ಪ್ರಚಲಿತ

ಜಗತ್ತಿನ ಬಲಿಷ್ಠ ರಾಷ್ಟ್ರಗಳನ್ನೇ ಕನ್‍ಫ್ಯೂಶನ್ ಮಾಡಿದ ನಮೋ ಮಂತ್ರ..! ವಿಶ್ವ ಸುತ್ತಿದ ಮೋದಿಯ ಮರ್ಮವೇನು ಗೊತ್ತಾ..?

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮಥ್ರ್ಯವುಳ್ಳ ಧೀಮಂತ!!  ಇಡೀ ಭಾರತವನ್ನಲ್ಲದೆ ಇಡೀ ಜಗತ್ತನ್ನೆ ಬದಲಾಯಿಸಿದ ಮಹಾನ್ ವೀರ!! ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾರತದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ!! ಮೋದೀಜೀ ಯಾವಾಗ ಅಧಿಕಾರ ಸ್ವೀಕರಿಸಿಕೊಂಡರೋ ಅಂದಿನಿಂದ ಇಡೀ ವಿಶ್ವವವೇ ಮೋದೀಜೀಯನ್ನು ಗೌರವದಿಂದ ಕಾಣುತ್ತಿದೆ!!

Image result for modi with america president

ಅಮೇರಿಕಾ ಮತ್ತು ಭಾರತದ ಸಂಬಂಧ ಎಷ್ಟು ಗಟ್ಟಿಯಾಗಿ ಬೆಳೆದಿದೆ ಎಂದರೆ  ಇತ್ತೀಚೆಗೆ ಅಮೇರಿಕಾ ಪೆಸಿಫಿಕ್ ಸಾಗರದಲ್ಲಿ ಕಾರ್ಯ ನಿರ್ವಹಿಸುವ ತನ್ನ ಕಮಾಂಡೊ ಪಡೆಯ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ ಎಂದು ಬದಲಾಯಿಸಿ ನಿರ್ಣಯ ಕೊಟ್ಟಿತು. ಇಡೀ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಂತಹ ಈ ಪೆಸಿಫಿಕ್ ಪ್ರದೇಶಕ್ಕೆ ಭಾರತದ ಹೆಸರನ್ನು ಜೋಡಿಸಿರುವುದು ಯುದ್ಧ ನೀತಿಯ ದೃಷ್ಟಿಯಿಂದಾಗಲೀ ಅಥವಾ ಸೇನಾ ಜಮಾವಣೆಯ ದೃಷ್ಟಿಯಿಂದಾಗಲಿ ಬಲು ದೊಡ್ಡ ಬದಲಾವಣೆಯೇನೂ ತರಲಾರದು ನಿಜ. ಆದರೆ ಯಾವಾಗ ಭಾರತ ಮತ್ತು ಅಮೇರಿಕಾದ ಸಂಬಂಧ ಗಟ್ಟಿಯಾಗತೊಡಗಿತೋ ಅಂದಿನಿಂದ ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕ ಶುರುವಾಗಿದ್ದಂತೂ ಅಕ್ಷರಸಃ ನಿಜ!! ಅದಲ್ಲದೆ ಶತ್ರು ರಾಷ್ಟ್ರಗಳು ಭಾರತದೊಂದಿಗೆ ಮೋದಿಜೀ ಪ್ರಧಾನಿಯಾದ ಬಳಿಕ ಮಿತ್ರರಾಗಲು ಶುರುವಾಗುತ್ತಿದ್ದಂತೆ ಇತ್ತ ಪಾಕ್ ಚೀನಾ ಪತರುಗುಟ್ಟಿತ್ತು!!

Image result for modi with asiyan

ಈ ಮೊದಲು ಪಾಕಿಸ್ತಾನ ತಾನು ಒಳಗೊಂಡಿರುವ ಸಮುದ್ರ ಪ್ರದೇಶಕ್ಕೆ ತನಗೆ ಬೇಕಾಗಿರುವ ಹೆಸರನ್ನಿಡಬೇಕೆಂದು ಎಷ್ಟು ಬಾರಿ ಗೋಗರೆದರೂ ಯಾವುದನ್ನೂ ಲೆಕ್ಕಿಸದೆ ಅಮೇರಿಕಾ ಭಾರತ ಕೇಳಿಕೊಳ್ಳದೆಯೇ ಇಂತಹದ್ದೊಂದು ಹೆಜ್ಜೆ ಇಟ್ಟಿರುವುದು ನರೇಂದ್ರಮೋದಿಯರ ವಿದೇಶಾಂಗ ನೀತಿಗೆ ಗೆಲುವೇ ಸರಿ. ಜೊತೆಗೆ ಏಷ್ಯಾದಲ್ಲಿ ಭಾರತ ಪ್ರಬಲವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬುದರ ಸಂಕೇತ. ಇಂತಹ ಮಹತ್ವದ ನಿರ್ಧಾರಗಳನ್ನು ಸ್ವತಃ ವಿಶ್ವದ ದೊಡ್ಡಣ್ಣನ್ನೇ ಮಾಡುತ್ತಿದ್ದಾರೆ ಎಂದರೆ ಭಾರತದ ಹೆಸರನ್ನು ನಮ್ಮ ಮೋದೀಜೀ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುವುದಕ್ಕೆ ಬೇರೆ ಉದಾಹರಣೆಗಳು ಬೇಕೇ?! ಅದಲ್ಲದೆ ಶತ್ರು ರಾಷ್ಟ್ರಗಳನ್ನು ಮಣಿಸಲು ಇಸ್ರೇಲ್, ಅಮೇರಿಕಾದಂತಹ ಬಲಿಷ್ಠ ರಾಷ್ಟ್ರದೊಂದಿಗೆ ಸೇನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಸಿದ್ಧವಾಗುತ್ತಿದಂತೆ ಅತ್ತ ಪಾಕ್ ನಡುಗುತ್ತಿದೆ!!

Related image

ಮೋದೀಜೀ ಕರ್ನಾಟಕ ಚುನಾವಣೆಯ ಸಮಯದಲ್ಲಿ ಮಾಡಿದ ಸಾಹಸ ನಿಜವಾಗಿಯೂ ಗ್ರೇಟ್.. ಒಂದು ಕಡೆಯಲ್ಲಿ ಬಿಜೆಪಿಯು ರಾಜ್ಯದಲ್ಲಿ 104 ಸ್ಥಾನ ಬಂದರೂ ಅಧಿಕಾರದ ಗದ್ದುಗೆಯನ್ನು ಏರಲಾಗಲಿಲ್ಲ ಎಂಬುವುದು ಎಲ್ಲರ ಮನಸ್ಸಲ್ಲೂ ಸ್ಪಲ್ಪ ಮಟ್ಟಿಗೆ ಬೇಸದ ಸಂಗತಿ ಬಿಡಿ!! ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾದರೂ ಸಹ ಒಟ್ಟಾಗಿ ಆಡಳಿತ ನಡೆಸಲು ಎಷ್ಟು ಪರದಾಟ ಮಾಡುತ್ತಿದೆ ಎಂಬುವುದು ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜೆಡಿಎಸ್ ಜಿದ್ದಾಟ ನಾವೆಲ್ಲರೂ ಗಮನಿಸುತ್ತಿದ್ದೇವೆ!! ಮೋದೀಜೀಯ 21ರ್ಯಾಲಿಯ ಪ್ರಭಾವ ಯಾವ ರೀತಿ ಇದೀಗ ವರ್ಕೌಟ್ ಆಗುತ್ತಿದೆ ಎಂದರೆ ಕಾಂಗ್ರೆಸ್ ಜೆಡಿಎಸ್ ಎದುರಿಗೆ ಕೈಚಾಚುವಂತೆ ಮಾಡಿದೆ ಎಂದರೆ ಮೋದೀಜೀ ಪ್ರಭಾವ ಎಂತಹದ್ದು?!

Image result for modi with asiyan

 

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಕರ್ನಾಟಕದಲ್ಲಿ ಮೊದಲ ಚುನಾವಣಾ ಭಾಷಣ ಮಾಡುವುದಕ್ಕೂ ಮುಂಚೆ ಸ್ವಿಡನ್, ಯುಕೆ ಮತ್ತು ಜರ್ಮನಿಗಳಿಗೆ ಹೋಗಿ ಬಂದಿದ್ದರು. ಡೆನ್ಮಾಕರ್, ಫಿನ್ಲ್ಯಾಂಡ್, ಐಲ್ಯಾಂಡ್, ನಾವರ್ ಮತ್ತು ಸ್ವಿಡನ್ ಈ ಐದು ರಾಷ್ಟ್ರಗಳ ಪ್ರಮುಖರನ್ನು ಸ್ವಿಡನ್ನಿನಲ್ಲಿ ಶೃಂಗಸಭೆಯ ಮೂಲಕ ಭೇಟಿಯಾದರು.  ಈ ಶೃಂಗಸಭೆಯನ್ನು ಸ್ವಿಡನ್ನಿನ ಸಹಯೋಗದೊಂದಿಗೆ ಆಯೋಜಿಸಿದ್ದೇ ಭಾರತ. ಈ ಎಲ್ಲಾ ರಾಷ್ಟ್ರಗಳೊಂದಿಗೂ ಭಾರತಕ್ಕೆ ಪ್ರತ್ಯೇಕವಾದ ಸಂಬಂಧವಿದೆ. ಆದರೆ ಇವೆಲ್ಲವುಗಳನ್ನು ಒಟ್ಟಿಗೆ ಭೇಟಿ ಮಾಡುವಂಥ ಪ್ರಯತ್ನವನ್ನು ಅಮೇರಿಕಾ ಬಿಟ್ಟರೆ ಮಾಡಿದ ಮತ್ತೊಂದು ರಾಷ್ಟ್ರ ಭಾರತ!! ಈ ಐದು ರಾಷ್ಟ್ರಗಳು ಅಪಾರ ಸಿರಿವಂತಿಕೆಯನ್ನು ಮತ್ತು ಸುದೀರ್ಘವಾದ ಆಂತರಿಕ ಸಂಬಂಧವನ್ನೂ ಕೂಡ ಹೊಂದಿದ್ದು ಜೊತೆಗೆ ಭಾರತದ ಕುರಿತಂತೆ ಈ ರಾಷ್ಟ್ರಗಳಿಗೆ ಸಹಜವಾದ ಪ್ರೀತಿ ಇದೆ. ಅದಲ್ಲದ ಸುತ್ತಮುತ್ತಲಿನ ದೇಶಗಳು ಸಹಬಾಳ್ವೆಯಿಂದಿದ್ದರೂ ಸಹ ಇಂಗ್ಲೆಂಡ್ ಮಾತ್ರ ಸ್ವಲ್ಪ ಮಟ್ಟಿಗೆ ತಕರಾರು ಎತ್ತಿತ್ತು!! ಇದೇ ಸಮಯದಲ್ಲಿ ಇಂಗ್ಲೆಂಡಿನ ಪ್ರಧಾನಿಯನ್ನು ಬೇಟಿಯಾದ ಸಂದರ್ಭದಲ್ಲಿ  ಭಾರತದಲ್ಲಿ ಮೋಸ ಮಾಡಿ ಇಂಗ್ಲೆಂಡಿಗೆ ಪಲಾಯನಗೈದ ಮಲ್ಯ , ಲಲಿತ್ ಮೋದಿಯಂತಹವರನ್ನು ವರ್ಗಾಯಿಸಬೇಕೆಂದು ಕೇಳಿಕೊಂಡರು ಮೋದಿಜೀ!! ಇಂಗ್ಲೆಂಡ್ ಸರಕಾರ ಬಹಳ ಎಚ್ಚರಿಕೆಯಿಂದ ಉತ್ತರಿಸಿ ಭಾರತದ ಜೈಲುಗಳಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿ ಆ ನಂತರ ಈ ಕುರಿತು ಮಾತನಾಡುತ್ತೇವೆ ಎಂದರು!! ಆದರೆ ನಮ್ಮ ಸ್ವಾಭೀಮಾನಿ ಮೋದಿ ಕೊಟ್ಟ ಉತ್ತರ ಹೇಗಿತ್ತು ಗೊತ್ತೇ? ಇದೇ ಜೈಲಿನಲ್ಲಿ ನೆಹರೂ, ಗಾಂಧಿಯಂತಹ ಮಹಾನ್ ನಾಯಕನ್ನೇ ಇಟ್ಟಿದ್ದೀರಿ ಎಂದು ನೆನಪಿರಲಿ ಎಂದು ಬಿಟ್ಟರು!!

Image result for ingland pm with modi

ಅವರು ಇಂಗ್ಲೆಂಡಿನೊಂದಿಗೆ ಕೈ ಚಾಚುವಂತ ಯಾವ ಒಪ್ಪಂದಕ್ಕೂ ಸಿದ್ಧವಿರಲಿಲ್ಲ. ಭಾರತ ಮತ್ತು ಇಂಗ್ಲೆಂಡಿನ ನಡುವೆ ಅಕ್ರಮ ವಲಸೆಗಾರರ ಸಮಸ್ಯೆಯನ್ನು ನಿವಾರಿಸಬೇಕೆಂದು ಪ್ರಧಾನಿ ತೆರೆಸಾ ಕೇಳಿಕೊಂಡಿದ್ದರು. ನರೇಂದ್ರಮೋದಿ ಅದಕ್ಕೆ ಸಿದ್ಧವೆಂದೂ ಆದರೆ ವೀಸಾ ನಿಯಮಗಳ ಸಡಲೀಕರಣ ಮಾಡಲೇಬೇಕಂದು ಹಠ ಹಿಡಿದು ಕುಳಿತರು. ಇಂಗ್ಲೆಂಡ್ ನಿರಾಕರಿಸಿದಾಗ ಮುಲಾಜಿಲ್ಲದೇ ಒಪ್ಪಂದಕ್ಕೆ ಸಹಿ ಮಾಡದೇ ಎದ್ದು ಬಂದುಬಿಟ್ಟರು. ಮೋದಿಯವರಿಗೆ ಚೆನ್ನಾಗಿ ಗೊತ್ತು. ಸುತ್ತ-ಮುತ್ತಲಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ಬೆಂಬಲಿಸಲು ನಿಂತಿರುವಾಗ ಇಂಗ್ಲೆಂಡು ಭಾರತದ ಮಾತನ್ನು ಕೇಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಬರಲಿರುವ ದಿನಗಳಲ್ಲಿ ತನ್ನೊಡಲೊಳಗೆ ಅಡಗಿರುವ ಮಲ್ಯಾ, ಲಲಿತ್ ಮೋದಿಯವರನ್ನು ಭಾರತಕ್ಕೆ ಒಪ್ಪಿಸಲೇಬೇಕಾದ ಪರಿಸ್ಥಿತಿಗೆ ಇಂಗ್ಲೆಂಡ್ ಸಿಲುಕುವುದು ಶತ-ಪ್ರತಿಶತ ಖಾತ್ರಿ!!

Image result for china pm with modi

ತದನಂತರ ಮೋದಿಜೀ ಚೀನಾ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುವಂತೆ ಚೀನಾಕ್ಕೆ ಭೇಟಿ ನೀಡಿದ್ದರು!! ಬೇರೆ ದೇಶದ ನಾಯಕರನ್ನು ಅಸಡ್ಡೆಯಿಂದ ಯವಾಗಲೂ ಬರಮಾಡಿಕೊಳ್ಳುವ ಚೀನಾದ ಪ್ರಧಾನಿ ನರೇಂದ್ರ ,ಮೋದೀಜಿಯನ್ನು ಮಾತ್ರ ಅತ್ಯಂತ ಗೌರವದಿಂದನೇ ಬರಮಾಡಿಕೊಂಡರು!! ನರೇಂದ್ರ ಮೊದೀಜೀಯ ಪ್ರತೀಯೊಂದು ಮಾತನ್ನು ಕಿವಿಗೊಟ್ಟು ಯಾವುದಕ್ಕೂ ತಕರಾರು ಎತ್ತಲಿಲ್ಲ ಚೀನಾ ಪ್ರಧಾನಿ!! ನರೇಂದ್ರ ಮೋದೀಜಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದ ನಂತರ ಇಡೀ ಚೀನಾಗೆ ಬದಲಾವಣೆಯ ಗಾಳಿ ಬೀಸಿದೆ ಅಂತಾನೇ ಹೇಳಬಹುದು!! ಯಾಕೆಂದರೆ ಇದಕ್ಕಿಂತ ಮುಂಚಿತವಾಗಿ ಪದೇ ಪದೇ ಪಾಕ್ ಜೊತೆ ಸೇರಿಕೊಂಡು ಭಾರತದ ವಿರುದ್ಧ ಕ್ಯಾತೆ ತೆಗೆಯುತ್ತನೇ ಇತ್ತು!! ಆದರೆ ಮೋದೀಜೀ ಅಧಿಕಾರವಹಿಸಿದ ಬಳಿಕ ಮಾತ್ರ ತುಂಬಾ ಯೋಚಿಸಿ ನಿರ್ಧಾರ ತೆಗೆಯುತ್ತಿದೆ ಚೀನಾ!! ಮೋದೀಜೀ ಭೇಟಿಯ ಸಮಯದಲ್ಲಿ ಒನ್ ಬೆಲ್ಟ್ ಒನ್ ರೋಡ್ ಬಗ್ಗೆ ಯಾವ ಮಾತನ್ನು ಆಡದೆ ಗಪ್ ಚುಪ್ ಆಗಿದ್ದದ್ದು ಆಶ್ಚರ್ಯದ ಸಂಗತಿಯಂತನೇ ಹೇಳಬಹುದು!! ಇದೇ ಮೋದೀ ಹವಾ ಅಂತ ಹೇಳೋದು!! ಯಾಕೆಂದರೆ ಭಾರತವನ್ನು ಇಷ್ಟರ ಮಟ್ಟಿಗೆ ಕೊಂಡೊಯ್ದಿದ್ದಾರೆ ಎಂದರೆ ನರೇಂದ್ರ ಮೋದಿಜೀಯಂತಹ ಮಹಾನ್ ವ್ಯಕ್ತಿಯಿಂದ ಮಾತ್ರ ಸಾಧ್ಯ!!

Image result for Khadga Prasad Oli pm with modi

ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ನಿರಂತರವಾಗಿ ಭಾಗವಹಿಸಿದ ಮೋದಿಜೀ ನಂತರ ನೇಪಾಳ ಪ್ರವಾಸವನ್ನು ಮಾಡುತ್ತಾರೆ!! ತಾನು ಪ್ರದಾನಿಯಾದೊಡನೆ ನೇಪಾಳಕ್ಕೆ ಧಾವಿಸಿ ಅಪಾರ ಜನಮನ್ನಣೆಯನ್ನು ಕೂಡಾ ಗಳಿಸಿದ್ದರು!! ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷವು ಬರದಂತೆ ತಡೆಯುವಲ್ಲಿ ಮೋದಿ ಪಾತ್ರ ಬಲು ದೊಡ್ಡದು!! ತದ ನಂತರ ಮೊದೀಜೀ ಅಪಾರ ಟೀಕೆಗೆ ಗುರಿಯಾಗಿದ್ದರು!!ಚೀನಾ ನೇಪಾಳಕ್ಕೆ ಹತ್ತಿರವಾಗುವುದನ್ನು ತಡೆದು ಜಾಗತಿಕ ಮಟ್ಟದಲ್ಲಿ ನೇಪಾಳದೊಂದಿಗಿನ ತನ್ನ ಬಾಂಧವ್ಯವನ್ನು ಮತ್ತೆ ಸಾಬೀತುಪಡಿಸುವ ಧಾವಂತದಲ್ಲಿದ್ದ ನರೇಂದ್ರಮೋದಿ ನೇಪಾಳದ ಪ್ರಧಾನಿ ಓಲಿಯವರನ್ನು ಭಾರತಕ್ಕೆ ಕರೆಸಿಕೊಂಡು ಅಪಾರವಾದ ಗೌರವ ಕೊಟ್ಟದ್ದಲ್ಲದೇ ಈಗ ತಾವೇ ನೇಪಾಳದೆಡೆಗೆ ಧಾವಿಸಿದರು. ಈ ಬಾರಿ ಅವರು ಕಾಠ್ಮಂಡುವಿಗಿಂತ ಜನಕಪುರವನ್ನೇ ವಿಶೇಷವಾಗಿ ಆಯ್ದುಕೊಂಡು ಅಲ್ಲಿ ಕಾರ್ಯಕ್ರಮ ಮಾಡಿದ್ದಲ್ಲದೇ ಪ್ರವಾಸೋದ್ಯಮದ ಒಂದು ಯೋಜನೆಯನ್ನು ಅಲ್ಲಿ ಘೋಷಿಸಿದರು. ಜನಕ್ಪುರ-ಅಯೋಧ್ಯಾ ಬಸ್ ಸಂಚಾರವನ್ನು ಆರಂಭಿಸುವುದರ ಜೊತೆಗೆ ಜನಕಪುರದ ಅಭಿವೃದ್ಧಿಗೆ 100 ಕೋಟಿ ರೂಪಾಯಿಯ ಸಹಾಯವನ್ನೂ ಘೋಷಿಸಿದರು. ಪ್ರಧಾನಿ ಓಲಿಯವರನ್ನು ಕಾಠ್ಮಂಡುವಿನಲ್ಲಿ ಭೇಟಿ ಮಾಡಿ ಹಾಳಾಗಿದ್ದ ಸಂಬಂಧವನ್ನು ತಿಳಿಗೊಳಿಸುವ ಬಲು ದೊಡ್ಡ ಪ್ರಯಾಸವನ್ನು ಮಾಡಿದರು. ದೂರದಿಂದ ನೋಡುವವರಿಗೆ ನೇಪಾಳ ಮೋದಿಯವರ ಮತ್ತೊಂದು ವಿದೇಶ ಪ್ರವಾಸವಷ್ಟೇ. ಆದರೆ ಬಲ್ಲವರಿಗೆ ಮಾತ್ರ ಇದು ಚೀನಾದ ತೆಕ್ಕೆಯಿಂದ ನೇಪಾಳವನ್ನು ಸೆಳೆದುಕೊಳ್ಳುವ ಬಲು ದೊಡ್ಡ ಪ್ರಯಾಸವೆಂದು ಅರ್ಥವಾದೀತು.!!

Image result for modi with russian pm

ನೇಪಾಳ ಪ್ರವಾಸದ ಬಳಿಕ ಮೋದೀಜೀ ರಷ್ಯಾಕ್ಕೆ ಧಾವಿಸಿದರು!! ಒಂದು ಅಂಶವನ್ನು ಗಮನಿಸಿ ಮೋದೀ ವಿದೇಶಿ ಪ್ರವಾಸ ಕೈಗೊಳ್ಳುವುದು ಮೋಜು ಮಸ್ತಿ ಮಾಡೋಕ್ಕಲ್ಲ ಬದಲಾಗಿ ನಮ್ಮ ದೇಶದ ಅಭಿವೃದ್ಧಿಗಾಗಿ!! ರಷ್ಯಾ ಜೊತೆ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ವ್ಯವಹಾರಗಳನ್ನು ಒಪ್ಪಂದಗಳನ್ನು ಮಾಡಿದ್ದಾರೆ!! ಅದರ ಬೆನ್ನಲ್ಲೇ ಮೋದಿ ಇಂಡೋನೇಷ್ಯಾ, ಮಲೇಷಿಯಾ, ಸಿಂಗಾಪೂರಗಳ ಪ್ರವಾಸವನ್ನು ಕೈಗೊಂಡರು!! ಪ್ರತಿಯೊಂದು ರಾಷ್ಟ್ರವೂ ಅದ್ಧೂರಿಯಾಗಿ ಮೋದೀಜೀಯನ್ನು ಸ್ವಾಗತ ಮಾಡುವಾಗ ಇಲ್ಲಿ ಕಾಂಗ್ರೆಸ್ಸಿಗರಿಗೆ ಒಳಗೊಳಗೆ ಉರಿಯುತ್ತಿತ್ತು !! ಮುಂದಿನ ದಿನಗಳಲ್ಲಿ ಇಡೀ ದೇಶ ಬದಲಾವಣೆಯ ಮಹಾಪೂರವೇ ಆಗಲಿದೆ!! ಇದು ಮೋದೀ ಯುಗ…. ಏನೋ ಮುಂದೆ ಪವಾಡ ನಡೆಯುತ್ತೆ ಅಂತಾ ಈ ದೇಶದ ಜನರಿಗಲ್ಲದೆ, ಇಡೀ ವಿಶ್ವವೇ ಹೇಳುತ್ತಿದೆ ಎಂದರೆ ಮೋದೀಜೀ ಒಬ್ಬ ಸಾಮಾನ್ಯ ಮನುಷ್ಯನಾದರೂ ದೇವ ಮಾನವ ಅಂತಾನೇ ಹೇಳಬಹುದು!! ಜೀ ಮೋದೀಜೀ!!

ಕೃಪೆ: https://neladamaatu.wordpress.com

Tags

Related Articles

Close