ಪ್ರಚಲಿತ

ಜವಾಹರ್ ಲಾಲ್ ನೆಹರೂರು ಒರ್ವ ದೇಶವಂಚಕ, ಇವರಿಗಿಂತ ಹಿಟ್ಲರೇ ಎಷ್ಟೋ ವಾಸಿ ಎಂದ ನೇತಾಜೀಯ ಮರಿ ಮೊಮ್ಮಗ!!

ಅದೆಷ್ಟೋ ಕ್ರಾಂತಿಕಾರಿಗಳ ಹೋರಾಟದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತೋ, ಅಂದಿನಿಂದ ಭಾರತ ಬ್ರಿಟಿಷರನ್ನು ಒದ್ದೊಡಿಸಿ ಸ್ವತಂತ್ರ ದೇಶವಾಗಿ ಮೆರೆಯಿತಾದರೂ ಕುತಂತ್ರ ರಾಜಕಾರಣಿಗಳ ವೈಫಲ್ಯದಿಂದಾಗಿ ಭಾರತವನ್ನೇ ತುಂಡು ತುಂಡಾಗಿ ಮಾಡಿ ದೇಶಕ್ಕೆ ಅನ್ಯಾಯವನ್ನು ಎಸಗಿದ್ದಂತೂ ಅಕ್ಷರಶಃ ನಿಜ. ನೆಹರೂರವರ ಆಡಳಿತದಿಂದಾಗಿ ಭಾರತ ಪಡಬಾರದ ಕಷ್ಟವನ್ನೆಲ್ಲ ಅನುಭವಿಸಿ, ಅಂದು ನೆಹರೂರವರು ತನ್ನ ದೇಶವನ್ನು ತುಂಡರಿಸಿ, ಭಾರತದ ಮುಕುಟಮಣಿಯಾಗಿದ್ದ ಕಾಶ್ಮೀರಕ್ಕೆ ಎರಡು ಬಗೆದು ಇಂದಿನವರೆಗೂ ಇದರ ಸಂಕಷ್ಟವನ್ನು ಅನುಭವಿಸುವಂತೆ ಮಾಡಿದ್ದಾರೆ.

ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಜವಾಹರ್ ಲಾಲ್ ನೆಹರೂರವರು ಭಾರತದಲ್ಲಿ ಅದೆಷ್ಟು ಅಭಿವೃದ್ಧಿಯ ಪತಾಕೆಯನ್ನು ಹಾರಿಸಿದರೋ ಗೊತ್ತಿಲ್ಲ!! ಆದರೆ ಮಹತ್ಮಾ ಗಾಂಧೀಜಿಯವರನ್ನು ಪುಸಲಾಯಿಸಿ ಪ್ರಧಾನಿ ಹುದ್ದೆಯನ್ನೇರಿದ ನೆಹರೂರವರು ಭಾರತದ ಇತಿಹಾಸವನ್ನೇ ತಿರುಚಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳನ್ನು ಮಾತ್ರವಲ್ಲದೇ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರನ್ನೇ ಕಡೆಗಾಣಿಸಿ ತನ್ನ ವಂಶಾಡಳಿತದ ರಾಜಕೀಯಕ್ಕೆ ಉತ್ತಮವಾದ ಮಣೆ ಹಾಕಿದ್ದಂತೂ ಅಕ್ಷರಶಃ ನಿಜ!!

ಆದರೆ ಈ ಬಗ್ಗೆ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಹರಿತವಾದ ಮಾತುಗಳಿಂದ ಟೀಕಿಸಿದ್ದಲ್ಲದೇ ನೆಹರೂರು ಒರ್ವ ವಂಚಕ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ!! ಹೌದು…. ‘ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಯುರೋಪ್ ನ್ನು ಕೈವಶ ಮಾಡಲು ಹವಣಿಸುತ್ತಿದ್ದ, ಆದರೆ ಆತನೆಂದೂ ತನ್ನ ದೇಶಕ್ಕೆ ದ್ರೋಹ ಬಗೆದಿರಲಿಲ್ಲ. ಆದರೆ ನೆಹರೂರವರು ಬ್ರಿಟಿಷ್ ಅಧಿಕಾರಿಗಳ ಅಡಿಯಳಾಗಿ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಬಯಸಿದ್ದರು” ಎಂದಿದ್ದಾರೆ.

ಅಷ್ಟೇ ಅಲ್ಲದೇ ಹಿಟ್ಲರ್ ನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ, ಆತನೊಬ್ಬ ಸೈತಾನ ಎಂಬುವುದು ಅಪ್ಪಟ ನಿಜ. ಆದರೆ ರಾಷ್ಟ್ರವಾದಿ ಎಂದು ಬಿಂಬಿಸಿಕೊಳ್ಳುತ್ತಾ ಬ್ರಿಟಿಷ್ ಅಡಿಯಾಳಾಗಿದ್ದ ನೆಹರೂರವರಂತೆ ವಂಚಕ ಅಲ್ಲ. 200 ವರ್ಷಗಳ ಕಾಲ ಭಾರತೀಯರು ಬ್ರಿಟಿಷರಿಂದ ದೌರ್ಜನ್ಯಕ್ಕೊಳಗಾದರು, ಕೊಲ್ಲಲ್ಪಟ್ಟರು. ಆದರೆ ನೆಹರೂ ಮಾತ್ರ ಅವರೊಂದಿಗೆ ಔತಣಕೂಟ, ಮೋಜುಗಳಲ್ಲಿ ಭಾಗಿಯಾದರು ಎಂದಿದ್ದಾರೆ.

ಇತಿಹಾಸದ ಪುಟಗಳನ್ನು ಕೆದಕುವುದಾದರೆ, ಸುಭಾಷರ ಬಗೆಗೆ ಈ ಕಾಂಗ್ರೆಸ್ಸಿಗರು ಮಾಡಿರುವ ಅನ್ಯಾಯಕ್ಕೆ ಯಾವ ಭಾರತೀಯನು ಯಾವತ್ತೂ ಕ್ಷಮಿಸುವುದಿಲ್ಲ. ಕಾನೂನು ಬದ್ಧವಾಗಿ ಸುಭಾಷರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ, ಗಾಂಧಿ ಮತ್ತು ನೆಹರೂನ ಕ್ಷುದ್ರ ರಾಜಕೀಯಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದರು. ಸುಭಾಷರಿಗೆ ಕಾಂಗ್ರೆಸ್ ನಾಯಕರಂತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆಸೆ ಯಾವತ್ತೂ ಇರಲಿಲ್ಲ. ಅವರ ಕಣ್ಣಮುಂದೆ ಇದ್ದದ್ದು ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನದೆಲ್ಲವನ್ನು ಅರ್ಪಿಸಬೇಕು ಎನ್ನುವ ಧ್ಯೇಯ. ಕಾಂಗ್ರೆಸ್ ಆವತ್ತು ಸುಭಾಷರನ್ನು ಬೆಳೆಯಲು ಬಿಟ್ಟಿದ್ದರೆ ಭಾರತದ ಇಂದಿನ ಸ್ಥಿತಿ ಬೇರೆಯದ್ದೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ಸುಭಾಷರಿಗೆ ದ್ರೋಹ ಬಗೆದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ,ಸುಭಾಷರನ್ನು ಅವಮಾನಿಸಿ ಹೀನಾಯವಾಗಿ ನಡೆಸಿಕೊಂಡು ರಾಜೀನಾಮೆ ನೀಡುವಂತೆ ಮಾಡಿದರು ಎನ್ನುವುದನ್ನು ಕೆಲ ಇತಿಹಾಸ ಪುಟಗಳು ಹೇಳುತ್ತವೆ.

ಸ್ವಾತಂತ್ರ್ಯದ ನಂತರ ನಮ್ಮನ್ನು ಆಳಿದ ನಾಯಕರಾದ ನೆಹರು ಮತ್ತು ಗಾಂಧಿ ದೇಶವನ್ನು ಸಮರ್ಪಕವಾಗಿ ಮುನ್ನಡೆಸಲಿಲ್ಲ. ಅಷ್ಟೇ ಅಲ್ಲದೇ ಅವರು ಮಾಡಿದ ಅನಾಹುತಗಳ ಸರಮಾಲೆಗಳ ಪರಿಣಾಮವನ್ನು ಇಂದಿಗೂ ನಾವು ಎದುರಿಸುತ್ತಿದ್ದೇವೆ. ಈ ಅನಾಹುತ ಶುರುವಾಗಿದ್ದು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ. ಯಾಕೆಂದರೆ ಅತಿಯಾದ ಹುಚ್ಚು ನೆಹರು ಪ್ರೇಮ ಅವರಿಗೆ ಆವರಿಸಿತ್ತು. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾರಾಗಬೇಕೆಂದಾಗ ಆಗಿನ ಕಾಂಗ್ರೆಸ್ ನ ಬಹುಪಾಲು ಮಂದಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ರ ಪರವಾಗಿ ಮತ ಹಾಕಿದರು. ಆದರೂ ತಮ್ಮ ಪ್ರಿಯ ಶಿಷ್ಯ ನೆಹರೂವನ್ನು ಪ್ರಧಾನಿ ಗಾದಿಯಲ್ಲಿ ಕುಳ್ಳಿರಿಸಿ ಅನಾಹುತಗಳ ಸರಮಾಲೆಗೆ ಗಾಂಧೀಜಿ ಮೊದಲ ಮಣಿಯನ್ನು ಪೆÇೀಣಿಸಿದರು. ಗಾಂಧಿಯವರನ್ನು ಗೌರವಿಸುತ್ತಿದ್ದ ಪಟೇಲರು ಪ್ರತಿಭಟಿಸದೆ ತಮ್ಮ ದೊಡ್ಡತನವನ್ನು ಮೆರೆದರು.

Image result for ನೇತಾಜೀ ಮರಿ ಮೊಮ್ಮಗ

ಆದರೆ ನೆಹರು ಪ್ರಧಾನಿಯಾದ ನಂತರ ಮಾಡಿದ್ದೆಲ್ಲವೂ ಅನಾಹುತಗಳೇ. ಅಭಿವೃದ್ದಿಯ ಕಡೆಗೆ ನುಗ್ಗಬೇಕಿದ್ದ ದೇಶವನ್ನು ಪಾತಾಳಕ್ಕೆ ನೂಕಿದ ಮಹಾನ್ ಪ್ರಧಾನಿ ನಮ್ಮ ಚಾಚ ನೆಹರು. ಅವರು ಭಾರತಕ್ಕೆ ಕೊಟ್ಟ ಬಳುವಳಿಗಳೆಂದರೆ ಕಾಶ್ಮೀರ ಸಮಸ್ಯೆ !! ಅಷ್ಟೇ ಯಾಕೆ?? ಭಾರತದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದ ಮಹಾನ್ ಪುರುಷ, ಸೆಕ್ಯುಲರಿಸಂ ಮತ್ತು ತುಷ್ಟೀಕರಣದ ಪಿತಾಮಹ, ಹಿಮಾಲಯನ್ ಬ್ಲಂಡರ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ!! ತದ ನಂತರದಲ್ಲಿ ನೆಹರು ಮಾಡಿದ ಅನಾಹುತಗಳನ್ನೇ ಇಂದಿರಾ ಮುಂದುವರೆಸಿದ್ದಲ್ಲದೇ ಕಾಂಗ್ರೆಸ್ ಅನ್ನು ವಿಭಜಿಸಿದರು.

ಅಮ್ಮನ ನೆರಳಿನಲ್ಲೇ ನಡೆದ ರಾಜೀವ್ ಗಾಂಧಿ ಸಹ ಇದನ್ನೇ ಮುಂದುವರೆಸಿದರು. ರಾಜೀವ್ ಗಾಂಧಿಯ ನಂತರ ಕಾಂಗ್ರೆಸ್ ನಿಷ್ಟರು ವಿದೇಶೀ ಮುಖ ಸೋನಿಯಾ ಗಾಂಧಿಯನ್ನು ತಂದು ನಿಲ್ಲಿಸಿದರು. ಹತ್ತು ವರ್ಷ ದೇಶ ಆಳಿದ ಸೋನಿಯಾ ಮಾಡಿದ್ದು ಅನಾಹುತಗಳೇ, ದೇಶವನ್ನು ಹಳ್ಳಕ್ಕೆ ದೂಡುವ ಕೆಲಸಗಳೇ. ಈಗ ರಾಜೀವ್ ಕುಡಿ ರಾಹುಲ್ ಗೆ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅದೇನೇನು ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕಾದೆ!!

Image result for nehru

ಆದರೆ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರನ್ನೇ ದೇಶದ್ರೋಹಿಗಳ ಸಾಲಿಗೆ ಸೇರಿಸಿರುವ ಜವಹರ್ ಲಾಲ್ ನೆಹರೂರವರು ಹಿಟ್ಲರ್ ನಂತೆ ದೇಶಪ್ರೇಮಿ ಅಲ್ಲ. ಅಷ್ಟೇ ಅಲ್ಲದೇ ಹಿಟ್ಲರ್ ಎಂದೂ ಕೂಡ ದೇಶಕ್ಕೆ ದ್ರೋಹ ಬಗೆದಿರಲಿಲ್ಲ. ಆದರೆ ನೆಹರೂರವರು ಬ್ರಿಟಿಷ್ ಅಧಿಕಾರಿಗಳ ಅಡಿಯಳಾಗಿ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಬಯಸಿದ್ದರಲ್ಲದೇ ಬ್ರಿಟಿಷರ ದೌರ್ಜನ್ಯಗಳಿಗೆ ಬಲಿಯಾದ ಅದೆಷ್ಟೋ ಭಾರತೀಯರ ಬಗ್ಗೆ ಕಿಂಚಿತ್ತೂ ಕರುಣೆ ತೋರಿಸದ ಇವರು ಬ್ರಿಟಿಷರೊಂದಿಗೆ ಔತಣಕೂಟ, ಮೋಜು ಮಸ್ತಿಗಳಲ್ಲಿ ಭಾಗಿಯಾಗಿ ದೇಶಕ್ಕೆ ವಂಚನೆ ಬಗೆದಿದ್ದಾರೆ ಎಂದು ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.

ಒಟ್ಟಿನಲ್ಲಿ ಕ್ರಾಂತಿಕಾರಿಗಳ ದಿಟ್ಟ ಹೆಜ್ಜೆಯಿಂದಾಗಿ, ಅದೆಷ್ಟೋ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಂದ ಇಂದು ನಾವು ಸ್ವಾತಂತ್ರ್ಯ ಅನ್ನೋ ಕಾಲಘಟ್ಟದಲ್ಲಿದ್ದೇವೆ!! ಆದರೆ ಅಂದು ನೆಹರೂ ಅವರು ತನ್ನ ದೇಶಕ್ಕೆ ಮಾಡಿದ ವಂಚನೆಯಿಂದಾಗಿ ಇಂದು ಆ ಶಿಕ್ಷೆಯನ್ನು ನಾವು ಅನುಭವಿಸುತ್ತಿದ್ದು, ಇದಕ್ಕೆಲ್ಲ ಅಂತಿಮ ತೆರೆ ಎಳೆಯುವ ಕಾರ್ಯವನ್ನು ನರೇಂದ್ರ ಮೋದಿ ಸರ್ಕಾರವು ಮಾಡುತ್ತಿದೆ!! ಅಷ್ಟೇ ಅಲ್ಲದೇ, ಅಭಿವೃದ್ಧಿ ಹೀನಾವಾಗಿದ್ದ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ.

ಮೂಲ:  https://www.facebook.com/1542181756073285/photos/a.1562636230694504.1073741827.1542181756073285/1578633629094764/?type=3

http://chirubhat.com/2016/01/26/this-is-how-nehru-is/

– ಅಲೋಖಾ

Tags

Related Articles

Close