ಪ್ರಚಲಿತ

ಮೋದಿಗೆ ಸವಾಲೆಸೆದ ಸಿದ್ದರಾಮಯ್ಯನವರನ್ನು ಝಾಡಿಸಿದ ಯಡಿಯೂರಪ್ಪ..! ಹಾಲಿ- ಮಾಜಿ ಸಿಎಂ ಗಳ ಟ್ವೀಟ್ ವಾರ್..!

ರಾಜ್ಯ ವಿಧಾನಸಭಾ ಚುನಾವಣೆಯ ಬಿಸಿ ಯಾವ ರೀತಿ ಹೆಚ್ಚಾಗುತ್ತಿದೆ ಎಂದರೆ ರಾಜಕೀಯ ನಾಯಕರ ಸಮರವೇ ರಾಜ್ಯದಲ್ಲಿ ಸುದ್ದಿ ಮಾಡುತ್ತಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ನೇರವಾಗಿ ಪೈಪೋಟಿಗೆ ಇಳಿದಿದ್ದು, ಒಂದಲ್ಲಾ ಒಂದು ವಿಚಾರವಾಗಿ ಕಿತ್ತಾಟ ನಡೆಯುತ್ತಲೇ ಇದೆ. ಇಂದಿನಿಂದ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ಆರಂಭಿಸಲಿದ್ದು, ಈ ವಿಚಾರವಾಗಿಯೇ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮೋದಿ ಆಗಮನಕ್ಕಾಗಿ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಗೆ ನಡುಕ ಉಂಟಾಗಿದೆ‌. ಅದೇ ಕಾರಣಕ್ಕೆ ಮುಖ್ಯಸ್ಥ ಸಿದ್ದರಾಮಯ್ಯನವರು ಭಯದಿಂದ ಏನೇನೋ ಮಾತನಾಡುತ್ತಿದ್ದಾರೆ.!

ರಾಜ್ಯಕ್ಕೆ ಬರಲು ಮೋದಿ ಯಾರು..!

ದೇಶದ ಪ್ರಧಾನಿಗೆ ಗೌರವ ನೀಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ನೀಡುವ ಒಂದೊಂದು ಹೇಳಿಕೆ ನೋಡುತ್ತಿದ್ದರೆ ವಿವೇಚನೆಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಬಿಜೆಪ ಪರ ಪ್ರಚಾರ ಮಾಡಲು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಕರ್ನಾಟಕಕ್ಕೆ ಬರಲು ಯಾವ ಹಕ್ಕಿದೆ ? ಎಂದು ಪಂಚ ಪ್ರಶ್ನೆ ಕೇಳಿರುವ ಸಿದ್ದರಾಮಯ್ಯನವರು , ಇತ್ತೀಚಿಗೆ ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ಪ್ರಶ್ನಿಸಿದ್ದಾರೆ ‌. ಮೋದಿ ಇತ್ತೀಚೆಗೆ ನಾನು ಕನ್ನಡಿಗನ ಎಂದು ಹೇಳಿಕೊಂಡಿದ್ದರು. ಇದೀಗ ಅದೇ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯನವರು , ಕನ್ನಡಿಗನಾಗುವುದೆಂದರೆ ಹಿಂದಿಯನ್ನು ಹೇರಿಕೆ ಮಾಡಬಾರದು ಎಂದು ಹೇಳಿದ್ದಾರೆ. ಇದೇ ರೀತಿ ಪಂಚ ಪ್ರಶ್ನೆಗಳನ್ನು ಕೇಳಿದ ಸಿದ್ದರಾಮಯ್ಯನವರು ತಮ್ಮ ಟ್ವಿಟ್ಟರ್ ನಲ್ಲಿ #ಉತ್ತರಿಸಿ ಎಂಬ ಹ್ಯಾಷ್ ಟ್ಯಾಗ್ ಮೂಲಕ ಹೇಳಿಕೊಂಡಿದ್ದಾರೆ.!

ಸಿದ್ದರಾಮಯ್ಯನವರ ಈ ಎಲ್ಲಾ ಪ್ರಶ್ನೆಗಳಿಗೂ ತಕ್ಷಣ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನವರು ಖಾರವಾಗಿಯೇ ಉತ್ತರಿಸಿದ್ದಾರೆ..!

Related image

ಯಾವನ್ರೀ ಈ ಸಿದ್ದರಾಮಯ್ಯ..?

ಪ್ರಧಾನಿ ಮೋದಿಗೆ ಪ್ರಶ್ನಿಸಿದ ಸಿದ್ದರಾಮಯ್ಯನವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಯಡಿಯೂರಪ್ಪ ನವರು, ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಲು ಈ ಸಿದ್ದರಾಮಯ್ಯ ಯಾರ್ರೀ? ಏನ್ ಯೋಗ್ಯತೆ ಇದೆ ನಿಮಗೆ ಪ್ರಧಾನಿಯ ಬಗ್ಗೆ ಮಾತನಾಡಲು ? ಎಂದು ಸಿದ್ದರಾಮಯ್ಯನವರಿಗೆ ಸಖತ್ ಟಾಂಗ್ ನೀಡಿದ್ದಾರೆ. ಪ್ರಧಾನಿಯ ಬಗ್ಗೆ ಮಾತನಾಡಲು ಸಿದ್ದರಾಮಯ್ಯನವರಿಗೆ ನೈತಿಕತೆಯೇ ಇಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಕಿಡಿ ಕಾರಿದ್ದಾರೆ.!

ಕಾಂಗ್ರೆಸ್ ಪಕ್ಷವೇ ಒಡೆದ ಮನೆಯಂತಾಗಿದೆ. ಮೊದಲು ಅದನ್ನು ಸರಿ ಮಾಡಲಿ, ನಂತರ ಪ್ರಧಾನಿಯ ಬಗ್ಗೆ ಮಾತನಾಡಲಿ ಎಂದು ಹೇಳಿದ ಯಡಿಯೂರಪ್ಪ ನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.!

ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದ್ದು, ರಾಜಕೀಯ ನಾಯಕರ ಸಮರ ತಾರಕಕ್ಕೇರಿದೆ. ಪರಸ್ಪರ ವಾಗ್ದಾಳಿ ನಡೆಸುತ್ತಿದ್ದು, ಈ ಬಾರಿಯ ಚುನಾವಣೆ ಎಲ್ಲಾ ರೀತಿಯಲ್ಲೂ ಕುತೂಹಲ ಕೆರಳಿಸುತ್ತಿದೆ ಎಂಬುವುದರಲ್ಲಿ ಸಂಶಯವಿಲ್ಲ..!

–ಅರ್ಜುನ್

 

Tags

Related Articles

Close