ಪ್ರಚಲಿತ

ಮೋದಿ ಸವಾಲ್: ಮೋದಿಗೆ ಸವಾಲೆಸೆದಿದ್ದ ರಾಹುಲ್ ಗಾಂಧಿಯ ಚಳಿ ಬಿಡಿಸಿದ ನಮೋ ಅಬ್ಬರ..! ಕಂಗಾಲಾದ ಸಿದ್ದರಾಮಯ್ಯರಿಂದ ಟ್ವೀಟ್ ವಾರ್..!!!

ನಮೋ ತ್ಸುನಾಮಿ ಕರುನಾಡಿಗೆ ಅಪ್ಪಳಿಸಿಯೇ ಬಿಟ್ಟಿದೆ. ಮೋದಿ ಮೋದಿ ಎನ್ನುವ ಘೋಷ ಕರ್ನಾಟಕಕ್ಕೆ ಆವರಿಸಿ ಆಗಿದೆ. ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆದು ಕರ್ನಾಟಕದ ಗದ್ದುಗೆಗೆ ಏರಲು ಸನ್ನದ್ಧವಾಗಿರುವ ಕರ್ನಾಟಕ ಭಾರತೀಯ ಜನತಾ ಪಕ್ಷಕ್ಕೆ ಇಂದು ಅಕ್ಷರಷಃ ಗ್ಲೂಕೋಸ್ ನೀಡಿದಂತಾಗಿದೆ.

ಹೌದು. ಇಂದಿನಿಂದ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮುಕಿದ್ದು ಭಾರತೀಯ ಜನತಾ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಒಂದು ಕಡೆ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದರೆ ಮತ್ತೊಂದು ಕಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಆರಂಭವಾಗಿದ್ದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಬಿಎಸ್‍ವೈಗೆ ಕಮಲ ಗಿಫ್ಟ್ ಕೊಟ್ಟ ನಮೋ…

ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆಯಲ್ಲಿರುವಾಗ ಯಡಿಯೂರಪ್ಪನವರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಹಿಂದಿಯಲ್ಲೇ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಮೋದಿಯವರನ್ನು ಬರಮಾಡಿಕೊಂಡರು. ನಂತರ ತಮ್ಮ ಭಾಷಣ ಮುಗಿಸಿದ ನಂತರ ಪ್ರಧಾನಿ ಮೋದಿ ಹಾಗೂ ರಾಜ್ಯ ನಾಯಕರು ಬಿಎಸ್‍ವೈಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕಮಲದ ಹೂವನ್ನು ಯಡಿಯೂರಪ್ಪ ಅವರ ಕೈಗೆ ಕೊಟ್ಟು ಅಭಿನಂದಿಸಿದರು.

Image result for modi today in mysore

ಕನ್ನಡದಲ್ಲೇ ಭಾಷಣ ಆರಂಭ…

ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕರ್ನಾಟಕದ ಸಾಧನೆಯ ಹರಿಕಾರರು ಹಾಗೂ ಸಂತವರೇಣ್ಯರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೋರ್ವರ ಹೆಸರುಗಳನ್ನೂ ಕನ್ನಡದಲ್ಲೇ ಉಚ್ಚರಿಸಿದರು. ಕೇವಲ 2 ಪದ ಕನ್ನಡ ಮಾತನಾಡಲು ತಡಕಾಡುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇರುವಾಗ 5 ನಿಮಿಷಗಳ ಕಾಲ ನಿರರ್ಗಳವಾಗಿ ಕನ್ನಡ ಮಾತನಾಡಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು. ಮಾತ್ರವಲ್ಲದೆ ನೆಟ್ಟಗೆ ಸರ್ ಎಂ ವಿಶ್ವೇಶರಯ್ಯನವರ ಹೆಸರನ್ನು 5 ಬಾರಿ ಹೇಳಲು ಕಲಿಯಿರಿ ಎಂದು ವ್ಯಂಗ್ಯವಾಡಿದರು

* ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನಗೆ 15 ನಿಮಿಷ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಆದರೆ ಅವರು 15 ನಿಮಿಷ ಚರ್ಚೆಮಾಡಲು ಸಾಧ್ಯನಾ ಎಂಬ ಮಾತೇ ಅಚ್ಚರಿ ಮೂಡಿಸುತ್ತಿದೆ.

* ನಾನು ನಿಮ್ಮ ಮುಂದೆ ಕೂರಲು ಸಾಧ್ಯವಿಲ್ಲ. ಯಾಕೆಂದರೆ ನಾನು ಹೆಸರಿನಿಂದ ಬಂದವನಲ್ಲ, ಕೆಲಸದಿಂದ ಬಂದವನು. ಹೆಸರಿನಿಂದ ಬಂದವರ ಮಧ್ಯೆ ಕೆಲಸದಿಂದ ಬಂದವರು ಕೂರೋದು ತುಂಬಾ ಕಷ್ಟ. ಯಾಕೆಂದರೆ ಅವರಿಗೆ ತುಂಬಾನೆ ಕೆಲಸಗಳಿವೆ.

* 5 ಬಾರಿ ಸರ್ ಎಂ ವಿಶ್ವೇಶ್ವರಯ್ಯನವರ ಹೆಸರು ಹೇಳಿ ನೋಡೋಣ. ಅಂತಹಾ ಶ್ರೇಷ್ಟ ನಾಯಕರ ಹೆಸರು ಹೇಳಲು ತಡಕಾಡುವ ನೀವು ನನ್ನ ಬಳಿ 15 ನಿಮಿಷ ಕೇಳ್ತೀರಿ…?

* ನನ್ನನ್ನು ಸಂಸತ್‍ನಲ್ಲಿ 15 ನಿಮಿಷ ಮಾತನಾಡಿ ಎಂದು ಹೇಳಿದ್ದೀರಾ. ಸಂಸತ್‍ನಲ್ಲಿ ನೀವು 15 ನಿಮಿಷ ಮಾತನಾಡೋದು ಬಿಡಿ, ಸಾಧ್ಯವಾದರೆ ಕರ್ನಾಟಕದಲ್ಲಿ ನಿಮ್ಮ ಸಾಧನೆಗಳ ಕುರಿತು 15 ನಿಮಿಷ ಮಾತನಡಿ. ಕರ್ನಾಟಕದ ಜನತೆಯ ಎದುರು ಮಾತನಾಡಿ.

* ನೀವು ಆ 15 ನಿಮಿಷಗಳ ಕಾಲ ಕಾಗದದ ಸಹಾಯವಿಲ್ಲದೆ ಮಾತನಾಡುವಿರಾ..? ಯಾವುದೇ ಚೀಟಿ ಇಟ್ಟುಕೊಳ್ಳದೆ 15 ನಿಮಿಷಗಳ ಕಾಲ ಮಾತನಾಡುವಷ್ಟು ತಾಕತ್ತು ನಿಮ್ಮಲ್ಲಿದೆಯೇ..?

* ನೀವು ಒಬ್ಬ ನಾಮದರ್ (ಕೆಲಸ ಮಾಡದವರು) ಆದರೆ ನಾವು ಕಾಮ್ ದರ್ (ಕೆಲಸ ಮಾಡುವವರು). ನಿಮ್ಮಿಂದ ನಾವು ಹತಾಶರಾಗಬೇಕಾಗಿಲ್ಲ.

* ರಾಜ್ಯದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ನಡೆಸುತ್ತಿದೆ. ಇಲ್ಲಿ 1+1 ಹಾಗೂ 2+1 ಫಾರ್ಮುಲಾ ನಡೆಯುತ್ತಿದೆ. ಮಿನಿಸ್ಟರ್‍ಗಳ ಮಕ್ಕಳಿಗೆಲ್ಲಾ ಟಿಕೆಟ್ ನೀಡಲಾಗಿದೆ.

* ಕರ್ನಾಟಕದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ಹಾಗೂ ಪೀಪಲ್ ಪಾಲಿಟಿಕ್ಸ್ ನಡೆಯುತ್ತಿದೆ. ಕಾಂಗ್ರೆಸ್‍ನ ಫ್ಯಾಮಿಲಿ ಪಾಲಿಟಿಕ್ಸ್ ಹಾಗೂ ಭಾರತೀಯ ಜನತಾ ಪಕ್ಷದ ಪೀಪಲ್ ಪಾಲಿಟಿಕ್ಸ್ ನಡೆಯುತ್ತಿದೆ.

* ಇಲ್ಲಿನ ಸಚಿವರುಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ 10% ಕಮಿಷನ್ ಸರ್ಕಾರ ನಡೆಯುತ್ತಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

* 5 ವರ್ಷ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ. ಇಲ್ಲಿ ಆಡಳಿತ ಕೆಳ ಮಟ್ಟಕ್ಕೆ ಇಳಿದಿದೆ. ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ.

* ಸರ್ಕಾರಿ ಗುತ್ತಿಗೆದಾರರು ಅಕ್ರಮವಾಗಿ ಮುಚ್ಚಿಟ್ಟಿದ್ದ ಹಗರಣಗಳು ಇದೀಗ ಒಂದೊಂದೇ ಹೊರಬರುತ್ತಿದೆ. ನೋಟ್ ಬ್ಯಾನ್ ಪರಿಣಾಮದಿಂದ ಲೂಟಿ ಹೊಡೆದ ಹಣಗಳು ಹೊರ ಬರುತ್ತಿದೆ.

* ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿದ ಸರ್ಕಾರದಿಂದ ಬೇರೆ ಏನು ನಿರೀಕ್ಷಿಸಲು ಸಾಧ್ಯ?

* ಚಾಮರಾಜ ನಗರದಲ್ಲಿ ಕುಡಿಯುವ ನೀರಿಗೂ ರೈತರು ಕಷ್ಟಪಡುತ್ತಿದ್ದಾರೆ. ಕಪ್ಪು ಗ್ರೈನೇಟ್ ಸಿಗುತ್ತಿದ್ದರೂ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ.

* 2022ಕ್ಕೆ ರೈತರ ಆದಾಯ ದ್ವಿಗುಣ ಮಾಡೋದೇ ಭಾರತೀಯ ಜನತಾ ಪಕ್ಷದ ನಿರ್ಧಾರವಾಗಿದೆ. ರೈತರ ಪ್ರತಿಯೊಂದು ಸಮಸ್ಯೆಯನ್ನೂ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.

* ರೈತರಿಗೆ ನಮ್ಮ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಗಳನ್ನೂ ನೀಡಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ.

* ಹೆಜ್ಜಾಲ-ಚಾಮರಾಜನಗರ ರೈಲು ಯೋಜನೆಗೆ ಭೂಮಿ ನೀಡದ ಕಾಂಗ್ರೆಸ್ ಸರ್ಕಾರ. ಇನ್ನೇನು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ..?

* ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 80000 ಕೋಟಿ ಮೀಸಲಿಟ್ಟಿರುವ ಕೇಂದ್ರ ಸರ್ಕಾರ. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ದುರುಪಯೋಗಪಡಿಸಿಕೊಂಡಿದೆ.

* ಈ ಎಲ್ಲಾ ಅನಾಚಾರಗಳಿಂದ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಏರೋದಿಲ್ಲ ಎಂಬ ಮಾಹಿತಿ ಸಿಎಂಗೆ ಗೊತ್ತಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಬಾರಿ ಗೆಲ್ಲೋದಿಲ್ಲ ಎಂಬ ವಿಷಯ ತಿಳಿದಿದೆ. ಈ ಕಾರಣಕ್ಕಾಗಿಯೇ ಅವರು 2 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

* ಅಭಿವೃದ್ಧಿ ಅನ್ನೋದಿದ್ದರೆ ಅದು ಭಾರತೀಯ ಜನತಾ ಪಕ್ಷದಿಂದ ಮಾತ್ರವೇ ಸಾಧ್ಯ. ಹೀಗಾಗಿ ನಾವು ನಿಮ್ಮ ಮುಂದೆ ಮತ ಕೇಳಲು ಅರ್ಹರಾಗಿದ್ದೇವೆ.

* ಸ್ವಚ್ಚ ಸುಂದರ ಕರ್ನಾಟಕ್ಕಾಗಿ ಈ ಬಾರಿ ಬಿಜೆಪಿ ಗೆಲ್ಲಿಸಿ. (ಕನ್ನಡದಲ್ಲಿ)

ಇದು ಪ್ರಧಾನಿ ನರೇಂದ್ರ ಚಾಮರಾಜನಗರದ ಸಂತೆಮಾರಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿಸಿದ ವಾಗ್ಛರಿ. ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಾಂಬ್ ಸಿಡಿಸುತ್ತಲೇ ಗದ್ಘದಿತರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‍ನಲ್ಲಿ ತಮ್ಮ ಭಯವನ್ನು ತೆರೆದಿಟ್ಟಿದ್ದಾರೆ. ಪ್ರಧಾನಿ ಮೋದಿಯನ್ನೇ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರ ಭಯವನ್ನು ಬಿಂಬಿಸುತ್ತಿತ್ತಲ್ಲದೆ ಮತ್ತೇನೂ ಅಲ್ಲ.

-ಸುನಿಲ್ ಪಣಪಿಲ

Tags

Related Articles

Close