ಪ್ರಚಲಿತ

ಇದು ಭಾರತ ಅಲ್ಲ.. ಪಂಜಾಬ್.. ಪಂಜಾಬ್‌ನಲ್ಲೂ ಆರಂಭವಾಯ್ತ ಭಾರತ ವಿರೋಧಿ ನಡೆ..

ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಭಾರತದ್ದೇ ಭೂಭಾಗ ಹೌದೋ ಅಲ್ಲವೋ ಎನ್ನುವಂತಹ ಪರಿಸ್ಥಿತಿ ನಮ್ಮ ದೇಶದಲ್ಲಿತ್ತು. ಆದರೆ ಪ್ರಧಾನಿ ಮೋದಿ ಅವರು ಆರ್ಟಿಕಲ್ ೩೭೦ ಅನ್ನು ರದ್ದು ಮಾಡಿದ ಬಳಿಕ ಜಮ್ಮು ಕಾಶ್ಮೀರ ಭಾರತಕ್ಕೆಯೇ ‌ಸೇರಿದ್ದು ಎಂಬಂತೆ ಅಭೂತಪೂರ್ವ ಬದಲಾವಣೆಗೆ ತೆರೆದುಕೊಂಡಿದ್ದು ನಮ್ಮೆಲ್ಲರಿಗೂ ತಿಳಿದಿದೆ.

ಇದೀಗ ಪಂಜಾಬ್ ಭಾರತಕ್ಕೆ ಸೇರಿದ್ದೋ, ಅಲ್ಲವೋ ಎಂಬ ಜಿಜ್ಞಾಸೆ ನೀಡುವಂತಹ ಘಟನೆಯೊಂದು ನಡೆದಿದೆ‌. ಪಂಜಾಬ್‌ನಲ್ಲಿ ಬೃಂದನ್‌ವಾಲೆ ಹತ್ಯೆ ಬಳಿಕ ತಣ್ಣಗಾಗಿದ್ದ ಖಲಿಸ್ತಾನಿ ಹೋರಾಟ, ಕೇಂದ್ರ ಸರ್ಕಾರ ರೈತ ಪರ ಕಾಯ್ದೆಗಳನ್ನು ಜಾರಿಗೆ ತಂದಾಗ ರೈತ ಪ್ರತಿಭಟನೆ ನೆಪದಲ್ಲಿ ಮತ್ತೆ ವೈಲೆಂಟ್ ಆಗಿ ಸಮಾಜದ ಶಾಂತಿ ಕೂಡಿತ್ತು. ಈ ಹೋರಾಟಕ್ಕೆ ಅಮೃತ್‌ಪಾಲ್ ಸಿಂಗ್ ಸೇರಿಕೊಂಡ ಬಳಿಕ ಖಲಿಸ್ಥಾನಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು ಎಲ್ಲರಿಗೂ ಗೊತ್ತು. ಇದೀಗ ಪಂಜಾಬ್‌ನಲ್ಲಿ ಭಾರತಕ್ಕೆ ಅವಮಾನ ಮಾಡುವಂತಹ ಘಟನೆಯೊಂದು ನಡೆದಿದ್ದು, ಈ ಘಟನೆ ಪಂಜಾಬ್ ಭಾರತಕ್ಕೆ ಸೇರಿದ್ದೋ, ಅಲ್ಲವೋ? ಎಂಬ ಸಂದೇಹವನ್ನು ಸೃಷ್ಟಿಸಿರುವುದು ಸುಳ್ಳಲ್ಲ.

ಪಂಜಾಬ್‌‌ನ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭಾರತದ ತ್ರಿವರ್ಣ ಧ್ವಜದ ಬಣ್ಣವನ್ನು ಮುಖಕ್ಕೆ ಬಳಸಿದ ಯುವತಿಯೊಬ್ಬಳಿಗೆ ‘ಇದು ಪಂಜಾಬ್, ಭಾರತ ಅಲ್ಲ’ ಎಂದು ಹೇಳುವ ಮೂಲಕ ಪ್ರವೇಶ ನಿರಾಕರಿಸಲಾಗಿದೆ. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೋಲ್ಡನ್ ಟೆಂಪಲ್‌ನ ಸಿಬ್ಬಂದಿ ಮೇಲೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಸಹ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಯುವತಿಯೂ ಆಕ್ರೋಶಭರಿತಳಾಗಿದ್ದಾಳೆ. ಹಾಗೆಯೇ ಆಕೆಯ ಪರ ವ್ಯಕ್ತಿಯೊಬ್ಬರು ಸಿಬ್ಬಂದಿ ಜೊತೆ ಅವರ ಈ ನಡೆಗೆ ಕಾರಣವೇನು ಎಂಬುದಾಗಿ ಪ್ರಶ್ನಿಸಿದ್ದು, ಈ ವೇಳೆ ಆಕೆ ಮುಖದಲ್ಲಿ ತ್ರಿವರ್ಣ ಧ್ವಜದ ಬಣ್ಣವನ್ನು ಹಚ್ಚಿಕೊಂಡಿದ್ದಕ್ಕಾಗಿ ಪ್ರವೇಶ ನಿರಾಕರಿಸಲಾಗಿದೆ ಎಂದು ಸಿಬ್ಬಂದಿ ಬಾಲಿಷ ಉತ್ತರ ನೀಡಿದ್ದಾನೆ. ಆ ಸಂದರ್ಭದಲ್ಲಿ ಯುವತಿ ಹಾಗೂ ಆಕೆಯ ಪರ ಮಾತನಾಡಿದ ವ್ಯಕ್ತಿ ‘ಪಂಜಾಬ್ ಇರುವುದು ಭಾರತದಲ್ಲಿಯೇ’ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಪಂಜಾಬ್ ಭಾರತದಲ್ಲಿಲ್ಲ, ಎಂದು ಅಸಂಬದ್ಧ ಮಾತುಗಳನ್ನಾಡಿ ಕ್ಯಾಮೆರಾ ಕಸಿದುಕೊಳ್ಳುವುದಕ್ಕೂ ಪ್ರಯತ್ನ ಮಾಡಿರುವುದಾಗಿ ತಿಳಿದುಬಂದಿದೆ.

ಖಲಿಸ್ಥಾನಿ ಹೋರಾಟ ತೀವ್ರಗೊಂಡ ಬಳಿಕ ಪಂಜಾಬ್‌ನಲ್ಲಿಯೂ ಭಾರತದ ವಿರೋಧಿ ಕೃತ್ಯಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿಯೇ ಸರಿ.

Tags

Related Articles

Close