ಪ್ರಚಲಿತ

ಭಾರತವನ್ನು ಕೊಂಡಾಡಿದ ಇರಾನ್ ಅಧ್ಯಕ್ಷ!! 130 ಕೋಟಿ ಜನಸಂಖ್ಯೆಯಿರುವ ಭಾರತಕ್ಕೆ ವಿಟೋ ಹಕ್ಕು ನೀಡಬೇಕು ಎಂದು ಕರೆ ನೀಡಿದ್ದಾದರೂ ಯಾಕೆ ಗೊತ್ತೇ?!

ಇತ್ತೀಚೆಗಷ್ಟೇ ಭಾರತಕ್ಕೆ ಬೇಟಿ ನೀಡಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಭಾರತವನ್ನು ಕೊಂಡಾಡಿದ್ದಲ್ಲದೇ, “ಭಿನ್ನ ಧಾರ್ಮಿಕ ಮತ್ತು ಜನಾಂಗೀಯ ಜನರ ಮಧ್ಯೆ ಪರಸ್ಪರ ಸಹಕಾರ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿರುವ ಭಾರತವನ್ನು ನೋಡಿ ಷಿಯಾ ಮತ್ತು ಸುನ್ನಿಗಳು ಕಲಿಯಬೇಕು” ಎಂದು ಹೇಳಿದ್ದರು. ಆದರೆ ಇದೀಗ ಭಾರತವು ಶತಕೋಟಿಗೂ ಮಿಕ್ಕಿದ ಶಾಂತಿ ಪ್ರಿಯ ಜನರಿರುವ ದೇಶವಾಗಿದ್ದು, ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಟೋ ಹಕ್ಕು ನೀಡಬೇಕು ಎಂದು ಕರೆ ನೀಡಿದ್ದಾರೆ!!

ಹೌದು…. ಮೂರು ದಿನಗಳ ಭಾರತ ಭೇಟಿಗೆ ಬಂದಿರುವ ಹಸನ್ ರೌಹಾನಿ ಹೈದರಾಬಾದ್ ನಲ್ಲಿ ನಡೆದ ಇಸ್ಲಾಂ ಮುಖಂಡರ ಮತ್ತು ಶಾಲೆ ಕಾಲೇಜು ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿ, ಷಿಯಾ ಸುನ್ನಿಗಳು ಜಗಳವನ್ನು ಬಿಟ್ಟು ನಾನಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬೇಕು. ಭಾರತ ಸಹಕಾರ, ಸಹಬಾಳ್ವೆಯ ಪುಣ್ಯತಾಣವಿದ್ದಂತೆ, ಇದು ಹಲವು ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವುದು ಭಾರತದ ಹೆಮ್ಮೆ ಎಂದು ಹೇಳಿದ್ದರು.

ಷಿಯಾ, ಸುನ್ನಿ, ಸಿಖ್ ಮತ್ತೀತರ ಧರ್ಮದವರು ಭಾರತದಲ್ಲಿ ಭಾವೈಕ್ಯದಿಂದ ಬಾಳುತ್ತಿದ್ದಾರೆ. ಶಾಂತಿ, ಸೌಹಾರ್ದತೆಗೆ ಭಾರತ ಸಾಕ್ಷಿಯಾಗಲಿದೆ ಎಂದು ಹೇಳಿರುವ ಇವರು ಇರಾನ್ ನಲ್ಲಿ ಉಂಟಾಗಿರುವ ಜನಾಂಗೀಯ ದ್ವೇಷಕ್ಕೆ ಭಾರತ ಸೇರಿ ಎಲ್ಲ ರಾಷ್ಟ್ರಗಳು ಮದ್ದು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, ‘130 ಕೋಟಿ ಜನಸಂಖ್ಯೆಯಿರುವ ಭಾರತಕ್ಕೆ ಏಕೆ ವೀಟೋ ಹಕ್ಕಿಲ್ಲ ಎಂದು ಪ್ರಶ್ನಿಸಿದ್ದಾರೆ!!

ಭಾರತ ಮತ್ತು ಇರಾನ್ ಐತಿಹಾಸಿಕ ಸಾಂಸ್ಕೃತಿಕ ಸಂಬಂಧವನ್ನು ಹೊಂದಿದೆ ಎಂದು ಹೇಳಿರುವ ಇರಾನ್ ಅಧ್ಯಕ್ಷ ಹಸನ್ ರೊಹಾನಿ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಟೋ ಹಕ್ಕು ನೀಡಬೇಕು ಎಂದು ಕರೆ ನೀಡಿದ್ದಾರೆ. ಭಾರತವು ಶತಕೋಟಿಗೂ ಮಿಕ್ಕಿದ ಶಾಂತಿ ಪ್ರಿಯ ಜನರಿರುವ ದೇಶವಾಗಿದೆ ಎಂದು ವರ್ಣಿಸಿರುವ ಇವರು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ಇರಾನ್ ಸಕಲ ರೀತಿಯಲ್ಲಿ ಬೆಂಬಲಿಸುವುದಾಗಿ ರೊಹಾನಿ ಹೇಳಿದರು.

ದಿಲ್ಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ರೊಹಾನಿ “ಒಂದು ಶತಕೋಟಿಗೂ ಮಿಕ್ಕಿದ ಜನಸಂಖ್ಯೆ ಇರುವ ಭಾರತಕ್ಕೆ ಇನ್ನೂ ಯಾಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಟೋ ಹಕ್ಕಿಲ್ಲ’ ಎಂದು ಅಚ್ಚರಿ ಪಟ್ಟರು. ಅಣು ಬಾಂಬ್ ಹೊಂದಿರುವ ವಿಶ್ವದ ಐದು ದೊಡ್ಡ ದೇಶಗಳಿಗೆ ಮಾತ್ರವೇ ವಿಶ್ವಸಂಸ್ಥೆಯಲ್ಲಿ ವಿಟೋ ಹಕ್ಕು ನೀಡಲಾಗಿರುವುದು ಏಕೆ ಎಂದವರು ಪ್ರಶ್ನಿಸಿದರು.

ಜಾಗತಿಕ ಶಕ್ತಿಗಳ ಜತೆ ತಾನು ಸಹಿ ಮಾಡಿದ ಪರಮಾಣು ಒಪ್ಪಂದದ ಷರತ್ತುಗಳಿಗೆ ‘ಕೊನೆಯುಸಿರು ಇರುವ ವರೆಗೂ’ ಬದ್ಧವಾಗಿರುವುದಾಗಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅಮೆರಿಕ ಈ ಒಪ್ಪಂದವನ್ನು ಮುರಿದರೆ ಅದು ‘ಪಶ್ಚಾತ್ತಾಪ’ ಪಡಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿದೆ. ಅಷ್ಟೇ ಅಲ್ಲದೇ, ಈ ಒಪ್ಪಂದದಿಂದ ಹೊರಬರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರೌಹಾನಿ ಈ ಹೇಳಿಕೆ ನೀಡಿದ್ದು, ಒಪ್ಪಂದದ ಮರುಪರಿಶೀಲನೆ ಅಗತ್ಯ ಎಂದು ಟ್ರಂಪ್ ಒತ್ತಾಯಿಸಿದ್ದರು.

ವಿದೇಶಾಂಗ ನೀತಿಯಲ್ಲಿ ಮಿಲಿಟರಿ ಶಕ್ತಿಗಿಂತ ನೈತಿಕ ಮೌಲ್ಯಗಳೇ ಮುಖ್ಯ ಎಂದು ಹೇಳಿರುವ ಇವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತುತ ವೀಟೋ ಹಕ್ಕುಗಳು ಅಮೆರಿಕ, ಯುನೈಟೆಡ್ ಕಿಂಗ್‍ಡಂ, ಚೀನಾ, ಫ್ರಾನ್ಸ್ ಮತ್ತು ರಷ್ಯಾಗೆ ಮಾತ್ರ ಇವೆ.

ಭಾರತಕ್ಕೆ ಭೇಟಿ ನೀಡಿರುವ ಇರಾನ್ ಅಧ್ಯಕ್ಷ ರೌಹಾನಿ ಅವರು ದಿಲ್ಲಿಯಲ್ಲಿ ‘ಇರಾನ್ ಇಸ್ಲಾಮಿಕ್ ಗಣರಾಜ್ಯದ ವಿದೇಶಾಂಗ ನೀತಿಯ ಆದ್ಯತೆಗಳು’ ಎಂಬ ವಿಚಾರಸಂಕಿರಣದಲ್ಲಿ ಮಾತನಾಡಿದ್ದ ಸಂದರ್ಭದಲ್ಲಿ, ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮರುವಿಮರ್ಶೆ ಮಾಡಬೇಕೆಂಬ ಅಧ್ಯಕ್ಷ ಟ್ರಂಪ್ ‘ಅಹಂಕಾರ’ ಒಪ್ಪಲಾಗದು ಎಂದು ಅವರು ಪ್ರತಿಪಾದಿಸಿದರು. ಒಬಾಮಾ ಆಡಳಿತದ ವಿದೇಶಾಂಗ ನೀತಿಯ ಭಾಗವಾಗಿ ಇರಾನ್ ಜತೆ ಅಮೆರಿಕದ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 2015ರಲ್ಲಿ ಇರಾನ್ ಮತ್ತು ಇತರ ಆರು ಜಾಗತಿಕ ಶಕ್ತಿಗಳಾದ ಅಮೆರಿಕ, ಯುಕೆ, ರಷ್ಯಾ, ಫ್ರಾನ್ಸ್, ಚೀನಾ ಮತ್ತು ಜರ್ಮನಿ ಜತೆ ಈ ಒಪ್ಪಂದವೇರ್ಪಟ್ಟಿತ್ತು. ಆ ಬಳಿಕ ಇರಾನ್ ಮೇಲಿನ ದಿಗ್ಬಂಧನಗಳು ತೆರವಾಗಿದ್ದವು.

ರೌಹಾನಿ ಜತೆಗಿನ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಈ ಒಪ್ಪಂದ ಪೂರ್ಣಪ್ರಮಾಣದಲ್ಲಿ ಯಥಾವತ್ ಜಾರಿಗೆ ಬರಬೇಕು ಎಂದು ದೃಢ ಬೆಂಬಲ ವ್ಯಕ್ತಪಡಿಸಿದ್ದರು.

ಇರಾನ್‍ನಲ್ಲಿ 550 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಚಾಬಹಾರ್ ಬಂದರಿನ ಪ್ರಥಮ ಹಂತದಲ್ಲಿ ಭಾರತ ಶೀಘ್ರ ವಿಧ್ಯುಕ್ತವಾಗಿ ಕಾರ್ಯಾಚರಣೆ ಆರಂಭಿಸಲಿದ್ದು, ಇರಾನ್‍ನ ಬಂದರು ಮತ್ತು ಸಾಗರ ವ್ಯವಹಾರಗಳ ಇಲಾಖೆ 18 ತಿಂಗಳ ಅವಧಿಗೆ ಈ ಬಂದರನ್ನು ಭಾರತಕ್ಕೆ ಗುತ್ತಿಗೆ ನೀಡಿದೆ. ಬಂದರು ಸಚಿವ ನಿತಿನ್ ಗಡ್ಕರಿ ಮತ್ತು ಇರಾನ್ ಸಾರಿಗೆ ಸಚಿವ ಅಬ್ಬಾಸ್ ಅಖುಂಡಿ ಶನಿವಾರ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಚಾಬಹಾರ್ ಬಂದರು ಭಾರತ, ಇರಾನ್ ಮತ್ತು ಅಫ್ಗಾನಿಸ್ತಾನ ವಾಣಿಜ್ಯ ಮಾರ್ಗದ ಪ್ರಮುಖ ಕೊಂಡಿಯಾಗಿದೆ. ಇದರ ಜತೆಯಲ್ಲೇ ಮಧ್ಯಪ್ರಾಚ್ಯ ದೇಶಗಳ ಜತೆ ಭಾರತದ ವಾಣಿಜ್ಯ ವಹಿವಾಟು ವೃದ್ಧಿಸಲು ಈ ಮಾರ್ಗ ನೆರವಾಗಲಿದೆ.

ಭದ್ರತೆ, ವಾಣಿಜ್ಯ ಮತ್ತು ಇಂಧನ, ಎರಡು ಹಂತದ ತೆರಿಗೆ ತಡೆ ಸೇರಿದಂತೆ ಒಂಬತ್ತು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಇರಾನ್ ಶನಿವಾರ ಸಹಿ ಹಾಕಿದ್ದು, ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚಿಸಿದರು. ಗಡಿಪಾರು ಒಪ್ಪಂದ ಪರಿಷ್ಕರಣೆ ಹಾಗೂ ವೀಸಾ ಪ್ರಕ್ರಿಯೆ ಸರಳಗೊಳಿಸಲು ಉಭಯ ನಾಯಕರು ಒಮ್ಮತಿ ಸೂಚಿಸಿದ್ದಾರೆ.

ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸವನ್ನು ಖಂಡಿಸುವ ಬುದ್ದೀಜೀವಿಗಳು, ವಿದೇಶಿ ಪ್ರವಾಸದಿಂದಾಗಿ ದೇಶಕ್ಕೆ ಆಗುವ ಲಾಭದ ಬಗ್ಗೆ ಮಾತಾನಾಡುವುದೇ ಇಲ್ಲ!! ನರೇಂದ್ರ ಮೋದಿಯವರು ಗದ್ದುಗೆ ಏರುವ ಮೊದಲು ಭಾರತವು ಎಲ್ಲಾ ಕ್ಷೇತ್ರದಲ್ಲಿಯೂ ಹಿಂದುಳಿದ ರಾಷ್ಟ್ರವಾಗಿದ್ದು, ಎಲ್ಲಾ ದೇಶಗಳು ಭಾರತವನ್ನು ಕಡೆಗಾಣಿಸುತ್ತಾ ಮೂಲೆಗುಂಪು ಮಾಡಿತ್ತು!! ಆದರೆ ಇದೀಗ ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದಾಗಿ ಈಡೀ ವಿಶ್ವವೇ ಕೊಂಡಾಡುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಬೇರೋಂದಿಲ್ಲ!!

– ಅಲೋಖಾ

 

Tags

Related Articles

Close