ಪ್ರಚಲಿತ

ರಾಮಮಂದಿರ ನಿರ್ಮಾಣವನ್ನು ವಿರೋಧಿಸುವವರಿಗೆ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಮುಸ್ಲಿಂ ಬೋರ್ಡ್‍ಗೆ ಹೇಳಿದ್ದೇನು ಗೊತ್ತಾ?

ಪ್ರತಿ ಬಾರಿಯೂ ಅಯೋಧ್ಯೆ ರಾಮ ಮಂದಿರದ ವಿಚಾರವಾಗಿ ಹಿಂದೂಗಳ ಪರ ನಿಲ್ಲುತ್ತಾ ಸಾಮರಸ್ಯ ಕಾಪಾಡಲು ಮುಂದಾಗುತ್ತಿರುವ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಈಗಾಗಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ಹೇಳಿರುವ ಇವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಈ ಹಿಂದೆ ಮದರಸಾ ಶಿಕ್ಷಣವನ್ನು ಪಡೆಯುತ್ತಿರುವ ಅಸಂಖ್ಯಾತ ಮುಸಲ್ಮಾನರು ತಮ್ಮ ಮದರಸಾ ಶಿಕ್ಷಣಗಳನ್ನೇ ತಿರುಚಿ ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಹೇಳಿದ್ದರು.

ಹೌದು…. ಈಗಾಗಲೇ ಹಿಂದೂ ರಾಷ್ಟ್ರವಾದ ಭಾರತ ಮೊಘಲರ ದುರಾಡಳಿತಕ್ಕೆ ತುತ್ತಾಗಿ ಅದೆಷ್ಟೋ ದೇವಾಲಯಗಳು ನಾಶವಾಗಿದ್ದಲ್ಲದೇ, ಇತಿಹಾಸ ಪ್ರಸಿದ್ಧವಾದ ದೇವಾಲಯಗಳನ್ನೇ ಕೆಡವಿ ಅದೇ ಜಾಗದಲ್ಲಿ ಮಸೀದಿಯನ್ನು ಕಟ್ಟಿ ಇಸ್ಲಾಂ ಸಾಮ್ಯಾಜ್ಯವನ್ನೇ ಕಟ್ಟಿರುವ ಬಗ್ಗೆ ಇತಿಹಾಸದ ಪುಟಗಳಲ್ಲಿ ಕೆಲವೊಂದು ವಿಚಾರಗಳು ದಾಖಲಾಗಿದ್ದರೆ ಅದೆಷ್ಟೋ ವಿಚಾರಗಳು ಇತಿಹಾಸದ ಪುಟಗಳಿಂದಲೇ ಮರೆಯಾಗಿವೆ!!

Image result for ram mandir

ಅಷ್ಟೇ ಅಲ್ಲದೇ, ಅದೆಷ್ಟೋ ಸಾಮ್ಯಾಜ್ಯಶಾಯಿಗಳು ಮೊಘಲರ ವಶದಲ್ಲಿದ್ದು, ಹಿಂದೂ ಸಾಮ್ರಾಜ್ಯವನ್ನೇ ನಿರ್ನಾಮ ಮಾಡಲು ಹೊರಟಿದ್ದರು. ಅಲ್ಲದೇ, ಕ್ರೂರವಾಗಿ ಭಾರತೀಯರನ್ನು ಹಿಂಸಿಸಿದ ಮಹಮ್ಮದ್ ಬಿನ್ ತುಘಲಕ್, ಅಲ್ಲಾವುದ್ದೀನ್ ಖಿಲ್ಜಿಯಂತಹ ಅದೆಷ್ಟೊ ನರರೂಪದ ರಕ್ಕಸರು ಹಿಂದುಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತಾ, ದೇವಾಲಯವನ್ನು ಕೆಡವಿ ಅಲ್ಲಿ ಇಸ್ಲಾಂ ಸಾಮ್ಯಾಜ್ಯವನ್ನು ಕಟ್ಟುತ್ತಾ ಅದೆಷ್ಟೋ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದ ದುರುಳರನ್ನು ಮರೆಯಲು ಸಾಧ್ಯವೇ ??

ಅವರು ನೀಡಿದಂತಹ ಚಿತ್ರಹಿಂಸೆಗಳು, ಮಾಡಿದ ಅನರ್ಥಗಳು ಇಂದಿಗೂ ಕಾಡುತ್ತಿದೆ!! ಹಾಗಾಗಿ ಉತ್ತರ ಪ್ರದೇಶದ ಶಿಯಾ ವಕ್ಭ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಅವರು “ಭಾರತದಲ್ಲಿ ಮುಸ್ಲಿಂ ಮತಾಂಧ ಆಡಳಿತಗಾರರ ಅಟ್ಟಹಾಸಕ್ಕೆ ಬಲಿಯಾಗಿರುವ ಹಿಂದೂ ದೇವಾಲಯಗಳನ್ನು ಒಡೆದು ಕಟ್ಟಿರುವ ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಿ ಎಂದು ಉತ್ತರ ಪ್ರದೇಶದ ಶಿಯಾ ವಕ್ಭ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಸಲಹೆ ನೀಡಿದ್ದಾರೆ.

ಪ್ರತಿ ಬಾರಿಯೂ ಅಯೋಧ್ಯೆ ರಾಮ ಮಂದಿರದ ವಿಚಾರವಾಗಿ ಹಿಂದೂಗಳ ಪರ ನಿಲ್ಲುತ್ತಾ ಸಾಮರಸ್ಯ ಕಾಪಾಡಲು ಮುಂದಾಗುತ್ತಿರುವ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ “ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವನ್ನು ವಿರೋಧಿಸುವವರು ಮತ್ತು ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಬೇಕು ಎಂದು ಯಾರು ಆಗ್ರಹಿಸುತ್ತಾರೋ ಅಂತಹ ಮೂಲಭೂತವಾದಿ ಮುಸ್ಲಿಮರು ಪಾಕಿಸ್ತಾನಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಹೋಗಲಿ. ಅಂತಹ ಮುಸ್ಲಿಮರಿಗೆ ಭಾರತದಲ್ಲಿ ಅವಕಾಶ ಇಲ್ಲ” ಎಂದು ಹೇಳಿದ್ದರು!!

ಅಷ್ಟೇ ಅಲ್ಲದೇ, ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ ಎಂದು ಮದರಸಾ ಶಿಕ್ಷಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಈ ಹಿಂದೆ ವಸೀಂ ರಿಜ್ವಿ ಆಗ್ರಹಿಸಿದ್ದರು.

Related image

ಆದರೆ ಇದೀಗ ಮುಸ್ಲಿಂ ಮತಾಂಧ ಆಡಳಿತಗಾರರ ಅಟ್ಟಹಾಸಕ್ಕೆ ಬಲಿಯಾಗಿರುವ ಹಿಂದೂ ದೇವಾಲಯಗಳನ್ನು ಒಡೆದು ಕಟ್ಟಿರುವ ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ಕುರಿತು ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಐಪಿಪಿಬಿ) ಅಧ್ಯಕ್ಷ ಮೌಲಾನಾ ರಾಬಿ ಹಸನ್ ನಾದ್ವಿ ಅವರಿಗೆ ಪತ್ರ ಬರೆದಿರುವ ವಾಸೀಮ್ ರಿಜ್ವಿ ಹಿಂದೂಗಳ ಪಾವನ ಕ್ಷೇತ್ರ, ರಾಮ ಜನಿಸಿದ ಅಯೋಧ್ಯ ರಾಮಜನ್ಮಭೂಮಿ ಸೇರಿ ದೇಶದಲ್ಲಿರುವ ಒಟ್ಟು ಒಂಬತ್ತು ವಿವಾದಿತ ಭೂಮಿಗಳನ್ನು ಹಿಂದೂಗಳಿಗೆ ಮರಳಿ ನೀಡಬೇಕು ಎಂದು ಮುಸ್ಲಿಂ ಬೋರ್ಡ್ ಗೆ ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲದೇ, “ಬೇರೆ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸುವುದು ಇಸ್ಲಾಮಿನ ಕಾನೂನಿಗೆ ವಿರುದ್ಧವಾದದ್ದು. ಅಯೋಧ್ಯೆಯ ಬಾಬರಿ ಮಸೀದಿ, ಮಥುರಾದ ಕೇಶವ ಮಂದಿರ, ವಾರಣಾಸಿಯ ವಿಶ್ವನಾಥ ದೇವಾಲಯ, ಅಹಮದಾಬಾದ್ ನ ಭದ್ರಕಾಳಿ ಮಂದಿರ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಗುಜರಾತ ಬಾತ್ನಾದಲ್ಲಿರುವ ರುದ್ರ ಮಹಾಲಯ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಅದೀನಾ ಮಸೀದಿ, ಮಧ್ಯಪ್ರದೇಶದ ವಿದಿಷಾದ ವಿಜಯಾ ದೇವಿ ಮಂದಿರ ಮತ್ತು ದೆಹಲಿಯ ಕುತುಬ್ ಮಿನಾರ್ ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೌದು… ಬೇರೆ ಬೇರೆ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸುವುದು ಇಸ್ಲಾಂ ಕಾನೂನಿಗೆ ವಿರುದ್ಧವಾದ್ದದ್ದು ಎಂದು ಸಲಹೆ ನೀಡಿರುವ ವಾಸೀಮ್ ರಿಜ್ವಿ ಈ ಹಿಂದೆ ” ರಾಮ ಮಂದಿರ ನಿರ್ಮಾಣಕ್ಕೆ ಜಾತ್ಯತೀತ ಮನಸ್ಥಿತಿಯುಳ್ಳವರು ವಿರೋಧ ವ್ಯಕ್ತಪಡಿಸುವುದಿಲ್ಲ. ಅಯೋಧ್ಯೆ ಹಿಂದುಗಳ ಪವಿತ್ರ ಭೂಮಿ. ಆದ್ದರಿಂದ ಹಿಂದೂಗಳ ಭೂಮಿಯಲ್ಲಿ ಮಸೀದಿ ನಿರ್ಮಿಸಲು ಯಾವುದೇ ಅವಕಾಶವಿಲ್ಲ. ಮಸೀದಿ ನಿರ್ಮಾಣ ಭಯಸುವವರು ಐಸಿಸ್ ನಂತರ ಭಯೋತ್ಪಾದಕ ಸಂಘಟನೆ ಸೇರಲಿ” ಎಂದು ಹೇಳಿದ್ದರು!!

ಹಲವು ದಶಕಗಳ ಕಾಲ ಹಿಂದೂಗಳ ಅಸ್ಮಿತೆಯ ಸಂಕೇತವಾಗಿರುವ ರಾಮಮಂದಿರ ನಿರ್ಮಾಣದ ಕುರಿತು ಇದೀಗ ಮುಸ್ಲಿಮರು ಕೂಡ ರಾಮ ಮಂದಿರದ ಪರವಾಗಿ ಒಲವು ತೋರಿಸುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ!! ಹಿಂದೂಗಳನ್ನು ಕಂಡರೆ ಸಾಕು ಉರಿದು ಬೀಳುತ್ತಿರುವ ಅದೆಷ್ಟೋ ಮುಸಲ್ಮಾನ ಬಂಧುಗಳು ಇದೀಗ ವಾಸ್ತವವನ್ನು ತಿಳಿದುಕೊಂಡು ನ್ಯಾಯದ ಪರವಾಗಿ ನಿಲ್ಲುತ್ತಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ಸಂತಸದ ವಿಚಾರ ಮತ್ತೊಂದಿಲ್ಲ!!

– ಅಲೋಖಾ

Tags

Related Articles

Close