ಪ್ರಚಲಿತ

ರಾಷ್ಟ್ರೀಯ ಸ್ವಯಂ ಸೇವಕ ಸಂಘವೆಂಬುದು ಹಿಂದುತ್ವದ ರೂಪದಲ್ಲಿರುವ ಮತ್ತೊಂದು ಐಸಿಸ್ ಸಂಘಟನೆಯೇ?!

ಈ ಪ್ರಶ್ನೆ ಈಗೀಗ ಕೇಳಿಬರುತ್ತಿಲ್ಲ! ಯಾವಾಗ, ಮಾಲೇಗಾಂವ್ ಸ್ಫೋಟವೊಂದು ಸಾಧ್ವಿ ಪ್ರಗ್ಯಾ ಸಿಂಗ್ ರಿಂದ ಹಿಡಿದು ಹಿಂದೂ ಸಂತ ಅಸೀಮಾನಂದರ ಹೆಸರೂ ತಳುಕು ಹಾಕಿಕೊಂಡಿತು ನೋಡಿ.. ದೊಡ್ಡ ದೊಡ್ಡ ತಲೆಗಳೆಲ್ಲ “ಭಯೋತ್ಪಾದನೆಗೆ ಧರ್ಮವಿಲ್ಲ” ಎಂದವು! ಸಮಾಜದಲ್ಲಿ ಹೊಸದಾಗಿ ಒಂದು ಕೇಸರೀ ಭಯೋತ್ಪಾದನೆ ಎಂಬ ಮಿಥ್ಯೆಯೊಂದು ಹುಟ್ಟಿತು! ಅಲ್ಲಿಂದಲೇ ಪ್ರಾರಂಭವಾಗಿತ್ತು ನೋಡಿ! ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬುದು ಐಸಿಸ್ ನ ಹಿಂದುತ್ವದ ವರ್ಷನ್ನು ಎಂಬ ಶೀರ್ಷಿಕೆಯನ್ನು ಹೊತ್ತ ತೀರ್ಪೊಂದು!

ನೋಡಿ! ಮೊದಲನೆಯದಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬಹಳಷ್ಟು ತೆರನಾದ ಅಭಿಪ್ರಾಯಗಳಿವೆ! ಅದರಲ್ಲಿಯೂ, ಇತ್ತೀಚೆಗೆ ಸಮಾಜದಲ್ಲಿ ಎಡಪಂಥೀಯರ ಕೃಪಾಕಟಾಕ್ಷ ಮತ್ತು ಮಾಧ್ಯಮಾಧಮರ ಸಹಯೋಗದಿಂದ ಇವತ್ತು ಸಂಘವನ್ನು ಕೇಸರೀ ಭಯೋತ್ಪಾದಕರ ಸಂಘಟಬೆ ಎಂಬ ಮಟ್ಟದಲ್ಲಿಯೇ ಬಿಂಬಿಸಲಾಗುತ್ತಿರುವುದು ನಮ್ಮ ದುರಾದೃಷ್ಟವಾದರೂ ಸಹ, ಉಹೂಂ! ಆದರೂ ಯಾಕೋ ಸಮಾಧಾನವಾಗಲಿಲ್ಲ! ರಾಜ್ಯದ ಮುಖ್ಯಮಂತ್ರಿಗಳೇ ಸಂಘದವರನ್ನು ಉಗ್ರರೆಂದು ಬಿಟ್ಟರು!! ಮತ್ತೆ ಮತ್ತೆ ಸ್ವಯಂ ಸೇವಕ ಸಂಘದ ಬಗ್ಗೆ ಹೇಳಲೇ ಬೇಕಾದ ಅನಿವಾರ್ಯತೆ! ಯಾಕೆಂದರೆ, ಸಮಾಜಕ್ಕೊಂದು ತಪ್ಪು ಸಂದೇಶ ಆಳವಾಗಿ ಬೇರೂರಿದೆ! ಏನೆಂಬುದಾಗಿ ಗೊತ್ತಾ?! ಸಂಘ ಮುಸಲ್ಮಾನರನ್ನು ದ್ವೇಷಿಸುತ್ತದೆ! ಸಂಘ ಅನ್ಯಧರ್ಮೀಯರನ್ನೊಪ್ಪುವುದಿಲ್ಲ.. ಸಂಘ ಹಿಂಸೆಯನ್ನು ಪ್ರತಿಪಾದಿಸುತ್ತದೆ ಎಂದೆಲ್ಲ ನಂಬಿಕೆ ಇವತ್ತಿನ ಸಂಘವೊಂದನ್ನೇ ಅಲ್ಲ, ಬದಲಿಗೆ ಹಿಂದುತ್ವವನ್ನೇ ಬುಡ ಹಿಡಿದು ಅಲುಗಾಡಿಸುತ್ತದೆ!

ಆದರೆ, ಸಂಘಕ್ಕೂ ಇಸ್ಲಾಂ ನ ಸಂಘಟನೆಯಾದ ಐಸಿಸ್ ಗೂ ಇರುವ ಒಂದಷ್ಟು ವಾಸ್ತವಗಳ ಬಗ್ಗೆ ತಿಳಿದುಕೊಂಡು ಬಿಡಿ!

ಮೊದಲನೆಯದಾಗಿ,

Image result for isis

ಪೂರ್ಣ ಹೆಸರು :

ಐಸಿಸ್ : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ & ಸಿರಿಯಾ
ಆರ್ ಎಸ್ ಎಸ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಸೃಷ್ಟಿ ಮತ್ತು ಉದ್ದೇಶ

ಐಸಿಸ್ : ಇರಾಕಿನ ಅಲ್ ಕೈದಾ ದ ತಳಿಯೆಂದೇ ಹೇಳಬಹುದಾದ ಐಸಿಸ್ ನನ್ನು ಹುಟ್ಟು ಹಾಕಿದ್ದು, ಅಬು ಒಮರ್ ಅಲ್ ಬಾಗ್ದಾದಿ ಮತ್ತು ಅಬು ಅಯ್ಯುಬ್ ಅಲ್ ಮಸ್ರಿ. ೨೦೦೬ ರಲ್ಲಿ ಐಸಿಸ್ ನನ್ನು ಸೃಷ್ಟಿಣುವುದರ ಮೂಲಕ ಸತತವಾಗಿ ಸಮಾಜದಲ್ಲಿ ಅಶಾಂತಿಯನ್ನು ಹರಡುತ್ತಲೇ ಬಂದ ಈ ಎರಡು ಸೃಷ್ಟಿಕರ್ತರನ್ನು ೨೦೧೦ ರ ಇರಾಕ್ ಆಪರೇಷನ್ ನಲ್ಲಿ ಯುಎಸ್ ನ ಆ್ಯಾಂಟಿ ಭಯೋತ್ಪಾದಕ ಸ್ಕಾಡ್ ಮಗ್ಗುಲು ಮಲಗಿಸಿತ್ತು. ಐಸಿಸ್ ನ ಧ್ಯೇಯ ಜಿಹಾದ್ ಆದರ್ಶಗಳನ್ನು ಅನುಸರಿಸಿ ಜಗತ್ತಿನಲ್ಲೆಡೆ ಅಧಿಪತ್ಯ ಸ್ಥಾಪಿಸುವುದು ಮತ್ತು ಬಿನ್ ಲಾಡೆನ್ನಿನ ಅಲ್ ಖೈದಾ ಧ್ಯೇಯಗಳನ್ನು ವಿಧೇಯವಾಗಿ ಅನುಸರಿಸುವುದು.

ಆರ್ ಎಸ್ ಎಸ್ : ಮಲಬಾರ್ ಗಲಭೆಗೆ ಪ್ರತ್ಯುತ್ತರ ನೀಡಲು ೧೯೨೫ ರಲ್ಲಿ ಕೇಶವ್ ಬಲಿರಾಮ್ ಹೆಗಡೆಯವರಿಂದ ಸ್ಥಾಪಿತವಾದ ಸಂಘದ ಮೂಲೋದ್ದೇಶ ಭಾರತದ ಏಕೀಕರಣ ಮತ್ತು ಗುಲಾಮಗಿರಿಯಿಂದ ಸ್ವತಂತ್ರ್ಯದೆಡೆಗೆ ರಾಷ್ಟ್ರವನ್ನು ಕರೆದೊಯ್ಯುವುದು.

ಪ್ರಸ್ತುತ ಸಿದ್ದಾಂತಗಳು

Related image

ಐಸಿಸ್ : ಇವತ್ತಿನ ಸಿದ್ದಾಂತ ವಹಾಬಿಸಮ್!! ಅಥವಾ, ಕಾಫಿರರನ್ನು ಕೊಂದಾದರೂ ಇಡೀ ಜಗತ್ತನ್ನು ಇಸ್ಲಾಮೀಕರಣವನ್ನಾಗಿಸುವುದು.

ಆರ್ ಎಸ್ ಎಸ್ : ಭರತಖಂಡಕ್ಕೆ ನಿಸ್ವಾರ್ಥ ಸೇವೆಯನ್ನೊದಗಿಸುವುದು.

ನೇಮಕಾತಿ ಮತ್ತು ಸದಸ್ಯರ ಸಂಖ್ಯೆ

ಐಸಿಸ್ : ೨೦೧೪ ರ ಪ್ರಕಾರ ೨೦೦,೦೦೦ ಸದಸ್ಯತ್ವ ಹೊಂದಿರುವ ಐಸಿಸ್ ಗೆ ಜಿಹಾದ್ ನನ್ನು ಬೆಂಬಲಿಸುವ ಯಾರೇ ಆದರೂ ಸೇರಬಹುದು. ಚೀನಾ, ಜರ್ಮನಿ, ಪಾಕಿಸ್ತಾನ್, ಉಎಸ್ ಎ, ಆಸ್ಟ್ರೇಲಿಯಾ, ಕೆನಡಾ, ಯುಕೆ, ಇಸ್ರೇಲ್, ಭಾರತ , ಜಪಾನ್ ಹಾಗೂ ಇತರೆ ದೇಶಗಳಿಂದ ಅದೆಷ್ಟೋ ಜಿಹಾದ್ ಮನಃಸ್ಥಿತಿಯನ್ನೊಪ್ಪುವ ಸದಸ್ಯರು ಐಸಿಸ್ ಗೆ ಸೇರ್ಪಡೆಗೊಂಡಿದ್ದಾರೆ. ಇದೊಂದು ಜಾಗತಿಕ ಜಿಹಾದ್ ಸಂಘಟನೆ!

ಆರ್ ಎಸ್ ಎಸ್ : ೨೦೧೬ ರ ಪ್ರಕಾರ, ಸ್ವಯಂ ಸೇವಕ ಸಂಘದಲ್ಲಿ ಕನಿಷ್ಟ ೫,೦೦೦,೦೦೦ ಜನ ಕಾರ್ಯಕರ್ತರಿದ್ದಾರೆ! ಭಾರತದ ಏಕೀಕರಣದ ಸಿದ್ಧಾಂತಗಳನ್ನೊಳಗೊಂಡ ಭಾರತೀಯರು ಮಾತ್ರ ಸೇರ್ಪಡೆಯಾಗಬಹುದು.

ಕಾನೂನು ವ್ವವಸ್ಥೆ

ಐಸಿಸ್ : ಈ ಸಂಘಟನೆಗೆ ಅಲ್ಲಾಹನೇ ಸೃಷ್ಟಿಸಿದ್ದಾನೆ ಎಂಬ ಭ್ರಮೆಯ ಶರಿಯಾ ಕಾನೂನು ವ್ಯವಸ್ಥೆ ಬಿಟ್ಟರೆ ಬೇರೆ ಯಾವ ಕಾನೂನು ವ್ಯವಸ್ಥೆಯನ್ನು ಒಪ್ಪುವುದಿಲ್ಲ. ಈ ಶರಿಯಾ ಕಾನೂನೆಂಬುವುದರಲ್ಲಿ, ಒಂದಷ್ಟು ಪ್ರಧಾನವಾದ ಅಂಶಗಳು ಹೀಗಿವೆ!

Image result for rastriya swayam sevaka sangha

  • ಕುಡುಕರನ್ನು ಮತ್ತು ಜೂಜುಕೋರರಿಗೆ ಚಾಟಿಯಿಂದ ಬಾರಿಸಬೇಕು.
  • ಕಳ್ಳರಿಗೆ ಕೈ ಕತ್ತರಿಸಿ ಹಾಕಬೇಕು.
  • ಹೆದ್ದಾರಿಯಲ್ಲಿ ಕಳ್ಳತನವನ್ನು
  • ಮಾಡುವವರನ್ನು ಶಿಲುಬೆಗೇರಿಸಬೇಕು.
  • ಸಲಿಂಗಿಕಾಮಿಗಳಿಗೆ ಮರಣದಂಡನೆ ವಿಧಿಸಬೇಕು.
  • ವಯಸ್ಕರನ್ನು ಕಲ್ಲಿನಲ್ಲಿ ಹೊಡೆದು ಸಾಯಿಸಬೇಕು.
  • ಯಾರು ಅಲ್ಲಾಹನನ್ನು ನಂಬುವುದಿಲ್ಲವೋ, ಆತನನ್ನು ಕೊಲ್ಲಬೇಕು. ಮತ್ತು ಇತರೆ!!

ಆರ್ ಎಸ್ ಎಸ್ : ಸ್ವಾತಂತ್ರ್ಯಾಪೂರ್ವದಲ್ಲಿ ಸಂಘದ ಪರಿಕಲ್ಪನೆಯಿದ್ದದ್ದು ಅಖಂಡ ಭಾರತ! ದೇಸೀ ಸಂಸ್ಕೃತಿಯ ಅವಿಭಜಿತ ರಾಷ್ಟ್ರ. ಆದರೆ, ಸ್ವಾತಂತ್ರ್ಯಾನಂತರ ಸಂವಿಧಾನದಲ್ಲಿ ಮನುಸ್ಮೃತಿಗೆ ಸಂಬಂಧಪಟ್ಟ ಯಾವ ಕಾನೂನುಗಳೂ ಇಲ್ಲವೆಂಬುದಾಗಿ ಸಂಘ ವಿರೋಧಿಸಿತ್ತಾದರೂ, ರಾಷ್ಟ್ರದ ಹಿತಕ್ಕಾಗಿ, ಭಾರತದ ಸಂವಿಧಾನವನ್ನು ಒಪ್ಪಿ ಸ್ವೀಕರಿಸಿತ್ತು‌. ಆದರೆ, ರಾಷ್ಟ್ರೀಯ ಧ್ವಜ, ರಾಷ್ಟ್ರಗೀತೆ, ಜಾತ್ಯಾತೀತತೆ,. ಎಂಬಂತಹ ವಿಚಾರಗಳಲ್ಲಿ ಮನಸ್ತಾಪವಿದ್ದರೂ ಸಹ ಭಾರತದ ಕಾನೂನು ವ್ಯವಸ್ಥೆಯನ್ನು ಮೀರಿ ನಡೆದಿಲ್ಲ.

ತಮ್ಮ ಕಾರ್ಯಸೂಚಿಯನ್ನು ಪ್ರಸಾರ ಮಾಡಲು ಅನುಸರಿಸುವ ವಿಧಾನ

ಐಸಿಸ್ : ತಮ್ಮ ಕಾರ್ಯಸೂಚಿಯನ್ನು ಪ್ರಸಾರ ಮಾಡಲು ಆಯ್ದುಕೊಂಡ ಹಾದಿ ‘ಹಿಂಸೆ’! ಅದಕ್ಕೆ ತಕ್ಕನಾಗಿ, ಬಳಸುವ ಶಸ್ತಾಸ್ತ್ರಗಳೂ ಕೂಡ ಒಂದೇ ಬಾರಿಗೆ ನೂರಕ್ಕೂ ಹೆಚ್ಚು ಪ್ರಾಣವನ್ನು ತೆಗೆಯಲು ಸಾಮರ್ಥ್ಯವಿರುವಂತಹದ್ದು! ಎಕೆ ೪೭ ಬಂದೂಕುಗಳು, ಸೆಮಿ ಚಾಲಿತ ಗನ್ನುಗಳು, ಆಧುನಿಕ ಸ್ಲಿಪ್ಪರ್ ರೈಫಲ್ಸ್ ಗಳು, ಮಷೀನ್ ಗನ್ನುಗಳು, ಪಿಸ್ತೂಲುಗಳು, ಸ್ಫೋಟಕಗಳು, ಆ್ಯಾಂಟಿ ಟ್ಯಾಂಕ್ ಶಸ್ತ್ರಾಸ್ತಗಳು, ಆ್ಯಾಂಟಿ ಏರ್ ಕ್ರಾಫ್ಟ್ ಲಾಂಚರ್ ಗಳು ಮತ್ತು ಆತ್ಮಹತ್ಯಾ ಬಾಂಬರ್ ಗಳು ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಬಳಸಿ ತಮ್ಮ ಜಿಹಾದ್ ನನ್ನು ಸಂಪೂರ್ಣಗೊಳಿಸುತ್ತವೆ!

ಆರ್ ಎಸ್ ಎಸ್ : ಭೌತಿಕ ವ್ಯಾಯಾಮಗಳಿಗಾಗಿ ಮತ್ತು ಚಟುವಟಿಕೆಳಿಗಾಗಿ ಸುಮಾರು ಐದು ಅಡಿ ಉದ್ದದ ದೊಣ್ಣೆಯನ್ನು ಬಳಸುತ್ತಾರೆ ಸಂಘಿಗಳು. ಆದರೆ, ದೊಣ್ಣೆಗಳನ್ನು ಬಳಸಿ ಭಯೋತ್ಪಾದನೆ ಹರಡುವ ಕಲೆ ಅವರಿಗೆ ಚೆನ್ನಾಗಿ ಕರಗತವಾಗಿದೆ ಎಂದು ಹಾಸ್ಯಾಸ್ಪದವಾದ ಹೇಳಿಕೆಗಳಿದೆ ಬಿಡಿ!! ಪ್ರಮುಖವಾಗಿ, ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲು ಕಠಿಣವಾದ ಕಾನೂನುಗಳಿವೆ. ಆದ ಕಾರಣಗಳಿಗೆ, ಕೆಲವೇ ಕೆಲವು ಸಂಘದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರಗಳ ಪರವಾನಗಿಯಮನ್ನು ನೀಡಲಾಗಿದೆಯೇ ಹೊರತು ಸಾರ್ವತ್ರಿಕವಾಗಿಯಲ್ಲ. ಇನ್ನುಳಿದಂತೆ, ಆತ್ಮರಕ್ಷಣೆಗಾಗಿ ಎಲ್ಲೋ ಕೆಲವರು
ಕಠಾರಿಯನ್ನು ಬಳಸುತ್ತಿದ್ದಾರೆಯೇ ಹೊರತು, ತಮ್ಮ ಸಿದ್ಧಾಂತಗಳನ್ನು ಹೇರುವುದಕ್ಕಾಗಿಯಲ್ಲ.

Image result for rastriya swayam sevaka sangha

ಭಯೋತ್ಪಾದನೆ ಅಥವಾ ಅಕ್ರಮ ಚಟುವಟಿಕೆಯ ಕ್ಷೇತ್ರಗಳಲ್ಲಿ ಸಾಧನೆ

ಐಸಿಸ್ : ಇಲ್ಲಿಯವರೆಗ ಐಸಿಸ್ ೨೦ ದೇಶಗಳಲ್ಲಿ ನಡೆಸಿದ ೭೦ ಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳಲ್ಲಿ ಒಂದಷ್ಟು ಪ್ರಮುಖವಾದ ದಾಳಿಗಳ ಬಗ್ಗೆ ಅರಿಯಲೇ ಬೇಕು..

  1. ಯೆಮನ್ ೨೦೧೫ : ಎರಡು ಶಿಯಾ ಮಸೀದಿಗಳಲ್ಲಿ ನಡೆಸಿದ ಬಾಂಬ್ ದಾಳಿಗೆ ೧೪೨ ಜನ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಕ್ಕೊಳಗಾದವರು ೩೫೧ ಕ್ಕೂ ಹೆಚ್ಚು ಜನ!
  2. ಟರ್ಕಿ ೨೦೧೫ : ಶಾಂತಿ ಯಾತ್ರೆಯಲ್ಲಿ, ಆತ್ಮಾಹುತಿ ಬಾಂಬರ್ ರಿಂದ ಸ್ಫೋಟ! ೧೦೩ ಕ್ಕಿಂತ ಹೆಚ್ಚು ಜನ ಕೊಲ್ಲಲ್ಪಟ್ಟಿದ್ದರೆ, ೪೦೦ ಕ್ಕಿಂತಲಾಊ ಹೆಚ್ಚು ಜನಕ್ಕೆ ಗಾಯಗಳಾಗಿದೆ!
  3. ಯುಎಸ್ ಎ ೨೦೧೬ : ಒರ್ಲಾಂಡೋ ನೈಟ್ ಕ್ಲಬ್ಬಿನಲ್ಲಿ ನಡೆಸಿದ ಗುಂಡಿನ ದಾಳಿಗೆ ೪೯ ಜನರು ಸಾವನ್ನಪ್ಪಿದ್ದರೆ, ೫೩ ಜನರಿಗೆ ಗಂಭೀರವಾದ
    ಗಾಯವಾಗಿತ್ತು.
  4. ಫ್ರಾನ್ಸ್ ೨೦೧೬ : ಬಾಸ್ಟಿಲ್ಲೆ ಆಚರಣೆಯ ದಿನ ೮೬ ಜನರು ಸಾವನ್ನಪ್ಪಿದ್ದರೆ, ೪೩೪ ಜನರಿಗೆ ಗಂಭೀರ ಗಾಯಗಳಾಗಿತ್ತು.
  5. ಪಾಕಿಸ್ತಾನ ೨೦೧೬ : ಕ್ವೆತಾ ಪ್ರದೇಶದಲ್ಲಿ ನಡೆದ ದಾಳಿಗೆ ೬೧ ಜನರು ಸಾವನ್ನಪ್ಪಿದ್ದರೆ, ೧೬೧ ಕ್ಕಿಂತ ಹೆಚ್ಚು ಜನರಿಗೆ ಗಾಯಗಳಾಗಿತ್ತು‌.
  6. ಯು ಕೆ ೨೦೧೭ : ವೆಸ್ಟ್ ಮಿಂಸ್ಟರ್ ಅರಮನೆಯ ಎದುರು ನಡೆದ ದಾಳಿಗೆ ಐದು ಜನರು ಸಾವನ್ನಪ್ಪಿದ್ದರೆ, ೪೧ ಮಂದಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದರು.

ಇದಷ್ಟೂ ಕೂಡ ಐಸಿಸ್ ನಡೆಸಿದ ಸ್ಯಾಂಪಲ್ ಗಳು!! ಇನ್ನು ಅಲ್ ಕೈದಾ, ಸಿಮಿ, ಎಂಬಂತಹ ನೂರಾರು ಭಯೋತ್ಪಾದಕ ಇಸ್ಲಾಂ ಸಂಘಟನೆಗಳಿಂದ ಆದ ದಾಳಿಗಳೆಷ್ಟು ಎಂಬುದನ್ನು ಕಲ್ಪಿಸಿಕೊಳ್ಳಿ.

Image result for rastriya swayam sevaka sangha's contribution to the society

ಆರ್ ಎಸ್ ಎಸ್ : ಈ ಕೆಳಗೆ ನೀಡಿರುವಂತಹದ್ದು ಸ್ವಯಂ ಸೇವಕ ಸಂಘಕ್ಕೆ ಜಾತ್ಯಾತೀತ ಸಮಾಜ ತಳುಕು ಹಾಕಿದ ಒಂದಷ್ಟು ಘಟನೆಗಳು ಅಷ್ಟೇ ಹೊರತು, ಸ್ವಯಂ ಸೇವಕ ಸಂಘ ಸಿದ್ಧಾಂತವನ್ನು ಪ್ರತಿಪಾದಿಸಲು ಶಸ್ತ್ರಗಳನ್ನು ಹಿಡಿಯುವುದಿಲ್ಲ ಎಂಬುದು ಗಮನದಲ್ಲಿರಲಿ.

ಮಹಾತ್ಮಾ ಗಾಂಧಿಯ ಹತ್ಯೆ : ಸಂಘದ ಮಾಜಿ ಸ್ವಯಂ ಸೇವಕರಾಗಿದ್ದ ನಾಥೂರಾಮ್ ಗೋಡ್ಸೆ ಗಾಂಧಿಯೆಡೆಗೆ ಗುಂಡು ಹಾರಿಸಿದ್ದರು. ಸಮಯವನ್ನು ಬಳಸಿಕೊಂಡ ನೆಹರೂ ಪಿತೂರಿಯಿಂದ ಕೆಲವು ಸಂಘದ ನಾಯಕರನ್ನು ನಾಥೂರಾಮ್ ಗೋಡ್ಸೆಯರೊಡಗೂಡಿ ಮೊಕದ್ದಮೆ ಹೂಡಿ, ಬಂಧಿಸಿ ಕಟಕಟೆಗೆ ಹಾಜರು ಪಡಿಸಲಾಯಿತು. ಸಂಘಕ್ಕೂ ಹತ್ಯೆಗೂ ಸಂಬಂಧವಿರದಿದ್ದರೂ ಸಹ ನೆಹರೂ ವಿನ ಪಿತೂರಿ ಶಾಶ್ವತವಾಗಿ ಸಂಘಕ್ಕೊಂದು ಕಪ್ಪು ಚುಕ್ಕೆ ಬಳಿಯಿತು. ಆದರೆ, ಸ್ವತಃ ನ್ಯಾಯಾಂಗ ವ್ಯವಸ್ಥೆಯೇ ಗಾಂಧೀಜಿಯ ಹತ್ಯೆಗೂ ಸಂಘಕ್ಕೂ ಸಂಬಂಧವಿಲ್ಲವೆಂದು ತೀರ್ಪು ನೀಡಿ ಮೊಕದ್ದಮೆಯನ್ನು ಖುಲಾಸೆಗೊಳಿಸಿತು ಮತ್ತು ಸಂಘದ ಮೇಲೆ ಹಾಕಿದ್ದ ನಿಷೇಧವನ್ನೂ ತೆಗೆದು ಹಾಕಿತು.

ಕೋಮು ಗಲಭೆ : ಗುಜರಾತಿನ ಗೋಧ್ರಾ ಗಲಭೆಯೊಂದನ್ನೇ ಇಟ್ಟುಕೊಂಡು ಸಂಘವನ್ನು ಗುರಿಯಾಗಿಸಿದ್ದು ಇವತ್ತಿನ ಸೋಗಲಾಡಿ ಸೆಕ್ಯುಲರ್ ಗಳಷ್ಟೇ. ಆದರೆ, ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದು , ಮುಸಲ್ಮಾನರು ಸಜೀವವಾಗಿ ಕರಸೇವಕರನ್ನು ಬೆಂಕಿ ಇಟ್ಟು ದಹನಗೊಳಿಸಿದಾಗ! ಅದಾಗ್ಯಿಯೂ ಇದನ್ನು ಕೋಮು ಗಲಭೆ ಎನ್ನಲಾಗುತ್ತದೆ, ತಮ್ಮವರಿಗಾದ ಅನ್ಯಾಯವನ್ನು ತಿರುಗಿಸಿ ಕೊಟ್ಟಿದ್ದು ಕೋಮು ಗಲಭೆಯಾಗಲು ಸಾಧ್ಯವಿಲ್ಲ. ಬದಲಾಗಿ ಅದೊಂದು ಎಚ್ಚರಿಕೆ.

Image result for rastriya swayam sevaka sangha's contribution to the society

ಬಾಬರಿ ಮಸೀದಿ ಧ್ವಂಸ : ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಸಂಘದ ಕಾರ್ಯಕರ್ತರೆಂದು ಹೇಳಲಾಗಿದೆಯಾದರೂ, ಧ್ವಂಸಗೊಳಿಸಿದ್ದು ಕೋಮು ಗಲಭೆಯಾಗಲು ಸಾಧ್ಯವಿಲ್ಲ. ಹಿಂದೂಗಳ ಆರಾಧ್ಯ ದೈವನಾದ ರಾಮನ ದೇವಸ್ಥಾನವನ್ನು ಧ್ವಂಸ ಮಾಡಿ ಮೊಘಲ್ ರಾಜ ಕಟ್ಟಿದ ಮಸೀದಿಯನ್ನು ಕೆಡವಿ ಮತ್ತೆ ರಾಮನನ್ನು ಸ್ಥಾಪಿಸಿದ್ದು ಗಲಭೆಯಲ್ಲ, ಬದಲಾಗಿ ತಮ್ಮದಾದ ಪ್ರದೇಶದ ಮೇಲೆ ಹಕ್ಕು ಸಾಧಿಸಿದ್ದಷ್ಟೇ!

ಸಾಮಾಜಿಕ ಸುಧಾರಣೆಗಳು

ಐಸಿಸ್ : ಶರಿಯತ್ ಮತ್ತು ಇಸ್ಲಾಂ ಕಾನೂನನ್ನು ಮಾತ್ರ ಪ್ರತಿಪಾದಿಸಿದ ಐಸಿಸ್ ನಲ್ಲಿ ರಕ್ತದ ಕಲೆಗಳಿದೆಯೇ ಹೊರತು, ಸಮಾಜದಲ್ಲಿ ನೆಮ್ಮದಿ ಮೂಡಿಸಿದ ಯಾ ಉದಾಹರಣೆಗಳೂ ಇಲ್ಲ.

ಆರ್ ಎಸ್ ಎಸ್ : ಸಾಮಾಜಿಕ ಸುಧಾರಣೆಗಾಗಿ, ರಾಷ್ಟ್ರದ ಹಿತಕ್ಕಾಗಿ ಸಂಘ ನಡೆಸಿದ ಕೆಲ ಪ್ರಾಮಾಣಿಕ ಪ್ರಯತ್ನಗಳು ಈ ಕೆಳಗಿನಂತಿವೆ !

  • ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಸಮಾಜಮುಖಿಯನ್ನಾಗಿಸುವ ಪ್ರಯತ್ನ ಮಾಡಿದೆ.
  • ೧೯೭೧ ರ ಒರಿಸ್ಸಾ ಚಂಡಮಾರುತ, ೧೯೭೭ ರ ಆಂಧ್ರ ಪ್ರದೇಶ ಚಂಡಮಾರುತ, ೧೯೮೪ ರಲ್ಲಾದ ಭೋಪಾಲ್ ದುರಂತ, ೨೦೦೧ ರಲ್ಲಿ ಗುಜರಾತಿನಲ್ಲಾದ ಭೂಕಂಪನಗಳು, ೨೦೦೪ ರಲ್ಲಿ ಹಿಂದೂ ಮಹಾಸಾಗರದಲ್ಲಾದ ಸುನಾಮಿ, ೨೦೧೩ ರಲ್ಲಿ ಉತ್ತರಾಖಂಡದ ಪ್ರವಾಹ, ೨೦೦೬ ರ ಗುಜರಾತ್ ಪ್ರವಾಹ ಮತ್ತು ಇತರೆ.. ಇಂತಹ ಪರಿಸ್ಥಿತಿಗಳಲ್ಲಿ ಸಂತ್ರಸ್ತರಿಗೆ ಸೂರು ಕಲ್ಪಿಸಿದೆ! ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರನ್ನು ಸೇನೆಯ ಜೊತೆಗೂಡಿ ರಕ್ಷಿಸಿದೆ! ದೇಶದಲ್ಲಿ ಎಲ್ಲೇ ಪ್ರಾಕೃತಿಕ ವಿಕೋಪವಾದಾಗಲೂ, ಹಿಂದೂ ಅನ್ಯಧರ್ಮೀಯನೆಂದು ನೋಡದೇ ಮೊದಲು ಸಹಾಯಕ್ಕೆ ಧಾವಿಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾತ್ರ!!
  • ೧೯೯೯ ರ ಕಾರ್ಗಿಲ್ ಯುದ್ಧದ ಸಂತ್ರಸ್ತರಿಗೆ ನೆರವು ನೀಡಿದೆ‌.
  • ದಾದ್ರಾ ಮತ್ತು ಹವೇಲಿ ನಗರದಲ್ಲಿ ಪೋರ್ಚುಗೀಸರನ್ನು ಒದ್ದು ಓಡಿಸಿ ಗೋವಾವನ್ನು ಭಾರತದ ಅಧೀನಕ್ಕೊಳಪಡಿಸಿದ್ದು ಇದೇ ಸಂಘದ ಕಾರ್ಯಕರ್ತರು!
  • ೧೯೭೫ ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿ, ಮೂಲಭೂತ ಹಕ್ಕುಗಳನ್ನು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದಾಗ, ಪ್ರಜಾಪ್ರಭುತ್ವದ ರಕ್ಷಣೆಗೆ ಹಗಲು ರಾತ್ರಿ ಕೆಲಸ ಮಾಡಿದ್ದು ಇದೇ ಸಂಘ!
  • ೧೯೭೧ ರಲ್ಲಿ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಬಾಂಗ್ಲಾ ಪ್ರಜೆಗಳ ಸಹಾಯಕ್ಕೆ ನಿಂತವರು ಇದೇ ಸಂಘದ ಕಾರ್ಯಕರ್ತರೇ! ಇಲ್ಲದಿದ್ದರೆ, ಅವತ್ತೇ ಭಾರತದಿಂದ ಬಾಂಗ್ಲಾ ಬೇರ್ಪಟ್ಟು ಬೇರೆ ದೇಶವಾಗಿ ಹೋಗುತ್ತಿತ್ತು!
  • ಸ್ವಾತಂತ್ರ್ಯಪೂರ್ವದಲ್ಲಿ ಸಂಘದ ಕಾರ್ಯಕರ್ತರು ರಾಷ್ಟ್ರಕ್ಕೋಸ್ಕರ ನೀಡಿದ ಕೊಡುಗೆ ಮರೆಯುವಂತಹುದ್ದಲ್ಲ.. ಪಾಕಿಸ್ಥಾನ ಸೃಷ್ಟಿಯಾಗುವಾಗಲೂ, ಅದೆಷ್ಟೋ ಭಾರತೀಯರ ಪ್ರಾಣ ಉಳಿಸಿದ್ದು ಇದೇ ಸಂಘದ ಕಾರ್ಯಕರ್ತರೇ!!

ತಮ್ಮ ಸಿದ್ದಾಂತದಲ್ಲಿ ನಂಬಿಕೆಯಿಲ್ಲದವರ ಜನರ ಚಿಕಿತ್ಸೆ

Image result for isis killing people

ಐಸಿಸ್ : ಯಾರು ಅಲ್ಲಾಹನನ್ನು ಒಪ್ಪುವುದಿಲ್ಲವೋ, ಶರಿಯತ್ ಕಾನೂನನ್ನು ಅನುಸರಿಸುವುದಿಲ್ಲವೋ, ಯಾರು ಕಾಫಿರರೋ,. ಗರ್ಭಿಣಿಯೇ ಆಗಿರಲಿ, ಹಸುಳೆಯೇ ಆಗಿರಲಿ, ಕೊಲ್ಲಲಾಗುತ್ತದೆ! ಚಿಕಿತ್ಸೆಯನ್ನಂತೂ ಬಿಟ್ಟುಬಿಡಿ!!

ಆರ್ ಎಸ್ ಎಸ್ : ವಿಭಜನೆಯ ಸಮಯದಲ್ಲಿ ಹೇಗೆ ಮುಸಲ್ಮಾನರು ಪ್ರತ್ಯೇಕ ರಾಷ್ಟ್ರ ಬೇಕೆಂದರೋ., ಅದೇ ರೀತಿ ಸಂಘದ ಕಾರ್ಯಕರ್ತರೂ ಭಾರತವನ್ನು ಹಿಂದೂ (ಸಿಕ್, ಜೈನ, ಬೌದ್ಧ, ಮುಸಲ್ಮಾನೇತರರು ಸೇರಿದಂತೆ) ಗಳಿಗೆ ನೀಡಬೇಕೆಂದು ಬಯಸಿತು. ಅದಲ್ಲದೇ, ಹಿಂದೂಗಳ
ಸಾರ್ವಭೌಮತೆಯ ದೇಶವೊಂದನ್ನು ಸಂಘ ಬಯಸಿತ್ತಾದರೂ ಸಹ, ಭಾರತದ ಹೊಸ ಕಾನೂನು ವ್ಯವಸ್ಥೆಯನ್ನು ಒಪ್ಪಿತು. ಜೊತೆಗೆ ರಾಷ್ಟ್ರೀಯ ಮುಸಲ್ಮಾನ ಮಂಚ್ ನನ್ನೂ ಸ್ಥಾಪಿಸಿತು. ಇದರಿಂದ ಕೋಮು ಸೌಹಾರ್ದತೆಗೆ ಹೆಚ್ಚು ಅನುಕೂಲವಾಯಿತು.

ಎಂತೆಂತಹವರು ಸಂಘಟನೆಗಳ ಜೊತೆ ಕೈ ಜೋಡಿಸಿದ್ದಾರೆ ಅಥವಾ ಸಂಘಟನೆ ಸಮಾಜಕ್ಕೆ ನೀಡಿದೆ ಎಂಬುದನ್ನು ನೋಡಿ!!

ಐಸಿಸ್ : ಈ ಎಲ್ಲಾ ಕೆಳಗಿನ ನಾಯಕರು ಜಾಗತಿಕವಾಗಿ ಕುಖ್ಯಾತರು ಮತ್ತು ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕರು !!

Image result for most wanted terrorists

ಅಬು ಬಕ್ರ್ ಅಲ್ ಬಾಗ್ದಾದಿ
ಅಬ್ದುಲ್ ಖಾದೀರ್ ಮುಮಿನ್
ಅಬಯ ಮೊಹಮ್ಮದ್ ಅಲ್ ಶಿಮಾಲಿ
ಅಬು ಅಯ್ಮನ್ ಅಲ್ ಇರಾಕಿ. etc-

ಆರ್ ಎಸ್ ಎಸ್ : ಈ ಕೆಳಗಿನ ನಾಯಕರು ಜಾಗತಿಕವಾಗಿ ಪ್ರಸಿದ್ಧರು ಮತ್ತು ಜಾಗತಿಕವಾಗಿ ಗೌರವಿಸಲ್ಪಟ್ಟವರು!

ಅಟಲ್ ಬಿಹಾರಿ ವಾಜಪೇಯಿ : ಭಾರತ ಗಣರಾಜ್ಯದ ೧೦ ನೇ ಪ್ರಧಾನ ಮಂತ್ರಿ!
ನರೇಂದ್ರ ಮೋದಿ : ಭಾರತದ ೧೪ ನೇ ಪ್ರಧಾನಿ!
ರಾಜನಾಥ್ ಸಿಂಗ್!
ಮುರಳಿ ಮನೋಹರ ಜೋಷಿ! etc-

Related image

ಯೋಚಿಸಿ!!

ಯಾವುದು ಭಯೋತ್ಪಾದಕ ಸಂಘಟನೆ!? ಯಾವುದು ಅಶಾಂತಿಯನ್ನು ಪ್ರತಿಪಾದಿಸುತ್ತಿವೆ!! ಯಾವುದು ಕೊಲ್ಲುವ ಸಿದ್ಧಾಂತವನ್ನು ಭೋದಿಸುತ್ತಿದೆ?! ಯಾವುದು ರಾಷ್ಟ್ರದ ಹಿತಕ್ಕೋಸ್ಕರ ಬದ್ಧವಾಗಿದೆ!? ಯಾವುದು ಸಹಿಷ್ಣು? ಯಾವುದು ಮನುಕುಲಕ್ಕೆ ಒಳ್ಳೆಯದು?! ಯಾವ ಧರ್ಮ ಏನನ್ನು ಭೋಧಸುತ್ತಿದೆ!? ಶರಿಯತ್ ಬೇಕಾಗಿರುವುದೋ ಅಥವಾ ವಸುಧೈವ ಕುಟುಂಬಕಮ್ ಸಿದ್ಧಾಂತವೋ?! ೭೨ ಕನ್ಯೆಯರಿಗೆ ಜಿಹಾದ್ ಮಾಡುವ ಧರ್ಮ ಬೇಕಾಗಿರುವುದೋ ಅಥವಾ, ಮಾತೆಯರ ಪ್ರಾಣವನ್ನು ಸ್ವಪ್ರಾಣವನ್ನು ತ್ಯಾಗ ಮಾಡುವ ಧರ್ಮದವರೋ?! ಇವತ್ತು, ನೀವು ಯೋಚಿಸಬೇಕಾಗಿದೆ!

ಆರಾಮಾಗಿ ಕುಳಿತುಕೊಳ್ಳಿ! ಯೋಚಿಸಿ! ಮತ್ತೆ ತೀರ್ಪು ನೀಡಿ!

– ಅಜೇಯ ಶರ್ಮಾ

Tags

Related Articles

Close