ಪ್ರಚಲಿತ

ಬಿಜೆಪಿಯ ತಂತ್ರ ತಿಳಿದ ಸಿಎಂ ಸೋಲು ಒಪ್ಪಿಕೊಂಡರೇ..? ಎರಡೂ ಕ್ಷೇತ್ರಗಳಲ್ಲೂ ಹಿಂದೇಟು ಹಾಕಲು ಸಜ್ಜಾದ ಸಿದ್ದರಾಮಯ್ಯ..!!

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವಿನ ಕಿತ್ತಾಟವೂ ಹೆಚ್ಚಾಗುತ್ತಿದ್ದು ಭಾರೀ ಕೋಲಾಹಲ ಎಬ್ಬಿಸಿದೆ. ಇಡೀ ದೇಶದ ಜನತೆ ಇಂದು ಕರ್ನಾಟಕದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ ಎಂದರೆ ಯಾವ ರೀತಿಯ ಒಂದು ಹುಚ್ಚು ಹಚ್ಚಿಸಿದೆ ಎಂಬುದು ತಿಳಿಯುತ್ತದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿಗೆ ಬಿದ್ದಿದ್ದರೆ, ಇತ್ತ ಪ್ರಾದೇಶಿಕ ಪಕ್ಷವಾಗಿ ಹುಟ್ಟಿಕೊಂಡ ಜನತಾ ದಳ (ಜೆಡಿಎಸ್) ಕೂಡಾ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಹೆಚ್ಚು ಸ್ಥಾನ ಸಿಕ್ಕರೂ ಬಹುಮತದಿಂದ ಗೆಲ್ಲುವುದು ಅಸಾಧ್ಯ ಎಂಬಂತಿದೆ. ಆದರೆ ಕರ್ನಾಟಕದಲ್ಲಿ ಹೇಗಾದರೂ ತಮ್ಮ ಸರಕಾರ ರಚನೆ ಮಾಡಲೇ ಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕದಲ್ಲಿ ಹೊಸ ತಂತ್ರ ರೂಪಿಸಿ ಈ ಬಾರಿ ಸರಕಾರ ನಮ್ಮದೇ ಎಂಬ ಗ್ರೀನ್ ಸಿಗ್ನಲ್ ನೀಡಿದ್ದಾರೆ.!

ಕಮಲ ಹಿಡಿಯಲು ಮುಂದಾದ ತನೆಹೊತ್ತ ಮಹಿಳೆ..!?

ಚುನಾವಣಾ ಸಮಯದಲ್ಲಿ ಬಹುಮತ ಸಿಗದೇ ಹೋದಾಗ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ಇದೇ ಮೊದಲೇನಲ್ಲಾ. ಅದೇ ರೀತಿಯ ಸನ್ನಿವೇಶ ಕರ್ನಾಟಕದಲ್ಲೂ ಎದುರಾಗುವ ಸಾಧ್ಯತೆ ಇದೆ ಎಂಬುದು ಸದ್ಯ ತಿಳಿಯುತ್ತಿದೆ. ಯಾಕೆಂದರೆ ಕಾಂಗ್ರೆಸ್ ನ ಸರ್ವಾಧಿಕಾರದ ಆಡಳಿತಕ್ಕೆ ಬೇಸತ್ತು ಜೆಡಿಎಸ್ ಕೂಡಾ ಭಾರತೀಯ ಜನತಾ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಅಂಶ ಬೆಳಕಿಗೆ ಬಂದಿದೆ.

ಯಾಕೆಂದರೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೇಗಾದರೂ ಮಣಿಸಲೇಬೇಕು ಎಂದು ಯೋಜನೆ ರೂಪಿಸಿರುವ ಬಿಜೆಪಿ ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಿದೆ. ಸಿಎಂ ಸ್ಪರ್ಧಿಸುವ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳು ಭಾರೀ ಕುತೂಹಲ ಕೆರಳಿಸಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಳ್ಳಬಹುದು ಅಥವಾ ಒಳ ಒಪ್ಪಂದದ ಮೂಲಕ ಮಣಿಸಲು ಸಜ್ಜಾಗಿದೆ.

ಸಿದ್ದರಾಮಯ್ಯನವರೇ ಒಪ್ಪಿಕೊಂಡ ಮಾತು ನಿಜವಾಗಬಹುದೇ‌‌..?

ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ತಾನು ನಂ ೧ ರಾಜ್ಯ ನಿರ್ಮಿಸಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಭ್ರಷ್ಟರನ್ನೇ ಸುತ್ತಮುತ್ತ ನೇಮಿಸಿಕೊಂಡು ರಾಜ್ಯವನ್ನು ಬಲಿಕೊಡಲು ಹೊರಟ ಸಿದ್ದರಾಮಯ್ಯನವರನ್ನು ಈ ಬಾರಿ ಸೋಲಿಸಲೇಬೇಕು ಎಂದು ಇತರ ಪಕ್ಷಗಳು ತಂತ್ರ ರೂಪಿಸಿದ್ದರೆ, ಇತ್ತ ಸ್ವತಃ ಮುಖ್ಯಮಂತ್ರಿಗಳೇ ಈ ಮಾತನ್ನು ಒಪ್ಪಿಕೊಂಡಿದ್ದಾರೆ‌. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ನನ್ನನ್ನು ಸೋಲಿಸಲು ಈಬಾರಿ ಒಂದಾಗುತ್ತವೆ ಎಂದು ಬಾಗಲಕೋಟೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾನೆ. ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಸಿದ್ದರಾಮಯ್ಯನವರ ಸೋಲು ಖಚಿತ..!

ಅದೇನೇ ಆಗಲಿ , ಒಟ್ಟಾರೆಯಾಗಿ ರಾಜ್ಯ ವಿಧಾನಸಭಾ ಚುನಾವಣೆ ಎಲ್ಲಾ ರೀತಿಯಲ್ಲು ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ಡೊಂಬರಾಟವೂ ಬಹಳ ಜೋರಾಗಿಯೇ ನಡೆಯುತ್ತಿದೆ.!!

source: daily hunt

–ಅರ್ಜುನ್

 

Tags

Related Articles

Close