ಪ್ರಚಲಿತ

ಕರ್ನಾಟಕ ಚುನಾವಣೆ.. ರಾಹುಲ್‍ಗಾಂಧಿಯ ಚಳಿ ಬಿಡಿಸಿದ ಚಾಣಕ್ಯ!! ಮತ್ತೆ ಪಪ್ಪುವಾದ ರಾಹುಲ್…

ಈಗಾಗಲೇ 105 ಸ್ಥಾನಗಳನ್ನು ಪಡೆಯುವ ಮೂಲಕ  ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪನವರು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದು ಕರ್ನಾಟಕದ ನೂತನ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ!! ನಿನ್ನೆ ರಾತ್ರಿಯಿಂದ ಭಾರೀ ಕುತೂಹಲ ಕೆರಳಿಸಿದ್ದ ಸರಕಾರ ರಚನೆಯ ಕುರಿತ ಸಂಶಯಗಳು ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ನಂತರ ತಿಳಿಯಾಗಿದೆ. ಈ ಮೂಲಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಆಯ್ಕೆಯಾಗಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಿಎಸ್ ಯಡಿಯೂರಪ್ಪ ರಾಜಭವನದ ಗಾಜಿನಮನೆಯ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಬಾಯಿವಾಲಾರವರು ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಪ್ರತಿಜ್ಞಾವಿಧಿ ಭೋದಿಸುವ ಮೂಲಕ ಪ್ರಮಾಣ ವಚನ ಸಮಾರಂಭವನ್ನು ನಡೆಸಿದರು!!

Image result for rahul

ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟರ್‍ನಲ್ಲಿ ಬಿಎಸ್‍ವೈ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಸಹ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಗೇರಿದೆ. ಇದು ಸಂವಿಧಾನಕ್ಕೆ ಮಾಡಿದ ಅವಮಾನ. ಇಂದು ಬೆಳಗ್ಗೆ ಬಿಜೆಪಿ ತನ್ನ ಹುಸಿ ಗೆಲುವನ್ನು ಸಂಭ್ರಮಿಸುತ್ತಿದ್ದರೆ, ಭಾರತ ಪ್ರಜಾಪ್ರಭುತ್ವದ ಸೋಲಿಗೆ ಶೋಕ ವ್ಯಕ್ತಪಡಿಸುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ!!

ಸತ್ಯ ತಿಳಿದಿದ್ದರೂ ರಾಹುಲ್ ಗಾಂಧಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ !! ೭೮ ಸ್ಥಾನ ಗೆದ್ದಿರುವ ನಿಮಗೆ ಇಷ್ಟು ಸೋಕ್ಕಿರಬೇಕಾದರೆ ಇನ್ನು ೧೦೪ ಸ್ಥಾನ ಪಡೆದು ಗೆದ್ದಿರುವವರಿಗೆ  ಅಧಿಕಾರವನ್ನು ಪಡೆಯಬೇಕು ಎಂಬ ಹಠ ಇರುವುದು ಸಹಜ ಎಂಬುವುದನ್ನು ರಾಹುಲ್ ಗಾಂಧಿಗೆ ಯಾರಾದರು ತಿಳಿಹೇಳಬೇಕ್ಕಿತ್ತು!!

ಸರಣಿ ಟ್ವೀಟ್‍ಗಳ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಬಿಜೆಪಿ ಚಾಣಾಕ್ಯ!!

ಇದಾಗಲೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿಭಟನೆ ಶುರುಮಾಡಿದ್ದಾರೆ!! ಅದಲ್ಲದೆ ರಾಹುಲ್ ಗಾಂಧಿ ಟ್ಟಿಟರ್‍ನಲ್ಲಿ ಟ್ವೀಟ್ ಮಾಡಿದಕ್ಕೆ ಬಿಜೆಪಿ ಚಾಣಕ್ಯ ಚೆನ್ನಾಗಿಯೇ ತಿರುಗೇಟು ನೀಡಿದ್ದಾರೆ!! ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಎಐಸಿಸಿ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್‍ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಸರಣಿ ಟ್ವೀಟ್‍ಗಳಲ್ಲಿ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಿಗೆ ಅವರ ಪಕ್ಷದ ಇತಿಹಾಸ ನೆನಪಿಲ್ಲ ಎನಿಸುತ್ತದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಅವರು ಸಂವಿಧಾನದ 356ನೇ ಅನುಚ್ಛೇದವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಷಾ ಟ್ವೀಟ್‍ನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಜನರು ಯಾರಿಗೆ ಬಹುಮತ ನೀಡಿರುವುದು 104 ಸ್ಥಾನ ಗಳಿಸಿರುವ ಬಿಜೆಪಿಗಾ ಅಥವಾ 78 ಸ್ಥಾನ ಮಾತ್ರ ಗಳಿಸಿರುವ ಕಾಂಗ್ರೆಸ್ ಅಥವಾ, 37 ಸ್ಥಾನ ಮಾತ್ರ ಗಳಿಸಿರುವ ಜೆಡಿಎಸ್‍ಗಾ ಎಂಬುವುದನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಜನರಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅವಕಾಶವಾದಿ ರಾಜಕಾರಣ ನಡೆಸುತ್ತಿದೆ. ಆ ಪಕ್ಷಗಳಿಗೆ ಕರ್ನಾಟಕದ ಅಭಿವೃದ್ಧಿ ಬೇಕಿಲ್ಲ. ತಮ್ಮ ಸ್ವಂತ ಪಕ್ಷದ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ಷಾ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಕಿಡಿ ಕಾರಿದ್ದಾರೆ.

ಏನೇ ಆದರೂ ಯಾರೂ ಬಾಯಿ ಬಾಯಿ ಬಿಟ್ಟರೂ ರಾಜ್ಯಕ್ಕೆ ಯಾರು ಮುಖ್ಯಮಂತ್ರಿಯಾಗಬೇಕೋ ಅವರೇ ಆಗಿದ್ದರೆ!! ಇಡೀ ಬಿಜೆಪಿಯ ಘಟಾನುಘಟಿಗಳ ಸಲಹೆಯ ಮೇರೆಗೆ ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ಇಡೀ ದೇಶದಲ್ಲಿಯೇ ಹೊಸ ಸಂಚಲನವನ್ನು ಮೂಡಿಸಿದೆ!!

ಪವಿತ್ರ

Tags

Related Articles

Close