ಪ್ರಚಲಿತ

ಭಾರತದ ಗಡಿ‌ ದಾಟಿದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ: ಈಗ ಭಾರತವೇ ಜಗತ್ತಿಗೆ ಮಾದರಿ!

ಕೈಯಲ್ಲಿ ನಗದು ಹಣ ಇರದಿದ್ದರೂ ಈಗ ವ್ಯಾಪಾರ, ವ್ಯವಹಾರಗಳನ್ನು ಡಿಜಿಟಲ್ ಮೂಲಕ ಪಾವತಿ ಮಾಡುವುದು ಬಲು ಸುಲಭ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಡಿಜಿಟಲೈಸ್ಡ್ ಇಂಡಿಯಾ ಉಪ ಕ್ರಮ ದಿಂದ ಬೀದಿ ಬದಿ ವ್ಯಾಪಾರಿಗಳೂ, ಸಾಮಾನ್ಯರಲ್ಲಿ ಸಾಮಾನ್ಯರು ಸಹ ಡಿಜಿಟಲ್ ಪಾವತಿ ವ್ಯವಸ್ಥೆಗೆ ಒಗ್ಗಿಕೊಂಡದ್ದು ಎಲ್ಲರಿಗೂ ತಿಳಿದಿದೆ.

ದೊಡ್ಡ ಮೊತ್ತದ ಮೌಲ್ಯವನ್ನು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಕಳುಹಿಸುವುದಕ್ಕೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮ ಸಹಕಾರಿಯೇ ಸರಿ. ಈ ವರೆಗೆ ಈ ವ್ಯವಸ್ಥೆಯಡಿ ಕೇವಲ ಭಾರತದೊಳಗಿನ ವಹಿವಾಟು ಮಾತ್ರವೇ ನಡೆಯುತ್ತಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ ಸಿಂಗಾಪುರದ ಜೊತೆಗೂ ಭಾರತ ಆನ್‌ಲೈನ್ ಮೂಲಕ ಹಣದ ವಹಿವಾಟು ನಡೆಸುವುದಕ್ಕೆ ಅನುಕೂಲವಾಗುವಂತೆ ಮಹತ್ವದ ಗಡಿಯಾಚೆಗಿನ ಸಂಪರ್ಕ ಒಂದು ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್ ಅವರು ನಿನ್ನೆಯಷ್ಟೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಮತ್ತು ಸಿಂಗಾಪುರದ ಪೇ ನೌ ನಡುವಿನ ಗಡಿ ದಾಟಿದ ಸಂಪರ್ಕ ವ್ಯವಸ್ಥೆಗೆ ಸಾಕ್ಷಿ ರಾಗಿದ್ದಾರೆ. ಭಾರತದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಅವರು ಈ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.

ಈ ಉಪಕ್ರಮವು ಸಿಂಗಾಪುರದಲ್ಲಿರುವ ಭಾರತೀಯರಿಗೆ ಮತ್ತು ಭಾರತದಲ್ಲಿರುವ ಸಿಂಗಾಪುರದ ಜನರಿಗೆ ಗಡಿಯಾಚೆಗಿನ ವ್ಯವಹಾರಗಳನ್ನು ಸುಗಮಗೊಳಿಸಲು ಸಹಕಾರಿಯಾಗಲಿದೆ. ತ್ವರಿತವಾಗಿ ಆರ್ಥಿಕ ವಿನಿಮಯಕ್ಕೂ ಈ ವ್ಯವಸ್ಥೆ ಸಹಕಾರಿಯಾಗಲಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ದೇಶ ಆರ್ಥಿಕವಾಗಿ ಸಶಕ್ತವಾಗಿರುವುದು ಮಾತ್ರವಲ್ಲದೆ, ಡಿಜಿಟಲೀಕರಣವಾಗುವ ಮೂಲಕ ವಹಿವಾಟುಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸುವುದಕ್ಕೂ ಅನುಕೂಲಕಾರಿಯಾಗಿದೆ. ಹಾಗೆಯೇ ಸಾಮಾನ್ಯ ರಲ್ಲಿ ಸಾಮಾನ್ಯರಿಗೂ ಇಂತಹ ಡಿಜಿಟಲ್ ವ್ಯವಸ್ಥೆ ಹೆಚ್ಚು ಆಪ್ತವಾಗಿದೆ ಎನ್ನುವುದರಲ್ಲಿಯೂ ಸಂದೇಹವಿಲ್ಲ.

Tags

Related Articles

Close