ಪ್ರಚಲಿತ

ವಿವಾದ ಸೃಷ್ಟಿಸಿಕೊಂಡ ಜಮ್ಮು ಕಾಶ್ಮೀರದ ಪ್ರಶ್ನೆ ಪತ್ರಿಕೆ!! ಅಷ್ಟಕ್ಕೂ ಪ್ರಶ್ನೆ ಪತ್ರಿಕೆಯಲ್ಲಿರುವ ಆ ಪ್ರಶ್ನೆಯಾದರು ಏನು ಗೊತ್ತೇ??

ಕಾಶ್ಮೀರಿ ದ0ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ0ತ್ಯದ ಮೇಲೆ ನಿಯ0ತ್ರಣವನ್ನು ಹೊ0ದಲು ಹವಣಿಸುತ್ತಿದೆಯಲ್ಲದೇ, ಭಾರತಕ್ಕೆ ಸ್ವಾತಂತ್ರ್ಯ ದೊರೆತಂದಿನಿಂದಲೂ ಅ0ತರಾಜ್ಯ ಸಮಸ್ಯೆಗಳ0ತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರದ ಬಿಕ್ಕಟ್ಟು ಉದ್ಬವಿಸಿಕೊಂಡಿರುವ ವಿಚಾರ ತಿಳಿದೇ ಇದೆ. ಆದರೆ ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ0ತೆಯು ಒತ್ತಾಯಿಸಿದ್ದರೆ, ಕೆಲವು ಕಾಶ್ಮೀರಿಗಳೂ ತಾವೇ ಸ್ವತ0ತ್ರರಾಗಲು ಹವಣಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಕಾಶ್ಮೀರದಲ್ಲಿ “ಆಜಾದ್ ಕಾಶ್ಮೀರ್” ಎನ್ನುವ ಘೋಷಣೆಗಳು ರಾರಾಜಿಸುತ್ತಿದೆಯಲ್ಲದೇ, ಕೆಲ ಕಾಶ್ಮೀರಿಗಳೇ ಇದಕ್ಕೆ ಕುಮ್ಮಕ್ಕು ಕೂಡ ನೀಡುತ್ತಿದ್ದಾರೆ!! ಆದರೆ ಇದೀಗ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಾಗರಿಕ ಸೇವಾ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ್ ಎಂದು ಮುದ್ರಿಸಿ ಭಾರಿ ಮಟ್ಟದ ವಿವಾದವನ್ನೇ ಸೃಷ್ಟಿಸಿದ್ದಾರೆ.

ಹೌದು…. ಸ್ವಾತಂತ್ರ್ಯದ ಸಂಭ್ರಮದೊಂದಿಗೆ ಬಳುವಳಿಯಾಗಿ ಬಂದ ಅನೇಕ ಸಮಸ್ಯೆಗಳಲ್ಲಿ ಕಾಶ್ಮೀರ ವಿವಾದವೂ ಒಂದಾಗಿದ್ದು, ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಹಲವಾರು ತಕರಾರುಗಳಿದ್ದರೂ ಕೂಡ ದಶಕಗಳಿಂದ ಎರಡೂ ರಾಷ್ಟ್ರಗಳನ್ನೂ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಆದರೆ ಇದೀಗ ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ್ ಎಂದು ಮುದ್ರಿಸಲಾಗಿದ್ದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಪ್ರತಿ ವಿಷಯದಲ್ಲಿಯೂ ಪ್ರತ್ಯೇಕ ಹೆಜ್ಜೆ ತುಳಿಯಲು ಕಾನೂನುಬದ್ಧ ಅಧಿಕಾರ ಹೊಂದಿರುವ ಕಾಶ್ಮೀರ ಈಗ ಕೈಲಿದ್ದರೂ ಇಲ್ಲದ ಸ್ಥಿತಿ. ಏಕೆಂದರೆ ಸಂವಿಧಾನದ 238ನೇ ವಿಧಿ ಬೇರೆಲ್ಲಾ ರಾಜ್ಯಗಳಿಗೆ ಅನ್ವಯವಾದರೂ ಜಮ್ಮು- ಕಾಶ್ಮೀರಕ್ಕಲ್ಲ. ಆ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಸಂಸತ್‍ಗಿಲ್ಲ. ಒಂದು ವೇಳೆ ಸಂಸತ್ ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸಲೇಬೇಕೆಂದಿದ್ದರೆ ಅದನ್ನು ರಾಷ್ಟ್ರಪತಿ ಮೂಲಕ ರಾಜ್ಯ ಸರಕಾರಕ್ಕೆ ಮುಟ್ಟಿಸಿ ಆ ರಾಜ್ಯದ ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು. ಜತೆಗೆ ಕೆಲವು ಕಾನೂನುಗಳನ್ನು ಅಲ್ಲಿನ ಸರಕಾರದ ಅನುಮತಿ ಪಡೆದು ಸಂಸತ್‍ನಲ್ಲಿ ಮಂಡನೆ ಮಾಡಬಹುದು.

ಅಷ್ಟೇ ಅಲ್ಲದೇ, ಭಾರತದ ಸಂವಿಧಾನವೇ ಒಂದಾದರೆ ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನ. ಅದರ ತಿದ್ದುಪಡಿಯಾಗುವುದೂ ಆ ರಾಜ್ಯದ ವಿಧಾನಸಭೆಯಲ್ಲಿ.!! ಅಲ್ಲಿ ಕೈಗೊಳ್ಳಲಾಗದ ನಿರ್ಧಾರಗಳನ್ನು ಆ ರಾಜ್ಯ ಸರಕಾರದ ಅನುಮತಿ ಪಡೆದು ರಾಷ್ಟ್ರಪತಿ ಸಹಿ ಹಾಕಬೇಕಾಗುತ್ತದೆ. ಈ ರೀತಿ ಪ್ರತ್ಯೇಕ ಸಂವಿಧಾನ ಹೊಂದಿರುವ ಏಕೈಕ ರಾಜ್ಯ ಜಮ್ಮು ಕಾಶ್ಮೀರ.

ಸ್ವಾತಂತ್ರ್ಯ ಬಂದಾಗಿನಿಂದ ಶಿಕ್ಷಣದ ಹಕ್ಕನ್ನು ಬಿಟ್ಟರೆ ಇನ್ಯಾವ ಹಕ್ಕೂ ಈ ರಾಜ್ಯದಲ್ಲಿ ಜಾರಿಯಾಗಿಲ್ಲ. ಮತ್ತೊಂದು ವಿಚಾರವೆಂದರೆ ಈ ರಾಜ್ಯದ ನಾಗರಿಕನಾದವನು ತೆರಿಗೆ ಕಟ್ಟಬೇಕಾಗಿಲ್ಲ!! ಅಷ್ಟೇ ಅಲ್ಲದೇ, ದೇಶದ ಎಲ್ಲಾ ಹೈಕೋರ್ಟುಗಳು ಸಂವಿಧಾನದ ವಿಧಿ 226ರ ಪ್ರಕಾರ ಕಾನೂನು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿದ್ದಾದರೂ, ಜಮ್ಮು ಕಾಶ್ಮೀರ ಹೈಕೋರ್ಟ್ ಮಾತ್ರ ಇದರಿಂದ ಮುಕ್ತವಾಗಿದೆ.

ಆದರೆ ಇದೀಗ, ಭೂಗೋಳ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಪಿಒಕೆಯನ್ನು ಆಜಾದ್ ಕಾಶ್ಮೀರ್ ಎಂದು ಮುದ್ರಿಸಿ ಪ್ರಮಾದವೆಸಗಿದ್ದು, ಪರೀಕ್ಷಾ ಮಂಡಳಿ ಅಧ್ಯಕ್ಷ ಸಿಮ್ರಾನ್ ದೀಪ್ ಸಿಂಗ್ ತನಿಖೆ ನಡೆಸಲು ಆದೇಶಿಸಿದ್ದಾರಲ್ಲದೇ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಇನ್ನು ಪ್ರಶ್ನೆ ಪತ್ರಿಕೆಯಲ್ಲಿ ಆಜಾದ್ ಕಾಶ್ಮೀರ್ ಪದ ಮುದ್ರಣ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದ್ದು, ಬಾರಿ ಮಟ್ಟದ ವಿವಾದವನ್ನು ಸೃಷ್ಟಿ ಮಾಡಿದೆ.

ಕಾಶ್ಮೀರದಲ್ಲಿ ಭಾರತ ವಿರೋಧಿ ಹೋರಾಟ ನಡೆಸುತ್ತಿರುವವರನ್ನು ಪಾಕಿಸ್ತಾನ ಸರ್ಕಾರ ಹುರಿದುಂಬಿಸಬೇಕು ಎಂದು ಈ ಹಿಂದೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಬಹಿರಂಗವಾಗಿಯೇ ಕರೆ ನೀಡಿದ್ದರು. ಅಷ್ಟೇ ಅಲ್ಲದೆ, ಭಾರತದ ಮೇಲೆ ಯುದ್ಧ ಸಾರಲು ಪಾಕಿಸ್ತಾನ ಸಿದ್ಧವಿದೆ ಎಂಬ ಮಾತುಗಳನ್ನು ಆಡಿದ್ದರು.

ಅಷ್ಟೇ ಅಲ್ಲದೇ, “ಪಾಕಿಸ್ತಾನ ಸೇನೆ ಭಾರತದ ಜತೆ ಯುದ್ಧಕ್ಕೆ ಸಿದ್ಧವಿದೆಯಲ್ಲದೇ ಪಾಕಿಸ್ತಾನದ ಲಕ್ಷಾಂತರ ಜನರು ಕಾಶ್ಮೀರಕ್ಕಾಗಿ ಹೋರಾಟ ನಡೆಸುವ ಉತ್ಸಾಹ ಹೊಂದಿದ್ದಾರೆ. ಪಾಕಿಸ್ತಾನ ಯಾವುದೇ ತಿರುಗೇಟು ನೀಡುವುದಿಲ್ಲ ಎಂಬ ಭ್ರಮೆಯಲ್ಲಿ ಭಾರತ ಇರಬಾರದು. ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಮುಂದೆ ಹಾಗೂ ಹಿಂದೆ ಎರಡೂ ಕಡೆಯಿಂದ ಹೋರಾಟ ಮಾಡಬಲ್ಲೆವು. ನಾವು ಮುಸ್ಲಿಮರು ಒಂದು ಕೆನ್ನೆಗೆ ಹೊಡೆದರೆ, ಮತ್ತೊಂದು ಕೆನ್ನೆಯನ್ನು ತೋರಿಸುವುದಿಲ್ಲ ಇದಕ್ಕೆ ತಕ್ಕ ತಿರುಗೇಟು ನೀಡುತ್ತೇವೆ” ಎಂದು ಖಾಸಗಿ ಟಿವಿ ಚಾನೆಲೊಂದಕ್ಕೆ ಅವರು ತಿಳಿಸಿದ್ದರು.

ಇನ್ನು, “ಭಾರತದ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ವಿರೋಧಿ ಹಾಗೂ ಪಾಕ್ ವಿರೋಧಿ. ಅವರು ಬದಲಾಗಿಲ್ಲ!! ಸಮಸ್ಯೆ ಇರುವುದು ನಮ್ಮಲ್ಲೇ. ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಓಡುತ್ತೇವೆ. ನಮ್ಮ ಗೌರವವನ್ನು ನಾವು ಉಳಿಸಿಕೊಳ್ಳಬೇಕು” ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ನರೇಂದ್ರ ಮೋದಿಯವರ ಹೆಸರೆತ್ತದೆ ತರಾಟೆಗೆ ತೆಗೆದುಕೊಂಡಿದ್ದರು. ಹೀಗಿರಬೇಕಾದರೆ ಕಾಶ್ಮೀರದಲ್ಲಿನ ಜಂಜಾಟಗಳಿಗೆ ಪಾಕಿಸ್ತಾನವೇ ನೇರ ಕಾರಣ ಎಂಬುವುದನ್ನು ಈ ಹಿಂದೆ ಸಾಬೀತು ಪಡಿಸಿದ್ದರು!!

ಆಜಾದ್ ಕಾಶ್ಮೀರ್ ಎಂಬ ಪದವನ್ನು ಹುಟ್ಟು ಹಾಕಿರುವ ಪಾಕಿಸ್ತಾನ ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿದ್ದು, ಪ್ರಶ್ನೆ ಪತ್ರಿಕೆಯಲ್ಲಿ 86ನೇ ಪ್ರಶ್ನೆಯಲ್ಲಿ ಆಜಾದ್ ಕಾಶ್ಮೀರ್ ಎಂದು ಪ್ರಕಟಿಸಲಾಗಿದೆ. ಅಂತೂ ಈ ಎಲ್ಲಾ ವಿವಾದಗಳಿಗೆ ಮುಸಲ್ಮಾನ ರಾಷ್ಟ್ರವಾದ ಪಾಕಿಸ್ತಾನವೇ ಕಾರಣವಾಗಿದ್ದರೂ ಇರಬಹುದು ಎನ್ನುವ ಗುಮಾನಿ ಕೇಳಿ ಬರುತ್ತಿದೆ!!

– ಅಲೋಖಾ

 

Tags

Related Articles

Close