ಪ್ರಚಲಿತ

ಮುಸ್ಲಿಮರ ಬಣ್ಣ ಹಸಿರಲ್ಲ, ಮುಸ್ಲಿಮರ ಚಿಹ್ನೆ ಅರ್ಧಚಂದ್ರ-ನಕ್ಷತ್ರವಲ್ಲ ಹಾಗಾದರೆ ಮುಸ್ಲಿಮರ ಧಾರ್ಮಿಕ ಚಿಹ್ನೆಗಳಾವುವು? ಮುಸ್ಲಿಂ ಮುಖಂಡನಿಂದಲೇ ಸ್ಫೋಟಕ ಮಾಹಿತಿ ಬಹಿರಂಗ!!

ಮದರಸಾ ಶಿಕ್ಷಣವನ್ನು ಪಡೆಯುತ್ತಿರುವ ಅಸಂಖ್ಯಾತ ಮುಸಲ್ಮಾನರು ತಮ್ಮ ಮದರಸಾ ಶಿಕ್ಷಣಗಳನ್ನೇ ತಿರುಚಿ ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ಹೇಳುವ ಮೂಲಕ ಕಟ್ಟರ್ ಮುಸಲ್ಮಾನರ ಹಾಗು ಇಸ್ಲಾಮಿಕ್ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು…. ಇಸ್ಲಾಮಿನ ವಿವಾದಾತ್ಮಕ ನಾಯಕನೆಂದೇ ಗುರುತಿಸಲಾಗುತ್ತಿರುವ ವಾಸೀಂ ರಿಜ್ವಿ ಪ್ರತಿ ಬಾರಿಯೂ ಅಯೋಧ್ಯೆ ರಾಮ ಮಂದಿರದ ವಿಚಾರವಾಗಿ ಹಿಂದೂಗಳ ಪರ ನಿಲ್ಲುತ್ತಾ ಸಾಮರಸ್ಯ ಕಾಪಾಡಲು ಮುಂದಾಗುತ್ತಿರುವ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಇದೀಗ ಇಸ್ಲಾಮಿಕ್ ಧ್ವಜದಲ್ಲಿರುವ ಹಸಿರು ಧ್ವಜ ಹಾಗು ಅದರಲ್ಲಿನ ಅರ್ಧ ಚಂದ್ರವಿರುವ ಚಿತ್ರ ಮುಸಲ್ಮಾನರದ್ದಲ್ಲ ಬದಲಾಗಿ ಅದು ಪಾಕಿಸ್ತಾನದ ಮುಸ್ಲಿಂ ಲೀಗಿನ ಧ್ವಜವಾಗಿದೆ ಎನ್ನುವ ಮೂಲಕ ಸುದ್ದಿಯಾಗಿದ್ದಾರೆ!!

ಭಾರತದಲ್ಲಿ ಮುಸ್ಲಿಂ ಮತಾಂಧ ಆಡಳಿತಗಾರರ ಅಟ್ಟಹಾಸಕ್ಕೆ ಬಲಿಯಾಗಿರುವ ಹಿಂದೂ ದೇವಾಲಯಗಳನ್ನು ಒಡೆದು ಕಟ್ಟಿರುವ ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಿ ಎಂದು ವಾಸೀಂ ರಿಜ್ವಿ ಈಗಾಗಲೇ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೇ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವನ್ನು ವಿರೋಧಿಸುವವರು ಮತ್ತು ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಬೇಕು ಎಂದು ಯಾರು ಆಗ್ರಹಿಸುತ್ತಾರೋ ಅಂತಹ ಮೂಲಭೂತವಾದಿ ಮುಸ್ಲಿಮರು ಪಾಕಿಸ್ತಾನಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಹೋಗಲಿ. ಅಂತಹ ಮುಸ್ಲಿಮರಿಗೆ ಭಾರತದಲ್ಲಿ ಅವಕಾಶ ಇಲ್ಲ” ಎನ್ನುವ ಮೂಲಕ ಕಟ್ಟರ್ ಮುಸಲ್ಮಾನರ ಆಕ್ರೋಶಕ್ಕೆ ತುತ್ತಾಗಿದ್ದರು.

ಆದರೆ ಇದೀಗ ರಿಜ್ವಿಯವರ ಟಾರ್ಗೇಟ್ ಇಸ್ಲಾಮಿಕ್ ಧ್ವಜವಾಗಿದ್ದು, ಅದು ಮುಸಲ್ಮಾನರದ್ದಲ್ಲ ಬದಲಾಗಿ ಪಾಕಿಸ್ತಾನದ ಮುಸ್ಲಿಂ ಲೀಗಿನ ಧ್ವಜವಾಗಿದೆ ಎಂದು ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದ್ದಾರೆ. ತಮ್ಮ ಅರ್ಜಿಯಲ್ಲಿ ಇಂತಹ ಶತ್ರು ರಾಷ್ಟ್ರದ ಧ್ವಜವನ್ನು ಹಾರಿಸುವ ಜಾಗಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ಸುಪ್ರಿಂಕೋರ್ಟಿಗೆ ಸೂಚನೆ ನೀಡಿ ಎನ್ನುವ ಅರ್ಜಿಯೊಂದನ್ನು ಹಾಕಿದ್ದಾರೆ. ಹಸಿರು ಧ್ವಜ ಮುಸ್ಲಿಂ ಲೀಗಿನದ್ದಾಗಿದ್ದು ಇದು 1946 ರಲ್ಲಿಯೇ ಭಾರತದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ದೇಶವನ್ನು ತುಂಡರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಮುಸ್ಲಿಂ ಲೀಗ್ ಕೂಡ ಹೋರಾಡಿ ಭಾರತ ಪಾಕಿಸ್ತಾನ ಇಬ್ಭಾಗವಾಗುವಂತೆ ಮಾಡಿತ್ತು.

ಅಷ್ಟೇ ಅಲ್ಲದೇ, ಪಾಕಿಸ್ತಾನವನ್ನು ಭಾರತದಿಂದ ಬೇರ್ಪಡಿಸಿದ ನಂತರ 1947 ರಲ್ಲಿ ಪಾಕಿಸ್ತಾನ ತನ್ನ ಪ್ರತ್ಯೇಕ ಧ್ವಜವನ್ನು ರೂಪಿಸಿ ಹಸಿರು ಬಣ್ಣದ ಹಾಗು ಅರ್ಧ ಚಂದ್ರ, ನಕ್ಷತ್ರವಿರುವ ಧ್ವಜವನ್ನ ತನ್ನದಾಗಿಸಿಕೊಂಡಿತ್ತು. ನಂತರ ಮುಸ್ಲಿಂ ಲೀಗಿನ ಧ್ವಜಕ್ಕೇ ಬಿಳಿ ಪಟ್ಟಿಯೊಂದನ್ನ ಜೋಡಿಸಿ ಅದು ತನ್ನ ರಾಷ್ಟ್ರದ ಧ್ವಜವೆಂದು ಘೋಷಿಸಿತ್ತು ಎಂದು ರಿಜ್ವಿ ಹೇಳಿದ್ದಾರೆ.

ಈ ಕುರಿತಂತೆ ಸುಪ್ರಿಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಹಾಗು ಆ ದೇಶ ಸದಾ ಭಾರತದ ಮೇಲೆ ಕೆಂಡ ಕಾರುತ್ತ ಭಯೋತ್ಪಾದಕರನ್ನು ಪೆÇೀಷಿಸುವ ಕೆಲಸ ಮಾಡುತ್ತಿದೆಯಲ್ಲದೇ, ಭಾರತವನ್ನು ಸರ್ವನಾಶ ಮಾಡುವ ಷಂಡತನದ ಕೆಲಸಗಳನ್ನೇ ಮಾಡುತ್ತ ಬರುತ್ತಿದೆ. ಅಷ್ಟೇ ಅಲ್ಲದೇ, ಪಾಕಿಸ್ತಾನ ಗಡಿ ನುಸುಳಿ ಭಾರತದಲ್ಲಿ ತನ್ನ ಭಯೋತ್ಪಾದಕರನ್ನು ಕಳಿಸಿ ಸದಾ ಕ್ಯಾತೆ ತೆಗೆಯುತ್ತಿರುತ್ತದೆ. ಹಾಗಾಗಿ ಇಂತಹ ದರಿದ್ರ ರಾಷ್ಟ್ರದ ಪಕ್ಷವಾದ ಮುಸ್ಲಿಂ ಲೀಗ್ ಧ್ವಜವನ್ನು ಇಸ್ಲಾಂ ಧ್ವಜವೆಂದು ನಮ್ಮ ರಾಷ್ಟ್ರದಲ್ಲಿ ಹಾರಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ರಿಜ್ವಿಯವರು ಹೇಳುವಂತೆ, ಇಸ್ಲಾಮಿನ ಪ್ರಕಾರ ಹಸಿರಲ್ಲ ಬದಲಾಗಿ ಕಪ್ಪು ಬಣ್ಣ ಮಹತ್ವದ್ದಾಗಿದೆ, ಹಿಂದೂಸ್ತಾನದಲ್ಲಿ ಇಸ್ಲಾಮಿನ ಹೆಸರ ಮೇಲೆ ಒಂದು ರೀತಿಯ ಪಾಕಿಸ್ತಾನದ(ಮುಸ್ಲಿಂ ಲೀಗ್) ಧ್ವಜವನ್ನು ಹಾರಿಸಲಾಗುತ್ತಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಹಸಿರು ಬಣ್ಣದ ಆ ಧ್ವಜವನ್ನು ಭಾರತದಲ್ಲಿ ಹಾರಿಸುವಂತಹ ಸಂಸ್ಥಾನಗಳ, ಸಂಸ್ಥೆಗಳ, ಹಾಗು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ವಾಸಿಂ ರಿಜ್ವಿಯವರ ಈ ಹೇಳಿಕೆಯಿಂದ ಇದೀಗ ಭಾರತದಲ್ಲಿನ ಕಟ್ಟರ್ ಮುಸಲ್ಮಾನರು, ಮುಲ್ಲಾ ಮೌಲ್ವಿಗಳು ಹಾಗು ಪಾಕಿಸ್ತಾನಿ ಪ್ರೇರಿತ ಭಾರತದಲ್ಲಿನ ಜಿಹಾದಿಗಳ ಕೆಂಗಣ್ಣಿಗೆ ವಾಸಿಂ ರಿಜ್ವಿ ಗುರಿಯಾಗಿದ್ದಾರೆ.

ಈಗಾಗಲೇ ವಿವಾದಿತ ಸ್ಥಳಗಳಲ್ಲಿ ಮುಸಲ್ಮಾನರು ನಮಾಜ್ ಮಾಡೋದನ್ನ ನಿಲ್ಲಿಸಬೇಕು, ವಿವಾದಿತ ಸ್ಥಳಗಳಲ್ಲಿ, ಹಿಂದುಗಳ ಶೃದ್ಧಾಕೇಂದ್ರಗಳಾಗಿದ್ದ ಸ್ಥಳಗಳಲ್ಲಿ ಮಸೀದಿ ನಿರ್ಮಾಣವಾಗಿರುವುದರಿಂದ ಅಲ್ಲಿ ಮುಸಲ್ಮಾನರು ನಮಾಜ್ ಮಾಡುವುದು ಇಸ್ಲಾಮಿನ ಪ್ರಕಾರ ನಿಷಿದ್ಧ ಎಂದು ಹೇಳಿದ್ದ ಇವರು ಇದೀಗ ಇಸ್ಲಾಮಿಕ್ ಧ್ವಜದಲ್ಲಿರುವ ಹಸಿರು ಧ್ವಜ ಹಾಗು ಅದರಲ್ಲಿನ ಅರ್ಧ ಚಂದ್ರವಿರುವ ಚಿತ್ರ ಮುಸಲ್ಮಾನರದ್ದಲ್ಲ ಬದಲಾಗಿ ಅದು ಪಾಕಿಸ್ತಾನದ ಮುಸ್ಲಿಂ ಲೀಗಿನ ಧ್ವಜವಾಗಿದೆ ಎನ್ನುವ ಮೂಲಕ ಜಿಹಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಅಕ್ಷರಶಃ ನಿಜ.

ಒಟ್ಟಿನಲ್ಲಿ, ಮದರಸಾ ಶಿಕ್ಷಣಗಳಿಂದ ಆಗುತ್ತಿದ್ದ ಅನ್ಯಾಯಗಳನ್ನು ಸಮಾಜದ ಮುಂದೆ ಎತ್ತಿ ತೋರಿಸಿರುವ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಇದೀಗ ಇಸ್ಲಾಮಿಕ್ ಧ್ವಜದ ಕುರಿತು ಸುಪ್ರೀಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಶತ್ರು ರಾಷ್ಟ್ರವಾದ ಪಾಕಿಸ್ತಾನ ಧ್ವಜವನ್ನು ಭಾರತದಲ್ಲಿ ಹಾರಿಸುವುದು ಸರಿಯಲ್ಲ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ!!

ಮೂಲ: http://indianexpress.com/article/india/shia-waqf-board-chairman-rizvi-moves-sc-against-unislamic-flags-hoisting-5141491/

https://m.dailyhunt.in/news/india/english/the+siasat+daily+english-epaper-siaseten/wasim+rizvi+seeks+a+ban+on+muslim+flag+resembling+pakistani+flag-newsid-85977153

– ಅಲೋಖಾ

Tags

Related Articles

Close