ಪ್ರಚಲಿತ

ಬಯಲಾಯಿತು ಮಮತಾ ಬ್ಯಾನರ್ಜಿಯ ಇಸ್ಲಾಂ ಪ್ರೇಮ!! ಸರ್ಕಾರಿ ಶಾಲೆಯಲ್ಲಿ ಖುರಾನ್ ರೆಕಾರ್ಡ್… ಏನಂತೀರಾ ದೀದೀ??

ಶಾಲಾ ಮಕ್ಕಳಿಗೆ “ಜೈ ಭಾರತೀಯ ಜನನಿಯ ತನುಜಾತೆ’, ‘ವಂದೇ ಮಾತರಂ’, ‘ಜನಗಣ ಮನ ಅಧಿನಾಯಕ’ ಎನ್ನುವ ರಾಷ್ಟ್ರಪ್ರೇಮದ ಗೀತೆಗಳನ್ನು ಹೇಳಿಕೊಡುವುದನ್ನು ನಾವು ಕೇಳಿದ್ದೇವೆ. ಆದರೆ ಕಮ್ಯುನಿಸ್ಟರ ವಿರುದ್ಧ ಆಜೀವ ಪರ್ಯಂತ ಹೋರಾಡಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿಯೇ ರಾಷ್ಟ್ರಗೀತೆ, ನಾಡ ಗೀತೆಗಳ ಬದಲು ಮಕ್ಕಳಿಗೆ ಖುರಾನ್ ಗೀತೆಗಳನ್ನು ಶಾಲಾ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಅಚ್ಚರಿಯ ವಿಚಾರ!!

ಹವಾಯಿ ಚಪ್ಪಲಿ, ಸಾಧಾರಣ ಸೀರೆ ತೊಟ್ಟು ಸರಳತನಕ್ಕೆ ಹೆಸರುವಾಸಿಯಾಗಿದ್ದ ದೀದಿ ಮಾತ್ರ ಇತ್ತೀಚೆಗೆ ಅಪಾರ ಸೌಲಭ್ಯ ಹಾಗೂ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸಿದ್ದು, ಇದಕ್ಕೆ ಮುನ್ನುಡಿಯಾಗಿ ತಮಗೆ ಮನೆಯಲ್ಲಿದ್ದಾಗ ಮೊಬೈಲಿಗೆ ನೆಟ್ ವರ್ಕ್ ಸಿಗುತ್ತಿಲ್ಲ ಎಂದು ಕೋಲ್ಕತ್ತಾದಲ್ಲಿರುವ ಪುರಾತನ ಮೂರು ಜೈಲುಗಳನ್ನೇ ಸ್ಥಳಾಂತರಿಸಲು ಮುಂದಾಗಿದ್ದರು!! ಆದರೆ ಹಿಂದೂಗಳೆಂದೆರೆ ಸಾಕು ಕಿಡಿ ಕಾರುತ್ತಿರುವ ಮಮತಾ ಬ್ಯಾನರ್ಜಿ ಅವರಿಗೆ ಅಧಿಕಾರ ಮದವೋ ಏನೋ ಗೊತ್ತಿಲ್ಲ!! ಆದರೆ ರಾಜ್ಯದಲ್ಲಿ ಹಿಂದೂಗಳ ವಿರುದ್ಧ ಯಾವುದೇ ಷಡ್ಯಂತ್ರ ನಡೆದರೂ, ಹಿಂದೂಗಳಿಗೆ ಅನ್ಯಾಯವಾದರೂ ಮಮತಾ ಬ್ಯಾನರ್ಜಿ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಇರುತ್ತಾರೆ.

ದೀದೀ ಸರ್ಕಾರದಲ್ಲಿ ಮುಸಲ್ಮಾನರಿಗೆ ಇರುವಷ್ಟು ಸವಲತ್ತುಗಳು ಹಿಂದೂಗಳಿಗೆ ಇಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯಾಕೆಂದರೆ ಈಗಾಗಲೇ ಮಮತಾ ಬ್ಯಾನರ್ಜಿ ಮೊಹರಂ ನ ಸಮಯದಲ್ಲಿ ದುರ್ಗಾಪೂಜೆಯ ಮೂರ್ತಿ ವಿಸರ್ಜನೆಯಿಂದಾಗಿ ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಯಾಗುವುದೆಂಬ ಕಾರಣವನ್ನಿಟ್ಟುಕೊಂಡು ದುರ್ಗಾ ಮಾತೆಯ ವಿಸರ್ಜನೆಯನ್ನು ಮುಂದೂಡುವಂತೆ ಹೇಳಿ ಹಿಂದೂಗಳನ್ನು ಕೆರಳಿಸುವಂತೆ ಮಾಡಿದ್ದರು.

Image result for manatah banaji

ಅಷ್ಟೇ ಅಲ್ಲದೇ, ಕೊಲ್ಕತ್ತಾದಿಂದ ಕೇವಲ 60 ಕಿಲೋಮೀಟರ್ ದೂರವಿರುವ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ತಾರಕೇಶ್ವರದಲ್ಲಿ ಇತಿಹಾಸ ಪ್ರಸಿದ್ಧ “ತಾರಕಾನಾಥ ದೇವಾಲಯ”ವಿದೆ. ಅಲ್ಲಿನ ಹಿಂದೂ ಭಕ್ತ ಬಾಂಧವರಿಗೆ ಮಮತಾ ಬ್ಯಾನರ್ಜಿ ಯವರು, ತಾನೇನೋ ಮಹಾದುಪಕಾರ ಮಾಡುತ್ತಿರುವಂತೆ ದೇವಳ ಮತ್ತು ಅದರ ಸುತ್ತಮುತ್ತಲ ಭಾಗಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಐದು ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಿದ್ದರು. ಆದರೆ ಹಿಂದೂಗಳನ್ನು ಕಂಡರೆ ಸಾಕು ಹುರಿದೇಳುವ ಇವರಿಗೆ ಇಂತಹ ಒಳ್ಳೆಯ ಬುದ್ದಿ ಯಾವಾಗ ಬಂತು ಎಂದು ಜನ ಮೂಗಿನ ಮೇಲೆ ಬೆರಳಿಡೊವಷ್ಟರಲ್ಲೇ ಆಕೆಯ “ವಕ್ರ ಇಸ್ಲಾಮಿ” ಬುದ್ಧಿ ತೋರಿಸಿಯೇ ಬಿಟ್ಟಿದ್ದರು.

ಹೌದು… ತಾರಕನಾಥ ದೇವಳದ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳಲು ದೇವಳದ ಸಮಿತಿಯ ಅಧ್ಯಕ್ಷನನ್ನಾಗಿ ತನ್ನ ಜೊತೆಗಾರನನ್ನೇ ನೇಮಿಸಿ ಬಿಟ್ಟದ್ದರು!! ಈ ವಿಚಾರವನ್ನು ಮನಗಂಡ ಅಲ್ಲಿದ್ದ ಹಿಂದೂಗಳಷ್ಟೇ ಅಲ್ಲ, ದೇಶ ವಿದೇಶದಲ್ಲಿನ ಹಿಂದೂಗಳೂ ಕ್ರುದ್ದರಾದರು. ಯಾಕಂದರೆ ಮಮತಾ, ತಾರಕಾನಾಥ ದೇವಳದ ಅಧ್ಯಕ್ಷನಾಗಿ ನೇಮಿಸಿದ್ದು ತನ್ನ ಸರ್ಕಾರದ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮನನ್ನು!! ಹಾಗಾಗಿ ಹಿಂದೂ ದೇವಾಲಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಒರ್ವ ಮುಸಲ್ಮಾನನ್ನು ನೇಮಿಸಿ ಹಿಂದೂಗಳಿಗೆ ಮಹಾಮೋಸವನ್ನೇ ಮಾಡಿ ಏನೂ ಆಗಿಯೇ ಇಲ್ಲ ಎಂಬಂತೆ ಕುಳಿತುಬಿಟ್ಟರು.

ಆದರೆ ಇದೀಗ ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಯೊಂದರಲ್ಲಿ ಖುರಾನ್ ರೆಕಾರ್ಡ್ ಆಗಿರುವ ಆಡಿಯೋ ಒಂದು ತರಗತಿ ವೇಳೆ ಕೇಳಬೇಕು ಎಂದು ವಿದ್ಯಾರ್ಥಿಗಳನ್ನು ಒತ್ತಾಯಿಸಿರುವ ಕುರಿತ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ಸಹ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ, ಪಶ್ಚಿಮ ಬಂಗಾಳದ ಬಿರ್ಭುಮ್ ಎಂಬ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಖುರಾನ್ ಆಡಿಯೋ ಕೇಳುವಂತೆ ಒತ್ತಾಯಿಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳು ಕೇಳಿ ಬರುತ್ತಿವೆ.

Image result for kuran

ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ವಿರುದ್ಧ ಆಜೀವ ಪರ್ಯಂತ ಹೋರಾಡಿ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಕಮ್ಯುನಿಸ್ಟರಿಗಿಂತ ಹೆಚ್ಚಾಗಿ ಹಿಂದೂಗಳನ್ನು ದ್ವೇಷಿಸಲು ಆರಂಭಿಸಿದ್ದಂತೂ ಅಕ್ಷರಶಃ ನಿಜ. ಆದರೆ ಈಗಾಗಲೇ ಮಮತಾ ಬ್ಯಾನರ್ಜಿ ಹಿಂದೂಗಳನ್ನು ವಿರೋಧಿಸಲು ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್ ನಡೆಸುತ್ತಿದ್ದ 125 ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿ, ಇದೀಗ ಸರ್ಕಾರಿ ಶಾಲೆಯಲ್ಲಿ ಖುರಾನ್ ಆಡಿಯೋ ಕೇಳಲು ಒತ್ತಾಯಿಸಿರುವ ಪ್ರಕರಣ ಎಲ್ಲೆಡೆ ಸುದ್ದಿಯಾಗಿದೆ.

ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆಸುತ್ತಿರುವ 125 ಶಾಲೆಗಳನ್ನು ಮುಚ್ಚಬೇಕು ಎಂದು ಇದಕ್ಕೆ ರಾಜ್ಯ ಸರ್ಕಾರ ಹಲವು ನೆಪವೊಡ್ಡಿತ್ತು. ಅಷ್ಟೇ ಅಲ್ಲದೇ, ಆರೆಸ್ಸೆಸ್ ನಡೆಸುತ್ತಿರುವ ಶಾಲೆಗಳಲ್ಲಿ ಅಹಿಂಸೆಗೆ ಪ್ರಚೋದನೆ, ಧರ್ಮ ಧರ್ಮಗಳ ನಡುವೆ ಅಸಹಿಷ್ಣುತೆ ಬಿತ್ತುತ್ತಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಹಿಂದೂಗಳನ್ನು, ಅದರಲ್ಲೂ ಆರೆಸ್ಸೆಸ್ಸನ್ನು ಮಟ್ಟಹಾಕಲು ದೀದಿ ಈ ಕುತಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು!!

ಒಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಹಿಂದೂಗಳನ್ನು ದಮನ ಮಾಡುತ್ತಲೇ ಇದ್ದು, ಈಗಂತೂ ಇದು ಅತಿರೇಕಕ್ಕೆ ಹೋಗಿದೆ. ಅಷ್ಟೇ ಅಲ್ಲದೇ, ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದರೂ, ಹಿಂದುತ್ವಕ್ಕೆ ಧಕ್ಕೆ ಬಂದರೂ ಮಮತಾ ಬ್ಯಾನರ್ಜಿಯವರು ದಿವ್ಯ ನಿರ್ಲಕ್ಷ್ಯ ತಾಳುತ್ತಾರೆ ಎಂಬುದೇ ಗಮನಾರ್ಹವಾಗಿದೆ.

ಹಾಗಾಗಿ, ಧರ್ಮ ಬೋಧನೆ, ಹಿಂದುತ್ವ ಮನಸ್ಥಿತಿ ತುಂಬಲಾಗುತ್ತಿದೆ ಎಂದು ಆರೋಪಿಸಿ ರಾಜ್ಯದಲ್ಲಿ ಆರೆಸ್ಸೆಸ್ ನಡೆಸುತ್ತಿರುವ ಸುಮಾರು 125 ಶಾಲೆಗಳನ್ನು ಮುಚ್ಚಲು ನಿರ್ಧರಿಸಿರುವ ಮಮತಾ ಬ್ಯಾನರ್ಜಿಯವರು ಈಗ ಶಾಲೆಯಲ್ಲೇ ಖುರಾನ್ ಆಡಿಯೋ ಕೇಳಲು ಒತ್ತಾಯಿಸಿರುವ ಪ್ರಕರಣದ ಕುರಿತು ಏನು ಪ್ರತಿಕ್ರಿಯಿಸುತ್ತಾರೆ? ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆ ಇದೀಗ ಮನೆಮಾಡಿದೆ!!

Related image

ಕಳೆದ 2017ರ ಫೆ.1ರಂದು ಪಶ್ಚಿಮ ಬಂಗಾಳದ ಹಲವು ಶಾಲೆಗಳಲ್ಲಿ ಸರಸ್ವತಿ ಪೂಜೆ ಏರ್ಪಡಿಸಲಾಗಿತ್ತು. ಆದರೆ ಮುಸ್ಲಿಂ ಧರ್ಮದ ಕೆಲವು ಧರ್ಮಾಂಧರು ಪೂಜೆ ವಿರೋಧಿಸಿ ಹೌರ್ಹಾ ಜಿಲ್ಲೆಯ ತೆಹತ್ತಾ ಶಾಲೆಯನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸಿದರು. ಅಲ್ಲದೇ, ಜನವರಿ 29ರಂದು ಹೌರ್ಹಾ ಜಿಲ್ಲೆಯ ಶಿಕ್ಷಣಾಧಿಕಾರಿಯಿಂದ ಆದೇಶ ಹೊರಡಿಸಿದ ಸರ್ಕಾರ, “ಆಡಳಿತದ ಹಲವು ಕಾರಣಗಳಿಂದ ಜಿಲ್ಲೆಯ ತೆಹತ್ತಾ ಪ್ರೌಢಶಾಲೆ, ಉಲುಬೆರಿಯಾ ಶಾಲೆಗಳನ್ನು ಮುಚ್ಚಬೇಕು. ಮುಂದಿನ ಆದೇಶದವರೆಗೂ ತರಗತಿ ನಡೆಸುವಂತಿಲ್ಲ” ಎಂದು ಫರ್ಮಾನು ಹೊರಡಿಸಿತು. ವಿಪರ್ಯಾಸ ಎಂದರೆ ಮುಸ್ಲಿಮರು ವಿರೋಧಿಸಿದರು ಎಂಬ ಒಂದೇ ಕಾರಣಕ್ಕೆ ಶಾಲೆಗಳನ್ನು ಮುಚ್ಚಿಸಿರುವ ಮಮತಾ ಬ್ಯಾನರ್ಜಿ ಸರ್ಕಾರ ಮುಸ್ಲಿಂ ಪ್ರೇಮವನ್ನು ಎಲ್ಲೆಡೆ ತೋರ್ಪಡಿಸಿದ್ದರು!!

ಆದರೆ 65 ವರ್ಷಗಳಿಂದ ಆಚರಿಸುತ್ತ ಬರುತ್ತಿರುವ ಸರಸ್ವತಿ ಪೂಜೆಗೆ ಅಡ್ಡಿಯಾದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಗ ಪೆÇಲೀಸರನ್ನು ಬಿಟ್ಟು ಮಕ್ಕಳೂ ಎಂಬುದನ್ನೂ ಮರೆತು ಲಾಠಿ ಚಾರ್ಜ್‍ಗೆ ಅವಕಾಶ ಮಾಡಿಕೊಟ್ಟ ಮಮತಾ ಸರ್ಕಾರ ಹಿಂದೂ ವಿರೋಧಿಯಾಗಿ, ಅಲ್ಪ ಸಂಖ್ಯಾತರ ನಾಯಕಿಯಾಗಿ ಬೆಳೆಯುತ್ತಿದ್ದಾರೆ.

ಅದಕ್ಕೆಲ್ಲಾ ಸಾಕ್ಷಿ ಎಂಬಂತೆ ಇತ್ತೀಚೆಗೆ ಬಂಗಾಳದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರು ಮಾಡುತ್ತಿರುವ ದಾಳಿ, ಹಿಂದೂ ಧರ್ಮದ ಆಚರಣೆಗಳಿಗೆ ವಿರೋಧ, ಅಹಿಂಸೆ, ಹಿಂದೂಗಳ ಮಾರಣ ಹೋಮಗಳು ನಡೆಯುತ್ತಿದ್ದರೂ ಕೂಡ ಸುಮ್ಮನಿದ್ದು, ಪರೋಕ್ಷವಾಗಿ ಈ ಕೃತ್ಯಗಳಿಗೆ ಪೆÇೀಷಿಸುತ್ತಿರುವ ಮಮತಾ ನಡೆ ಎಲ್ಲರಿಗೂ ಅನುಮಾನ ಮೂಡಿಸುತ್ತಿದೆ.

– ಅಲೋಖಾ

Tags

Related Articles

Close