ಪ್ರಚಲಿತ

ಗಾಂಧಿ ಪರಿವಾರವನ್ನು ನಾಮದಾರಿಗಳೆಂದು ಮೋದಿ ಅಂದಿದ್ಯಾಕೆ ಗೊತ್ತಾ..? ಇಲ್ಲಿದೆ ನೋಡಿ ಸ್ಪೋಟಕ ಸತ್ಯ…!

ಕಾಂಗ್ರೆಸ್ ಅಂದ್ರೇನೇ ಹಾಗೇನೆ. ಅದು ಯಾರದ್ದೋ ಹೆಸರು ಹೇಳಿಕೊಂಡು ಆಡಳಿತ ನಡೆಸಿಕೊಂಡು ಜನರನ್ನು ಮೋಸಗೊಳಿಸಿ, ತಮ್ಮದೇ ಹೊಸ ಇತಿಹಾಸವನ್ನು ಹೆಣೆದುಕೊಂಡು ಬಂದ ಪಕ್ಷವಾಗಿದೆ. ಹಿಂದಿನ ಜನತೆ ತಾಂತ್ರಿಕೆ ವ್ಯವಸ್ಥೆಯ ಕೊರತೆಯಿಂದ ಕಾಂಗ್ರೆಸ್ ಪಕ್ಷದ ನಾಯಕರು ಹೇಳಿದಂತೆಯೇ ಕೇಳುತ್ತಿದ್ದರು. ಕಾಂಗ್ರೆಸ್ ನಾಯಕರು ಹೇಳಿದ್ದೇ ಸತ್ಯ ಎಂದು ನಂಬಿಕೊಳ್ಳುತ್ತಿದ್ದರು. ಆದರೆ ಇದೀಗ ಸಾಮಾಜಿಕ ಜಾಲತಾಣಗಳ ಅಬ್ಬರ ಕಾಂಗ್ರೆಸ್‍ನ ಇತಿಹಾಸವನ್ನು ಬುಡಮೇಲು ಮಾಡಿ ಸತ್ಯವನ್ನು ಬೆತ್ತಲುಗೊಳಿಸಿದೆ.

ಕಾಂಗ್ರೆಸ್‍ನವರು ನಾಮದಾರಿರ್ಗಳು ಎಂದ ಮೋದಿ…

ಕರ್ನಾಟಕದಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆಯ ಭರಾಟೆ ಜೋರಾಗುತ್ತಿದ್ದಂತೆ ಇದೀಗ ಪ್ರಧಾನಿ ನರೇಂದ್ರ ಮೋದಿಯ ಎಂಟ್ರಿಯಿಂದ ಇದು ಮತ್ತಷ್ಟು ರಂಗೇರಿದೆ. ಕೊನೇ ಘಳಿಗೆಯಲ್ಲಿ ಕರ್ನಾಟಕಕ್ಕೆ ಭರ್ಜರಿ ಎಂಟ್ರಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ದಿನಕ್ಕೆ 4 ಜಾಥಾಗಳಲ್ಲಿ ಚುನಾವಣಾ ಭಾಷಣಗಳನ್ನು ನಡೆಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಅಧಿಕಾರವನ್ನು ನೀಡಬೇಕು ಎಂದು ಮತಭೇಟೆಯನ್ನು ನಡೆಸುತ್ತಿದ್ದಾರೆ.

ಇತ್ತೀಚೆಗೆ ಚಾಮರಾಜನಗರದ ಸಂತೆಮರಹಳ್ಳಿಯಲ್ಲಿ ಚುನಾವಣಾ ಜಾಥಾದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದವರು ನಾಮದಾರಿಗಳು ಹಾಗೂ ಭಾರತೀಯ ಜನತಾ ಪಕ್ಷದವರು ಕಾಮ್‍ದಾರಿಗಳು ಎಂದು ಹೇಳಿದ್ದರು. “ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ನನ್ನನ್ನು 15 ನಿಮಿಷ ಮಾತನಾಡಿ ಎಂದು ಹೇಳುತ್ತಾರೆ. ಆದರೆ ಅವರಿಗೆ 15 ನಿಮಿಷ ಯಾವುದೇ ಚೀಟಿ ಇಲ್ಲದೆ ಮಾತನಾಡಲು ಸಾಧ್ಯವಿದೆಯೇ..?

Image result for modi angry

ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರದ ಸಂತೇಮರಹಳ್ಳಿ ಸಮಾವೇಶದಲ್ಲಿ ಮಾತನಾಡುವಾಗ ಕಾಂಗ್ರೆಸ್‍ನವರದು ನಾಮಬಲ (ವಂಶಪಾರಂಪರ್ಯ), ನಮ್ಮದು ಕಾಯಕಬಲ ಎಂದು ಟೀಕೆ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗೆಗಿನ ಚರ್ಚೆಗಳ ವೇಗ ಹೆಚ್ಚಿದೆ. ಮೋದಿ ಹೇಳಿಕೆ ಕುರಿತಂತೆ ಕಾಂಗ್ರೆಸ್‍ನವರು ಏನೇ ಸ್ಪಷ್ಟೀ ಕರಣ ನೀಡಿದರೂ, ಇದೊಂದು ಐತಿಹಾಸಿಕ ಸತ್ಯ ಎಂಬುದನ್ನು ಅಲ್ಲಗಳೆಯಲಾಗದು ಎಂಬುದು ಬಹುತೇಕರ ವಾದ. ಜವಾಹರಲಾಲ್ ನೆಹರು ದೇಶದ ಮೊದಲ ಪ್ರಧಾನಿಯಾದಾಗಿನಿಂದ ಪ್ರಾರಂಭಗೊಂಡ ನೆಹರು-ಗಾಂಧಿ ವಂಶಪಾರಂಪರ್ಯ ಆಡಳಿತ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿರುವುದು ಹಾಗೂ ದೇಶದ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವುದು ಜಾಗತಿಕವಾಗಿ ದಾಖಲೆಯೂ ಹೌದು.

ಸ್ವಾತಂತ್ರ್ಯಾ ನಂತರದ ಭಾರತದ 70 ವರ್ಷಾವಧಿಯಲ್ಲಿ ಬರೋಬ್ಬರಿ 55ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಬಹುತೇಕ ನೆಹರು- ಗಾಂಧಿ ಕುಟುಂಬವೇ ದೇಶದ ಚುಕ್ಕಾಣಿ ಹಿಡಿದಿದ್ದು, ಇಂಥ ಮತ್ತೊಂದು ಉದಾಹರಣೆ ಜಗತ್ತಿನಲ್ಲಿಲ್ಲ. `ಶತಮಾನದ ಪಕ್ಷ’ ಕಾಂಗ್ರೆಸ್‍ಗೆ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ನಂತರ ಇದೀಗ ಅದೇ ಕುಟುಂಬದ ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾರೆ. ಜತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‍ರೇ ಪ್ರಧಾನಿ ಅಭ್ಯರ್ಥಿಯೆಂದು ಕಾಂಗ್ರೆಸ್ ಘೊಷಣೆ ಮಾಡಿದೆ.

ನೆಹರು ಮುಘಲ್ ಮೂಲ

ಅಫ್ಘಾನಿಸ್ತಾನದ ಮುಘಲರ ವಂಶ ನೆಹರು ಪರಂಪರೆಯ ಮೂಲ ಎಂಬುದು ಅಚ್ಚರಿಯಾದರೂ ಸತ್ಯ. ಮೋತಿಲಾಲ್ ತಂದೆ ಗಂಗಾಧರ ನೆಹರು 1857ರ ಸಿಪಾಯಿ ದಂಗೆಗೂ ಮುನ್ನ ಮುಘಲ್ ಸಾಮ್ರಾಜ್ಯದಲ್ಲಿ ದೆಹಲಿಯ ಕೊತ್ವಾಲರಾಗಿದ್ದರು. ಅವರ ನಿಜನಾಮಧೇಯ ಘಿಯಾಸುದ್ದೀನ್ ಘಾಜಿ ಎಂದಾಗಿತ್ತು. ಬ್ರಿಟಿಷರು ಸಿಪಾಯಿ ದಂಗೆ ಹತ್ತಿಕ್ಕಿದ ಬಳಿಕ ದೆಹಲಿಯಲ್ಲಿ ಮುಘಲರ ನಾಮಾವಶೇಷ ಮಾಡಬೇಕೆಂದು ಪಣತೊಟ್ಟು ಸಿಕ್ಕಸಿಕ್ಕಲ್ಲಿ ಮುಘಲರ ನರಮೇಧ ನಡೆಸಲಾಯಿತು. ಆ ಸಂದರ್ಭದಲ್ಲಿ ಅನೇಕ ಮುಘಲರು ಜೀವ ಉಳಿಸಿಕೊಳ್ಳಲು ಹಿಂದುಗಳಾಗಿ ಹೆಸರು ಬದಲಿಸಿಕೊಂಡರು. ಘಿಯಾಸುದ್ದೀನ್ ಘಾಜಿ ಸಹ ಗಂಗಾಧರ ನೆಹರು ಎಂದಾದರು. ಆ ಕಾಲದಲ್ಲಿ ಘಿಯಾಸುದ್ದೀನ್‍ರ ನಿವಾಸ ಕೆಂಪುಕೋಟೆಯ ಸಮೀಪದ ಕಾಲುವೆಯ ದಂಡೆ(ನೆಹರ್) ಯ ಮೇಲಿತ್ತು. ಹಾಗಾಗಿ ಅವರ ಕುಟುಂಬನಾಮ ನೆಹರು ಎಂದಾಯಿತು.

Related image

ಗಾಂಧಿಯಾದ ಘಂಡಿ!

ಇಂದಿರಾ ಪ್ರಿಯದರ್ಶಿನಿ ನೆಹರೂ, ಇಂದಿರಾ ಗಾಂಧಿ ಎಂದಾದುದು ಸಹ ಸ್ವಾರಸ್ಯಕರ ಬೆಳವಣಿಗೆ. ಫಿರೋಜ್ ಜಹಾಂಗೀರ್ ಘಂಡಿಯನ್ನು ಅಳಿಯನಾಗಿ ಮಾಡಿಕೊಳ್ಳಲು ಒಪ್ಪದ ನೆಹರು, ಘಂಡಿಯನ್ನು ಗಾಂಧಿ ಎಂದು ಬದಲಿಸುವ ಮೂಲಕ 1942ರಲ್ಲಿ ಇಂದಿರಾ ಹಾಗೂ ಫಿರೋಜ್ ಗಾಂಧಿಯ ವಿವಾಹ ನೆರವೇರಿಸಿದರು. ಅಲ್ಲಿಂದ ಇಂದಿರಾ ಪ್ರಿಯದರ್ಶಿನಿ ನೆಹರು, ಇಂದಿರಾ ಗಾಂಧಿಯಾದರು. ಸ್ವಾತಂತ್ರ್ಯ ಚಳವಳಿಯಲ್ಲಿ ಕಂಡ ಗಾಂಧಿಯ ಪ್ರಭಾವಳಿ, ಆ ಹೆಸರನ್ನು ತಗುಲಿಸಿಕೊಂಡ ಇಂದಿರಾಗೆ ಅನಾಯಾಸವಾಗಿ ಲಭ್ಯವಾಯಿತು. ವಂಶ ಪಾರಂಪರ್ಯ ಆಡಳಿತ ಶಕೆಯ ಆರಂಭಕ್ಕೆ ನಾಂದಿಮಂತ್ರವೂ ಆಯಿತು. ನಂತರದಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಇಂದಿರಾ ಅಂದು ಬಾಬರ್ ಸಮಾಧಿ ಮುಂದೆ ನಮಾಜ್ ಮಾಡಿದ್ದು ಕೂಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

Image result for indira gandhi family

ಹೀಗೆ ಕುಟುಂಬ ರಾಜಕಾರಣ ಎಂಬುವುದು ದೇಶವನ್ನು ಹಾಳುಮಾಡುತ್ತಿದೆ!! ತಮ್ಮದೇ ಕುಟುಂಬದ ವ್ಯಕ್ತಿಗಳನ್ನೇ ವಂಶಪಾರಂಪರ್ಯವಾಗಿ ನಡೆಸುತ್ತಾ ಬಂದರೆ ಇದಕ್ಕೆ ಬೆಲೆ ಎಲ್ಲಿದೆ!! ರಾಹುಲ್ ಗಾಂಧಿಗೆ ಕೇವಲ 15 ನಿಮಿಷಗಳ ಕಾಲ ಚೀಟಿ ಬಿಟ್ಟು ದೇಶವನ್ನುದ್ದೇಶಿಸಿ ಮಾತನಾಡಲು ಆಗುವುದಿಲ್ಲ!! ಇಂತಹವರು ಪ್ರಧಾನಿಯಾಗಲು ಹೊರಟರೆ ನಿಜವಾಗಿಯೂ ಪ್ರಧಾನಿಯಾಗಿ ಆಯ್ಕೆ ಮಾಡಿದವರಿಗೆ ನಾಚಿಕೆಗೇಡು!! ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳಲೆಂದೇ ಎಲ್ಲಿ ಹೋದರೂ ಅಲ್ಲಿ ಒಂದೊಂದೇ ಎಡವಟ್ಟು ಮಾಡುವ ಇಂತವರು ದೇಶದ ಪ್ರಧಾನಿಯೇ?..

Related image

ಇವರ ಇಡೀ ಕುಟುಂಬವೇ ಹೆಸರಿನ ಹಿಂದೆ ದೇಶ ರಾಜಕಾರಣ ಮಾಡುವ ಕಾಂಗ್ರೆಸ್ ತಾನು ಯಾವಾಗ ಅಧಿಕಾರ ವಹಿಸಿಕೊಂಡಿತ್ತೊ ಅಂದಿನಿಂದ ಇಂದಿನವರೆಗೂ ತಮ್ಮ ಕುಟುಂಬದ ಹೆಸರನ್ನೇ ಇಡುತ್ತಾ ಬರುತ್ತಿದ್ದಾರೆ!! ಕೇವಲ ಹೆಸರಿಗಾಗಿ ಮಾತ್ರ ಕೆಲಸ ಮಾಡುವುದು ಎಂಬುವುದು ಸ್ಪಷ್ಟವಾಗುತ್ತದೆ!! ಕಾಂಗ್ರೆಸ್‍ನವರು ರಾಜ್ಯಕ್ಕೆ ಕ್ಯಾಂಟೀನ್ ಮಾಡುತ್ತೇವೆ ಎಂದು ಇಂದಿರಾ ಕ್ಯಾಂಟೀನ್ ಎಂಬ ನಾಮಧೇಯವನ್ನು ನೀಡುತ್ತಾರೆ!! ಆದರೆ ಬಿಜೆಪಿ ನಾಮ್‍ಧಾರಿಯಾಗದೆ ಕಾಮ್‍ಧಾರಿ ಎನ್ನುವುದು ಸ್ಪಷ್ಟಪಡಿಸಿದೆ!! ಹೀಗೆ  ಕಾಂಗ್ರೆಸ್ಗೆ ತಮಗಿಷ್ಟ ಬಂದಲ್ಲಿ ತಮ್ಮ ಕುಟುಂಬದ ಹೆಸರನ್ನಿಟ್ಟುಕೊಂಡು ಶೋಕಿ ಮಾಡುವುದು ಇವರಿಗೆ ಅಭ್ಯಾಸವಾಗಿದೆ!!

ಇನ್ನಾದರೂ ಕಾಂಗ್ರೆಸ್‍ನ ಅಟ್ಟಹಾಸವನ್ನು ಈ ಬಾರಿಯ ಚುನಾವಣೆಯಲ್ಲಿ ನಿಲ್ಲಿಸಬೇಕಾಗಿದೆ!! ನಾಮ್‍ದಾರಿಯಾದ ಕಾಂಗ್ರೆಸ್ ಅನ್ನು ಬುಡ ಸಮೇತ ಕಿತ್ತೊಗೆಯ ಬೇಕು!! ಹಾಗಾದರೆ ಮಾತ್ರ ಇಡೀ ದೇಶ ಸುಭೀಕ್ಷವಾಗುತ್ತದೆ!!

ಪವಿತ್ರ

Tags

Related Articles

Close