ಪ್ರಚಲಿತ

ಅರೆಸ್ಟ್, ಅರೆಸ್ಟ್, ಅರೆಸ್ಟ್! ಮೂರೇ ಗಂಟೆಯಲ್ಲೇ ಮೂರು ತಿಮಿಂಗಿಲಗಳನ್ನು ಬಂಧಿಸಿದ ಕಾಶ್ಮೀರಿ ಪೊಲೀಸರು! ಬಂದ್ ಮಾಡ್ತೇವೆ ಎಂದಿದ್ದಕ್ಕೆ ಬಂದ್ ಮಾಡೇ ಬಿಟ್ಟ ಪೊಲೀಸರು!

ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ದರ್ಬಾರ್ ಅಂತ್ಯ ಕಂಡದ್ದೇ ಕಂಡದ್ದು, ಉಗ್ರ ಹಸ್ತಕರ ಭೇಟೆ ಭರ್ಜರಿಯಾಗಿಯೇ ಮುಂದುವರೆದಿದೆ. ಅತ್ತ ಗಡಿಯಲ್ಲಿ ಉಗ್ರರ ವಿರುದ್ಧ ಗುಂಡಿನ ಮೊರೆತ ಮೊಳಗಿಸುತ್ತಿರುವ ಭಾರತೀಯ ಸೈನಿಕರು, ಮತ್ತೊಂದು ಕಡೆ ಉಗ್ರರಿಗೆ ಬಹಿರಂಗ ಬೆಂಬಲ ನೀಡುವ ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿಗಳನ್ನು ಮಟ್ಟ ಹಾಕುತ್ತಿರುವ ಪೊಲೀಸರು.

ನಿನ್ನೆ ತಾನೇ ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿ ನಾಯಕರು ಸ್ಟ್ರೈಕ್ ಮಾಡ್ತೇವೆ ಎಂದು ಕರೆಕೊಟ್ಟಿದ್ದರು. ಪಿಡಿಪಿ ಸರ್ಕಾರದಿಂದ ಭಾರತೀಯ ಜನತಾ ಪಕ್ಷ ಹೊರ ಬಂದ ತಕ್ಷಣ ಬೆಚ್ಚಿ ಬಿದ್ದ ಪ್ರತ್ಯೇಕವಾದಿಗಳು ಇದೀಗ ಬಂದ್ ಮಾಡ್ತೇವೆ ಎಂದು ಬೆದರಿಕೆ ಒಡ್ಡಿದ್ದರು. ಆದರೆ ಇದಕ್ಕೆ ಆರಂಭದಲ್ಲೇ ಬ್ರೇಕ್ ಹಾಕಿದ ಜಮ್ಮು ಕಾಶ್ಮೀರ ಪೊಲೀಸರು ಮೂರು ಗಂಟೆಯಲ್ಲೇ ಮೂವರು ಉಗ್ರಹಸ್ತಕ ಪ್ರತ್ಯೇಕವಾದಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬೆಳ್ಳಂಬೆಳಗ್ಗೆಯೇ ಪ್ರತ್ಯೇಕವಾದಿ ನಾಯಕನೆನಿಸಿಕೊಂಡಿದ್ದ ಯಾಸೀನ್ ಮಲ್ಲಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬಂದ್ ಮಾಡ್ತೇವೆ ಎಂದು ಹೊರಟಿದ್ದ ಈ ಪ್ರತ್ಯೇಕವಾದಿ ನಾಯಕನನ್ನು ಶ್ರೀನಗರದಲ್ಲಿ ಬಂಧಿಸಿದ್ದರು. ಅದರ ಮರುಕ್ಷಣವೇ ಮತ್ತೋರ್ವ ಪ್ರತ್ಯೇಕವಾದಿ ಉಗ್ರಹಸ್ತಕ ಹಿಲಲ್ ವಾರ್‍ನನ್ನು ಕೂಡಾ ಬಂಧಿಸಿದ್ದಾರೆ. ಹಿಲಲ್ ವಾರ್ ಬಂಧನ ಸುದ್ಧಿ ಕೇಳುತ್ತಲೇ ಮತ್ತೆ ಬಂದ್ ಘೋಷಣೆಗೆ ಮುಂದಾದ ಮತ್ತೋರ್ವ ಪ್ರತ್ಯೇಕವಾದಿ ನಾಯಕ ಮಿರ್ವೈಸ್ ಉಮರ್ ಫಾರೂಕ್ ಎಂಬಾತನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಹೀಗೆ ಕೇವಲ ಮೂರು ಗಂಟೆಯ ಅವಧಿಯಲ್ಲಿ ಮೂವರು ಪ್ರತ್ಯೇಕವಾದಿ ನಾಯಕರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು ಉಗ್ರ ನಿಗ್ರಹ ಕಾರ್ಯಾಚರಣೆ ಮಿಂಚಿನ ವೇಗದಲ್ಲಿ ಸಾಗುತ್ತಿದೆ.

ಬಂಧಿತರು ಗೃಹ ಬಂಧನದಲ್ಲಿ..!

ಮೊದಲು ಬಂಧನಕ್ಕೊಳಗಾದ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲ್ಲಿಕ್‍ನನ್ನು ಪೊಲೀಸರು ಜೈಲಿಗಟ್ಟಿದ್ದರೆ ಮತ್ತಿಬ್ಬರನ್ನು ಗೃಹಬಂಧನದಲ್ಲಿಟ್ಟಿದ್ದಾರೆ. ಶ್ರೀನಗರದಲ್ಲಿ ಬಂಧನಕ್ಕೊಳಗಾದ ಯಾಸೀನ್ ಮಲ್ಲಿಕ್‍ನನ್ನು ಪೊಲೀಸರು ಬಂಧಿಸಿ ಒಯ್ದಿದ್ದಾರೆ. ಆದರೆ ಹಿಲಲ್ ವಾರ್‍ನನ್ನು ಮತ್ತು ಮಿರ್ವೈಸ್ ಉಮರ್ ಫಾರೂಕ್‍ನನ್ನು ಬಂಧಿಸಿದ್ದ ಪೊಲೀಸರು ಅವರ ಮನೆಯಲ್ಲೇ ಬಂಧನದಲ್ಲಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮೂಲಕ ಇಬ್ಬರು ಉಗ್ರ ಹಸ್ತಕರಿಗೆ ಗೃಹ ಬಂಧನದ ರುಚಿಯನ್ನು ಕಾಶ್ಮೀರ ಪೊಲೀಸರು ತೋರಿಸಿದ್ದಾರೆ.

ಪದೇ ಪದೇ ಪಾಕಿಸ್ಥಾನದ ಪ್ರಧಾನ ಮಂತ್ರಿ ಹಾಗೂ ಅಲ್ಲಿನ ಸರ್ಕಾರಿ ನಾಯಕರನ್ನು ಭೇಟಿ ಮಾಡಿ ಭಾರತದಲ್ಲಿ ಗಲಭೆ ಸೃಷ್ಟಿಸಲು ಕಾರಣವಾಗಿರುವ ಜಮ್ಮು ಕಾಶ್ಮೀರದ ಈ ಪ್ರತ್ಯೇಕವಾದಿ ನಾಯಕರನ್ನು ಇಂದು ಪೊಲೀಸರು ಬಂಧಿಸಿದ್ದು ಆಂತರಿಕ ಭದ್ರತೆಯನ್ನು ಮೊದಲು ಜಾಗೃತಗೊಳಿಸಿದ್ದಾರೆ. ಈವರೆಗೆ ಪಿಡಿಪಿ ಸರ್ಕಾರ ಅಧಿಕಾರದಲ್ಲಿದ್ದ ಕಾರಣ ಈ ತಿಮಿಂಗಿಲಗಳನ್ನು ಮಟ್ಟಹಾಕಲು ಕಷ್ಟವಾಗಿತ್ತು. ಆದರೆ ಇದೀಗ ಎಲ್ಲವೂ ಸುಲಲಿತವಾಗಿ ನಡೆಯುತ್ತಿದ್ದು ಪ್ರತ್ಯೇಕವಾದಿಗಳನ್ನು ಹಾಗೂ ಉಗ್ರರನ್ನು ಮಟ್ಟಹಾಕಲು ಭರ್ಜರಿ ಆರಂಭವನ್ನೇ ನೀಡಿದೆ.

  • ಸುನಿಲ್ ಪಣಪಿಲ
Tags

Related Articles

Close