ಪ್ರಚಲಿತ

ಭಾರತದ 500, 1000 ಹಳೆ ನೋಟುಗಳು ದಕ್ಷಿಣ ಆಫ್ರಿಕಾದಲ್ಲಿ ಬಳಕೆ!! ಪರಿಸರ ಹಾನಿಯಾಗುವುದನ್ನು ತಪ್ಪಿಸಲು ಆರ್ ಬಿ ಐ ಮಾಡಿದ್ದೇನು ಗೊತ್ತೇ??

ಪ್ರಧಾನಿ ನರೇಂದ್ರ ಮೋದಿಯವರು ರಾತ್ರೋ ರಾತ್ರೋ 500, 1000 ರೂಪಾಯಿ ನೋಟುಗಳೆಲ್ಲ ರದ್ದಿಯಾಗಲಿವೆ ಎಂದು ಘೋಷಿಸಿದಾಗ ಭಾರತೀಯರು ಸಂಭ್ರಮದಿಂದಲೇ ಬ್ಯಾಂಕುಗಳಲ್ಲಿ ಕ್ಯೂ ನಿಂತಿದ್ದರೆ ಕಪ್ಪುಕುಳಗಳು ಕಂಗಾಲಾಗಿ ಹೋಗಿದ್ದರು!! ಮೇರೆ ಪ್ಯಾರ್ ದೇಶ್ ವಾಸಿಯೋ.. ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಅಂದಿನ ಆ ಪುಟ್ಟ ಘೋಷಣೆ, ಭಾರತದ ಆರ್ಥಿಕತೆಯಲ್ಲಿ ಕ್ರಾಂತಿ ಎಂದರೂ ತಪ್ಪಾಗಲಿಕ್ಕಿಲ್ಲ.

ಆರಂಭದಲ್ಲಿಯೇ ಅದೆಷ್ಟೋ ಜನ ಇದನ್ನು ಸ್ವಾಗತಿಸಿದ್ದರಲ್ಲದೇ ಎಟಿಎಂಗಳಲ್ಲಿ ಕ್ಯಾಷ್ ಗಾಗಿ ಕ್ಯೂ ನಿಂತಿದ್ದರು. ಬ್ಯಾಂಕುಗಳಲ್ಲಿ ಡೆಪಾಸಿಟ್ ಮಾಡಲು ಜನ ಸಾಲುಗಟ್ಟಿದ್ದರು. ಇಷ್ಟಿದ್ದರೂ, ಕಪ್ಪುಹಣದ ವಿರುದ್ಧ ಇದು ನಿರ್ಣಾಯಕ ಸಮರ ಎಂಬ ಏಕೈಕ ಕಾರಣಕ್ಕೆ, ಅವರೆಲ್ಲ ಪ್ರಧಾನಿಗೆ ಬೆಂಬಲವಾಗಿದ್ದರು ಎನ್ನುವುದು ಹಲವಾರು ಸಮೀಕ್ಷೆಗಳಲ್ಲಿ ಇದು ವ್ಯಕ್ತವಾಗಿತ್ತು ಕೂಡಾ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 8ರ ರಾತ್ರೋ ರಾತ್ರಿ ತೆಗೆದುಕೊಂಡ ಆ ಐತಿಹಾಸಿಕ ನಿರ್ಧಾರದಿಂದ 500, 1000 ರೂಪಾಯಿ ನೋಟುಗಳೆಲ್ಲ ರದ್ದಿಯಾದವು ಎನ್ನುವ ವಿಚಾರ ಗೊತ್ತೇ ಇದೆ!! ಆದರೆ ರದ್ದಿಯಾದ ನೋಟುಗಳೆಲ್ಲವು ಏನಾದವು ಎಂಬುವುದು ಯಾರಿಗೂ ಗೊತ್ತಿಲ್ಲ!!

ಹೌದು…. ನೋಟು ನಿಷೇಧದ ನಂತರ ಹಳೆಯ 500 ಮತ್ತು 1000 ನೋಟುಗಳ ಲೆಕ್ಕ ಮುಂದುವರಿಯುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕುಗಳು 500 ಮತ್ತು 1000 ರೂಪಾಯಿಗಳ ನೋಟುಗಳೊಂದಿಗೆ ಜನರ ಮನಸ್ಸಿನಲ್ಲಿ ಒಂದು ಪ್ರಶ್ನೆಯಿದೆ. 500 ಮತ್ತು 1000 ರೂಪಾಯಿಗಳ ಹಳೆಯ ನೋಟುಗಳು ನಿಷೇಧಗೊಂಡ ಬಳಿಕ ಏನಾದವು ಎಂದು!! ಆದರೆ ನಿಷೇಧಕ್ಕೊಳಪಟ್ಟ 500 ಮತ್ತು 1000ರದ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್, ದಕ್ಷಿಣ ಆಫ್ರಿಕಾಗೆ ರವಾನೆ ಮಾಡುತ್ತಿದೆ ಎಂದು ಸುದ್ದಿಮೂಲಗಳು ತಿಳಿಸಿವೆ!!

Image result for modi

ಭಾರತದ ನಿಷೇಧಿತ ನೋಟುಗಳು ಚುನಾವಣಾ ಪ್ರಚಾರ ಕಾರ್ಯಗಳಿಗೆ ಬಳಕೆ!!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯಿದೆ ಜೂನ್ 30, 2017 ರಂದು ಬಿಡುಗಡೆಯಾದ ಆರಂಭಿಕ ಮೌಲ್ಯಮಾಪನದಲ್ಲಿ, ರಿಸರ್ವ್ ಬ್ಯಾಂಕ್ ಹಳೆಯ 500 ಮತ್ತು 1000 ರೂಪಾಯಿ ನೋಟುಗಳ ಮೌಲ್ಯವನ್ನು 15.28 ಲಕ್ಷ ಕೋಟಿ ರೂಪಾಯಿಗಳೆಂದು ಘೋಷಿಸಿದೆ. ಆದರೆ ದೈನಿಕವೊಂದರ ವರದಿ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ 2019ಕ್ಕೆ ಚುನಾವಣೆ ನಡೆಯುಲಿದ್ದು ಇದರ ಪ್ರಚಾರ ಕಾರ್ಯಗಳಿಗಾಗಿ ಹಾರ್ಡ್ ಬೋರ್ಡ್‍ಗಳನ್ನು ಬಳಸಲಾಗುತ್ತಿದೆ. ಈ ಹಾರ್ಡ್‍ಬೋರ್ಡ್‍ಗಳನ್ನು ತಯಾರಿಸಲು ಭಾರತದ ನಿಷೇಧಿತ ನೋಟುಗಳನ್ನು ಬಳಸಿಕೊಳ್ಳಲಾಗುತ್ತದೆಯಂತೆ.

ನೋಟು ನಿಷೇಧದ ಬಳಿಕ ಆರ್‍ಬಿಐಗೆ ಭಾರೀ ಪ್ರಮಾಣದ ನೋಟುಗಳು ಬಂದಿದ್ದು, ಇವುಗಳನ್ನು ಸುಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಲಿರುವ ಹಿನ್ನಲೆಯಲ್ಲಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ಸ್ ಎಂಬ ಕಂಪನಿಯನ್ನು ಆರ್ ಬಿ ಐ ಸಂಪರ್ಕಿಸಿದೆ. “ನಮ್ಮನ್ನು ಸಂಪರ್ಕಿಸಿದ ಆರ್ ಬಿ ಐಗೆ ಮೊದಲು ನೋಟಿನ ಸ್ಯಾಂಪಲ್ ನೀಡುವಂತೆ ಕೇಳಿಕೊಂಡಿದ್ದೆವು. ನಮ್ಮ ರಿಸರ್ಚ್ ತಂಡ ಈ ನೋಟುಗಳನ್ನು ಬಳಕೆ ಮಾಡುವುದನ್ನು ಕಂಡು ಹಿಡಿದಿದ್ದರು. ಅಲ್ಲಿ ನೋಟ್ ಗಳನ್ನು ಬಳಸಿ ಫ್ಲೈವುಡ್ ತಯಾರಿಸಲಾಗಿದೆ. ಈ ಪ್ಲೈವುಡ್‍ಗಳು 2019ರಲ್ಲಿ ದಕ್ಷಿಣ ಆಫ್ರಿಕಾ ಎಲೆಕ್ಷನ್ ಕೆಲಸ ಕಾರ್ಯಗಳಿಗೆ ಪೂರೈಕೆಯಾಗಲಿವೆ” ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಟಿಐ ಬಾವ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಈ ನೋಟಿನ ಚೂರುಗಳನ್ನು ಹೆಚ್ಚಿನ ಶಾಖದಲ್ಲಿ ಕುದಿಸಲಾಗುತ್ತದೆಯಲ್ಲದೇ ಆ ಬಳಿಕ ಅದನ್ನು ಹಿಟ್ಟಿನ ರೂಪದೊಂದಿಗೆ ಪ್ಲೈವುಡ್ ತಯಾರಿಸಲಾಗಿದೆ. ಸದ್ಯ ಈ ಬೋರ್ಡ್‍ಗಳಿಗೆ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಬೇಡಿಕೆಯಿದೆ ಎಂದು ಬಾವ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈವರೆಗೆ 750 ಟನ್ ನಿಷೇಧಿತ ನೋಟುಗಳನ್ನು ಪಡೆಯಲಾಗಿದ್ದು ಇವುಗಳನ್ನು ಬೋರ್ಡ್‍ಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ!!

ಹಳೆಯ ನೋಟುಗಳು ಹೀಗೆ ನಾಶವಾಗುತ್ತಿವೆ ಎಂದ ಆರ್ ಬಿ ಐ!!

ಜೂನ್ 30, 2017 ರಂದು ಬಿಡುಗಡೆಯಾದ ಆರಂಭಿಕ ಮೌಲ್ಯಮಾಪನದಲ್ಲಿ, ರಿಸರ್ವ್ ಬ್ಯಾಂಕ್ ಹಳೆಯ 500 ಮತ್ತು 1000 ರೂಪಾಯಿ ನೋಟುಗಳ ಮೌಲ್ಯವನ್ನು 15.28 ಲಕ್ಷ ಕೋಟಿ ರೂಪಾಯಿಗಳೆಂದು ಘೋಷಿಸಿದೆ. ಆದರೆ ಈ ಬಗ್ಗೆ ಆರ್.ಬಿ.ಐ ಗೆ ಉತ್ತರಿಸುತ್ತಾ ಆರ್.ಬಿ.ಐ, “500 ಮತ್ತು 1000 ಹಳೆಯ ನೋಟುಗಳನ್ನು ಮೊದಲಿಗೆ ಪರಿಗಣಿಸಲಾಗುತ್ತದೆ, ನಂತರ ಅವರ ನಿಜವಾದ ನಕಲಿ ಪರಿಶೀಲನೆ ಮಾಡಲಾಗುತ್ತದೆ. ಇದರ ನಂತರ ಈ ನೋಟುಗಳನ್ನು ಆರ್.ಬಿ.ಐ ನ ವಿಭಿನ್ನ ಶಾಖೆಗಳಲ್ಲಿ ಯಂತ್ರಗಳಿಗೆ ಹಾಕುವ ಮೂಲಕ ಅವುಗಳನ್ನು ತೆಗೆದು ಹಾಕಲಾಗುತ್ತದೆ ಎಂದು ವಿವರಿಸಿದೆ.

Image result for RBI

ಅಷ್ಟೇ ಅಲ್ಲದೇ ಈ ರಿಸರ್ವ್ ಬ್ಯಾಂಕ್ ಪ್ರಕಾರ, ಈ ಕಟ್ ನೋಟುಗಳನ್ನು ಚದರ ಇಟ್ಟಿಗೆ ಗಾತ್ರಕ್ಕೆ ಬದಲಾಯಿಸಿ ಅವುಗಳನ್ನು ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ರಿಸರ್ವ್ ಬ್ಯಾಂಕ್ ಹಳೆ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ. ಹಾಗೆಯೇ ಈ ನೋಟುಗಳನ್ನು ಉಪಯೋಗಿಸಿಕೊಂಡು ಹೊಸ ನೋಟುಗಳಾಗಿ ಬದಲಾವಣೆಯನ್ನೂ ಮಾಡಲಾಗುವುದಿಲ್ಲ ಎಂದು ತಿಳಿಸಿದೆ!!

ಆದರೆ ದೈನಿಕವೊಂದರ ವರದಿ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ 2019ಕ್ಕೆ ಚುನಾವಣೆ ನಡೆಯುಲಿದ್ದು ಇದರ ಪ್ರಚಾರ ಕಾರ್ಯಗಳಿಗಾಗಿ ಹಾರ್ಡ್ ಬೋರ್ಡ್‍ಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದು, ಈ ಹಾರ್ಡ್‍ಬೋರ್ಡ್‍ಗಳನ್ನು ತಯಾರಿಸಲು ಭಾರತದ ನಿಷೇಧಿತ ನೋಟುಗಳನ್ನು ಬಳಸಿಕೊಳ್ಳಲಾಗುತ್ತದೆ ಎನ್ನುವುದು ತಿಳಿದು ಬಂದಿದೆ!! ಒಟ್ಟಿನಲ್ಲಿ ಹಳೆ ನೋಟುಗಳನ್ನೇ ಮರುಬಳಕೆ ಮಾಡುತ್ತಿದೆ ಎಂದು ಬೊಬ್ಬಿರಿಯುವವರಿಗೆ ಹಳೆ ನೋಟುಗಳು ಏನಾಗುತ್ತಿವೆ ಎನ್ನುವುದು ಈ ಮೂಲಕ ತಿಳಿದು ಬರಲಿದೆ!!

ಅಷ್ಟೇ ಅಲ್ಲದೇ ನಿಷೇಧಿತ ನೋಟುಗಳನ್ನು ಸುಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಲಿದೆ ಎನ್ನುವ ಹಿತ ದೃಷ್ಟಿಯಿಂದ ವೆಸ್ಟರ್ನ್ ಇಂಡಿಯಾ ಪ್ಲೈವುಡ್ಸ್ ಎಂಬ ಕಂಪನಿಯನ್ನು ಆರ್ ಬಿ ಐ ಸಂಪರ್ಕಿಸಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!

ಮೂಲ: http://indianexpress.com/article/india/how-indias-demonetised-currency-notes-are-making-way-to-south-african-election-campaign-4926354/

http://zeenews.india.com/kannada/india/where-are-the-rs-500-and-1000-old-notes-4295

 

– ಅಲೋಖಾ

Tags

Related Articles

Close