ಪ್ರಚಲಿತ

ದೇಗುಲ ಸ್ಪೋಟಿಸಿ ಐಸಿಸ್ ಸೇರಲು ಸಿದ್ಧತೆ ನಡೆಸಿದ್ದ ಈ ಉಗ್ರ

ಕಳೆದ ವರ್ಷ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಆಟೋ ಒಂದರಲ್ಲಿ ಶಾರಿಕ್ ಎಂಬ ಉಗ್ರನ ಕೈಯಲ್ಲಿದ್ದ ‌ಕುಕ್ಕರ್ ಬಾಂಬ್ ಸ್ಪೋಟಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ಘಟನೆಯಲ್ಲಿ ಅಮಾಯಕ ಆಟೋ ಚಾಲಕ ಮತ್ತು ಉಗ್ರಗಾಮಿಗಳಿಬ್ಬರಿಗೂ ಗಾಯವಾಗಿತ್ತು. ಸೆರೆ ಸಿಕ್ಕ ಉಗ್ರನ ತನಿಖೆಯ ಸಂದರ್ಭದಲ್ಲಿ ಹಲವಾರು ಸ್ಪೋಟಕ ಮಾಹಿತಿಗಳು ಬಯಲಾಗಿದ್ದು, ಈ ಸಂಬಂಧ ಎನ್‌ಐಎಯು ವಿಶೇಷ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಇದು ಐಸಿಸ್ ಪ್ರೇರಿತ ಸ್ರೋಟವಾಗಿದೆ‌. ಪ್ರಮುಖ ಹಿಂದೂ ದೇಗುಲಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲು ಉಗ್ರರು ಸಂಚು ರೂಪಿಸಿರುವುದು ಸಹ ಇದೇ ಸಂದರ್ಭದಲ್ಲಿ ಬಯಲಾಗಿದೆ. ಹಾಗೆಯೇ ಕುಕ್ಕರ್ ಬಾಂಬ್ ದಾಳಿಗೆ ಸಂಬಂಧಿಸಿದ ಹಾಗೆ ಬಾಂಬ್ ಸ್ಪೋಟಿಸಿದ ಶಾರಿಕ್ ಜೊತೆಗೆ ಇನ್ನೋರ್ವ ಶಾರಿಕ್‌ನ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಈ ಇಬ್ಬರೂ ಭಯೋತ್ಪಾದಕರು ಬಾಂಬ್ ಸ್ಪೋಟ ಮಾಡುವ ಮೂಲಕ ಶರೀಯತ್ ಕಾನೂನಿನ ಪ್ರಚಚಾರ ಮಾಡಲು ಮುಂದಾಗಿದ್ದರು ಎಂದು ತನಿಖಾ ಸಂದರ್ಭದಲ್ಲಿ ಅಧಿಕಾ ರಿಗಳಿಗೆ ತಿಳಿದು ಬಂದಿದೆ. ಉಗ್ರರು ‌ದಕ್ಷಿಣ ಕನ್ನಡದ ಪ್ರಸಿದ್ಧ ಪುಣ್ಯ ಕ್ಷೇತ್ರ ಕದ್ರಿ ಮಂಜುನಾಥೇಶ್ವರ ದೇವಾಲಯವನ್ನು ಸ್ಪೋಟ ಮಾಡಿ, ಹಿಂದೂಗಳ ಮಾರಣ ಹೋಮಕ್ಕೆ ‌ಸಿದ್ಧತೆ ನಡೆಸಿದ್ದ. ಈ ಸಲುವಾಗಿ ಕುಕ್ಕರ್‌ನಲ್ಲಿ ಬಾಂಬ್ ಇರಿಸಿ ಆಟೋ ಒಂದರಲ್ಲಿ ಪ್ರಯಾಣಿಸಿದ್ದ. ಕುಕ್ಕರ್ ಒಳಗಿನ ಕಡಿಮೆ ಒತ್ತಡದ‌ ಕಾರಣದಿಂದ ನಡು ದಾರಿಯಲ್ಲೇ ಬಾಂಬ್ ಸ್ಪೋಟಗೊಂಡಿತ್ತು. ಅಮಾಯಕ ಚಾಲಕ ಮತ್ತು ಉಗ್ರ ಈ ಘಟನೆಯಲ್ಲಿ ಗಾಯಗೊಂಡಿದ್ದರು.

ಈ ಸ್ಫೋಟಕ್ಕೆ ಬಾಂಬ್ ತಯಾರಿಸಲು ಉಗ್ರ ಶಾರಿಕ್‌ಗೆ ಕುಕ್ಕರ್ ಬಾಂಬ್ ತಯಾರಿಕೆಗೆ ಸೈಯದ್ ಯಾಸಿನ್ ಎಂಬಾತ ಸಹಾಯ ಮಾಡಿದ್ದ. ಆತನೇ ಸ್ಪೋಟಕ ವಸ್ತುಗಳನ್ನು ಪೂರೈಕೆ ಮಾಡಿದ್ದರ ಬಗ್ಗೆಯೂ ತನಿಖಾ ವೇಳೆ ಉಗ್ರ ಶಾರಿಕ್ ಮಾಹಿತಿ ನೀಡಿದ್ದ.

ಈ ಸ್ಪೋಟದ ಬಳಿಕ ಶಾರಿಕ್ ಐಸಿಸ್ ಸೇರಲು ಸಿದ್ಧತೆ ನಡೆಸಿದ್ದ ಎಂದು ಆತ ತಿಳಿಸಿದ್ದಾನೆ ಎಂದು ಚಾರ್ಜ್ ಶೀಟ್ ‌ನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಮಂಗಳೂರಿನ ಗೋಡೆ ಬರಹದ ಪ್ರಕರಣ, ಶಿವಮೊಗ್ಗದ ಟ್ರಯಲ್‌ ಬಾಂಬ್ ಪ್ರಕರಣದಲ್ಲಿಯೂ ಶಾರಿಕ್ ಭಾಗಿಯಾಗಿದ್ದ. ಹಾಗೆಯೇ ಇನ್ನೂ ಹಲವಾರು ದೇಶ ವಿರೋಧಿ ಕೃತ್ಯಗಳನ್ನು ನಡೆಸುವುದಕ್ಕೂ ‌ಈತ ತಯಾರಿ ‌ನಡೆಸಿದ್ದ ಎಂಬ ಅಂಶಗಳನ್ನು ಸಹ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ದೇಶಕ್ಕೆ ದ್ರೋಹ ಬಗೆಯಲು ಹೊರಟು, ಹಿಂದೂ ದೇಗುಲದಲ್ಲಿ ಸ್ಪೋಟ ನಡೆಸಲು ಮುಂದಾದ ನಾಮರ್ಧ ಉಗ್ರ ಶಾರಿಕ್‌ಗೆ ಕದ್ರಿ ಮಂಜುನಾಥನೇ ತಕ್ಕ ಮಾಸ್ತಿ ಮಾಡಿದ್ದಾನೆ ಎಂಬುದು ಸತ್ಯ.

Tags

Related Articles

Close