ಪ್ರಚಲಿತ

ಕರ್ನಾಟಕದ ಗಂಡ ಭೇರುಂಡ ಪಕ್ಷಿ ರಾಜ್ಯ ಲಾಂಛನದ ಹಿಂದೆ ನಾಲ್ಕು ಸಾವಿರ ವರ್ಷಗಳ ಇತಿಹಾಸ ಇದೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತಹ ವಿಚಾರ!!

ಕರ್ನಾಟಕದ ರಾಜ್ಯ ಲಾಂಛನ ಎರಡು ತಲೆಯ ಗಂಡ ಭೇರುಂಡ ಪಕ್ಷಿ ಎನ್ನುವುದು ಮಕ್ಕಳಿಗೂ ಗೊತ್ತು. ಆದರೆ ಈ ರಾಜ್ಯ ಲಾಂಛನಕ್ಕೆ ಬರೋಬ್ಬರಿ ನಾಲ್ಕು ಸಾವಿರ ವರ್ಷಗಳ ಇತಿಹಾಸ ಇದೆಯೆಂದರೆ ಆಶ್ಚರ್ಯವಾಗುತ್ತದೆ!! ಪುರಾಣಗಳಲ್ಲಿ ಗಂಡಭೇರುಂಡ ಎನ್ನುವುದು ಎರಡು ತಲೆ ಒಂದೇ ದೇಹ ಉಳ್ಳ ವಿಚಿತ್ರ ಪಕ್ಷಿ. ಇದನ್ನು ವಿಷ್ಣು ಅವತಾರವೆಂದೂ ಹೇಳಲಾಗುತ್ತದೆ. ಸಂಸ್ಕೃತದಲ್ಲಿ ಭೇರುಂಡ ಎಂದರೆ ಭಯಾನಕ ಎಂದರ್ಥ. ಹಿಂದೂ ಪುರಾಣಗಳಲ್ಲಿ ಅಪಾರ ಮಾಂತ್ರಿಕ ಶಕ್ತಿಯನ್ನು ಹೊಂದಿರುವ ಶಕ್ತಿಶಾಲಿ ಪಕ್ಷಿಯೆಂದು ವರ್ಣಿಸಲಾಗಿರುವ ಗಂಡಭೇರುಂಡ ಲಾಂಛನ ಕರ್ನಾಟಕದಲ್ಲಿ ಮಾತ್ರವಲ್ಲ ಸಾವಿರಾರು ವರ್ಷಗಳ ಹಿಂದೆ ಮೆಸಪಟೋಮಿಯಾ ನಾಗರಿಕತೆಯಲ್ಲೂ ಬಳಸಲಾಗಿತ್ತು!! ಪ್ರಾಚೀನ ಕಾಲದಲ್ಲಿ ಇಂತಹ ಒಂದು ಪಕ್ಷಿ ನಿಜವಾಗಿಯೂ ಇದ್ದಿರಬಹುದು!!

ಪ್ರಪಂಚದ ಅತ್ಯಂತ ಪ್ರಾಚೀನ ಗಂಡ ಭೇರುಂಡ ಶಿಲ್ಪದ ಕೆತ್ತನೆ ಮೂರು ಮಿಲಿಯನ್ ವರ್ಷಗಳ ಹಿಂದಿನ ಮಣ್ಣಿನ ಸಿಲಿಂಡರ್ ಮೇಲೆ ಕಂಡುಬಂದಿದೆ. ಇಂದಿನ ಇರಾಕಿನಲ್ಲಿರುವ ಲಾಗಾಶ್ ಎನ್ನುವ ಮೆಸಪಟೋಮಿಯಾ ನಾಗರಿಕತೆಯ ನಗರದಲ್ಲಿ ಈ ಮಣ್ಣಿನ ಸಿಲಿಂಡರ್ ಪ್ರಾಪ್ತವಾಗಿದೆ. ಬ್ಯಾಬಿಲೋನಿಯನ್ನರ ರಾಜ ‘ಗುಡೆ’ ಕನಸಿನಲ್ಲಿ ಸೌರ ದೇವತೆ ‘ನಿಂಗಿರ್ಸು’ ಕಾಣಿಸಿಕೊಂಡಿದ್ದ. ಈ ದೇವತೆಯ ಜೊತೆ ಇಮ್ಗಿಗ್ ಎನ್ನುವ ಎರಡು ತಲೆಯ ಗರುಡ ಇರುತ್ತಿತು. ಈ ಹದ್ದಿನ ತಲೆ ಸಿಂಹದ ಮುಖವನ್ನು ಹೋಲುತ್ತಿತ್ತು. ಭಯಂಕರ ಬರಗಾಲದಿಂದ ನಗರವನ್ನು ರಕ್ಷಿಸುತ್ತಾನೆ ಅಂದಿನಿಂದ ಬ್ಯಾಬಿಲೋನಿಯನ್ನರು ನಿಂಗಿರ್ಸು ಮತ್ತು ಇಮ್ಗಿಗ್ ಅನ್ನು ಪೂಜಿಸತೊಡಗುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಉಗ್ರನರಸಿಂಹ ಅವತಾರದ ಉಗ್ರತೆಯನ್ನು ತಗ್ಗಿಸಲು ಶಿವ ಶರಭ ರೂಪದಲ್ಲಿ ಬಂದಾಗ ವಿಷ್ಣುವು ಗಂಡ ಭೇರುಂಡ(ಸಿಂಹದ ತಲೆ ಮತ್ತು ಹಕ್ಕಿಯ ದೇಹ) ರೂಪದಲ್ಲಿ ಅವತರಿಸಿ ಸತತ ಹದಿನೆಂಟು ದಿನ ಯುದ್ದ ನಡೆಸಿ ಶರಭವನ್ನು ಕೊಂದು ತನ್ನ ಉಗ್ರರೂಪ ತ್ಯಜಿಸುತ್ತಾನೆ ಎನ್ನಲಾಗಿದೆ. ಬಹುಶ ಈ ಕಥೆಗೂ ಬ್ಯಾಬಿಲೋನಿಯನ್ನರಿಗೂ ಯಾವುದಾದರೂ ಸಂಬಂಧವಿರಬಹುದು.

ಮೆಸಪಟೋಮಿಯಾ ನಾಗರಿಕತೆಯಲ್ಲಿ ಕಂಡ ಪಕ್ಷಿಯ ಪ್ರತಿರೂಪ 1600 BCE ಯಲ್ಲಿ ಟರ್ಕಿಯ ಅನಟೋಲಿಯಾವನ್ನಳಿದ ‘ಹೈಟಿಟಿಸ್’ ಜನಾಂಗದವರ ಕಟ್ಟಡ, ಮಡಕೆ ಮತ್ತು ಇನ್ನಿತರ ವಸ್ತುಗಳಲ್ಲಿ ಕಂಡುಬಂದಿದೆ. ಟರ್ಕಿಯ ಅಲಕಾ ಹೊಯುಕ್ ಎನ್ನುವ ನಗರದ ಪ್ರವೇಶದ್ವಾರದಲ್ಲಿರುವ ಗಂಡಭೇರುಂಡ ಬಹುತೇಕ ಕರ್ನಾಟಕದ ರಾಜ್ಯ ಲಾಂಛನವನ್ನೆ ಹೋಲುತ್ತದೆ!! ಭಾರತದಲ್ಲಿ ಅತ್ಯಂತ ಹಳೆಯ ಗಂಡಭೇರುಂಡ ಶಿಲ್ಪ, ತಕ್ಷಶಿಲಾದಲ್ಲಿರುವ ಬೌದ್ಧ ಸ್ತೂಪದಲ್ಲಿ ಕಂಡುಬಂದಿದೆ. ಶಕ(ಸಿಥಿಯನ್ಸ್)ರು ಈ ಚಿಹ್ನೆಗಳನ್ನು ತಕ್ಷಶಿಲಾಕ್ಕೆ ಮೊತ್ತ ಮೊದಲ ಬಾರಿಗೆ ತಂದರು ಎನ್ನಲಾಗುತ್ತದೆ. ಅಲ್ಲಿಂದ ‘ದಕ್ಷಿಣಪಥ’ ವ್ಯಾಪಾರ ಮಾರ್ಗದ ಮೂಲಕ ದಕ್ಷಿಣ ಭಾರತ ಮತ್ತು ಶ್ರೀಲಂಕಾಕ್ಕೆ ಈ ಚಿಹ್ನೆ ವರ್ಗವಾಯಿತು ಎನ್ನಲಾಗುತ್ತದೆ.

ದಕ್ಷಿಣದಲ್ಲಿ ಚಾಲುಕ್ಯ, ಹೊಯ್ಸಳ, ಕಾಕತೀಯ ಮತ್ತು ಕೋಟ ಸಾಮ್ರಾಜ್ಯಗಳ ಅರಸರು ಶಕ್ತಿಯ ಪ್ರತೀಕವಾದ ಈ ಚಿಹ್ನೆಯನ್ನು ತಮ್ಮ ತಮ್ಮ ಸಾಮ್ರಾಜ್ಯಗಳ ಲಾಂಛನದಲ್ಲಿ ಅಳವಡಿಸಿಕೊಂಡರು ಎಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದ ಲಾಂಛನವಾಗಿ ಗಂಡಭೇರುಂಡ ಪಕ್ಷಿ ಇಡಿಯ ದಕ್ಷಿಣ ಭಾರತದಲ್ಲಿ ರಾರಾಜಿಸುತ್ತದೆ. ಸಾಮ್ರಾಜ್ಯದ ರಾಜ್ಯ ಲಾಂಛನವಾದ ಗಂಡ ಭೇರುಂಡ ಪಕ್ಷಿ, ತನ್ನ ಎರಡು ಕಾಲು ಮತ್ತು ಕೊಕ್ಕುಗಳಲ್ಲಿ ನಾಲ್ಕು ಆನೆಗಳನ್ನು ಹಿಡಿದಿರುವುದು ದಕ್ಷಿಣದ ಬೀದರ್, ಬಿಜಾಪುರ, ಅಹಮದ್ ನಗರ ಮತ್ತು ಗೋಲ್ಕೊಂಡಾದ ನಾಲ್ಕು ಮತಾಂಧ ಸುಲ್ತಾನರ ಮೇಲೆ ವಿಜಯದ ಪ್ರತೀಕವಾಗಿದೆ!! ಶ್ರೀ ಕೃಷ್ಣದೇವರಾಯರ ಶಕ್ತಿ ನಿಜಾರ್ಥದಲ್ಲಿ ಗಂಡಭೇರುಂಡದ ಶಕ್ತಿಗೆ ಸಮನಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಘಲ ಮತಾಂಧರ ಆಕ್ರಮಣಕ್ಕೆ ಸಡ್ಡು ಹೊಡೆದು ಅಖಂಡ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ಸಾಮಾನ್ಯ ವಿಷಯವೆ? ಅಂತಹ ಬಲಿಷ್ಟ ಸಾಮ್ರಾಜ್ಯಕ್ಕೆ ಬಲಿಷ್ಟ ಪಕ್ಷಿಯ ರಾಜ ಲಾಂಛನವಲ್ಲದೆ ಬೇರೆ ಯಾವ ಚಿಹ್ನೆ ಇರಲು ಸಾಧ್ಯ?

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರು ಒಡೆಯರ್ ರಾಜರು ಗಂಡ ಭೇರುಂಡವನ್ನು ತಮ್ಮ ರಾಜ ಲಾಂಛನವಾಗಿ ಬಳಸಲು ಶುರು ಮಾಡುತ್ತಾರೆ. ಮುಂದೆ ಸ್ವಾತಂತ್ರ್ಯಾ ನಂತರ ಮೈಸೂರು ಸಂಸ್ಥಾನ ಕರ್ನಾಟಕದಲ್ಲಿ ವಿಲೀನಗೊಳ್ಳುತ್ತದೆ ಮತ್ತು ಗಂಡ ಭೇರುಂಡ ಶಾಶ್ವತವಾಗಿ ಕರ್ನಾಟಕದ ರಾಜ್ಯ ಲಾಂಛನವಾಗುತ್ತದೆ. ನಮ್ಮ ಪುಣ್ಯ ಆಗ ಹಿಂದೂ ದ್ವೇಷಿ ಮುಖ್ಯ ಮಂತ್ರಿಗಳಿರಲಿಲ್ಲ. ಈಗಿನ ಹಾಗೆ “ಜಾತ್ಯಾತೀತ” ಹಿಂದೂ ದ್ವೇಷಿ ಮುಖ್ಯ ಮಂತ್ರಿಗಳಿರುತ್ತಿದ್ದರೆ ಇದರಲ್ಲೂ ಸಾಂಪ್ರದಾಯಿಕತೆ ಕಾಣುತ್ತದೆ ಎಂದು ರಾಜ್ಯ ಲಾಂಛನದಲ್ಲಿ ತಿಪ್ಪೆ ಸುಲ್ತಾನನ ದರಿದ್ರ ಮುಖ ಅಚ್ಚು ಹಾಕಿಸುತ್ತಿದ್ದರೇನೋ? ರಾಜ್ಯದ ಧ್ವಜದಲ್ಲಿ ಸಾಂಪ್ರದಾಯಿಕತೆ ಕಂಡವರು ಮುಂದೆ ರಾಜ್ಯ ಲಾಂಛನದಲ್ಲಯೂ ಕಂಡರೆ ಆಶ್ಚರ್ಯ ಪಡಬೇಕಾಗಿಲ್ಲ.

ನಮ್ಮ ರಾಜ್ಯ ಲಾಂಛನದ ಹಿಂದೆ ಸಾವಿರಾರು ವರ್ಷಗಳ ಇತಿಹಾಸ ಇರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮ ಸನಾತನದ ಮೂಲ ಬೇರುಗಳು ಪ್ರಪಂಚದಾದ್ಯಂತ ಪಸರಿಸಿತ್ತು ಎನ್ನುವುದಕ್ಕೆ ಇಂತಹ ಪುರಾವೆಗಳು ಸಾಕ್ಷ್ಯ ಒದಗಿಸುತ್ತಿವೆ.

-ಶಾರ್ವರಿ

Tags

Related Articles

Close