟಿದ್ದಾರೆ!! ಲಂಡನ್, ದುಬೈ, ಸೌತ್ ಆಫ್ರಿಕಾ, ಫಿಲಿಫೈನ್ಸ್, ಥಾಯ್
ಲ್ಯಾಂಡ್ , ಸಿಂಗಾಪೂರ್, ಮಲೇಶಿಯಾ, ಶ್ರೀ ಲಂಕಾ, ಬ್ರಿಟಿಷ್ ವರ್ಜಿನ ಐಸ್ಲಾಂಡ್, ಫ್ರಾನ್ಸ್, ಯುಎಸ್ ಎ, ಸ್ವಿಜರ್ಲ್ಯಾಂಡ್, ಗ್ರೀಸ್ ಹಾಗೂ ಸ್ಪೇನ್ ನಲ್ಲಿವೆ ಆಸ್ತಿಗಳು! ಈ ಆಸ್ತಿಗಳನ್ನೆಲ್ಲ ಖರೀದಿಸಿದ್ದು, 2006 – 2014 ರ ಸಮಯದಲ್ಲಿಯೇ! ಆಗ ಪಿ.ಚಿದಂಬರಮ್, ಗೃಹ ಸಚಿವ ಹಾಗೂ ಹಣಕಾಸು ಸಚಿವನಾಗಿದ್ದ ಸಮಯವದು!!! ಈ ಎಲ್ಲಾ ಆಸ್ತಿಗಳ ಒಟ್ಟು ಮೊತ್ತ ಮೂರು ಬಿಯನ್ ಡಾಲರ್ಗಳಿಗಿಂತಲೂ ಹೆಚ್ಚು ಎಂಬುದನ್ನು ವರದಿ ಕೊಟ್ಟಿತ್ತು ಇಲಾಖೆ!

ಕಾರ್ತಿಯ ಅಡ್ವಾಂಟೇಜ್ ಕಂಪೆನಿಯ ಸಹಭಾಗಿತ್ವ ಏರ್ಸೆಲ್, dcb ಕ್ಲೈಂಟ್ಸ್, ಡಿಯಾಜಿಯೋ ಸ್ಕಾಂಟ್ಲ್ಯಾಂಡ್ ಲಿ., ಕತ್ರಾ ಗ್ರೂಪ್, ಶ್ರೀ ಲಂಕಾ ಎಕ್ಸ್ಪೋರಟ್ ಬೋರ್ಡ್, ಯುನಿಫೈ ವೆಲ್ತ್ ಮ್ಯಾನೇಜ್ಮೆಂಟ್, vst ಟಿಲ್ಲರ್ಸ್, ಕಾರ್ಟ್ಲೋನ್ ಟ್ರೇಡಿಂಗ್, ಕ್ಲಾರಿಸ್ ಲೈಫ್ ಸೈನ್ಸಸ್, itc ಸೆಂಟರ್ಸ್, ಬೆಸ್ಟ್ ಲ್ಯಾಂಡ್ ರಿಯಾಲಿಟಿ, ಎಸ್ಸಾರ ಸ್ಟೀಲ್, ಗೋಕುಲ್ ಬಿಲ್ಡರ್ಸ್, ಎಸ್ ಕುಮಾರ್, inx ಮೀಡಿಯಾ, ರಿಫ್ಲೆಕ್ಷನ್ಸ್, ತಿಯಾಗರಾಜರ್ ಮಿಲ್ಸ್, ಸಾಕ್ಸೊಫ್ಟ್, ಇಎಲ್ ಫೋರ್ಜ್ ಲಿ.!!!!!!

ಇನ್ನೂ ಅದೆಷ್ಟೋ ಹಣ ವರ್ಗಾವಣೆ ನಡೆದಿರುವುದು ಚಿದಂಬರಮ್ ಅಧಿಕಾರದಲ್ಲಿದ್ದಾಗಲೇ! ಅದೆಷ್ಟೋ ತೆರಿಗೆ ಬಾಕಿಯಿದ್ದ ದ್ದು ಕ್ಲಿಯರೆನ್ಸ್ ಹಣೆ ಪಟ್ಟಿ ಹೊತ್ತಿದ್ದು ಈತನ ಅಧಿಕಾರ ಬಲದಿಂದ! ಅದೂ ಬಿಡಿ! ಈ ಎಲ್ಲಾ ಕಂಪೆನಿಗಳಿಗೆ ಐದು ಕಾಮನ್ ಡೈರೆಕ್ಟರೇಟ್ಸ್ ಯಾರು ಗೊತ್ತೇ?! ಸಿಬಿಎನ್ ರೆಡ್ಡಿ, ಭಾಸ್ಕರ್ ರಮಣ್, ಮೋಹನನ್ ರಾಜೇಶ್, ರವಿ ವಿಶ್ವನಾಥನ್ ಹಾಗೂ ವಿ.ಪದ್ಮಾ!! ಇವರೆಲ್ಲರೂ ಸೇರಿ ಕಾರ್ತಿಗೆ ನೀಡಿದ ಬೆಂಬಲ ಮಾತ್ರ ಅಷ್ಟೇ ಮೊತ್ತದ್ದಾಗಿತ್ತು ಕೂಡ!

ತೆರಿಗೆ ಇಲಾಖೆಯವರು ಅದೆಷ್ಟೋ ಸಲ ದಾಳಿ ನಡೆಸಿದರೂ ಕೂಡ ಸಾಕ್ಷ್ಯಾಧಾರಗಳನ್ನು ನೀಡಿದರೂ, ಯಾವ ನ್ಯಾಯಾಲಯವೂ, ಯಾವ ಕಾನೂನೂ ಸಹ ತಲೆ ಕೆಡಿಸಿಕೊಳ್ಳದೇ ಕೂತಿವೆ! ಒರಿಜಿನಲ್ ಸಾಕ್ಷಿಗಳು ಇದೆಯೋ ಇಲ್ಲವೋ ಎಂಬುದೂ ಗೊತ್ತಿಲ್ಲದಷ್ಟು ಚಿದಂಬರಮ್ ಆಟ ಆಡಿದ ಬಗೆಯಿದೆಯಲ್ಲ, ಅದು ಆತನನ್ನು ವಿಶ್ವದ ಅತಿ ದೊಡ್ಡ ಭ್ರಷ್ಟ ರಾಜಕಾರಣಿಯೆಂದೆನಿಸಿಕೊಂಡಿದ್ದು ಸುಳ್ಳಲ್ಲ!!! ಅಷ್ಟು ಮೊತ್ತದ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಆರಾಮಾಗಿ ಕೂತಿವೆ! ನರೇಂದ್ರ ಮೋದಿಯವರು ಬಂದಮೇಲೆ ತೆಗೆದುಕೊಂಡ ನಿರ್ಧಾರಗಳು ಸ್ವಿಸ್ ಬ್ಯಾಂಕನ್ನೇ ನೇರವಾಗಿ ದಿವಾಳೆಯೆಬ್ಬಿಸುವಂತೆ ಮಾಡಿದರೂ, ಇನ್ನೂ ಕಾನೂನಿನಡಿ ಚಿದಂಬರಮ್ ಹಾಗೂ ಇನ್ನೆಷ್ಟೋ ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆಯಾಗದಿರುವುದು ವಿಪರ್ಯಾಸವೇ ಸರಿ!

ಇಂತಹ ಉಪಾಯಗಳನ್ನು, ಯಾರು ಮಾಡಲು ಸಾಧ್ಯ ಹೇಳಿ? ನಮ್ಮ ವಿತ್ತ ಸಚಿವರಾಗಿ, ದೇಶದ ಹಣಕಾಸು ವ್ಯವಸ್ಥೆ ನೋಡಿಕೊಂಡಂತಹ ಚಿದಂಬರಮ್ ಅವರಿಗೆ ಮಾತ್ರ ಬಹುಷಃ ಇಂತಹ ಅಕ್ರಮಗಳನ್ನು ಮಾಡಲು ಸಾಧ್ಯವಷ್ಟೇ!!

– ಪೃಥು ಅಗ್ನಿಹೋತ್ರಿ

Tags

Related Articles

Close