ಪ್ರಚಲಿತ

ಜಗತ್ತಿನ ಶಾಂತಿಗಾಗಿ ಮೋದಿ ಮಂತ್ರ ಅತ್ಯಗತ್ಯ: ಜಗತ್ತಿನ ದೊಡ್ಡಣ್ಣ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ಪ್ರಪಂಚವೇ ವಿಶ್ವದ ಶಕ್ತಿಶಾಲಿ ನಾಯಕ ಎಂದು ಒಪ್ಪಿಕೊಂಡರೂ, ಭಾರತದ ಕೆಲ ಲದ್ದಿಜೀವಿಗಳಿಗೆ ಮಾತ್ರ ಮೋದಿ ಅವರ ಪವರ್ ಏನು ಎಂಬುದು ಇನ್ನೂ ಅರಿವಾಗಿಲ್ಲ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕವೇ ಇದೀಗ ಭಾರತದ ಪ್ರಧಾನಿ ಮೋದಿ ಅವರ ಸಾಮರ್ಥ್ಯದ ಬಗ್ಗೆ ಮಾತನಾಡಿದೆ.

ಅಂದ ಹಾಗೆ ಕಳೆದ ಒಂದು ವರ್ಷಗಳಿಂದೀಚೆಗೆ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಭಾರತದ ಪ್ರಧಾನಿ ಮೋದಿ ಅವರಿಗೆ ಈ ಯುದ್ಧವನ್ನು ನಿಲ್ಲಿಸುವ ಸಾಮರ್ಥ್ಯ ಇದೆ ಎಂದು ಅಮೆರಿಕದ ಶ್ವೇತ ಭವನ ತಿಳಿಸಿದೆ. ಕಾರ್ಯಕ್ರಮವೊಂದರಲ್ಲಿ ಶ್ವೇತ ಭವನದ ವಕ್ತಾರ ಜಾನ್ ಕಿರ್ಬಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸುವ ಪ್ರಯತ್ನವನ್ನು ಅಮೆರಿಕ ಸ್ವಾಗತಿಸುತ್ತದೆ. ಭಾರತದ ಪ್ರಧಾನಿ ಮೋದಿ ಅವರಿಗೆ ಈ ಎರಡು ದೇಶಗಳ ನಡುವಿನ ಯುದ್ಧವನ್ನು ನಿಲ್ಲಿಸುವುದು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಯುದ್ಧ ಕೊನೆಗಾಣಿಸಲು ಪ್ರಧಾನಿ ಮೋದಿ ಅವರು ಯಾವುದೇ ಕ್ರಮ ಕೈಗೊಂಡರು, ನಾವದನ್ನು ಸಂಪೂರ್ಣ ಬೆಂಬಲಿಸುತ್ತೇವೆ. ಯುದ್ಧ ಒಂದಿಲ್ಲೊಂದು ದಿನ ಅಂತ್ಯವಾಗುತ್ತದೆ. ಆದರೆ, ಅದು ಒಂದೇ ಆದಲ್ಲಿ ಉತ್ತಮ ಎಂದು ಕಿರ್ಬಿ ಹೇಳಿದ್ದಾರೆ. ರಷ್ಯಾ ಯುದ್ಧ ನಿಲ್ಲಿಸಲು ಇನ್ನೂ ಸಮಯವಿದೆ. ಆದರೆ ಪುಟಿನ್‌ಗೆ ಮೋದಿ ಯುದ್ಧ ನಿಲ್ಲಿಸುವಂತೆ ಮನವರಿಕೆ ಮಾಡಿ ಕೊಡಬಹುದು ಎಂದು ಹೇಳಿದ್ದಾರೆ.

ಈ ಹಿಂದೆ ಶಾಂಘೈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಇದು ಯುದ್ಧ ಮಾಡುವ ಸಮಯವಲ್ಲ ಎಂಬುದಾಗಿ ರಷ್ಯಾ ಮತ್ತು ಉಕ್ರೇನ್ ‌ಗೆ ತಿಳಿಸಿದ್ದರು. ಅಲ್ಲದೆ ಹಲವಾರು ಬಾರಿ ಈ ಹಿಂಸಾಚಾರವನ್ನು ನಿಲ್ಲಿಸುವಂತೆಯೂ ಕರೆ ನೀಡಿದ್ದರು. ಇದನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ಮೋದಿ ಅವರ ಈ ನಿಲುವಿಗೆ ಯುರೋಪಿಯನ್ ರಾಷ್ಟ್ರಗಳು ಸಹ ಬೆಂಬಲ ಸೂಚಿಸಿದ್ದವು.

ಪ್ರಧಾನಿ ಮೋದಿ ಅವರ ಸಾಧನೆಗಳು ಇಡೀ ಜಗತ್ತಿಗೆಯೇ ತಿಳಿದಿದೆ. ಪ್ರಧಾನಿ ಮೋದಿ ಅವರು ಮನಸ್ಸು ಮಾಡಿದಲ್ಲಿ ಯಾವುದೂ ಅಸಾಧ್ಯವಲ್ಲ. ಅಂತಹ ನಾಯಕತ್ವ ಗುಣ ಮೋದಿಯವರಲ್ಲಿದ್ದು, ಇಡೀ ಪ್ರಪಂಚಕ್ಕೆ ಮಾದರಿ ನಾಯಕನಂತಿದ್ದಾರೆ ಎಂದರೆ ತಪ್ಪಾಗಲಾರದು. ಭಾರತದ ಲದ್ದಿ ಜೀವಿಗಳಿಗೂ ಪ್ರಧಾನಿ ಮೋದಿ ಅವರ ಸಾಮರ್ಥ್ಯ, ನಾಯಕತ್ವ ಯಾಕೆ ಮಾದರಿ ಎನ್ನುವುದರ ಅರಿವಾಗಲಿ. ಮೋದಿ ಅವರ ನೇತೃತ್ವದ ಎನ್‌ಡಿ‌ಎ ಅಧಿಕಾರಕ್ಕೆ ಬರದೇ ಹೋಗಿದ್ದಲ್ಲಿ ಈ ದೇಶದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಮೋದಿ ವಿರೋಧಿಗಳು ಮನವರಿಕೆ ಮಾಡಿಕೊಳ್ಳುವಂತಾಗಲಿ ಎನ್ನುವುದೇ ನಮ್ಮ ಆಶಯ.

Tags

Related Articles

Close