ಪ್ರಚಲಿತ

ಮತ್ತೊಮ್ಮೆ ಮೋದಿಯನ್ನು ಟೀಕಿಸಲು ಹೋಗಿ ಪೇಚಿಗೆ ಸಿಲುಕಿದ ರಾಗಾ!! ಟ್ವೀಟ್ವರ್ ನಲ್ಲೂ ಮಾನ ಕಳೆದುಕೊಂಡ ಕಾಂಗ್ರೆಸ್ ಅಧ್ಯಕ್ಷ!!

ಕಾಂಗ್ರೆಸ್ ನ ಅಧ್ಯಕ್ಷ ರಾಹುಲ್ ಗಾಂಧಿಯವರು ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದ್ದರಲ್ಲದೇ ಟೀಕಾಪ್ರಹಾರಗಳನ್ನೇ ಹರಿಸುತ್ತಾ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಲೇ ಬರುತ್ತಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಫಿಟ್ನೆಸ್ ವಿಡಿಯೋವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಆಡಿಕೊಂಡು ನಕ್ಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈಗಾಗಲೇ ಅದೆಷ್ಟೋ ವರ್ಷಗಳ ಕಾಲ ತನ್ನ ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಿ ಕ್ಯಾರೆ ಅನ್ನದ ರಾಹುಲ್ ಗಾಂಧಿ ದೇಶದ ಪ್ರಧಾನಿಯನ್ನು ಗೌರವದಿಂದ ಕಾಣಲು ಅದು ಹೇಗೆ ಸಾಧ್ಯ!! ಹಾಗಾಗಿ ಇದೀಗ ನರೇಂದ್ರ ಮೋದಿಯವರ ಫಿಟ್ನೆಸ್ ಚಾಲೆಂಜ್ ನ ಕುರಿತು ವ್ಯಂಗ್ಯವಾಡುತ್ತಿರುವುದನ್ನು ನೋಡಿದರೆ ತಾನೆಂತಹ ವ್ಯಕ್ತಿ ಎಂಬುವುದು ಈ ಮೂಲಕ ಸಾಬೀತು ಪಡಿಸುತ್ತಿದ್ದಾರೆ.

ದೆಹಲಿಯ ಐಷಾರಾಮಿ ಹೊಟೇಲ್ ವೊಂದರಲ್ಲಿ ಜೂನ್ 13 ರಂದು ಸಂಜೆ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಹಲವು ನಾಯಕರು ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖಂಡ ಸೀತಾರಾಮ್ ಯಚೂರಿ, ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಅವರ ಎದುರಲ್ಲೇ ರಾಹುಲ್ ಗಾಂಧಿಯವರು ಮೋದಿಯವರ ವಿಡಿಯೋವನ್ನು ‘ವಿಲಕ್ಷಣ, ಹಾಸ್ಯಾಸ್ಪದ’ ಎಂದು ವ್ಯಂಗ್ಯ ವಾಡಿದ್ದಾರೆ!!

ಅಷ್ಟೇ ಅಲ್ಲದೇ, ಪ್ರಧಾನಿ ಮೋದಿ ಯೋಗ ಮಾಡುವ ವಿಡಿಯೋ ವಿಚಿತ್ರ ಮತ್ತು ಅಪಹಾಸ್ಯಕರವಾಗಿದೆ ಎಂದು ರಾಹುಲ್ ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, “ಮೋದಿ ಫಿಟ್ನೆಸ್ ವಿಡಿಯೋ ನೋಡಿದ್ದೀರಾ” ಇದು ವಿಚಿತ್ರವಾಗಿದೆ, ಇದು ದಿವಾಳಿತನ ತೋರಿಸುತ್ತದೆ. ಸಾಧ್ಯವಾದರೆ ನೀವೂ ಒಂದು ಫಿಟ್ನೆಸ್ ವಿಡಿಯೋ ಪೆÇೀಸ್ಟ್ ಮಾಡಿ ಎಂದು ಸೀತಾರಾಂ ಯಚೂರಿ ಬಳಿ ರಾಹುಲ್ ಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಇಫ್ತಾರ್ ಕೂಟದಲ್ಲಿ ತನ್ನ ಮುಸ್ಲಿಂ ಬೆಂಬಲಿಗನೋರ್ವ ತನ್ನ ತಲೆಗೆ ತೊಡಿಸಿದ ಬಿಳಿ ಬಣ್ಣದ ಕ್ಯಾಪ್ ನಲ್ಲಿ ಫೆÇೀಟೋ ತೆಗೆಸಿಕೊಂಡ ಕೇವಲ 10 ಸೆಕೆಂಡ್‍ಗಳಲ್ಲಿ ಅದನ್ನು ತೆಗೆದ ಕಾರಣಕ್ಕಾಗಿ ಮುಸಲ್ಮಾನರ ಆಕ್ರೋಶಕ್ಕೂ ತುತ್ತಾಗಿರುವ ರಾಹುಲ್ ಗಾಂಧಿ ಇದೀಗ ಫಿಟ್ನೆಸ್ ಚಾಲೆಂಜ್ ನ ಕುರಿತು ಮೋದಿ ವಿರುದ್ಧವೇ ವ್ಯಂಗ್ಯವಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಫಿಟ್ನೆಸ್ ಕುರಿತು ಆರಂಭವಾಗಿದ್ದ ಟ್ವಿಟ್ಟರ್ ಅಭಿಯಾನದಲ್ಲಿ “ಹಮ್ ಫಿಟ್ ತೋ ಇಂಡಿಯಾ ಫಿಟ್” ಎಂಬ ಹ್ಯಾಶ್ ಟ್ಯಾಗ್ ನಲ್ಲಿ ನರೇಂದ್ರ ಮೋದಿಯವರು ಫಿಟ್ನೆಸ್ ವಿಡಿಯೋ ಅಪೆÇ್ಲೀಡ್ ಮಾಡಿದ್ದರು. ಅಷ್ಟೇ ಅಲ್ಲದೇ ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಫಿಟ್ನೆಸ್ ಚಾಲೆಂಜ್ ಎಸೆದಿದ್ದರು. ಆದರೆ ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಆಡಿಕೊಂಡು ನಕ್ಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಸೇರಿದಂತೆ ಹಲವಾರು ಮಂದಿ ಈ ಬಗ್ಗೆ ಸಖತ್ತಾಗಿ ಕಮೆಂಟ್ ಮಾಡಿದ್ದಾರೆ.

“ಇದು ಅವರ ಅಪ್ರಬುದ್ಧತೆ! “ಯಾಕೆ? ಯಾಕೆ ಎಲ್ಲರೂ ರಾಹುಲ್ ಗಾಂಧಿ ಅವರಿಂದ ಪ್ರಬುದ್ಧತೆ ಬಯಸುತ್ತೀರಿ? ಇಡೀ ವಿಶ್ವವೂ ಭಾರತಕ್ಕೆ ಸಾಕಷ್ಟು ಗೌರವ ನೀಡುತ್ತಿರುವುದಕ್ಕೆ ಯೋಗವೂ ಒಂದು ಕಾರಣ. ಆದರೆ ರಾಹುಲ್ ಗಾಂಧಿ ಅವರಿಗೆ ಅದರ ಮಹತ್ವ ಗೊತ್ತಿಲ್ಲ ಎಂದರೆ ಅದು ಅವರ ತಪ್ಪು, ಭಾರತದ ಜನರಿಗೆ ಗೊತ್ತಾಗುತ್ತಿದೆ ಅವರು ಎಷ್ಟು ಅಪ್ರಬುದ್ಧರು ಎಂಬುದು” ಎಂದು ಈ ವಿಡಿಯೋಕ್ಕೆ ನೇಹಾ ಕುಮಾರಿ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಕಮೆಂಟ್ ಮಾಡಿರುವ ಬಿಜೆಪಿಯ ಅಮಿತ್ ಮಾಳವೀಯ, “ರಾಹುಲ್ ಹಾಗೆ ಹೇಳಿದ್ದೇಕೆ ಗೊತ್ತಾ? ರಾಹುಲ್ ಗಾಂಧಿ ಅವರು ನರೇಂದ್ರ ಮೋದಿಯವರ ಫಿಟ್ನೆಸ್ ಚಾಲೆಂಜ್ ಅನ್ನು ‘ವಿಲಕ್ಷಣ’ ಎಂದಿದ್ದಕ್ಕೆ ಕಾರಣವೇನು ಗೊತ್ತೆ? ಅವರಿಗೆ ಈಗಲೂ ‘ಪಂಚತತ್ವ’ ಎಂಬುದನ್ನು ಸರಿಯಾಗಿ ಉಚ್ಚಾರ ಮಾಡಲು ಬರುವುದಿಲ್ಲ, ಅದಕ್ಕೇ! ಎಂದಿದ್ದಾರೆ.

– ಅಲೋಖಾ
Tags

Related Articles

Close