ಅಂಕಣಪ್ರಚಲಿತ

ಚೀನಾದ ಸೊಕ್ಕು ಮುರಿಯಲು ಮಂಗೋಲಿಯಾದ ಜೊತೆ ಸ್ನೇಹ ಬೆಳೆಸಿಕೊಂಡ ಭಾರತ!! ಮೋದಿಯ ಈ ಮಾಸ್ಟರ್ ಪ್ಲಾನ್‍ಗೆ ಚೀನಾ ಗಪ್‍ಚುಪ್….

ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರ ಅಂದರೇನೇ ಹಾಗೆ.. ಶತ್ರುಗಳು ಕೂಡಾ ಆ ಹೆಸರು ಕೇಳಿದರೆ ಸಾಕು ಗಡಗಡ ನಡುತ್ತದೆ!! ಯಾಕೆಂದರೆ ಮೋದಿಜೀಯ ಆಡಳಿತ ವೈಖರಿ ಅಷ್ಟರ ಮಟ್ಟಿಗೆ ಇದೆ!! ಕೆಲ ರಾಷ್ಟ್ರಗಳು ಮೋದೀಜೀಯವರು ಯಾವಾಗ ನಮ್ಮ ರಾಷ್ಟ್ರಕ್ಕೆ ಬರುತ್ತಾರೆ.. ಯಾವಾಗ ನಮ್ಮ ದೇಶಕ್ಕೆ ಅವರ ಸ್ಪರ್ಶ ಆಗುತ್ತೆ ಅಂತಾ ಕಾಯುತ್ತಾ ಕುಳಿತಿರುತ್ತಾರೆ!! ಮೊದ ಮೊದಲು ಪಾಕಿಸ್ತಾನದ ಜೊತೆ ಸೇರಿಕೊಂಡು ಚೀನಾ ಭಾರತವನ್ನು ಕಂಡರೆ ಉರಿ ಬೀಳುತಿದ್ದು ಇದೀಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿದ ಬಳಿಕ ಚೀನಾ ಯಾವ ವಿಷಯಕ್ಕೂ ಖ್ಯಾತೆ ತೆಗೆಯೋದಿಲ್ಲ ಎಂದರೆ ಮೋದೀಜೀಯ ಮಾತು ಎಂದರೆ ಎಷ್ಟು ವಿಶಿಷ್ಟವಾದದ್ದು ಎಂದು ತಿಳಿಯುತ್ತದೆ!! ಈಗಾಗಲೇ ಮೋದಿಜೀಯ ಒಂದೊಂದು ನಡೆಯೂ ಚೀನಾಕ್ಕೆ ಪತರುಗುಟ್ಟುವಂತೆ ಮಾಡಿದ್ದು ಇದೀಗ ಮತ್ತೆ ಮೋದಿಜೀ ಚೀನಾಗೆ ಸೆಡ್ಡು ಹೊಡೆದಿದ್ದಾರೆ!!

Image result for modi

ಮಂಗೋಲಿಯಾಕ್ಕೆ 1 ಬಿಲಿಯನ್ ಡಾಲರ್ ಸಾಲ ನೀಡಿದ ಮೋದೀಜೀ!!

ಪ್ರಧಾನಿ ನರೇಂದ್ರ ಮೋದೀಜೀಯವರು ಈಗಾಗಲೇ ಚೀನಾದ ಸೊಕ್ಕನ್ನು ಮುರಿದಿದ್ದಾರೆ!! ಇದೀಗ ಮತ್ತೆ ಚೀನಾಕ್ಕೆ ಪೆಟ್ಟುಕೊಟ್ಟಿದ್ದಾರೆ!! ಮಂಗೋಲಿಯಾದ ಪ್ರಥಮ ತೈಲ ಸಂಸ್ಕರಣಾಗಾರ ನಿರ್ಮಿಸಲು ಪ್ರಧಾನಿ ಮೋದಿ 1 ಬಿಲಿಯನ್ ಡಾಲರ್ ಸಾಲವನ್ನು ನೀಡಿದ್ದು, ಚೀನಾಕ್ಕೆ ಭಾರೀ ಆಘಾತವನ್ನುಂಟು ಮಾಡಿದ್ದಾರೆ!! ಕೆಲವರು ಅಂದುಕೊಳ್ಳಬಹುದುದು ಇದರಿಂದ ಭಾರತಕ್ಕೇನು ಲಾಭ? ಅಥವಾ ಚೀನಾಕ್ಕೇನು ಲಾಭ ಎಂದು… ಇಲ್ಲೇ ಇರುವುದು ಟ್ವಿಸ್ಟ್.. ಚೀನಾವು ಮಂಗೋಲಿಯದ ಅತಿ ದೊಡ್ಡ ವ್ಯಾಪಾರಿ ಪಾಲುದಾರ, ಮತ್ತು ಅದರ ರಫ್ತುಗಳಲ್ಲಿ ಶೇಕಡಾ 90 ರಷ್ಟು ನೆರೆ ದೇಶಕ್ಕೆ ಹೋಗುತ್ತದೆ.

ಚೀನಾವು ಮಂಗೋಲಿಯಾದಿಂದ ಆಮದು ಮಾಡಿಕೊಳ್ಳುವ ಉತ್ಪಾದನೆಗಳಿಗೆ ಹೆಚ್ಚು ಶುಲ್ಕವನ್ನು ವಿಧಿಸಿತು ಮತ್ತು ಹೆಚ್ಚುವರಿ ಸಾರಿಗೆ ವೆಚ್ಚಗಳನ್ನು ಮಂಗೋಲಿಯಾ ಮೇಲೆ ಹೇರಿತು. ಇದರಿಂದಲೇ ಚೀನಾ ಮಂಗೋಲಿಯಾದ ಸಂಬಂಧ ಹಳಸಿತು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಮೋದೀಜೀ ಮಂಗೋಲಿಯಾಕ್ಕೆ ಹತ್ತಿರವಾದರು!! ಹೀಗಾಗಿ ಅತ್ತ ಚೀನಾ ಮತ್ತು ಮಂಗೋಲಿಯಾದ ಸ್ನೇಹ ಹಳಸುತ್ತಿದ್ದಂತೆಯೇ ಇತ್ತ ಭಾರತ ಮತ್ತು ಮಂಗೋಲಿಯಾ ಹತ್ತಿರವಾಗಲು ಶುರುವಾಯಿತು!! ಶತ್ರುಗಳ ಶತ್ರು ಮಿತ್ರ ಎಂಬುದನ್ನು ಅರಿತ ಮೋದಿ ಚೀನಾಕ್ಕೆ ಶತ್ರುವಾಗುತ್ತಿದ್ದ ಮಂಗೋಲಿಯಾವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ!! ಇದರಿಂದ ಚೀನಾ ಬೆಚ್ಚಿಬಿದ್ದರುವುದಂತೂ ಖಂಡಿತ!!

Image result for modi with mongolian president

ಚೀನಾಕ್ಕೆ ದಲಾಯಿ ಲಾಮಾ ಕಂಡರೆ ಉರಿ ಉರಿ!! 2015 ರಲ್ಲಿ ಮಂಗೋಲಿಯಾಕ್ಕೆ ದಲಾಯಿ ಲಾಮಾ ಅವರ ಭೇಟಿ ನೀಡಿದ್ದರು. ಇದರಿಂದ ಈ ಎರಡೂ ದೇಶಗಳ ಸಂಬಂಧ ಹಳಸಿತು. ತನ್ನನ್ನು ದೊಡ್ಡ ರಾಷ್ಟ್ರವೆಂದು ಸೊಕ್ಕು ತೋರಿಸಿ ಚೀನಾ ಮಂಗೋಲಿಯಾದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮಂಗೋಲಿಯಾದಿಂದ ಆಮದು ಮಾಡಿಕೊಳ್ಳುವ ಉತ್ಪಾದನೆಗಳಿಗೆ ಹೆಚ್ಚು ಶುಲ್ಕವನ್ನು ವಿಧಿಸಿತು ಮತ್ತು ಹೆಚ್ಚುವರಿ ಸಾರಿಗೆ ವೆಚ್ಚಗಳನ್ನು ಮಂಗೋಲಿಯಾ ಮೇಲೆ ಹೇರಿತು. ಇದನ್ನರಿತ ಮಂಗೋಲಿಯಾದ ಅಧ್ಯಕ್ಷರು ಸಿಡಿದೆದ್ದರು. ಚೀನಾದ ಜೊತೆ ಮಾಡುತ್ತಿರುವ ವ್ಯವಹಾರದಿಂದ ತಪ್ಪಿಸಿಕೊಂಡು ಬೇರೆ ರಾಷ್ಟ್ರದ ಜೊತೆ ವ್ಯಾಪಾರ ವಹಿವಾಟು ಶುರುಮಾಡಬೇಕೆಂದು ಆಲೋಚಿಸುತ್ತಿರುವಾಗಲೇ ಪ್ರಧಾನಿ ಮೋದಿ ಮಂಗೋಲಿಯಾವನ್ನು ತನ್ನತ್ತ ಸೆಳೆದುಕೊಂಡು ಬಿಟ್ಟರು.

ತನ್ನ ಬಿಟ್ಟು ಮಂಗೋಲಿಯಾಕ್ಕೆ ಯಾರೂ ಇಲ್ಲ, ನಾನೇ ಅನಿವಾರ್ಯ ಎಂದುಕೊಂಡಿದ್ದ ಚೀನಾ ಪ್ರಧಾನಿ ಮೋದಿಯವರ ಈ ಮಾಸ್ಟರ್ ಪ್ಲ್ಯಾನ್ ಗೆ ಬೆಚ್ಚಿಬಿದ್ದಿತು. ಚೀನಾದ ಜೊತೆಗಿನ ಸಂಬಂಧ ಹಳಸಿದ ಮೇಲೆ ಮಂಗೋಲಿಯಾದ ಅಧ್ಯಕ್ಷ ಚೀನಾ ಬಿಟ್ಟು ಬೇರೆಯ ದೇಶದ ಜೊತೆ ಮಿತೃತ್ವ ಏರ್ಪಾಡು ಮಾಡಬೇಕು, ಅವರ ಜೊತೆ ವ್ಯಾಪಾರ ವಹಿವಾಟು ಮಾಡಬೇಕೆಂದು ನಿರ್ಧರಿಸಿತ್ತು. ಆಗ ಈ ಮಂಗೋಲಿಯಾ ಪ್ರಧಾನಿ ಮೋದಿಯವರ ಗಾಳಕ್ಕೆ ಬಿದ್ದು ಈಗ ಭಾರತದ ಸ್ನೇಹವನ್ನು ಬಯಸಿದ್ದಾರೆ!!

Image result for modi with china president

ಮಂಗೋಲಿಯಾ ದೇಶದಲ್ಲಿ ಚೀನೀ ಪ್ರಭಾವವನ್ನು ಮಿತಿಗೊಳಿಸಲು ಅಲ್ಲಿನ ಅಧ್ಯಕ್ಷ ಭಾರತಕ್ಕೆ ಹತ್ತಿರವಾಗುವ ಪ್ರಯತ್ನದಲ್ಲಿದ್ದಾಗಲೇ ಮೋದಿ ಸರಕಾರ ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿತು. ಶತ್ರುವಿನ ಶತ್ರು ಮಿತ್ರ ಎನ್ನುವ ಚಾಣಕ್ಯ ನೀತಿಯನ್ನು ನಿಜಾರ್ಥದಲ್ಲಿ ಅನುಸರಿಸುತ್ತಿದೆ ಮೋದಿ ಸರಕಾರ. ಈ ಮೂಲಕ ಚೀನಾದ ಪರಮ ಶತ್ರುಗಳನ್ನು ಈಗಾಗಲೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಭಾರತ, ಇದೀಗ ಮಂಗೋಲಿಯಾದಲ್ಲಿ ಪ್ರಪ್ರಥಮ ತೈಲ ಸಂಸ್ಕರಣಾಗಾರ ಸ್ಥಾಪಿಸಲು 1 ಬಿಲಿಯನ್ ಡಾಲರ್ ಸಾಲ ನೀಡಿ ಚೀನಾ ಡ್ರಾಗನ್ ಗೆ ಸೆಡ್ಡು ಹೊಡೆದಿದೆ!! ಮೋದಿಜೀ ಎಲ್ಲಿ ತನ್ನ ಚಾಣಾಕ್ಷತನವನ್ನು ಬಳಸಬೇಕೋ ಅಲ್ಲಿ ಉಪಯೋಗವನ್ನು ಮಾಡುತ್ತಾರೆ ಎಂಬುವುದಕ್ಕೆ ಇದೇ ಜ್ವಲಂತ ಸಾಕ್ಷಿ!!

Related image

ಈ ಮೊದಲು ಚೀನಾದ ಸೊಕ್ಕನ್ನು ಮುರಿಯಲು ಮೋದಿಜೀ ಚೀನಾದ ನೆಲದಲ್ಲೇ ನಿಂತು ಚೀನಾಕ್ಕೆ ಸೆಡ್ಡು ಹೊಡೆದಿದ್ದರು!! ಹೌದು ಪ್ರಧಾನಿ ನರೇಂದ್ರ ಮೋದೀಜೀಯವರು ಯಾರಿಗೂ ಹೆದರುವವರೇ ಅಲ್ಲ!! ಮಿತ್ರ ರಾಷ್ಟ್ರ ಆಗಲಿ ಶತ್ರು ರಾಷ್ಟ್ರವೇ ಆಗಲಿ ಭಾರತಕ್ಕೆ ಎರಡು ಬಗೆದರೆ ಮಾತ್ರ ಯಾರನ್ನೂ ಬಿಡೋರಲ್ಲ!! ಅದಕ್ಕೆ ತಕ್ಕ ಪ್ರತಿಫಲವನ್ನು ನೀಡಿಯೇ ತೀರುತ್ತಾರೆ!! ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದರು!! ಚೀನಾ ನೆಲದಲ್ಲಿ ನಿಂತು, ಅದೇ ನೆಲದಲ್ಲಿ ಆ ರಾಷ್ಟ್ರಕ್ಕೆ ತಪರಾಕಿ ನೀಡುವ ಮೂಲಕ ನರೇಂದ್ರ ಮೋದಿಜೀ ಎಲ್ಲರ ಗಮನ ಸೆಳೆದಿದ್ದರು ಹಾಗೂ ಭಾರತದ ದೃಢ ನಿರ್ಧಾರದ ಬಗ್ಗೆ ಸಂದೇಶ ಸಾರಿದ್ದರು!!. ಚೀನಾದ ಕಿಂಗ್ಡಾವೋದಲ್ಲಿ ನಡೆದ 18ನೇ ಶಾಂಘೈ ಸಹಕಾರ ಸಂಸ್ಥೆಯ 18ನೇ ಸಭೆಯಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು ಚೀನಾದ ಮಹತ್ತರ ಒಂದು ಪ್ರದೇಶ, ಒಂದು ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು!! ಎಸ್ಸಿಒ 8 ಸದಸ್ಯ ರಾಷ್ಟ್ರಗಳಲ್ಲಿ ಏಳು ರಾಷ್ಟ್ರಗಳು ಚೀನಾದ ಒಆರ್‍ಒಪಿ ಯೋಜನೆಗೆ ಬೆಂಬಲ ಸೂಚಿಸಿತ್ತು!! ಆದರೆ ನರೇಂದ್ರ ಮೋದಿ ಅವರು ಮಾತ್ರ ಪಾಕ್ ಆಕ್ರಮಿತ ಕಾಶ್ಮೀರ ಸೇರಿ ಭಾರತದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡದೇ ಇರುವ ಮೂಲಕ ದಿಟ್ಟತನ ಮೆರೆದಿದ್ದರು!!

Image result for modi

ಅದಲ್ಲದೆ ನರೇಂದ್ರ ಮೋದಿಜೀಯವರು ಈಗಾಗಲೇ ಚೀನಾಕ್ಕೆ ಸೆಡ್ಡುಹೊಡೆಯುವ ರೀತಿಯಲ್ಲಿಯೇ ಚಹಬಾರ್ ಬಂದರನ್ನು ನಿರ್ಮಿಸುವ ಮೂಲಕ ಕೂಡಾ ಚೀನಾವನ್ನು ಬೆಚ್ಚಿ ಬೀಳಿಸಿದ್ದರು!! ಮೋದೀಜೀ ಏನೇ ನಿರ್ಧಾರ ತೆಗೆದುಕೊಂಡರು ಸಹ ಚೀನಾ ಏನೂ ಯಾವ ರಾಷ್ಟ್ರವೂ ಬೇರೆ ಮಾತು ಆಡಲ್ಲ!! ಯಾಕೆಂದರೆ ಮೋದೀಜೀ ಆಡಳಿತ ವೈಖರಿಯೇ ಹಾಗೆ.. ಭಾರತಕ್ಕೆ ಏನಾದರೂ ಬೇರೆ ದೇಶದಿಂದ ಸ್ವಲ್ಪ ತೊಂದರೆಯಾದರೂ ಮೋದೀಜೀ ಸಹಿಸಲ್ಲ.. ಅದಕ್ಕೆ ತಕ್ಕ ಶಾಸ್ತ್ರಿ ಮಾಡಿಯೇ ಮಾಡುತ್ತಾರೆ ಎಂಬುವುದಕ್ಕೆ ಚೀನಾಕ್ಕೆ ಸೆಡ್ಡು ಹೊಡೆದ ರೀತಿಯೇ ಸಾಕ್ಷಿ!!

source: www.nationalistviews.com

  • ಪವಿತ್ರ
Tags

Related Articles

Close