ಪ್ರಚಲಿತ

ವಿಸ್ತರಣಾವಾದಿ ಚೀನಾವನ್ನು ಗುರಿಯಾಗಿಸಿಕೊಂಡು ರಣತಂತ್ರ ಹೆಣೆದ ಮೋದಿ!! ವಿಯೆಟ್ನಾಂ ಜೊತೆ ನೌಕಾ ಸಮರಾಭ್ಯಾಸ ನಡೆಸಿ ಚೀನಾದ ಡ್ರಾಗನ್ ಗೆ ಸಂದೇಶ ಕಳುಹಿಸುತ್ತಿರುವ ಪ್ರಧಾನ ಸೇವಕ!!

“ಶತ್ರುವಿನ ಶತ್ರು ಮಿತ್ರ” ಇದು ಚಾಣಕ್ಯ ನೀತಿ. ಅಖಂಡ ಆರ್ಯಾವರ್ತವನ್ನು ಚಂದ್ರಗುಪ್ತ ಮೌರ್ಯ ಸಾಮ್ರಾಜ್ಯದ ಏಕಛತ್ರದಡಿ ತರಲು ಚಾಣಕ್ಯರು ಹೆಣೆದ ರಣತಂತ್ರದ ಭಾಗವನ್ನೆ ಇವತ್ತು ಮೋದಿಯವರು ಹೆಣೆಯುತ್ತಿದ್ದಾರೆ. ಭಾರತದ ಮಟ್ಟಿಗೆ ಚೀನಾ ದೇಶ, ಪಾಕಿಸ್ತಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಶತ್ರು. ಚೀನಾದ ಶತ್ರು ವಿಯೆಟ್ನಾಂ. ಚೀನಾದ ಶತ್ರು ಭಾರತದ ಘನ ಮಿತ್ರ!! ಇದೆ ಚಾಣಕ್ಯ ನೀತಿ. ಚೀನಾದ ಚಹಾಕ್ಕೆ ಮೋದಿ ಮನ ಸೋಲುವವರಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಲು ವಿಯೆಟ್ನಾಂ ಜೊತೆ ನೌಕಾ ಸಮರಾಭ್ಯಾಸ ನಡೆಸಲಿದೆ ಭಾರತೀಯ ನೌಕಾ ಪಡೆ.

ಚೀನಾ ಮತ್ತು ವಿಯೆಟ್ನಾಂ ದ್ವೇಷಕ್ಕೆ ಕಾರಣವೇನು?

ಫೆಬ್ರವರಿ 17, 1979 ರಂದು ನೂರಾರು ಸೈನ್ಯ ಚೀನೀ ಪಡೆಗಳು ವಿಯೆಟ್ನಾಂನ ಉತ್ತರ ಗಡಿಯನ್ನು ಪ್ರವೇಶಿಸಿ, ಅಲ್ಲಿ ಆಕ್ರಮಣ ನಡೆಸಿ ಚೀನಾ-ವಿಯೆಟ್ನಾಂ ಗಡಿಯ 600 ಕಿಲೋ ಮೀಟರ್ ಉದ್ದಕ್ಕೂ ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು. 1970 ರಲ್ಲಿ ಚೀನಾ ದೇಶವು ವಿಯೆಟ್ನಾಂ -ಅಮೇರಿಕಾ ಯುದ್ಧದಲ್ಲಿ ಅಮೇರಿಕಾ ಪಡೆಗಳ ವಿರುದ್ಧ ಹನೋಯಿಗೆ ದೃಢ ಬೆಂಬಲ ನೀಡಿತ್ತು. ವಿಯೆಟ್ನಾಂ 1978 ರಲ್ಲಿ ಚೀನಾಕ್ಕೆ ದೂರವಾಗುತ್ತಾ ಸೋವಿಯತ್ ಯೂನಿಯನ್ ತೆಕ್ಕೆಗೆ ಜಾರಿಕೊಂಡಿತು. ಸೋವಿಯತ್ ಯೂನಿಯನ್ ಆ ಕಾಲದಲ್ಲಿ ಚೀನಾದ ಶತ್ರುವಾಗಿತ್ತು. ವಿಯೆಟ್ನಾಂ ಮತ್ತು ಸೋವಿಯತ್ ಯೂನಿಯನ್ ನ ಮಿತೃತ್ವ ಚೀನಾವನ್ನು ಕುಪಿತನ್ನಾಗಿಸಿತು ಇದೆ ಕಾರಣಕ್ಕೆ ಅದು ವಿಯೆಟ್ನಾಂ ಅನ್ನು ದ್ವೇಷಿಸತೊಡಗಿತು. 1978-1979 ರಲ್ಲಿ ವಿಯೆಟ್ನಾಂ ಈಗಿನ ಕಾಂಬೋಡಿಯಾ ಜೊತೆ ಸಂಘರ್ಷದಲ್ಲಿ ತೊಡಗಿತ್ತು. ಕಾಂಬೋಡಿಯಾ ಜೊತೆ ವಿಯೆಟ್ನಾಂ ಸಂಘರ್ಷ ಚೀನಾಕ್ಕೆ ವರದಾನವಾಗಿ ಪರಿಣಮಿಸಿತು ಮತ್ತು 1979ರಲ್ಲಿ ಅದು ವಿಯೆಟ್ನಾಂ ಗಡಿಯನ್ನು ರಕ್ತದಲ್ಲಿ ಮಿಂದೇಳುವಂತೆ ಮಾಡಿತು. ಅಂದು ಬಿತ್ತಿದ ದ್ವೇಷದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ.

ಈ ಮರದ ಬೆಳೆಯನ್ನು ಕೊಯ್ಯುವ ಚಾಣಾಕ್ಷ ನಡೆಯನ್ನೆ ಭಾರತವೀಗ ಮಾಡುತ್ತಿರುವುದು. ಚೀನಾದಂತಹ ಕಮ್ಯೂನಿಷ್ಟ್ ದೇಶವನ್ನು ಯಾವ ಕಾರಣಕ್ಕೂ ನಂಬುವಂತಿಲ್ಲ. ಅದಕ್ಕಾಗಿಯೆ ಮೋದಿ ಚೀನಾವನ್ನು ನಾಲ್ಕೂ ದಿಶೆಯಿಂದಲೂ ಸುತ್ತುವರಿಯುವ ಮಾಸ್ಟರ್ ಪ್ಲಾನ್ ತಯಾರಿಸುತ್ತಿದ್ದಾರೆ. ಇದರ ಅಂಗವಾಗಿ ಮುಂದಿನ ವಾರ ವಿಯೆಟ್ನಾಂ ಜೊತೆ ಭಾರತ ತನ್ನ ನೌಕಾಪಡೆಯ ಮೊತ್ತ ಮೊದಲ ವ್ಯಾಯಾಮವನ್ನು ನಡೆಸಲಿದೆ. ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ವಿವಿಧ ರಾಷ್ಟ್ರಗಳೊಂದಿಗೆ ಮಿಲಿಟರಿ ಸಂಬಂಧಗಳನ್ನು ಸ್ಥಿರವಾಗಿ ಬೆಳೆಸಲು ಭಾರತವು ಮುಂದಿನ ವಾರ ವಿಯೆಟ್ನಾ ಜೊತೆ ನೌಕಾಭ್ಯಾಸ ಮಾಡಲಿದೆ. ಇದು ಚೀನಾದ ಮೇಲೆ ಒಂದು ಕಣ್ಣಿಡುವ ಭಾರತದ ಯುದ್ದ ತಂತ್ರದ ಭಾಗವೆಂದೆ ಹೇಳಬಹುದು. ಮುಂದಿನ ತಿಂಗಳು ರಕ್ಷಣಾ ಸಚಿವೆ ಹನೋಯಿಗೆ ಭೇಟಿ ನೀಡಲಿದ್ದಾರೆ, ಅದಕ್ಕೂ ಮುಂಚೆ ವಿಯೆಟ್ನಾಂ ಜೊತೆ ಸಮುದ್ರ ಕವಾಯತು ಪೆಸಿಫಿಕ್ ಭಾಗದಲ್ಲಿ ಮಹತ್ತರ ಬೆಳವಣಿಗೆಯೆಂದೆ ಹೇಳಬಹುದು.

ಭಾರತೀಯ ಯುದ್ಧನೌಕೆಗಳಾದ INS ಸಹ್ಯಾದ್ರಿ, ಕ್ಷಿಪಣಿ ನೌಕೆ INSಕಾಮೋರ್ಟಾ ಮತ್ತು ಫ್ಲೀಟ್ ಟ್ಯಾಂಕರ್ INS ಶಕ್ತಿ, ಸೋಮವಾರದಂದು ವಿಯೆಟ್ನಾಮಿನ ಟೆನ್ ಸಾ ಪೋರ್ಟ್ (ಡ್ಯಾನಂಗ್) ಗೆ ಪ್ರವೇಶಿಸಲಿವೆ. ಎರಡು ರಾಷ್ಟ್ರಗಳ ನಡುವಿನ “ಸಮಗ್ರ ಯುದ್ಧತಂತ್ರದ ಪಾಲುದಾರಿಕೆಯ” ರಕ್ಷಣಾತ್ಮಕ ಸಹಕಾರದೊಂದಿಗೆ, ದ್ವಿಪಕ್ಷೀಯ ಮಿಲಿಟರಿ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸಲು ಸೀತಾರಾಮನ್ ಜೂನಿನಲ್ಲಿ ವಿಯೆಟ್ನಾಂಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಭಾರತಕ್ಕೆ ವಿಯೆಟ್ನಾಂ ಏಕೆ ಪ್ರಮುಖ ಮಿತ್ರ?

ಚೀನಾ ಯಾವತ್ತಿಗೂ ವಿಶ್ವಾಸ ದ್ರೋಹಿ ರಾಷ್ಟ್ರ. ಒಂದು ವೇಳೆ ಚೀನಾ ಏನಾದರೂ ಭಾರತದ ಮೇಲೆ ಯುದ್ದ ಸಾರಿದರೆ ತನ್ನ ರಕ್ಷಣೆ ಮಾಡಲು ಭಾರತಕ್ಕೆ ಚೀನಾದ ನೆರೆಹೊರೆಯ ಶತ್ರು ರಾಷ್ಟುಗಳು ಬೇಕಾಗುತ್ತವೆ. ವಿಯೆಟ್ನಾಂನಂತಹ ಚೀನಾ ದ್ವೇಷಿ ರಾಷ್ಟ್ರಗಳ ಸಹಾಯ ದೊರಕಿದರೆ ಚೀನಾವನ್ನು ಮಣಿಸುವುದು ಸುಲಭ. ತನ್ನ ದೇಶದ ರಕ್ಷಣೆಯ ವಿಷಯದಲ್ಲಿ ನಾನು ಯಾರಿಗೂ ಹೆದರುವುದಿಲ್ಲ, ಮತ್ತು ದೇಶ ರಕ್ಷಣೆಗಾಗಿ ಎಂತಹ ನಿರ್ಧಾರಗಳನ್ನೂ ತೆಗೆದುಗೊಳ್ಳುತ್ತೇನೆ ಎನ್ನುವ ಸ್ಪಷ್ಟ ಸಂದೇಶವನ್ನು ಮೋದಿ ಚೀನಾಕ್ಕೆ ನೀಡುತ್ತಲೆ ಬಂದಿದ್ದಾರೆ. ರಣನೀತಿಜ್ಞರ ಪ್ರಕಾರ ಮೋದಿ ಪಾಕಿಸ್ತಾನಕ್ಕಿತಂಲೂ ಹೆಚ್ಚು ಚೀನಾದ ಮೇಲೆ ಕಣ್ಣಿದ್ದಾರೆ ಎನ್ನಲಾಗುತ್ತದೆ. ಅತಿ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯವುಳ್ಳ ಖಂಡಾಂತರ ಕ್ಷಿಪಣಿಗಳನ್ನು ತಯಾರಿಸಲು ಡಿ.ಆರ್.ಡಿಓ ಗೆ ಈಗಾಗಲೆ ನಿರ್ದೇಶ ನೀಡಲಾಗಿದೆ. ಇದು ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡದ್ದಲ್ಲ, ಬದಲಾಗಿ ಚೀನಾವನ್ನು ಗುರಿಯಾಗಿಸಲು ತಯಾರಿಸಲಾಗುತ್ತಿರುವ ಕ್ಷಿಪಣಿಗಳು ಎನ್ನಲಾಗುತ್ತಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಶೀಲ ತಂತ್ರಗಳ ಬಗ್ಗೆ ಎರಡೂ ದೇಶಗಳು ಜಾಗ್ರತವಾಗಿವೆ ಮತ್ತು ಚೀನಾದ ವಿಸ್ತರಣಾವಾದವನ್ನು ಎದುರಿಸಲು ಸಜ್ಜಾಗಿವೆ. ಮೋದಿ ಪ್ರಧಾನಿಯಾದ ಬಳಿಕ ಭಾರತ ಮತ್ತು ವಿಯೆಟ್ನಾಂ ಮಿಲಿಟರಿ ಸಂಬಂಧಗಳು ಗಾಢವಾಗಿವೆ. ವಿಯೆಟ್ನಾಂ ಭೇಟಿ ಸಮಯದಲ್ಲಿ 500 ಮಿಲಿಯನ್ ಡಾಲರ್ ರಕ್ಷಣಾತ್ಮಕ ಸಾಲವನ್ನು ನೀಡುವುದಾಗಿ ಮೋದಿ ಘೋಷಿಸಿರುವುದು ಇದಕ್ಕೆ ಸಾಕ್ಷಿ. ಜೊತೆಗೆ ಸಿಂಗಾಪುರ್, ಮಯನ್ಮಾರ್, ಮಲೇಷಿಯಾ ಮತ್ತು ಇಂಡೋನೇಷಿಯಾದ ಇತರ ಆಗ್ನೇಯ ಏಷ್ಯಾದ ದೇಶಗಳೊಂದಿಗೆ ತರಬೇತಿ ಮತ್ತು ತಂತ್ರಜ್ಞಾನ ಹಂಚಿಕೆಗೆ ಮಿಲಿಟರಿ ಭೇಟಿಗಳು ಮತ್ತು ವ್ಯಾಯಾಮಗಳ ವಿಸ್ತರಣೆಯಿಂದ ಹಿಡಿದು ರಕ್ಷಣಾತ್ಮಕ ಸಹಕಾರವನ್ನು ಭಾರತ ಹೊಂದಿದೆ. ಮೋದಿ ವಿದೇಶಕ್ಕೆ ಇದೆ ಕಾರಣಗಳಿಗಾಗಿ ಭೇಟಿ ನೀಡುತ್ತಾರೆ. ಅತ್ತ ತನ್ನ ಗಡಿಯನ್ನು ಭದ್ರವಾಗಿಸಲು ಮೋದಿ ಪ್ರಪಂಚದ ಎಲ್ಲಾ ರಾಷ್ಟ್ರಗಳೊಡನೆ ಸೌಹಾರ್ದ ಸಂಬಂಧ ಏರ್ಪಡಿಸುತ್ತಿದ್ದರೆ. ಇತ್ತ ದೇಶದ್ರೋಹಿಗಳು ಚೀನಾ-ಪಾಕಿಸ್ತಾನದ ಶತ್ರುಗಳನ್ನು ಕರೆದು ಭೂರಿ ಭೋಜನ ನೀಡುತ್ತಿದ್ದಾರೆ. ಈಗ ಹೇಳಿ ರಾಷ್ಟ್ರ ರಕ್ಷಣೆ ಮಾಡುವವರು ಯಾರು ಮತ್ತು ರಾಷ್ಟ್ರ ಭಕ್ಷಣೆ ಮಾಡುವವರು ಯಾರು? ಮುಂದಿನ ಬಾರಿ ನೀವು ದೇಶ ಪ್ರೇಮಿಗಳಿಗೆ ಮತ ನೀಡುತ್ತೀರೋ ಇಲ್ಲ ದೇಶದ್ರೋಹಿಗಳಿಗೊ ನಿರ್ಧರಿಸಿ…..

-ಶಾರ್ವರಿ

Tags

Related Articles

Close