ಪ್ರಚಲಿತ

ಭಾರತದ ವಿರುದ್ಧ ಹೋರಾಟಕ್ಕೆ ಪಾಕ್‍ನಿಂದ ಮಾಸ್ಟರ್ ಪ್ಲಾನ್!! ಮತ್ತೊಮ್ಮೆ ಬಯಲಾಯಿತು ಪಾಕಿಸ್ತಾನದ ಕರಾಳ ಮುಖ!!

ಭಾರತದ ವಿರುದ್ಧ ಕಾಲ್ಕೆರೆದು ಯುದ್ಧಕ್ಕೆ ಬರುವ ಪಾಕಿಸ್ತಾನಕ್ಕೆ ಎಷ್ಟು ಬುದ್ಧಿಕಲಿಸಿದರೂ ಬುದ್ಧಿ ಬರುವಂತೆ ಕಾಣುತ್ತಿಲ್ಲ!! ಇಡೀ ವಿಶ್ವವೇ ಪಾಕಿಸ್ತಾನದ ನಡತೆಗೆ ಈಗಾಗಲೇ ಹಲವಾರು ಬಾರೀ ವಿರೋಧವನ್ನು ವ್ಯಕ್ತಪಡಿಸಿದರೂ ತನ್ನ ಛಾಳಿಯನ್ನು ಮಾತ್ರ ಬಿಡಲ್ಲ!! ವಿಶ್ವದ ಭಯೋತ್ಪಾದಕರ ಉತ್ಪಾದನೆಯ ತಾಣ, ಪೆÇೀಷಣೆಯ ನೆಲೆ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ತನ್ನ ಉಗ್ರ ಪೆÇೀಷಣೆಯನ್ನು ಮುಂದುವರಿಸುತ್ತಲೇ ಇದೆ!! ಮುಂಬೈ ದಾಳಿಯ ಮಾಸ್ಟರ್ ಮೈಂಡ್, ವಿಶ್ವ ಉಗ್ರಪಟ್ಟಿಯಲ್ಲಿರುವ ಭಯೋತ್ಪಾದಕ ಹಫೀಸ್ ಸಯೀದ್‍ಗೆ ಪಾಕಿಸ್ತಾನ ಸರ್ಕಾರವೇ ಭದ್ರತೆ ನೀಡುವ ಮೂಲಕ ತನ್ನ ಕರಾಳ ಮುಖವನ್ನು ಬಯಲು ಮಾಡಿಕೊಂಡಿತ್ತು!! ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಸ್ ಸಯೀದ್‍ಗೆ ಕೆಲ ತಿಂಗಳ ಹಿಂದೆ ಪಾಕ್ ಕೋರ್ಟ್ ತೀರ್ಪು ನೀಡಿ, ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತಾದರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಹಫೀಸ್ ಸಯೀದ್ ಗೆ ಜೀವಕ್ಕೆ ಆತಂಕವಿದ್ದು, ಆದ್ದರಿಂದ ಭದ್ರತೆ ನೀಡಲಾಗುತ್ತಿದೆ ಎಂದು ನೆಪ ಹೇಳಿತ್ತು!!. ಇದನ್ನು ಖಂಡಿಸಿ ಪಾಕಿಸ್ತಾದ ಶತ್ರು ರಾಷ್ಟ್ರಗಳು ಮತ್ರವಲ್ಲದೆ ತನ್ನ ಮಿತ್ರ ರಾಷ್ಟ್ರವಾದ ಚಿನಾ ಕೂಡಾ ಹಫೀಜ್ ಸೈಯದ್‍ಗೆ ಆಶ್ರಯ ನೀಡಿದ್ದಕ್ಕಾಗಿ ತಿರುಗಿ ಬಿದ್ದಿತ್ತು!! ಅದಲ್ಲದೆ ಇದೀಗ ಭಾರತವನ್ನು ಹೇಗಾದರೂ ಮಣಿಸಬೇಕೆಂದು ಈಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ!!

ಭಾರತದ ಸೇನೆ ಮೇಲೆ ದಾಳಿಗೆ ಐಎಸ್‍ಐ ಪ್ರೇರಣೆ!!

ಗಡಿ ನಿಯಂತ್ರಣ ರೇಖೆ (ಎಲ್‍ಓಸಿ) ದಾಟಿ ಭಾರತದ ಸೈನಿಕರ ಮೇಲೆ ದಾಳಿ ನಡೆಸಲು ಪಾಕಿಸ್ಥಾನದ ವಿವಿಧ ಕಾರಾಗೃಹಗಳಲ್ಲಿರುವ ಡಕಾಯಿತರು, ಅಪರಾಧಿಗಳಿಗೆ ಐಎಸ್‍ಐ ತರಬೇತಿ ನೀಡುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಭಾರತದ ಸೈನಿಕರ ಮೇಲೆ ದಾಳಿ ಮಾಡಲು ಒಪ್ಪಿಕೊಳ್ಳುವವರ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವುದು, ನಗದು ಬಹುಮಾನ ಸೇರಿ ಹಲವು ಆಮಿಷಗಳನ್ನೂ ಒಡ್ಡಲಾಗುತ್ತದೆ. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‍ಐ)ಇದರ ನೇತೃತ್ವ ವಹಿಸಿಕೊಂಡಿದೆ. ಕಾರಾಗೃಹ ವಾಸಿಗಳಿಗೆ ಉಗ್ರಗಾಮಿತ್ವದ ತರಬೇತಿ ಮುಕ್ತಾಯವಾದ ಬಳಿಕ ಅವರನ್ನು ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ)ಗೆ ನಿಯೋಜನೆ ಮಾಡಲಾಗುತ್ತದೆ. ಅವರೇ ಎಲ್‍ಓಸಿಯಾದ್ಯಂತ ದಾಳಿಗಳನ್ನು ನಡೆಸುತ್ತಾರೆ. ಈ ತಂಡದಲ್ಲಿ ಉಗ್ರರೂ ಇದ್ದಾರೆ. ಒಂದು ವೇಳೆ ಭಾರತೀಯ ಸೇನಾಪಡೆಗಳು ಉಗ್ರರನ್ನು ಸೆರೆ ಹಿಡಿದರೆ ಸುಲಭವಾಗಿ ನುಣುಚಿಕೊಳ್ಳಬಹುದು ಎನ್ನುವುದು ಪಾಕ್ ಲೆಕ್ಕಾಚಾರ ಎನ್ನಲಾಗಿದೆ.

ಮಾರ್ಚ್‍ನಲ್ಲಿ 34 ವರ್ಷದ ಯುವಕನನ್ನು ಪಂಜಾಬ್‍ನಲ್ಲಿ ದಸ್ತಗಿರಿ ಮಾಡಿದ ವೇಳೆ, ಆತ ಐಎಸ್‍ಐ ಪರ ಕೆಲಸ ಮಾಡುತ್ತಿದ್ದಾನೆ ಎಂಬುದು ಬಹಿರಂಗವಾಗಿತ್ತು. 2017ರ ಅಕ್ಟೋಬರ್ ನಲ್ಲಿ ಪಾಕಿಸ್ಥಾನ ಸೇನೆ ಉಗ್ರಗಾಮಿಗಳ ಜತೆಗೆ ಕೈಜೋಡಿಸಿದ್ದ ವಿಚಾರವನ್ನು ಒಪ್ಪಿಕೊಂಡಿತ್ತು ಎಂಬ ಅಂಶ ವರದಿಯಾಗಿತ್ತು. ಜತೆಗೆ ಪಾಕಿಸ್ಥಾನ ಇಂಟೆಲಿಜೆನ್ಸ್ ಬ್ಯೂರೋ ಕೂಡ ಭಯೋತ್ಪಾದಕ ಸಂಸ್ಥೆಗಳ ಜತೆಗೆ ಕೈಜೋಡಿಸಿರುವುದು ಗೊತ್ತಾಗಿತ್ತು.

ಕೈದಿಗಳು ಗಡಿಯಲ್ಲಿ ತಮ್ಮ ಸೇವೆ ಸಲ್ಲಿಸಿ ವಾಪಸ್ ಬಂದರೇ ಅವರಿಗೆ ಜೈಲುವಾಸದ ಶಿಕ್ಷೆಯನ್ನು ಕಡಿಮೆ ಮಾಡುವುದು ಮತ್ತು ಸೇವೆ ಸೂಕ್ತ ಭತ್ಯೆ ನೀಡಲು ಐಎಸ್ ಐ ನಿರ್ಧರಿಸಿದೆ. ಅಲ್ಲದೇ ಇವರಲ್ಲಿ ಕೆಲವರನ್ನು ಆತ್ಮಹತ್ಯಾ ಬಾಂಬರ್ ಗಳನ್ನಾಗಿಯೂ ಕೂಡ ಬಳಸಿಕೊಳ್ಳುವ ಆತಂಕ ಎದುರಾಗಿದೆ. ಇದಲ್ಲದೇ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಪಂಜಾಬ್ ನಲ್ಲಿ ಖಲಿಸ್ತಾನ ಹೋರಾಟಕ್ಕೆ ಬೆಂಬಲ ನೀಡುವುದು, ಆತ್ಮಹುತಿ ಬಾಂಬರ್ ಗಳನ್ನು ಸೃಷ್ಟಿ ಮಾಡುವುದು, ಹನಿ ಟ್ರ್ಯಾಪ್ ಮೂಲಕ ಯುವಕರನ್ನು ಸೆಳೆಯುವುದು, ನಿರಂತರವಾಗಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುವ ಹುನ್ನಾರವನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‍ಐ ಹುನ್ನಾರ ನಡೆಸಿದೆ!! ಇದಾಗಲೇ ಹಲವಾರು ಬಾರಿ ಭಾರತೀಯ ಸೇನೆ ಪಾಕಿಸ್ತಾನಿಗಳಿಗೆ ತನ್ನ ಸೇನೆಯ ರುಚಿ ತೋರಿಸಿದ್ದು, ಇನ್ನು ಇಂತಹ ಮಾಸ್ಟರ್ ಪ್ಲಾನ್‍ಗೆ ಹೆದರುತ್ತಾರಾ?!!

  • ಪವಿತ್ರ
Tags

Related Articles

Close