ಪ್ರಚಲಿತ

ಕರಾವಳಿಯಲ್ಲಿ ಮತ್ತೆ ಮೋದಿ ಮೋಡಿ..! ರಾಜ್ಯ ಸರಕಾರ ಊಹಿಸುವುದಕ್ಕೂ ಮೊದಲೇ ಸಹಾಯಕ್ಕೆ ಧಾವಿಸಿದ ಕೇಂದ್ರ..!

ರಾಜ್ಯದ ಕರಾವಳಿ ಭಾಗ ವಂಶದ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೆ ತಮಗೆ ಕರಾವಳಿಯ ಜನರ ಮೇಲಿರುವ ಕಾಳಜಿಯನ್ನು ಪ್ರದರ್ಶಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಭಾಗ ವಿಧಾನಸಭಾ ಚುನಾವಣೆಯಲ್ಲೂ ಮೋದಿಯವರನ್ನು ಬೆಂಬಲಿಸಿದ ಜನತೆ ಸಂಪೂರ್ಣ ಕರಾವಳಿಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ವಿಜಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ದರಿಂದಲೇ ಪ್ರಧಾನಿ ಮೋದಿಗೆ ಮತ್ತು ಕರಾವಳಿಯ ಜನರ ಮಧ್ಯೆ ವಿಶೇಷವಾದ ಗೌರವದ ಸೇತುವೆ ನಿರ್ಮಾಣವಾಗಿದೆ. ಆದರೆ ಇದೀಗ ಧಾರಾಕಾರ ಮಳೆಯಿಂದಾಗಿ ತತ್ತರಿಸಿರುವ ಕರಾವಳಿಯ ಕುರಿತು ಪ್ರಧಾನಿ ಮೋದಿ ಮಾಡಿರುವ ಟ್ವಿಟ್ ಭಾರೀ ಸದ್ದು ಮಾಡುತ್ತಿದೆ..!

ರಾಜ್ಯ ಸರಕಾರ ಊಹಿಸುವ ಮೊದಲೇ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ..!

ಹೌದು ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಇತ್ತ ಮಂತ್ರಿ ಸ್ಥಾನಕ್ಕಾಗಿ ಕಿತ್ತಾಡಿಕೊಳ್ಳುತ್ತಿದ್ದರೆ, ಪ್ರಧಾನಿ ಮೋದಿಜೀ ಮಾತ್ರ ತಮ್ಮ ಮೇಲಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಕರಾವಳಿಗೆ ಅಪ್ಪಳಿಸಿದ ಮುಕುನ್ ಚಂಡಮಾರುತದ ಪ್ರಭಾವದಿಂದಾಗಿ ಸಂಪೂರ್ಣ ಕರಾವಳಿ ಜಲಾವೃತಗೊಂಡಿದೆ. ಮನೆಗಳಿಗೆ,ಅಂಗಡಿಗಳಿಗೆ , ಶಾಲೆಗಳಿಗೆ ನುಗ್ಗಿದ ನೀರಿನಿಂದಾಗಿ ಜನರು ಪರದಾಡುವಂತಾಗಿದೆ. ಆದರೂ ರಾಜ್ಯ ಸರಕಾರ ಮಾತ್ರ ಯಾವುದೇ ಕ್ರಮ‌ ಕೈಗೊಳ್ಳದೆ ಜವಾಬ್ದಾರಿಯನ್ನು ಮರೆತಂತಿದೆ.‌ಆದರೆ ಮೋದಿ ಹಾಗಲ್ಲ, ವಿದೇಶದಲ್ಲಿದ್ದರೂ ಭಾರತದಲ್ಲಾಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ.‌ ಹೌದು , ಸದ್ಯ ಪ್ರಧಾನಿ ಮೋದೀಜೀ ಅವರು ಇಂಡೋನೇಷ್ಯಾ, ಸಿಂಗಾಪುರ್, ಮಲೇಷಿಯಾ ಪ್ರವಾಸದಲ್ಲಿದ್ದು, ಅಲ್ಲಿಂದಲೇ ಕರಾವಳಿಯ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಾಗುವ ಸಮಸ್ಯೆಗಳಿಗೆ ರಾಜ್ಯ ಸರಕಾರ ಪರಿಹಾರ ಕ್ರಮ ಕೈಗೊಳ್ಳುವ ಮೊದಲೇ ಪ್ರಧಾನಿ ಮೋದಿ ಅವರು ನೀಡಿರುವ ಆದೇಶದಿಂದ ರಾಜ್ಯ ಸರಕಾರ ಕಂಗಾಲಾಗಿದೆ.

ಚಂಡಮಾರುತದ ಪರಿಣಾಮವಾಗಿ ಜನರು ಭಾರೀ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ ಸೇರಿದಂತೆ ಕರ್ನಾಟಕದಲ್ಲಿ ಯಾವುದೇ ಭಾಗದಲ್ಲಿ ತೊಂದರೆಯಾದರೆ ಸಹಕಾರ ನೀಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ…!

ವಿಶೇಷ ಜವಾಬ್ದಾರಿ ವಹಿಸಿಕೊಂಡ ಆರ್‌ಎಸ್‌ಎಸ್ ..!

ಆರ್‌ಎಸ್‌ಎಸ್ ಎಂದರೆ ಸೇವೆಯ ಮತ್ತೊಂದು ರೂಪ ಎಂದರೆ ತಪ್ಪಾಗದು. ಯಾಕೆಂದರೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತೊಂದರೆಯಾದಾಗ ಸಂಘದ ಸ್ವಯಂ ಸೇವಕರು ತಕ್ಷಣ ಸಹಾಯಕ್ಕಾಗಿ ಧಾವಿಸಿದ್ದಾರೆ. ನೆರೆ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಬೇಕಾದ ಊಟ ತಿಂಡಿಯ ವ್ಯವಸ್ಥೆ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡುವ ಆರ್‌ಎಸ್‌ಎಸ್ ಇದೀಗ ಮಂಗಳೂರಿನಲ್ಲೂ ಸೇವಾ ಕಾರ್ಯ ನಿರ್ವಹಿಸುತ್ತಿದೆ. ನೆನ್ನೆ ಉಂಟಾದ ನೆರೆಗೆ ಅಕ್ಷರಶಃ ಕರಾವಳಿ ಭಾಗದ ಜನತೆ ಕಂಗೆಟ್ಟಿದ್ದರು. ಆದರೆ ಈ ನೆರೆಯ ನಡುವೆಯೂ ಸ್ಥಳಕ್ಕಾಗಮಿಸಿದ ಸಂಘದ ಸ್ವಯಂ ಸೇವಕರು ಮಂಗಳೂರು ಮತ್ತು ಉಡುಪಿಯ ಭಾಗಗಳಲ್ಲಿ ಜನರಿಗೆ ಸಹಾಯ ಮಾಡುವಲ್ಲಿ ತೊಡಗಿಕೊಂಡರು.‌ಇದರ ಜೊತೆಗೆ ಭಜರಂಗದಳ , ಎಬಿವಿಪಿ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಗಳು ಸೇರಿಕೊಂಡಿದ್ದು, ಜಾತಿ‌, ಧರ್ಮ ಮರೆತು ಇಡೀ ಕರಾವಳಿಯ ಜನರ ಸಮಸ್ಯೆಗಳಿಗೆ ಸಹಾಯಕ್ಕಾಗಿ ಧಾವಿಸಿದ್ದಾರೆ.‌

ಜನಪ್ರತಿನಿಧಿಗಳ ಸ್ಪಂದನೆ ಅದ್ಭುತ..!

ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಏಳು ಬಿಜೆಪಿ ಶಾಸಕರು ಕೂಡ ನೆರೆ ಪೀಡಿತ ಪ್ರದೇಶಗಳಿಗೆ ಧಾವಿಸಿ ಜನರ ಸಮಸ್ಯೆಗಳಿಗೆ ಪರಿಹಾರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಾಸಕರ ಜೊತೆಗೆ ಸಂಸದರೂ ಕೂಡ ಸ್ಥಳಕ್ಕಾಗಮಿಸಿ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳ‌ ಜೊತೆ ಮಾತುಕತೆ ನಡೆಸಿದರು. ನೆರೆ ಉಂಟಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ , ಆರ್‌ಎಸ್‌ಎಸ್ ಮತ್ತು ಇನ್ನಿತರ ಹಿಂದೂಪರ ಸಂಘಟನೆಗಳ ಸಹಾಯವಾಣಿಯ ಮೆಸೇಜ್ ಗಳು ಜನರ ಕೈಗೆ ಸಿಕ್ಕಿದ್ದರಿಂದ ತತ್‌ಕ್ಷಣ ಜನರ ಸಮಸ್ಯೆಗಳನ್ನು ಕಂಡುಕೊಳ್ಳಲು ಸಹಾಯವಾಗಿದೆ..!

ಒಟ್ಟಾರೆಯಾಗಿ ಹೇಳುವುದಾದರೆ ಜನರ ಪಾಲಿಗೆ ಬಿಜೆಪಿ ಯಾವತ್ತಿಗೂ ಇದೆ ಎಂಬುದು ಮತ್ತೊಮ್ಮೆ ಕರಾವಳಿಯಲ್ಲಿ ನಿಜವಾಗಿದೆ. ರಾಜ್ಯ ಸರಕಾರದ ಯಾವುದೇ ಸ್ಪಂದನೆ‌ ಸಿಗುವುದಕ್ಕೂ ಮೊದಲೇ ವಿದೇಶದಲ್ಲಿದ್ದ ಪ್ರಧಾನಿ ಮೋದಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ..!

ಅರ್ಜುನ್

Tags

Related Articles

Close