ಪ್ರಚಲಿತ

ಉಡುಪಿ ಮು#ಸ್ಲಿಂ ವಿದ್ಯಾರ್ಥಿನಿಯರ ಮಾನಗೇಡಿ ಕೃತ್ಯ: ತೆರೆದುಕೊಳ್ಳುತ್ತಿವೆ ದಿನಕ್ಕೊಂದು ಸತ್ಯ

ಉಡುಪಿಯ ನೇತ್ರ ಜ್ಯೋತಿ ಕಾಲೇಜಿನಲ್ಲಿ ಮುಸ್ಲಿಂ ಯುವತಿಯರು ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಶೌಚಾಲಯದಲ್ಲಿ ವಿಡಿಯೋ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದಿನಕ್ಕೊಂದು ಸತ್ಯಗಳು ತೆರೆದುಕೊಳ್ಳುತ್ತಿದೆ.

ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇರಿಸಿ, ಹಿಂದೂ ವಿದ್ಯಾರ್ಥಿಗಳ ಖಾಸಗಿ ವಿಡಿಯೋ ಚಿತ್ರೀಕರಿಸುತ್ತಿದ್ದರು.‌ ಆ ಬಳಿಕ ಅದನ್ನು ಮುಸ್ಲಿಂ ಯುವಕರಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ರವಾನಿಸಿ, ಹಿಂದೂ ಯುವತಿಯರ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದರು. ಈ ಘಟನೆ ಬೆಳಕಿಗೆ ಬಂದ ಒಂದು ವಾರಗಳ ಬಳಿಕ ಮಲ್ಪೆ ಪೊಲೀಸರು ಕೊನೆಗೂ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಹೀಗೆ ದೂರು ದಾಖಲಾಗಬೇಕಾದರೆ ರಾಜ್ಯ, ದೇಶದೆಲ್ಲೆಡೆಯಿಂದ ಈ ಅವಮಾನಕರ ಘಟನೆಯ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆಗಳ ಹೋರಾಟವೂ ಮುಖ್ಯ ಪಾತ್ರ ವಹಿಸಿತ್ತು ಎಂಬುದು ಸತ್ಯ.

ಇನ್ನು ಈ ಪ್ರಕರಣದ ಬಗ್ಗೆ ಅದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ಇತರ ವಿದ್ಯಾರ್ಥಿಗಳು ಮಾತನಾಡಿದ್ದು, ಹಲವು ಸಮಯದಿಂದ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಇಂತಹ ಕುಕೃತ್ಯದಲ್ಲಿ ‌ತೊಡಗಿದ್ದರೂ, ಕಾಲೇಜು ಆಡಳಿತ ಮಂಡಳಿ ಮಾತ್ರ ಇದರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಮೊಬೈಲ್‌ನಲ್ಲಿ ಹೀಗೆ ಖಾಸಗಿ ದೃಶ್ಯಗಳನ್ನು ಸೆರೆ ಹಾಡಿರುವ ಮುಸ್ಲಿಂ ವಿದ್ಯಾರ್ಥಿನಿಯರು, ಆ ಬಳಿಕ ಅದನ್ನು ಮುಸ್ಲಿಂ ಯುವಕರಿಗೆ ನೀಡುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ಸಮಯದಲ್ಲಿ ಕಾಲೇಜಿನ ಬಳಿ ಕಾರು, ಬೈಕ್ ಗಳಲ್ಲಿ ಬರುವ ಯುವಕರಿಗೆ ಆರೋಪಿ ವಿದ್ಯಾರ್ಥಿಗಳು ಇಂತಹ ವಿಡಿಯೋ‌ಗಳನ್ನು ನೀಡುತ್ತಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗ ಮಾಡಿದ್ದಾರೆ.

ಈ ವಿಷಯಗಳಿಗೆ ಸಂಬಂಧಿಸಿದ ಹಾಗೆ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಲಾಗಿದ್ದರೂ ‌ಸಹ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂಬ ಗಂಭೀರ ಆರೋಪವನ್ನು ಸಹ ವಿದ್ಯಾರ್ಥಿನಿಯರು ಮಾಡಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ತಾವು ಮಾಡಿದ ವಿಡಿಯೋ‌ಗಳನ್ನು ಯುವಕರಿಗೆ ನೀಡುತ್ತಿರುವ ದೃಶ್ಯ ಕಾಲೇಜಿನ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದರೂ ಸಹ, ಆರೋಪಿಗಳ ವಿರುದ್ಧ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಂಡಿಲ್ಲ ಎಂಬುದಾಗಿಯೂ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ ಈ ಘಟನೆಗೆ ಸಂಬಂಧಿಸಿದ ಹಾಗೆ ಪ್ರತಿಭಟನೆ ನಡೆಸಿದ ಕಾರಣದಿಂದ ಮಾತ್ರ ಆರೋಪಿ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಒಂದು ವೇಳೆ ಈ‌ ನಾಚಿಗೇಡಿ ವಿಷಯದ ಬಗ್ಗೆ ಪ್ರತಿಭಟಿಸದೆ ಹೋಗಿದ್ದರೆ, ನಮ್ಮ ವಿಡಿಯೋಗಳು ಸಹ ಕೆಲವು ಸಮಯದ ಬಳಿಕ ವೈರಲ್ ಆಗುವ ಸಾಧ್ಯತೆ ಇತ್ತು ಎಂಬುದಾಗಿ ಕಾಲೇಜಿನ ಇತರ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಶಾಂತಿ ದೂತ ಸಮುದಾಯದ ಇಂತಹ ಕೊಳಕು ಮನಸ್ಸಿನ ವಿದ್ಯಾರ್ಥಿನಿಯರ ಹಿಂದೆ ಯಾರಿದ್ದಾರೆ, ಯಾವ ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ ಎನ್ನುವುದರ ಸಮಗ್ರ ತನಿಖೆ ನಡೆಯಬೇಕಾಗಿದೆ. ಹಾಗೆಯೇ ಈ ಪ್ರಕರಣದ ವಿರುದ್ಧ ದೂರು ದಾಖಲಿಸಿಕೊಳ್ಳಲು ಇಷ್ಟು ಸಮಯ ಹಿಡಿದಿದ್ದರ ಬಗೆಗೂ ಸಾಕಷ್ಟು ಅನುಮಾನಗಳಿವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಬದಲಾಯಿಸಿ, ಹೊಸ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇಂತಹ ಘಟನೆಗಳು ಬೇರೆ ಕಡೆಗಳಲ್ಲಿಯೂ ನಡೆದಿರಹಹುದು. ಅವುಗಳನ್ನೆಲ್ಲಾ ಕೂಲಂಕುಶವಾಗಿ ಪರಿಶೀಲಿಸಿ, ಸಂತ್ರಸ್ತರಿಗೆ ಸಹಾಯ ಮಾಡಲು ಶಿಕ್ಷಣ ಇಲಾಖೆ ಸಹಾಯವಾಣಿ ತೆರೆಯುವಂತೆಯೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈ ಪ್ರಕರಣ ನಡೆದ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಸಹ ಮುಸ್ಲಿಂ ಆಗಿದ್ದು, ಈ ಕಾರಣದಿಂದಲೇ ಆರೋಪಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಈವರೆಗೆ ಯಾವುದೇ ಕೇಸು ದಾಖಲಾಗಿಲ್ಲ ಎಂಬ ಆರೋಪ ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೆಯೇ ಇಂತಹ ಹೀನ ಕೃತ್ಯಗಳನ್ನು ‌ನಡೆಸಿದವರು ಮಾಡಿದ್ದು ಮಕ್ಕಳಾಟ, ತಮಾಷೆಗಾಗಿ ಎನ್ನುವವರು, ಇದರ ವಿರುದ್ಧ ಮಾತನಾಡಿದರೆ, ಟ್ವೀಟ್ ಮಾಡಿದರೆ ಅದನ್ನು ಕ್ರೈಮ್ ಎನ್ನುತ್ತಾರೆ. ಇದು ವಿಪರ್ಯಾಸ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಪ್ರಕರಣದ ಸಂಬಂಧ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಸಾರ್ವಜನಿಕರದ್ದು. ಮೊದಲೇ ಅಲ್ಪಸಂಖ್ಯಾತರ ಓಲೈಕೆ ಮಾಡಲು ಸರ್ಕಸ್ ಮಾಡುವ ಕಾಂಗ್ರೆಸ್ ಇಂತಹ ಹೀನ ಕೃತ್ಯ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದೇ ಎಂದು ಕಾದು ನೋಡಬೇಕಿದೆ.

Tags

Related Articles

Close