ಪ್ರಚಲಿತ

ಕರಾವಳಿಯಲ್ಲಿ ಅಬ್ಬರಿಸಿದ ಕೇಸರಿ ಸೈನ್ಯ.! ಒಂದೊಂದು ಘೋಷಣೆಗೂ ವಿರೋಧಿಗಳು ಬೆಚ್ಚಿಬಿದ್ದಿದ್ದೇಕೆ ಗೊತ್ತಾ.?!

ಇಡೀ ರಾಜ್ಯದ ಯಾವ ಮೂಲೆಗೆ ಹೋದರೂ ಕೇಳಿ ಬರುತ್ತಿರುವ ಒಂದೇ ಶಬ್ದ ಚುನಾವಣೆ. ಕರ್ನಾಟಕ ವಿಧಾನಸಭಾ ಚುನಾವಣೆ ಈ ರೀತಿಯಾಗಿ ಜನರಿಗೆ ಹುಚ್ಚು ಹಿಡಿಸುತ್ತಿರುವುದು ಇದೇ ಮೊದಲು. ಈವರೆಗೂ ಚುನಾವಣೆ ಬಂತೆಂದರೆ ಸಾಕು ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು ಶ್ರಮಿಸುತ್ತಿದ್ದರು. ಆದರೆ ಈ ಬಾರಿಯ ರಾಜ್ಯದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಯಾಕೆಂದರೆ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕು ಎಂಬ ಹಠಕ್ಕೆ ಬಿದ್ದಿರುವುದರಿಂದ ಈ ಬಾರಿಯ ಚುನಾವಣೆ ಇಡೀ ದೇಶದ ಚಿತ್ತ ಕರ್ನಾಟಕದತ್ತ ಮೂಡುವಂತೆ ಮಾಡಿದೆ.!

ಈ ಬಾರಿಯ ಚುನಾವಣೆ ರಾಜಕೀಯ ಪಕ್ಷಗಳ ಮಧ್ಯೆ ನಡೆಯುತ್ತದೆ ಎಂಬುವುದಕ್ಕಿಂತ ಧರ್ಮ – ಅಧರ್ಮದ ಮಧ್ಯೆ ನಡೆಯಲಿದೆ ಎಂಬುದು ಸತ್ಯ. ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಕಾರಣರದಂತಹ ಸಿದ್ದರಾಮಯ್ಯನವರ ವಿರುದ್ಧ ಇಂದು ತೊಡೆತಟ್ಟಿ ಸವಾಲಾಗಿ ನಿಂತಿರುವುದು ಕೇವಲ ಬಿಜೆಪಿ ಮಾತ್ರವಲ್ಲ, ಬದಲಾಗಿ ಇಡೀ ಹಿಂದೂ ಸಮಾಜವೇ ಒಗ್ಗಾಟ್ಟಾಗಿ ಚುನಾವಣೆ ಎಸುರಿಸಲು ಸಜ್ಜಾಗಿದೆ. ಕೇವಲ ಮತದಾನದ ದಿನ ಮತಕಟ್ಟೆಗೆ ಹೋಗಿ ತಮ್ಮ ಪಕ್ಷಕ್ಕೆ ಮತ ನೀಡುವುದು ಮಾತ್ರವಲ್ಲದೆ , ದಿನದ ೨೪ ಗಂಟೆಯೂ ಹಿಂದುತ್ವದ ಉಳಿವಿಗಾಗಿ , ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಇದಕ್ಕೆಲ್ಲಾ ಇಂದು ಕರಾವಳಿಯಲ್ಲಿ ನಡೆದ ಹಿಂದೂ ಸಮಾಜದ ವಿರಾಟ ರೂಪವೇ ಸಾಕ್ಷಿ..!

ರಾಜ್ಯದ ಹಿಂದೂಗಳ ಭದ್ರಕೋಟೆ ಕರಾವಳಿಯಲ್ಲಿ ನಡೆಯಿತು ಅಪರೂಪದ ದರ್ಶನ..!

ರಾಜ್ಯಾದ್ಯಂತ ಚುನಾವಣೆಯ ಬಿಸಿ ಹೆಚ್ಚುತ್ತಿದ್ದಂತೆ ಯುವಕರಲ್ಲಿ ಈ ಬಾರಿಯ ಚುನಾವಣೆ ಹೊಸ ಹುರುಪು ಮೂಡಿಸಿದೆ. ಯಾಕೆಂದರೆ ಇಡೀ ರಾಜ್ಯದಲ್ಲಿ ಎಲ್ಲೇ ಹಿಂದೂಗಳಿಗೆ ಅನ್ಯಾಯವಾದಾಗ ತಕ್ಷಣ ಪ್ರತಿಕ್ರಿಯೆ ವ್ಯಕ್ತವಾಗುವುದು ಅದು ಕರಾವಳಿಯಲ್ಲಿ ಎಂಬುದು ವಿಶೇಷ. ಯಾಕೆಂದರೆ ಕರಾವಳಿ ಹಿಂದೂಗಳ ಭದ್ರಕೋಟೆ. ಹಲವಾರು ಹಿಂದೂ ಪರ ಸಂಘಟನೆಗಳು ಕರಾವಳಿಯಲ್ಲಿ ದಿನವಿಡೀ ಧರ್ಮ ರಕ್ಷಣೆಗಾಗಿ ಹೋರಾಟ ನಡೆಸುತ್ತವೆ. ಏನೇ ತೊಂದರೆ ಉಂಟಾದರೂ ಎಲ್ಲವನ್ನೂ ಮೆಟ್ಟಿ ನಿಲ್ಲುವ ಹಿಂದೂ ಯುವ ಸಮೂಹವೇ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಬಾರಿಯ ಬಿಜೆಪಿ ಗೆಲುವಿಗೆ ಮುಖ್ಯ ಕಾರಣವಾಗುವುದು ಕೂಡಾ ಇದೇ ಹಿಂದೂ ಯುವಸಮೂಹ ಎಂಬುದು ವಿಶೇಷ.

ಅದೇನೇ ಆದರೂ ರಾಜ್ಯದಿಂದ ಕಾಂಗ್ರೆಸ್ ನ್ನು ಕಿತ್ತೊಗೆಯಲೇಬೇಕು ಎಂದು ನಿರ್ಧರಿಸಿರುವ ಹಿಂದೂ ಸಂಘಟನೆಗಳು ಸ್ವತಃ ತಾವೇ ಫೀಲ್ಡ್ ಗೆ ಇಳಿದು ಬಿಜೆಪಿ ಪರ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿಗೆ ತಕ್ಕ ಉತ್ತರ ನೀಡಲು ಕಾರ್ಯಕರ್ತರೆಲ್ಲಾ ಒಟ್ಟಾಗಿ ರಣರಂಗಕ್ಕೆ ಇಳಿದಿದ್ದಾರೆ.

ಇಂದು ಕರಾವಳಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ವೇಳೆ ಕಂಡುಬಂದ ಹಿಂದೂ ಜನಸಾಗರವನ್ನು ಕಂಡು ವಿರೋಧಿಗಳು ತತ್ತರಿಸುವುದು ಖಂಡಿತ. ಯಾಕೆಂದರೆ ಕರಾವಳಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹೊಸ ದೃಶ್ಯ ಕಂಡು ರಾಜ್ಯದಲ್ಲಿ ಬಿಜೆಪಿಯ ಗೆಲುವು ಖಚಿತ ಎಂಬುದು ವಿರೋಧಿಗಳಿಗೆ ಈಗಲೇ ಅರಿವಾಗಿರಬಹುದು.

ಎಂಟು ಕ್ಷೇತ್ರಗಳಲ್ಲಿ ನಡೆಯಿತು ಕೇಸರಿ ಮ್ಯಾಜಿಕ್..!

ಅಭ್ಯರ್ಥಿ ಯಾರೇ ಆದರೂ ನಮಗೆ ಬಿಜೆಪಿ ಮುಖ್ಯ ಎಂದು ಪ್ರಚಾರಕ್ಕಿಳಿದಿರುವ ಕಾರ್ಯಕರ್ತರ ಸಾಗರವೇ ಇಂದು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಕಂಡುಬಂತು. ನಾಮಪತ್ರ ಸಲ್ಲಿಕೆಗೂ ಈ ರೀತಿಯಾಗಿ ಜನ ಸೇರುತ್ತಾರೆ ಎಂದರೆ ಇದು ರಾಜಕೀಯ ವಲಯದಲ್ಲೇ ಇತಿಹಾಸ ಹುಟ್ಟುಹಾಕಿದೆ. ಯಾಕೆಂದರೆ ಕರಾವಳಿಯಲ್ಲಿ ಹಿಂದುತ್ವದ ಅಲೆ ಹೆಚ್ಚಿದ್ದರೂ ಕೂಡ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿತ್ತು. ಪಕ್ಷದ ನಾಯಕರ ಅಸಮಧಾನದಿಂದ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿ ಬಿಜೆಪಿಗೆ ಸೋಲಾಗಿತ್ತು. ಆದರೆ ಈ ಬಾರಿಯ ಚಿತ್ರಣ ಬದಲಾಗಿದೆ. ಯಾಕೆಂದರೆ ಕಾರ್ಯಕರ್ತರಲ್ಲಿರುವ ಮಂತ್ರ ಒಂದೇ “ಈ ಬಾರಿ ಬಿಜೆಪಿ”.

ಕರಾವಳಿಯ ಎಂಟು ವಿಧಾನಸಭಾ ಕ್ಷೇತ್ರದ ಪೈಕಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕಳೆದ ಎರಡು ದಿನಗಳ ಹಿಂದೆ ನಾಮಪತ್ರ ಸಲ್ಲಿಸಿದ್ದರು. ಕರಾವಳಿಯ ಬಿಜೆಪಿ ಅಭ್ಯರ್ಥಿಗಳ ಪೈಕಿ ನಾಮಪತ್ರ ಸಲ್ಲಿಸಿದವರು ರಾಜೇಶ್ ನಾಯ್ಕ್ ಮೊದಲಿಗರು. ರಾಜೇಶ್ ನಾಯ್ಕ್ ಏನೇ ಮಾಡದರು ಅದರಲ್ಲೊಂದು ವಿಶೇಷತೆ ಇದ್ದೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ . ಸ್ವತಃ ಬಿಜೆಪಿ ರಾಷ್ಟ್ರೀಯ ನಾಯಕರೇ ರಾಜೇಶ್ ನಾಯ್ಕ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅದೇ ರೀತಿ ಕಾರ್ಯಕರ್ತರ ಸಮ್ಮುಖದಲ್ಲೇ ನಾಮಪತ್ರ ಸಲ್ಲಿಸಿದ ರಾಜೇಶ್ ನಾಯ್ಕ್ ಬಂಟ್ವಾಳ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಯಾಕೆಂದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ಬಂಟ್ವಾಳ ಕಾಂಗ್ರೆಸ್ ಕೈಯಲ್ಲೇ ಕೊಳೆಯುತ್ತಿದೆ. ಆದರೆ ಈ ಬಾರಿಯ ಚಿತ್ರಣವನ್ನು ಗಮನಿಸಿದರೆ ಕೇಸರಿ ಪತಾಕೆ ರಾರಾಜಿಸುವುದು ಖಚಿತ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

ಮಂಜುನಾಥನ ನಾಡಲ್ಲಿ ನಡೆಯಿತು ಕೇಸರಿ ಕಲರವ..!

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ. ಹೆಸರು ಕೇಳುತ್ತಿದ್ದಂತೆ ಯುವಕರು ತಮ್ಮ ಕಿವಿಯನ್ನು ನೆಟ್ಟಗೆ ಮಾಡಿ ಕೇಳುತ್ತಾರೆ. ಧರ್ಮಸ್ಥಳ ಮಂಜುನಾಥೇಶ್ವನ ನಾಡದು, ಧರ್ಮವೇ ನೆಲೆಸಿರಬೇಕಾದ ಈ ನಾಡಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅಧರ್ಮವೇ ತಾಂಡವವಾಡುತ್ತಿದೆ. ಆದರೆ ಇವೆಲ್ಲದಕ್ಕೂ ಮುಕ್ತಿ ನೀಡಬೇಕೆಂದು ಪಣತೊಟ್ಟಿರುವ ಹಿಂದೂ ಕಾರ್ಯಕರ್ತರಿಗೆ ಯುವ ನಾಯಕ ಹರೀಶ್ ಪೂಂಜ ಅವರ ಅಗತ್ಯವಿದೆ. ಅದೇ ಕಾರಣಕ್ಕಾಗಿ ಇಲ್ಲಿ ” ಟೀಂ ಹರೀಶ್ ಪೂಂಜ” ಎಂಬ ಯುವಕರ ಸೈನ್ಯವೇ ಹುಟ್ಟಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರ ಹೆಸರು ಒಂದು ಟ್ರೆಂಡ್ ಆಗಿ ಬಿಟ್ಟಿದೆ ಎಂದರೆ ತಪ್ಪಾಗದು. ಆ ರೀತಿಯಲ್ಲಿ ಪಕ್ಷ ಸಂಘಟಿಸಿದ್ದಾರೆ ಹರೀಶ್ ಪೂಂಜ.

ಇಂದು ಹರೀಶ್ ಪೂಂಜಾ ಅವರ ನಾಮಪತ್ರ ಸಲ್ಲಿಸುವ ಕ್ಷಣಕ್ಕೆ ಇಡೀ ಬೆಳ್ತಂಗಡಿಯ ಜನತೆ ಸಾಕ್ಷಿಯಾದರು. ಅಭ್ಯರ್ಥಿ ಹೆಸರು ಘೋಷಣೆಗೂ ಮೊದಲೇ ಹರೀಶ್ ಪೂಂಜ ಪರ ಕ್ಷೇತ್ರದಲ್ಲಿ ಯುವಕರು ಪ್ರಚಾರ ಆರಂಭಿಸಿದ್ದರು. ಅದರಂತೆ ಅಭ್ಯರ್ಥಿಯ ಹೆಸರೂ ಘೋಷಣೆಯಾಯಿತು. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ತಿರುಗಾಡುತ್ತಿದ್ದ ಯುವಕರೆಲ್ಲಾ ಇದೀಗ ನ ಬೆಳ್ತಂಗಡಿಯಲ್ಲಿ ಕೇಸರಿ ಪ್ರವಾಹವನ್ನೇ ನಿರ್ಮಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು ಹೊರಟ ಹರೀಶ್ ಪೂಂಜ ಅವರ ಜೊತೆ ಸಾವಿರಾರು ಕಾರ್ಯಕರ್ತರು ಜೊತೆಗಿದ್ದಿದ್ದು ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮಿನಿ ವಿಧಾನ ಸೌಧದಲ್ಲಿ ಹರೀಶ್ ಪೂಂಜ ನಾಮಪತ್ರ ಸಲ್ಲಿಸುತ್ತಿದ್ದರೆ ಇತ್ತ ಹೊರಗಡೆ ಸೇರಿದ್ದ ಕಾರ್ಯಕರ್ತರರ ಸಂಭ್ರಮ ವಿಜಯೋತ್ಸವ ಆಚರಿಸುವಂತಿತ್ತು. ಅಂತೂ ಕಾರ್ಯಕರ್ತರ ಹುಮ್ಮಸ್ಸು ಕಂಡರೆ ಈ ಬಾರಿ ಕಾಂಗ್ರೆಸ್ ನ ಕೋಟೆ ಬೆಳ್ತಂಗಡಿ ಪುಡಿಯಾಗುವುದು ಖಚಿತ.!

ಜೈನಕಾಶಿಯಲ್ಲಿ ಹರಿದುಬಂದ ಹಿಂದೂ ಯುವ ಸಮೂಹ..!

ಮೂಡುಬಿದಿರೆ, ಹೆಸರು ಕೇಳಿದರೆ ನೆನಪಾಗುವುದು ಸಾವಿರ ಕಂಬದ ಬಸದಿ, ಇಲ್ಲಿರುವ ಜೈನ ಬಸದಿಗಳು. ಅಂತೆಯೇ ಮೂಡಬಿದ್ರೆಯನ್ನು ವಿದ್ಯಾಕಾಶಿ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಐದಾರು ಕಾಲೇಜುಗಳು ಮೂಡುಬಿದಿರೆಯಲ್ಲಿ ವಿದ್ಯಾಭ್ಯಾಸ ನೀಡುತ್ತಿದೆ. ಮೂಡುಬಿದಿರೆ ಕಾಂಗ್ರೆಸ್ ಆಳವಾಗಿ ಬೇರೂರಿರುವಂತಹ ಕ್ಷೇತ್ರ. ಹಿಂದೂ ಪರ ಸಂಘಟನೆಗಳ ದರ್ಬಾರ್ ಹೆಚ್ಚಿದ್ದರೂ ಕೂಡ ಇಲ್ಲಿ ಬಿಜೆಪಿ ಈವರೆಗೂ ಅಧಿಕಾರಕ್ಕೆ ಬರಲಾಗಲಿಲ್ಲ. ಯಾಕೆಂದರೆ ಕಾಂಗ್ರೆಸ್ ಜಾತಿ ಆಧಾರದಲ್ಲಿ ಹಿಂದೂಗಳನ್ನು ಒಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಕಾಂಗ್ರೆಸ್ ನ ಅಂತ್ಯ ಕಾಲ ಸಮೀಪಿಸಿದೆ ಎಂದೇ ಹೇಳಬಹುದು. ಯಾಕೆಂದರೆ ಕಳೆದ ಬಾರಿ ಹಿಂದೂ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ಜಿಹಾದಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಇದು ಇಡೀ ಮೂಡುಬಿದಿರೆ ಮಾತ್ರವಲ್ಲದೆ ದೇಶಾದ್ಯಂತ ಸುದ್ದೀಯಾಗಿ ಪ್ರತಿಭಟನೆ , ಬಂದ್ ಗಳು ನಡೆದವು‌. ಇದರಿಂದ ಕಾಂಗ್ರೆಸ್ ನ ಕರಾಳ ಮುಖ ಬಯಲಾಗಿತ್ತು.

ಆದ್ದರಿಂದಲೇ ಈ ಬಾರಿ ಯಾವ ಕಠಿಣ ಸಂದರ್ಭ ಎದುರಾದರೂ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಜನತೆ, ಕಾಂಗ್ರೆಸ್ ನ್ನು ಕಿತ್ತೊಗೆಯಲು ಪಣತೊಟ್ಟಿದ್ದಾರೆ. ಈಗಾಗಲೇ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮಾನಾಥ್ ಕೋಟ್ಯಾನ್ ಅವರ ಹೆಸರು ಪ್ರಕಟವಾಗಿದ್ದು, ಇಂದು ಅವರ ನಾಮಪತ್ರ ಸಲ್ಲಿಸುವ ಮತ್ತು ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿತ್ತು. ಇಲ್ಲಿ ಸೇರಿದ್ದ ಜನಸಮೂಹವನ್ನು ಕಂಡು ಕ್ಷೇತ್ರದ ಕಾಂಗ್ರೆಸ್ ಶಾಸಕರು ಮತ್ತು ಇಡೀ ಹಿಂದೂ ವಿರೋಧಿಗಳು ಬಾಯಿ ಮುಚ್ಚಿ ಕೂರುವಂತಾಗಿದೆ. ಯಾಕೆಂದರೆ ಮೂಡುಬಿದಿರೆ ಜನತೆ ಇಂದು ಹೊಸತೊಂದು ಇತಿಹಾಸವನ್ನೇ ನಿರ್ಮಿಸಿದ್ದಾರೆ. ಹೇಗಾದರೂ ಹಿಂದೂ ವಿರೋಧಿ ಕಾಂಗ್ರೆಸ್ ನ್ನು ಬುಡಸಮೇತ ಕೀಳಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿಯವರ ಜೊತೆ ಇಂದು ಮೂಡುಬಿದಿರೆ ಜನತೆ ಕೂಡ ಇದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಕಾರ್ಕಳದಲ್ಲಿ ಕಾರ್ಯಕರ್ತರ ಸುನಾಮಿ..!

ಕಾರ್ಕಳ ತಾಲೂಕು ಅಭಿವೃದ್ಧಿಯ ಹೆಸರಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಇಂದು ಹೆಸರುವಾಸಿಯಾಗಿದೆ ಎಂದರೆ ಕಾರಣ ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಾರ್ಕಳ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೂ ತಮ್ಮ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಸರಕಾರದ ಜೊತೆ ವಾಗ್ವಾದಕ್ಕಿಳಿದಾದರೂ ತಂದುಕೊಡುವ ಶಾಸಕರೆಂದರೆ ಇಲ್ಲಿನ ಜನತೆಗೆ ಅಚ್ಚುಮೆಚ್ಚು. “ಹಿಂದುತ್ವ ಮತ್ತು ಅಭಿವೃದ್ಧಿ ಎವೆರಡೇ ನಮ್ಮ ಗೆಲುವಿನ ಅಸ್ತ್ರ” ಎಂದು ಬಹಿರಂಗವಾಗಿಯೇ ಹೇಳಿಕೊಂಡು ವಿಜಯೀಶಾಲಿಯಾಗಿದ್ದ ಸುನೀಲ್ ಕುಮಾರ್ ಇಂದು ನಾಮಪತ್ರ ಸಲ್ಲಿಸಲು ಹೊರಟು ನಿಂತಾಗ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸೇರಿದ್ದರು. ಇಡೀ ಕಾರ್ಕಳವೇ ಕೇಸರೀಮಯವಾಗಿ ಕಂಡುಬಂದಿದ್ದು, ಕಾಂಗ್ರೆಸ್ ಈ ಕ್ಷೇತ್ರದಲ್ಲೂ ಸೋಲುವುದು ಖಚಿತ.

ಜಿಲ್ಲೆಯ ಹೃದಯ ಭಾಗದಲ್ಲಿ ಭೋರ್ಗರೆದ ಹಿಂದೂ ಶಕ್ತಿ..!

ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗ ಎಂದೇ ಖ್ಯಾತಿಯಾಗಿರುವ ಮಂಗಳೂರಿನಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಇಂದು ನಡೆದಿತ್ತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿ , ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ ಕಾಮತ್ ಮತ್ತು ಉಳ್ಳಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ನಾಮಪತ್ರ ಸಲ್ಲಿಸುವ ವೇಳೆಯಲ್ಲೂ ಹಿಂದೂ ಜನಸಾಗರವೇ ಹರಿದುಬಂತು‌. ಇಲ್ಲೂ ಕಾಂಗ್ರೆಸ್ ಪಕ್ಷವೇ ಸದ್ಯ ಆಡಳಿತದಲ್ಲಿದ್ದು , ಕಾಂಗ್ರೆಸ್ ನ್ನು ಮಂಗಳೂರಿನಿಂದಲೂ ಮುಕ್ತಗೊಳಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ.!

ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿಯ ಚುನಾವಣೆ ರಂಗೇರುತ್ತಿರುವುದು ಇದೇ ಕಾರಣದಿಂದ. ಯಾಕೆಂದರೆ ಈ ರೀತಿಯಾಗಿ ಯುವಕರ ಸೈನ್ಯವೇ ಬಿಜೆಪಿ ಪರ ಕಾರ್ಯನಿರ್ವಹಿಸಲು ಮುಂದೆ ಬಂದಿದ್ದು, ರಾಜ್ಯದಲ್ಲೂ ಕೇಸರಿ ಪತಾಕೆ ರಾರಾಜಿಸುವ ದಿನ ಹೆಚ್ಚು ದೂರ ಇಲ್ಲ..!

— ಪಿ ಆರ್ ಶೆಟ್ಟಿ

Tags

Related Articles

Close