ಪ್ರಚಲಿತ

ಮಗನ ಕಳೆದುಕೊಂಡ ತಂದೆಯಿಂದ ಕೇಂದ್ರ ಸರಕಾರಕ್ಕೆ ಗಡುವು.! ೭೨ ಗಂಟೆಯಲ್ಲಿ ಉಗ್ರರ ದಮನಕ್ಕೆ ಸೇನೆ ಸಜ್ಜು..?

ಪಾಕಿಸ್ತಾನದ ನರಿ ಬುದ್ದಿ ಇನ್ನೂ ಕಡಿಮೆಯಾದ ಹಾಗೆ ಕಾಣುತ್ತಿಲ್ಲ, ಯಾಕೆಂದರೆ ಪದೇ ಪದೇ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೈನಿಕರನ್ನೇ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಲೇ ಇದೆ. ಇತ್ತ ಭಾರತೀಯ ಸೇನೆಯೂ ಪಾಕ್ ಸೈನಿಕರಿಗೆ ತಕ್ಕ ಉತ್ತರ ನೀಡುತ್ತಿದ್ದು, ಪಾಕಿಸ್ತಾನಕ್ಕೆ ಅದರದ್ದೇ ಆದ ರೀತಿಯಲ್ಲೇ ಪಾಠ ಕಲಿಸುತ್ತಿರುವ ಭಾರತೀಯ ಸೇನೆ ಈಗಾಗಲೇ ಅನೇಕ ಪಾಕ್ ಸೈನಿಕರ ಜೊತೆಗೆ ಪಾಕ್ ಬೆಂಬಲಿತ ಉಗ್ರರನ್ನೂ ಹೊಡೆದುರುಳಿಸಿದ್ದಾರೆ. ಆದರೂ ತನ್ನ ಕಪಟ ಬುದ್ದಿಯನ್ನು ಮುಂದುವರಿಸಿರುವ ಪಾಕಿಸ್ತಾನ , ಇದೀಗ ರಂಜಾನ್ ತಿಂಗಳ ಕೊನೆಯಲ್ಲೇ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಓರ್ವ ಭಾರತೀಯ ಸೈನಿಕನನ್ನು ಬಲಿ ಪಡೆದುಕೊಂಡಿದ್ದಾರೆ.!

ರಂಜಾನ್ ತಿಂಗಳಲ್ಲಿ ಮುಸ್ಲೀಮರು ಯಾವುದೇ ಅಹಿಂಸಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಇದೀಗ ಪಾಕಿಸ್ತಾನಿ ಸೇನೆ ಭಾರತದತ್ತ ಏಕಾಏಕಿ ದಾಳಿ ನಡೆಸಿದ್ದರಿಂದ ಓರ್ವ ಮುಸ್ಲಿಂ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಔರಂಗಜೇಬ್ ಎಂಬ ಭಾರತೀಯ ಸೈನಿಕ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಪಾಕ್ ಕಡೆಯಿಂದ ಗುಂಡಿನ ದಾಳಿ ನಡೆದಿದ್ದು, ರಂಜಾನ್ ತಿಂಗಳ ಕೊನೆಯಲ್ಲೇ ಔರಂಗಜೇಬ್ ಹುತಾತ್ಮರಾಗಿದ್ದು, ಇದೀಗ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಮುಸ್ಲೀಮರು ಕೂಡ ಕೆಂಡಕಾರಿದ್ದಾರೆ. ಪಾಕಿಸ್ತಾನಕ್ಕೆ ಧರ್ಮ ಎಂಬೂದೇ ಇಲ್ಲ, ವಿಕೃತ ಮನೋಭಾವವನ್ನೇ ಹೊಂದಿರುವ ಅವರು ಪವಿತ್ರ ಹಬ್ಬದಂದೇ ಈ ರೀತಿ ವಿಕೃತ ಮೆರೆದಿದ್ದು, ಯಾರೂ ಇಂತವರನ್ನು ಕ್ಷಮಿಸುವುದಿಲ್ಲ ಎಂದು ಸ್ವತಃ ಮುಸ್ಲೀಮರೇ ಹೇಳುವಂತಾಗಿದೆ.!

೭೨ ಗಂಟೆಯಲ್ಲಿ ಹಂತಕರನ್ನು ಬಂಧಿಸುವಂತೆ ಕೇಂದ್ರಕ್ಕೆ ಹುತಾತ್ಮ ಯೋಧನ ತಂದೆ ಸೂಚನೆ..!

ಪಾಕಿಸ್ತಾನ ಮೆರೆದಿರುವ ಕ್ರೌರ್ಯಕ್ಕೆ ಇಡೀ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ಮಗನನ್ನು ಕಳೆದುಕೊಂಡಿರುವ ಹುತಾತ್ಮ ಔರಂಗಜೇಬನ ತಂದೆ ಕೇಂದ್ರ ಸರಕಾರಕ್ಕೆ ೭೨ ಗಂಟೆಗಳ ಗಡುವು ನೀಡಿದ್ದಾರೆ. ಔರಂಗಜೇಬ್ ಕೇವಲ ನಮ್ಮ ಕುಟುಂಬಕ್ಕಾಗಿ ದುಡಿಯುತ್ತಿರಲಿಲ್ಲ, ಇಡೀ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಕುಟುಂಬ ಎಲ್ಲಾ ಬಿಟ್ಟು ದೇಶದ್ರೋಹಿಗಳ ವಿರುದ್ಧ ಹೋರಾಡಿ ಇದೀಗ ಪಾಕಿಸ್ತಾನದ ಕ್ರೌರ್ಯಕ್ಕೆ ಬಲಿಯಾಗಿದ್ದಾನೆ. ನನ್ನ ಮಗನನ್ನು ಕೊಂದವರನ್ನು ಸರಕಾರ ೭೨ ಗಂಟೆಗಳಲ್ಲಿ ಬಂಧಿಸಲೇಬೇಕು, ಇಲ್ಲವಾದಲ್ಲಿ ನಾನೇ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಹುತಾತ್ಮ ಔರಂಗಜೇಬ್ ತಂದೆ ಕೂಡ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ನಿವೃತ್ತಿ ಹೊಂದಿ ತನ್ನ ಮಗನನ್ನು ಸೇನೆಗೆ ಸೇರಿಸಿದ್ದರು‌. ಆದರೆ ಇದೀಗ ಮಗನನ್ನೂ ಕಳೆದುಕೊಂಡ ಆಕ್ರೋಶದಲ್ಲಿ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದು, ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರ ಸಾವಿನಲ್ಲಿ ರಾಜಕೀಯ ನಡೆಸುತ್ತಿರುವ ಪ್ರತ್ಯೇಕವಾದಿಗಳ ವಿರುದ್ಧ ಹರಿಹಾಯ್ದ ಔರಂಗಜೇಬ್ ತಂದೆ, ಪಾಕಿಸ್ತಾನಕ್ಕೆ ಸಹಾನುಭೂತಿ ತೋರಿಸಿ ಭಾರತದಲ್ಲಿರುವ ದೇಶದ್ರೋಹಿಗಳನ್ನೂ ಹೊಡೆದು ಹಾಕಬೇಕೆಂದು ಹೇಳಿದ್ದಾರೆ. ಔರಂಗಜೇಬ್‌ನ್ನು ನಾವು ಮಾತ್ರ ಕಳೆದುಕೊಂಡಿಲ್ಲ, ಭಾರತೀಯ ಸೇನೆಗೂ ಭಾರೀ ಹಿನ್ನಡೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ಸೇರಿದವನಾಗಿರುವುದರಿಂದ ಇಲ್ಲಿಯೇ ದೇಶಸೇವೆ ಸಲ್ಲಿಸುತ್ತಿದ್ದರು ಎಂದು ಮಗನ ಅಗಲುವಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.!

ನಿವ್ರತ್ತ ಯೋಧನ ಮಾತಿಗೆ ಸಿದ್ಧವಾಯ್ತಾ ಭಾರತೀಯ ಸೇನೆ..?

೨೦೦೩ರ ನಂತರದಲ್ಲಿ ಪಾಕಿಸ್ತಾನದ ಅಟ್ಟಹಾಸ ಹೆಚ್ಚಾಗುತ್ತಲೇ , ಈ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜಾರೋಷವಾಗಿ ಭಾರತದ ಗಡಿ ಪ್ರವೇಶಿಸುತ್ತಿದ್ದ ಪಾಕ್ ಉಗ್ರರು, ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರ ದಾಟಿ ಬರಲಾಗುತ್ತಿಲ್ಲ. ಆದ್ದರಿಂದಲೇ ಕತ್ತಿ ಮಸಿಯುತ್ತಿರುವ ಪಾಕ್ , ಸಿಕ್ಕ ಸಿಕ್ಕಲ್ಲಿ ದಾಳಿ ನಡೆಸಿ ಭಾರತೀಯ ಸೈನಿಕರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ಅದಕ್ಕಾಗಿಯೇ ಇದೀಗ ಹುತಾತ್ಮ ಯೋಧ ಔರಂಗಜೇಬ್‌ನ ತಂದೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದು, ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಇತ್ತೀಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್‌ನನ್ನು ಭಾರತೀಯ ಸೇನೆ ಎನ್‌ಕೌಂಟರ್ ಮಾಡಿತ್ತು, ಅದರ ಸೇಡಿಗಾಗಿಯೇ ಇದೀಗ ಭಾರತೀಯ ಯೋಧ ಔರಂಗಜೇಬ್ ನನ್ನು ಹತ್ಯೆಗೈದಿದ್ದಾರೆ ಎಂದು ಹುತಾತ್ಮ ಔರಂಗಜೇಬ್ ನ ತಂದೆ ಆರೋಪಿಸಿದ್ದಾರೆ.!

ಆದ್ದರಿಂದ ಭಾರತೀಯ ಸೇನೆಯನ್ನು ಕೆಣಕುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತದ ಮುಸ್ಲೀಮರೇ ಇದೀಗ ತಿರುಗಿಬಿದ್ದಿದ್ದು, ಜಮ್ಮು ಕಾಶ್ಮೀರದಲ್ಲಿರುವ ಪ್ರತ್ಯೇಕವಾದಿಗಳನ್ನು ಮೊದಲು ಬಂಧಿಸಿ ಶಿಕ್ಷೆ ನೀಡಿ ಎಂದು ನರೇಂದ್ರ ಮೋದಿ ಸರಕಾರಕ್ಕೆ ಔರಂಗಜೇಬ್ ತಂದೆ ಮನವಿ ಮಾಡಿದ್ದಾರೆ.!

–ಸಾರ್ಥಕ್

Tags

Related Articles

Close