ಪ್ರಚಲಿತ

ಬಯಲಾಯ್ತು ಕೋಮು ಸೌಹಾರ್ದ ವೇದಿಕೆಯ ಕಾಂಗ್ರೆಸ್ ಪ್ರೇರಿತ ನಾಟಕ..! ರಾಜಕೀಯದಲ್ಲಿ ಮೂಗುತೂರಿಸಿದ್ದೇಕೆ ಕೋ.ಸೌ.ವೇ.?!

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರಕಾರ ಆಡಳಿತ ವಹಿಸಿಕೊಂಡ ದಿನದಿಂದಲೇ ಹಿಂದೂಗಳ ವಿರುದ್ಧ ತೊಡೆತಟ್ಟಿ , ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ತುಷ್ಟೀಕರಣದ ನೀತಿ ಅನುಸರಿಸಿಕೊಂಡು ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರು ರಾಜ್ಯದಲ್ಲಿ ಸಂಪೂರ್ಣವಾಗಿ ಹಿಂದೂಗಳನ್ನು ಕಡೆಗಣಿಸಿದ್ದಾರೆ. ಕೋಮು ಗಲಭೆಗೆ ಕಾರಣವಾಗಿರುವ ಮುಸ್ಲೀಮರನ್ನು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ , ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿರುವ ಸಿದ್ದರಾಮಯ್ಯನವರು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯನ್ನು ಮಣಿಸಲು ಹರಸಾಹಸಪಡುತ್ತಿದ್ದಾರೆ.

ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡುವುದು ಅಸಾಧ್ಯ ಎಂದು ತಿಳಿದ ಕಾಂಗ್ರೆಸ್ ಇದೀಗ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಪ್ರಗತಿಪರ ಸಂಘಟನೆಗಳ ಜೊತೆ ಕೈಜೋಡಿಸಿಕೊಂಡು ಕಣಕ್ಕಿಳಿಯಲು ಸಜ್ಜಾಗಿದೆ. ಜಾತಿ ಧರ್ಮಗಳ ಆಧಾರದಲ್ಲಿ ರಾಜ್ಯದ ಜನತೆಯನ್ನು ಬೇರ್ಪಡಿಸಿದ್ದ ಸಿದ್ದರಾಮಯ್ಯನವರು ಇದೀಗ ಕೋಮು ಗಲಭೆಯ ವಿಚಾರವಾಗಿ ಚುನಾವಣೆ ಎದುರಿಸಲು ತಯಾರಿ ನಡೆಸಿದ್ದಾರೆ.!

ಕಾಂಗ್ರೆಸ್ ಗೆ ಕೋಮುಸೌಹಾರ್ಧ ವೇದಿಕೆ ಸಾಥ್..!

ಈವರೆಗೆ ರಾಜ್ಯದಲ್ಲಿ ಹಿಂದೂಗಳ ಸಾಲು ಸಾಲು ಕೊಲೆಗಳು , ಹಲ್ಲೆಗಳು ನಡೆದಾಗ ಸುಮ್ಮನಿದ್ದ ಪ್ರಗತಿಪರ ಸಂಘಟನೆಗಳೆಲ್ಲಾ ಅಲ್ಪಸಂಖ್ಯಾತರಿಗೆ ತೊಂದರೆಯಾದಾಗ ಅದನ್ನು ನೇರವಾಗಿ ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸುತ್ತಿದ್ದರು. ರಾಜ್ಯ ಸರಕಾರದ ವೈಫಲ್ಯದಿಂದ ಆಗುವ ಅನಾಹುತಗಳಿಗೂ ಹಿಂದೂಪರ ಸಂಘಟನೆಗಳೇ ಕಾರಣ ಎಂದು ಬೊಬ್ಬೆ ಇಡುತ್ತಿದ್ದ ಕೋಮು ಸೌಹಾರ್ಧ ವೇದಿಕೆ ಇದೀಗ ಕಾಂಗ್ರೆಸ್ ಜೊತೆ ಸೇರಿಕೊಳ್ಳಲು ತಯಾರಿ ನಡೆಸಿದೆ ಎಂಬ ವಿಚಾರ ಬಯಲಾಗಿದೆ.!

ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಅಹಿತಕರ ಘಟನೆಗಳಿಗೂ ರಾಜ್ಯ ಸರಕಾರವೇ ನೇರ ಕಾರಣ ಎಂಬುದು ಈಗಾಗಲೇ ತನಿಖೆಯ ವೇಳೆಯೂ ಬಯಲಾಗಿತ್ತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡುತ್ತಿರುವ ಸಿದ್ದರಾಮಯ್ಯ ಸರಕಾರದ ಜೊತೆ ಇದೀಗ ಪ್ರಗತಿಪರ ಸಂಘಟನೆಗಳು ಸೇರಿಕೊಳ್ಳಲಿವೆ.!

ಚುನಾವಣಾ ಪೂರ್ವ ಮೈತ್ರಿ..!

ದೇಶಾದ್ಯಂತ ಅಧಿಕಾರ ಹಿಡಿದಿರುವ ಬಿಜೆಪಿ ಕರ್ನಾಟಕದಲ್ಲೂ ವಿಜಯ ಪತಾಕೆ ಹಾರಿಸಲು ಎಲ್ಲಾ ತಯಾರಿ ನಡೆಸಿದೆ. ಇದನ್ನರಿತ ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ರಣರಂಗಕ್ಕಿಳಿಯಲು ಸಜ್ಜಾಗಿದೆ. ಅದಕ್ಕಾಗಿಯೇ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ಪರದಾಡುತ್ತಿರುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಒಟ್ಟಾಗಿ ಹೋರಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಗತಿಪರ ಚಿಂತಕರಾದ , ಕೋಮುಸೌಹಾರ್ದ ವೇದಿಕೆಯ ಮುಖ್ಯಸ್ಥರಾದ ಕೆ.ಎಲ್.ಅಶೋಕ್ , ಹಿರಿಯ ಪತ್ರಕರ್ತ ಇಂದೂಧರ ಹೊನ್ನಾವರ , ಹಿರಿಯ ಚಿಂತಕ ಎ.ಕೆ. ಸುಬ್ಬಯ್ಯ ಮತ್ತಿತರರ ಜೊತೆ ಮಾತುಕತೆ ನಡೆಸಿ, ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತನಾಡಿ , ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಮೂಲಕ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿದ್ದಾರೆ.!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಕರ್ನಾಟಕ ಪ್ರವಾಸದ ವೇಳೆ ಜೆಡಿಎಸ್ ಸಂಘಪರಿವಾರದ ಅಂಗ ಭಾಗ, ಅದರ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ದೇವೇಗೌಡರು ಕೂಡ ಕಾಂಗ್ರೆಸ್ ಹಾಗೂ ರಾಹುಲ್ ವಿರುದ್ಧ ಕಿಡಿಕಾರಿದ್ದರು. ಆದರೆ ಇದೀಗ ಸಿದ್ದರಾಮಯ್ಯನವರು ಜೆಡಿಎಸ್ ಜೊತೆ ಸಂಬಂಧ ಬೆಳೆಸಲು ಸಂಚು ರೂಪಿಸಿದ್ದಾರೆ.!

–ಅರ್ಜುನ್

 

Tags

Related Articles

Close