ಪ್ರಚಲಿತ

ಮುಸಲ್ಮಾನ ಮಹಿಳೆಯರ ಜೀವನವನ್ನು ಕಿತ್ತುತಿನ್ನುತ್ತಿರುವ ಬಹುಪತ್ನಿತ್ವ ನಿಖಾ ಹಲಾಲಾ ಪದ್ಧತಿಗಳ ವಿರುದ್ಧ ಸಮರ ಸಾರಲು ಸಜ್ಜಾದ ಕೇಂದ್ರ!!

ಮುಸಲ್ಮಾನ ಮಹಿಳೆಯರ ಜೀವನದಲ್ಲಿ ಬಿರುಗಾಳಿ ಎಬ್ಬಿಸುವಂತಹ ಕೆಲ ಪದ್ಧತಿಗಳು ಮಹಿಳೆಯರ ಜೀವನವನ್ನೇ ಹಾಳು ಮಾಡುತ್ತಿರುವುದಂತೂ ಅಕ್ಷರಶಃ ನಿಜ!! ಹಾಳು ಕೂಪಕ್ಕೆನೂಕುವ ಇಂತಹ ಪದ್ಧತಿಗಳು ಸಮಾಜದಲ್ಲಿ ಇನ್ನೂ ಅದೇಕಿವೆಯೋ ನಾ ಕಾಣೆ!! ಹೆಣ್ಣು ಮಕ್ಕಳನ್ನು ಹೆರುವ ಮೆಷಿನ್ ಎನ್ನುವಂತೆ ಬಳಸಿಕೊಳ್ಳುತ್ತಿರುವ ಮುಸಲ್ಮಾನ ಸಮುದಾಯದ ಅದೆಷ್ಟೋ ಮಂದಿ ಬಹುಪತ್ನಿತ್ವ (ಪಾಲಿಗಮಿ) ಮತ್ತು ನಿಖಾ ಹಲಾಲಾ ಎನ್ನುವ ಪದ್ದತಿಯಿಂದ ಹೆಣ್ಣು ಮಕ್ಕಳ ಜೀವನಕ್ಕೆ ಕೊಳ್ಳಿ ಈಡುತ್ತಿರುವುದಂತೂ ಅಕ್ಷರಶಃ ನಿಜ!!

ಆದರೆ ಇದೀಗ ತ್ರಿವಳಿ ತಲಾಖ್ ನ್ನು ವಿರೋಧಿಸಿದ ಮಾದರಿಯಲ್ಲೇ ಮುಸ್ಲಿಂ ಸಮುದಾಯದಲ್ಲಿರುವ ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ಪದ್ಧತಿಗಳ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಹೇಳಿಕೆ ಸಲ್ಲಿಸಲು ಕೇಂದ್ರ ಸರಕಾರ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಕಾನೂನು ಸಚಿವಾಲಯದ ಮೂಲಗಳು ಸುದ್ದಿವಾಹಿನಿಗಳಿಗೆ ಈ ವಿಷಯವನ್ನು ತಿಳಿಸಿದ್ದು, ತ್ರಿವಳಿ ತಲಾಖ್ ವೇಳೆ ತಳೆದ ನಿಲುವನ್ನೇ ನಿಖಾ ಹಲಾಲಾ ಮತ್ತು ಬಹುಪತ್ನಿತ್ವ ವಿಷಯದಲ್ಲಿ ತಳೆಯಲಾಗುತ್ತದೆಯಲ್ಲದೇ, ಈ ಕುರಿತು ಸಲ್ಲಿಸಬೇಕಿರುವ ಪ್ರತಿಕ್ರಿಯೆಯೂ ಸಿದ್ಧವಿದೆ ಎಂದು ತಿಳಿಸಿವೆ.

ಈಗಾಗಲೇ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠವು 3:2 ಬಹುಮತದಲ್ಲಿ ನಿಷೇಧಿಸಿತ್ತು. ಮುಸ್ಲಿಮರ ಧರ್ಮ ಗ್ರಂಥವಾದ ಕುರಾನ್‍ನಲ್ಲಿ ತ್ರಿವಳಿ ತಲಾಖ್‍ಗೆ ಅವಕಾಶ ಇಲ್ಲ; ಇದು ಇಸ್ಲಾಂನ ಕಾನೂನು ಶರೀಯತ್‍ನ ಉಲ್ಲಂಘನೆಯೂ ಹೌದು ಎಂದು ಕಳೆದ ಆಗಸ್ಟ್ 22ರಂದು ನೀಡಿದ ತೀರ್ಪಿನಲ್ಲಿ ಹೇಳಲಾಗಿತ್ತು!! ಅದರಂತೆಯೇ ಇದೀಗ ಮುಸ್ಲಿಂ ಸಮುದಾಯದಲ್ಲಿರುವ ಬಹುಪತ್ನಿತ್ವವನ್ನು ನಿಷೇಧಿಸಬೇಕು ಎಂದು ಹಲವು ಮಹಿಳಾ ಸಂಘಟನೆಗಳು ಒತ್ತಾಯಿಸುತ್ತಿವೆ.

ಅಷ್ಟೇ ಅಲ್ಲದೇ, ಈ ಪದ್ಧತಿಗಳಿಂದ ತೊಂದರೆಗೊಳಗಾದ ಮಹಿಳೆಯರು ಮತ್ತು ಇತರರು ಸಲ್ಲಿಸಿರುವ ಹಲವು ಅರ್ಜಿಗಳನ್ನು ಸಂವಿಧಾನ ಪೀಠದಿಂದ ವಿಚಾರಣೆಗೆ ಒಳಪಡಿಸಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರ ಪೀಠ ಆದೇಶಿಸಿದೆ. ಹಾಗಾಗಿ ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಪದ್ಧತಿಗಳು ಮಹಿಳೆಯರ ಮೇಲೆ ಬೀರುವ ಪರಿಣಾಮ ದಿಗಿಲು ಹುಟ್ಟಿಸುವಂತಿದೆ. ತ್ರಿವಳಿ ತಲಾಖ್ ಬಗ್ಗೆ ತೀರ್ಪು ನೀಡಿದ ಸಂವಿಧಾನ ಪೀಠವು ಈ ವಿಚಾರಗಳನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಮೋಹನ್ ಪರಾಶರನ್ ಈಗಾಗಲೇ ಹೇಳಿದ್ದರು!!

ಆದರೆ ಈ ಎರಡೂ ಸಾಮಾಜಿಕ ಪದ್ಧತಿಗಳ ವಿರುದ್ಧ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಹಾಗೂ ಕೆಲವು ಮುಸ್ಲಿಂ ಮಹಿಳಾ ಸಂತ್ರಸ್ತರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್ ಮಿಶ್ರಾ, ನ್ಯಾ. ಎ.ಎಂ. ಖಾನ್ವಿಲ್ಕರ್ ಹಾಗೂ ನ್ಯಾ. ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಕೈಗೆತ್ತಿಕೊಳ್ಳಲಿರುವುದೇ ಹೆಮ್ಮೆಯ ವಿಚಾರ!!

ಬಹುಪತ್ನಿತ್ವ ಮತ್ತು ನಿಖಾ ಹಲಾಲಾದಿಂದ ಸಂವಿಧಾನದಲ್ಲಿ ಉಲ್ಲೇಖಿತ ವಾಗಿರುವ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಜತೆಗೆ ಇದು ಲಿಂಗ ತಾರತಮ್ಯದ ಆಚರಣೆಯಾಗಿದೆ ಎಂದು ಆರೋಪಿಸಿ ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಪಿಐಎಲ್ ದಾಖಲಾಗಿದ್ದವು. ಕಳೆದ ವರ್ಷ ಆಗಸ್ಟ್ ನಲ್ಲಿ ತ್ರಿವಳಿ ತಲಾಕ್ ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಮುಸ್ಲಿಂ ಸಮುದಾಯದಲ್ಲಿನ ಮತ್ತೆರಡು ವಿವಾದಿತ ಆಚರಣೆಗಳಾದ ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮನವಿಗಳ ವಿಚಾರಣೆ ಸದ್ಯಕ್ಕಿಲ್ಲ ಎಂದು ಆಗ ಅಭಿಪ್ರಾಯಪಟ್ಟಿತ್ತು. ಆದರೆ ಇದೀಗ ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ಪದ್ಧತಿಗಳ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಹೇಳಿಕೆ ಸಲ್ಲಿಸಲು ಕೇಂದ್ರ ಸರಕಾರ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಹೆಂಡತಿ ಅಥವಾ ಗಂಡ ಬದುಕಿರುವಾಗಲೇ ಮತ್ತೊಂದು ಮದುವೆಯಾಗುವುದಕ್ಕೆ ತಡೆ) ನಿರುಪಯುಕ್ತವಾಗಿದೆ. ಗಂಡ ಬೇರೊಂದು ಮದುವೆಯಾದಾಗ ಆತನ ವಿರುದ್ಧ ದೂರು ಸಲ್ಲಿಸಲು ಮುಸ್ಲಿಂ ಮಹಿಳೆಗೆ ಅವಕಾಶವೇ ಇಲ್ಲದಂತಾಗಿರುವುದು ಮಾತ್ರ ಅಕ್ಷರಶಃ ನಿಜ!!! ಇನ್ನು ಭಾರತದಲ್ಲಿರುವ ಬೇರೆ ಧರ್ಮದ ಮಹಿಳೆಯರಿಗೆ ಬಹುಪತ್ನಿತ್ವದಿಂದ ಸಾಂವಿಧಾನಿಕ ರಕ್ಷಣೆ ಇದ್ದರೂ ಮುಸ್ಲಿಂ ಮಹಿಳೆಯರು ಈ ರಕ್ಷಣೆಯಿಂದ ವಂಚಿತರಾಗುತ್ತಿರುವುದೇ ನಿಜಕ್ಕೂ ಬೇಸರದ ಸಂಗತಿ.

ಮುಸ್ಲಿಂ ಸಮುದಾಯದ ಬಹುಪತ್ನಿತ್ವ (ಪಾಲಿಗಮಿ) ಮತ್ತು ನಿಖಾ ಹಲಾಲಾ ಪದ್ಧತಿಯು ಮುಸಲ್ಮಾನ ಮಹಿಳೆಯರ ಜೀವನವನ್ನೂ ನರಕದ ಕೂಪಕ್ಕೆ ದೂಡುತ್ತಿರುವ ಅಸ್ತ್ರವಾಗಿರುವುದಂತೂ ಅಕ್ಷರಶಃ ನಿಜ!! ಆದರೆ ಮುಸಲ್ಮಾನ ಧರ್ಮವನ್ನು ಚಾಚು ತಪ್ಪದೆ ಪರಿಪಾಲಿಸುವ ಕಟ್ಟರ್ ಮುಸಲ್ಮಾನರು ತಮ್ಮ ಮಹಿಳೆಯರಿಗೆ ಅನ್ಯಾಯವಾಗುತ್ತಿರುವುದನ್ನು ಕಂಡರೂ ಅದನ್ನು ಹೇಗೆ ಸಹಿಸಿಕೊಂಡಿದ್ದಾರೋ ನಾ ಕಾಣೆ!! ಆದರೆ ಲವ್ ಜಿಹಾದ್ ಮೂಲಕ ಅನ್ಯ ಧರ್ಮದ ಹೆಣ್ಣು ಮಕ್ಕಳನ್ನು ಮೋಹದ ಜಾಲಕ್ಕೆ ಸಿಲುಕಿಸುವ ಇಂಥವರಿಗೆ ತಮ್ಮ ಧರ್ಮದ ಹೆಣ್ಣು ಮಕ್ಕಳು ಇನ್ನಾವ ಲೆಕ್ಕ!! ಅಲ್ವೇ??

– ಅಲೋಖಾ
Tags

Related Articles

Close