ಪ್ರಚಲಿತ

ದಿಟ್ಟ ಹೆಜ್ಜೆಗೆ ಮುಂದಾದ ಮೋದಿ ಸರಕಾರ..! ದೇಶದ ಹಿತಕ್ಕೆ ಮೋದಿ ಕೈಗೊಂಡಿರುವ ಯೋಜನೆ ಏನು ಗೊತ್ತಾ..?

ದೇಶದ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದೀಜೀ ಅವರು ಅಧಿಕಾರ ಹಿಡಿದ ದಿನದಿಂದಲೂ ಒಂದೊಂದೇ ಯೋಜನೆ ಕೈಗೊಳ್ಳುತ್ತಾ ಬಂದಿದ್ದಾರೆ. ಮೋದಿಯವರ ಪ್ರತಿಯೊಂದು ಯೋಜನೆಗಳನ್ನು ವಿರೋಧಿಗಳು ವಿರೋಧಿಸುತ್ತಾ ಬಂದರೂ ಕೂಡ ಯಾರಿಗೂ ಕ್ಯಾರೇ ಅನ್ನದ ಮೋದೀಜೀ ಜಗತ್ತೇ ಮೆಚ್ಚುವಂತ ನಾಯಕರಾಗಿದ್ದಾರೆ. ಈಗಾಗಲೇ ಹಲವಾರು ಜನಹಿತ ಯೋಜನೆಗಳನ್ನು ರೂಪಿಸಿ ಅದರಿಂದ ದೇಶದ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಮಾಡಿದ ಮೋದೀಜೀ ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಮುಂದಿಟ್ಟಿದ್ದಾರೆ. ಈಗಾಗಲೇ ದೇಶದ ಸೈನಿಕರಿಗೆ, ರೈತರಿಗೆ , ಸಾಮಾನ್ಯ ಜನರಿಗೆ ಹೀಗೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದೀಜೀ ಇದೀಗ ಕಾರ್ಮಿಕರಿಗೆ ಅನುಕೂಲವಾಗುವಂತೆ ಒಂದು ಯೋಜನೆಯನ್ನು ಜಾರಿಗೊಳಿಸಲು ತಯಾರಿ ನಡೆಸಿದ್ದಾರೆ.!

ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಇಡೀ ಜಗತ್ತಿನಲ್ಲೇ ಅತೀ ಹೆಚ್ಚಿನ ವೈದ್ಯಕೀಯ ವಿಮಾ ಯೋಜನೆ ಎಂದು ಹೆಗ್ಗಳಿಕೆ ಗಳಿಸಿಕೊಂಡ ಮೋದಿ ಸರಕಾರ, ಇದೀಗ ಮತ್ತೊಂದು ಬಹು ದೊಡ್ಡ ಯೋಜನೆಗೆ ಮುಂದಾಗಿದೆ. ಮೋದಿ ಸರಕಾರ ಕಾರ್ಮಿಕರಿಗೆ ಏನೂ ಮಾಡಿಲ್ಲ ಎಂದು ಪದೇ ಪದೇ ಬೊಬ್ಬೆ ಹೊಡೆಯುತ್ತಿದ್ದ ವಿರೋಧಿಗಳು ಇನ್ನು ಮುಂದೆ ಬಾಯಿ ಮುಚ್ಚುವಂತಾಗಲಿದೆ.!

೫೦ ಕೋಟಿ ಕಾರ್ಮಿಕರಿಗೆ ಸಿಗಲಿದೆ ವಿಶೇಷ ಯೋಜನೆ..!

ಭಾರತದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ, ಆದ್ದರಿಂದ ಕಾರ್ಮಿಕರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರದ ವತಿಯಿಂದ ವಿಶೇಷ ಯೋಜನೆಯೊಂದನ್ನು ಪ್ರಧಾನಿ ನರೇಂದ್ರ ಮೋದಿಜೀ ಕೈಗೊಂಡಿದ್ದಾರೆ. ದೇಶದ ಒಟ್ಟು ೫೦ ಕೋಟಿ ಕಾರ್ಮಿಕರಿಗೆ ಅನುಕೂಲವಾಗುವಂತೆ ‘ಮೋದಿ ಕಾರ್ಮಿಕ ಕೇರ್’ (ಕಲ್ಯಾಣ ಯೋಜನೆ) ಯನ್ನು ಜಾರಿಗೆ ತರಲು ಮೋದಿ ನೇತ್ರತ್ವದ ಕೇಂದ್ರ ಸರಕಾರ ಮುಂದಾಗಿದ್ದು, ದೇಶದ ಕಾರ್ಮಿಕರಿಗೆ ಸಂತಸ ನೀಡಲಿದ್ದಾರೆ. ಈವರೆಗೆ ಕಾರ್ಮಿಕರಿಗಾಗಿ ಪ್ರತ್ಯೇಕ ಯಾವುದೇ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿರಲಿಲ್ಲ, ಆದರೂ ಇತರ ಯೋಜನೆಗಳಲ್ಲಿ ಕಾರ್ಮಿಕರೂ ಕೂಡ ಪ್ರಯೋಜನ ಪಡೆಯುವಂತೆ ಮಾಡಿದ್ದರು.
ಆದರೆ ಇದೀಗ ಕಾರ್ಮಿಕರಿಗಾಗಿಯೇ ಪ್ರತ್ಯೇಕ ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾದ ಮೋದಿ ಸರಕಾರ ಮತ್ತೊಂದು ಕ್ರಾಂತಿಗೆ ಕಾರಣವಾಗಲಿದ್ದಾರೆ.!

ಈ ಯೋಜನೆಯ ಮೂಲಕ ಕಾರ್ಮಿಕರಿಗೆ ಆರಂಭದಲ್ಲಿ ಪಿಂಚಣಿ, ಜೀವವಿಮೆ ಮತ್ತು ಮೆಚ್ಯುರಿಟಿ ಬೆನಿಫಿಟ್ ಒಳಗೊಂಡ ಒಟ್ಟು ಮೂರು ಯೋಜನೆಗಳನ್ನು ಪ್ರಧಾನಿ ಮೋದಿ ಜಾರಿಗೊಳಿಸಲಿದ್ದಾರೆ. ಇದಾದ ನಂತರ ಹಂತ ಹಂತವಾಗಿ ನಿರುದ್ಯೋಗಿಗಳು ಮತ್ತು ಮಕ್ಕಳ ಕಲ್ಯಾಣ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ಈ ಎಲ್ಲಾ ಯೋಜನೆ ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ ದೇಶದ ಕಾರ್ಮಿಕರಿಗೆ ಬಹಳ ಅನುಕೂಲವಾಗಲಿದೆ.!

ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನಿಗೆ ಕತ್ತರಿ..!

ಈಗಾಗಲೇ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಒಟ್ಟು ೧೫ ಕಾರ್ಮಿಕ ಕಾನೂನುಗಳು ಚಾಲ್ತಿಯಲ್ಲಿದೆ. ಆದರೆ ಇದೀಗ ಕೇಂದ್ರ ಸರಕಾರದ ಯೋಜನೆಯ ಪ್ರಕಾರ ಸದ್ಯ ಜಾರಿಯಲ್ಲಿರುವ ೧೫ ಕಾರ್ಮಿಕ ಕಾನೂನುಗಳನ್ನು ವಿಲಿನಗೊಳಿಸಿ ಅಥವಾ ಸಡಿಲಗೊಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಮೋದಿ ಸರಕಾರ ಮಸೂದೆ ಒಂದನ್ನು ರೂಪಿಸಿದ್ದಾರೆ. ಇದೇ ಜುಲೈನಲ್ಲಿ ನಡೆಯುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಆದ್ದರಿಂದ ದೇಶದ ಕಾರ್ಮಿಕರ ಹಿತ ಕಾಯುವ ದೃಷ್ಟಿಯಿಂದ ಮೋದಿ ಸರಕಾರ ಈ ನಿರ್ಧಾರ ಕೈಗೊಂಡಿದ್ದು, ದೇಶದಲ್ಲಿ ಮತ್ತೊಂದು ಕ್ರಾಂತಿ ಸೃಷ್ಟಿಸಲಿದ್ದಾರೆ.!

ಮೋದಿ ಕಾರ್ಮಿಕ ಕೇರ್ ಯೋಜನೆಯ ಮೂಲಕ ಮೊದಲ ಹಂತದಲ್ಲಿ, ಪಿಂಚಣಿ, ಜೀವವಿಮೆ ಮತ್ತು ಮೆಚ್ಯುರಿಟಿ ಬೆನಿಫಿಟ್ ಒಳಗೊಂಡ ೩ ಯೋಜನೆಗಳು ಜಾರಿಯಾಗಲಿದೆ. ಎರಡನೇ ಹಂತದಲ್ಲಿ, ನಿರುದ್ಯೋಗಿಗಳಿಗೆ ಮತ್ತು ಮಕ್ಕಳ ಕಲ್ಯಾಣ ಯೋಜನೆ ಅನುಷ್ಟಾನಗೊಳ್ಳಲಿದೆ ಹಾಗೂ ಕಾರ್ಮಿಕ ಕಾನೂನನ್ನು ವಿಲಿನಗೊಳಿಸುವುದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದ್ದರಿಂದ ಈವರೆಗೆ ಮೋದಿ ವಿರುದ್ದ ಬೊಬ್ಬಿಡುತ್ತಿದ್ದವರು ಇನ್ನು ಮುಂದೆ ಸೈಲೆಂಟಾಗುವುದು ಖಂಡಿತ..!

–ಸಾರ್ಥಕ್

Tags

Related Articles

Close