ಪ್ರಚಲಿತ

ಕಾಂಗ್ರೆಸ್ಸಿನಲ್ಲಿ ಇಂದಿರಾ ಗಾಂಧಿ, ಸೋನಿಯಾ ಗಾಂಧಿಯಂತಹ ಗಟಾನೂಗಟಿ ನಾಯಕಿಯರಿದ್ದರೂ ಸಂತ್ರಸ್ಥ ಮಹಿಳೆಯರ ಕಣ್ಣೀರೋರೆಸಲು ಮೋದಿಯೇ ಬರಬೇಕಾಯಿತು!!

ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಲು ಶ್ರಮಿಸುತ್ತಿರುವ ನರೇಂದ್ರ ಮೋದಿ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು ತಿಳಿದೇ ಇದೆ!! ಮಹಿಳೆಯರೇ ಈ ದೇಶದ ಶಕ್ತಿಯಾಗಿದ್ದು, ದೇಶದ ಜನಸಂಖ್ಯೆಯ ಶೇಕಡಾ 50 ರಷ್ಟಿರುವ ಮಹಿಳೆಯರ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿರುವುದಂತೂ ಅಕ್ಷರಶಃ ನಿಜ. ಹಾಗಾಗಿ ಇದೀಗ ನರೇಂದ್ರ ಮೋದಿ ಸರ್ಕಾರವು ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ನೀಡಲು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿರುವ ಬೆನ್ನಲ್ಲೇ ಇದೀಗ ಮಹಿಳೆಯರಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಸಲುವಾಗಿ ನೂತನ ಯೋಜನೆಯೊಂದನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ!!

ಹೌದು… ಸಮಾಜದಲ್ಲಿ ಮಹಿಳೆಗೆ ಸಂಸ್ಕಾರಯುತವಾದ ಶಿಕ್ಷಣದೊಂದಿಗೆ ಆರ್ಥಿಕವಾಗಿ ಆಕೆಯ ಕೈಗಳನ್ನು ಬಲಪಡಿಸುವುದು ಅತೀ ಮುಖ್ಯವಾದಂತಹ ವಿಚಾರ!! ಈಗಾಗಲೇ ಗ್ರಾಮೀಣ ಪ್ರದೇಶದ ಅದೆಷ್ಟೋ ಹೆಣ್ಣು ಮಕ್ಕಳು ಇನ್ನೂ ಕೂಡ ಶಿಕ್ಷಣದಿಂದ ವಂಚಿತರಾಗುತ್ತಿದ್ದರೆ ಇನ್ನೊಂದು ಕಡೆ ಹೆಣ್ಣು ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗದಿರುವ ಉದಾಹರಣೆಗಳೂ ಸಾಕಷ್ಟಿವೆ!! ಅಷ್ಟೇ ಅಲ್ಲದೇ ಇಂದಿನ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದ್ದು ಅದೆಷ್ಟೋ ಹೆಣ್ಣು ಮಕ್ಕಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರಲ್ಲದೇ ನೆಲೆ ಕಾಣದೇ ಜೀವವನ್ನೇ ಕಳೆದು ಕೊಳ್ಳುವ ಸ್ಥಿತಿಗೂ ಬಂದಿಳಿಯುತ್ತಿರುವ ಉದಾಹರಣೆಗಳನ್ನು ಕೇಳಿದ್ದೇವೆ!!

ಹೀಗಿರಬೇಕಾದರೆ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ಥಾನಮಾನ ನೀಡುವ ಸಲುವಾಗಿ ನರೇಂದ್ರ ಮೋದಿ ಸರ್ಕಾರವೂ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೀಗ ಸಮಸ್ಯೆಯಲ್ಲಿ ಸಿಲುಕಿರುವ ಮಹಿಳೆಯಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಸಲುವಾಗಿ ‘ ಸ್ವಧಾರ್ ಗೃಹ ‘ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನರೇಂದ್ರ ಮೋದಿ ಸರ್ಕಾರವು ಇದೀಗ ಮುಂದಾಗಿದೆ!! ವಿವಿಧ ಸಮಸ್ಯೆಗಳೊಳಗೆ ಸಿಲುಕಿ ಸಂತ್ರಸ್ಥರಾಗಿರುವ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿ ಅವರಿಗೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ನೆರವು ನೀಡುವ ಮಹತ್ವದ ಯೋಜನೆ ಇದಾಗಿದ್ದು, ಈ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆಯು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ.

Image result for modi

ವಿಪರ್ಯಾಸ ಏನೆಂದರೆ ಇಷ್ಟು ವರ್ಷಗಳ ಕಾಲ ಇಂದಿರಾ ಗಾಂಧೀ, ಸೋನಿಯಾ ಗಾಂಧಿಯಂತಹ ಗಟಾನೂಗಟಿ ನಾಯಕಿಯರು ಕಾಂಗ್ರೆಸ್ಸಿನಲ್ಲಿದ್ದರೂ ಕೂಡ ಮಹಿಳೆಯರ ಸಬಲೀಕರಣಕ್ಕೆ ಅದೆಷ್ಟು ಮಹತ್ವದ ತೀರ್ಮಾನಗಳನ್ನು ಕೈಗೊಂಡರೋ ನಾ ಕಾಣೆ!! ಆದರೆ ಮೀಸಲಾತಿ ವ್ಯವಸ್ಥೆ ಕಲ್ಪಿಸುತ್ತೇವೆಂದು ಸುಳ್ಳುಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೋಸ್ಕರ ಅದೇನೂ ಮಾಡಿದರೋ ಗೊತ್ತಿಲ್ಲ!! ಅದರಲ್ಲೂ ಮಹಿಳಾ ಸಂತ್ರಸ್ಥರಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವ ಕಾಂಗ್ರೆಸ್ ಕೇವಲ ಭರವಸೆಗಳ ಮಹಾಪೂರವನ್ನೇ ಹರಿಸಿದರೇ ಹೊರತು ಅದ್ಯಾವ ಕ್ರಮವನ್ನು ಜಾರಿಗೊಳಿಸಿಲ್ಲ!! ಆದರೆ ನೊಂದ ಮಹಿಳೆಯರ ಕಣ್ಣೀರೊರೆಸಲು ನರೇಂದ್ರ ಮೋದಿಯೇ ಬರಬೇಕಾಯಿತು ನೋಡಿ!!

ಈಗಾಗಲೇ ಹೆಣ್ಣು ಮಕ್ಕಳು ಮನೆಯಿಂದ ಹೊರ ತೆರಳದಿರುವಂತಹ ಚಿಂತಾಜನಕ ಪರಿಸ್ಥಿತಿಗಳು ನಿರ್ಮಾಣವಾಗಿದೆಯಲ್ಲದೇ ಮತ್ತೊಂದೆಡೆ ಜಿಹಾದಿಗಳ ಹುನ್ನಾರಕ್ಕೆ ಲವ್ ಜಿಹಾದ್ ಮೂಲಕ ಬಲಿಯಾಗುತ್ತಿರುವ ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳು ಇಂದು ನೇಣಿನ ಕುಣಿಗೆ ಬಲಿಯಾಗಿದ್ದರೆ, ಇನ್ನೂ ಒಂದಷ್ಟು ಜನ ಹೆಣ್ಣುಮಕ್ಕಳು ನೆಲೆ ಕಾಣದೇ ಬೀದಿ ಬೀದಿ ಅಲೆಯುತ್ತಿದ್ದಾರೆ!! ಇವಿಷ್ಟೇ ಅಲ್ಲದೇ ಅದೆಷ್ಟೋ ಹೆಣ್ಣು ಮಕ್ಕಳನ್ನು ಕಳ್ಳಸಾಗಣಿಕೆ ಮಾಡುತ್ತಿರುವ ಕೆಲ ಕ್ರೂರಿಗಳು ಹೆಣ್ಣು ಮಕ್ಕಳ ಜೀವನಕ್ಕೆ ಕೊಳ್ಳಿ ಇಡುತ್ತಿರುವ ಬಗ್ಗೆ ತಿಳಿದೇ ಇದೆ!!!

ಹೀಗಾಗಿ ವಿವಿಧ ಸಮಸ್ಯೆಗಳೊಳಗೆ ಸಿಲುಕಿ ಸಂತ್ರಸ್ಥರಾಗಿರುವ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿ ಅವರಿಗೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ಇದೀಗ ಕೇಂದ್ರ ಸರ್ಕಾರವು ಮುಂದಾಗಿದ್ದು, ಸಂತ್ರಸ್ಥ ಮಹಿಳೆಯರ ಜೀವನದಲ್ಲಿ ಹೊಸ ಚಿಗುರು ಮೊಳಕೆಯೊಡೆದಂತಾಗಿದೆ!! ಹಾಗಾಗಿ ಮಹಿಳೆಯಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಸಲುವಾಗಿ ‘ ಸ್ವಧಾರ್ ಗೃಹ’ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿರುವ ಕೇಂದ್ರ ಸರ್ಕಾರವು ಮಹಿಳೆಯಲ್ಲಿ ಹೊಸ ಚೈತನ್ಯವನ್ನು ಮೂಡಿಸಿದಂತಾಗಿದೆ!!

ಈ ಯೋಜನೆಯಡಿ ನೋಂದ ಮಹಿಳೆಯರು ಘನತೆಯುಳ್ಳ ಜೀವನ ಸಾಗಿಸುವುದಕ್ಕಾಗಿ ವಸತಿ, ಆಹಾರ, ಬಟ್ಟೆ, ಆರೋಗ್ಯ ಸೇವೆ ಮತ್ತು ಆರ್ಥಿಕ, ಸಾಮಾಜಿಕ ಭದ್ರತೆಗಳು ದೊರೆಯಲಿದೆ!! ಈಗಾಗಲೇ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಬೇಟಿ ಬಚಾವೋ-ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಸೇರಿದಂತೆ ಉಜ್ಚಲ ಯೋಜನೆ, ಸುರಕ್ಷಿತ ಮಾತೃತ್ವ, ಮಹಿಳಾ ನೇತೃತ್ವ ವಿಕಾಸ್ ದಂತಹ ಅದೆಷ್ಟೋ ಯೋಜನೆಗಳನ್ನು ಜಾರಿಗೊಳಿಸಿ ಮಹಿಳೆಯರ ಸಬಲೀಕರಣದತ್ತ ದಿಟ್ಟ ಹೆಜ್ಜೆಯನ್ನಿಟ್ಟ ವಿಚಾರ ಗೊತ್ತೇ ಇದೆ!!

ಇನ್ನು ಈ ಹಿಂದೆ ಹೆಣ್ಣು ಶಿಶು ಜನಿಸಿದ ಕೂಡಲೇ ಮನೆಗೆ ಭಾರ ಎಂಬ ಧೋರಣೆ ಇತ್ತು!! ಅಷ್ಟೇ ಅಲ್ಲದೇ ಇದು ದೇಶದಲ್ಲಿ ಹಲವು ದುಷ್ಪರಿಣಾಮಗಳನ್ನೂ ಬೀರಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರವು ಬೇಟಿ ಬಚಾವೋ ಬೇಟಿ ಪಢಾವೋ ದಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದರು!! ಆದರೆ ಇಂದು ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಸಿಗುವುದರೊಂದಿಗೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಲಗ್ಗೆ ಇಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿ ನಿಂತಿದೆ!!

ಮೂಲ:http://news13.in/archives/100239

– ಅಲೋಖಾ

 

Tags

Related Articles

Close