ಪ್ರಚಲಿತ

ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಗುಲಾಮ್ ನಬಿ ಆಜಾದ್!! ವಿವಾದಾತ್ಮಕ ಹೇಳಿಕೆಗೆ ತಕ್ಕ ತಿರುಗೇಟು ನೀಡಿದ ಕೇಂದ್ರ ಸಚಿವ!! 

ಕಣಿವೆ ರಾಜ್ಯದಲ್ಲಿ ಎದುರಾಗಿರುವ ರಾಷ್ಟ್ರಪತಿ ಆಡಳಿತ ಲಾಭವನ್ನು ಪಡೆದು, ಉಗ್ರ ಮತ್ತು ಪ್ರತ್ಯೇಕತವಾದಿಗಳ ಹುಟ್ಟಡಗಿಸಲು ನರೇಂದ್ರ ಮೋದಿ ಸರಕಾರವು ಮಹತ್ವದ ಯೋಜನೆಯನ್ನು ರೂಪಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದಾರೆ!! ಈ ಹಿನ್ನಲೆಯಲ್ಲಿ ಇದೀಗ ಗುಲಾಮ್ ನಬಿ ಆಜಾದ್ ಅವರ ಹೇಳಿಕೆಗೆ ಬಿಜೆಪಿ ತಕ್ಕ ತಿರುಗೇಟು ನೀಡಿದೆ!!

ಹಗಲಿರುಳೆನ್ನದೆ, ಚಳಿ ಗಾಳಿಯನ್ನು ಲೆಕ್ಕಿಸದೇ ದೇಶ ಕಾಯುತ್ತಿರುವ ಯೋಧರು, ದೇಶದ ರಕ್ಷಣೆಯಲ್ಲಿ ತೊಡಗಿದ್ದರೆ, ಮಂದಮತಿಯ ಬುದ್ದಿಜೀವಿಗಳಿಗೆ ದೇಶದ ಸೈನಿಕರು ಉಗ್ರರಂತೆ ಕಂಡಿರುವುದು ಮಾತ್ರ ನಿಜಕ್ಕೂ ಕೂಡ ಬೇಸರದ ಸಂಗತಿಯೇ ಆಗಿದೆ. ಆದರೆ ಮೈಯೆಲ್ಲಾ ಕಣ್ಣಾಗಿಸಿ, ದೇಶದ ರಕ್ಷಣೆಯ ಭರದಲ್ಲಿ ಉಗ್ರರನ್ನು ಹೊಡೆದುರುಳಿಸುತ್ತಿರುವ ಭಾರತೀಯ ಯೋಧರಿಗೆ ಆತ್ಮಸ್ಥೈರ್ಯ ನೀಡುವ ಹೇಳಿಕೆಗಳನ್ನು ಹೇಳುವ ಬದಲು ಉಗ್ರರೇ ಮೆಚ್ಚಿಕೊಳ್ಳುವಂತಹ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ರಾಷ್ಟ್ರದ್ರೋಹದ ಕೆಲಸವಲ್ಲದೇ ಮತ್ತೇನೂ ಅಲ್ಲ!!

ಹೌದು…. ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆಗೆ ಈಗಾಗಗಲೇ ಉಗ್ರ ಸಂಘಟನೆಯಾದ ಲಷ್ಕರ್-ಇ-ತೊಯ್ಬಾ ಬೆಂಬಲ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ, ಗುಲಾಂ ನಬಿ ಆಜಾದ್ ಅವರ ಹೇಳಿಕೆಯ ಕುರಿತು , ಈ ಮೇಲ್ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಮೂಲದ ಎಲ್ ಇ ಟಿ ಉಗ್ರ ಸಂಘಟನೆಯ ವಕ್ತಾರ ಡಾ. ಅಬ್ದುಲ್ ಘಜ್ನವಿ, ಕಾಶ್ಮೀರ ಕುರಿತ ಗುಲಾಂ ನಬಿ ಆಜಾದ್ ಅವರ ಹೇಳಿಕೆ ಮೊದಲಿನಿಂದಲೂ ನಾವು ಪ್ರತಿಪಾದಿಸಿಕೊಂಡಂತೇ ಇದೆ ಎಂದು ಹೇಳಿದ್ದಾರೆ.

Ghulam Nabi Azad

ಅಷ್ಟೇ ಅಲ್ಲದೇ, ರಾಜ್ಯದಲ್ಲಿ ಮತ್ತೆ ರಾಜ್ಯಪಾಲರ ಆಡಳಿತ ಹೇರುವ ಮೂಲಕ ಈ ಹಿಂದೆ ಜಗಮೋಹನ್ ಅವಧಿಯಲ್ಲಿ ನಡೆದಿದ್ದ ಅಮಾಯಕರ ನರಮೇಧವನ್ನು ಮತ್ತೆ ಮಾಡಲು ಭಾರತ ಸರಕಾರ ಹೊರಟಿದೆ. ರಾಜ್ಯಪಾಲರ ಆಡಳಿತ, ರಾಜ್ಯದಲ್ಲಿ ಇನ್ನಷ್ಟು ಪ್ರಮಾಣದಲ್ಲಿ ನಾಗರೀಕರ ಸಾವಿಗೆ ಕಾರಣವಾಗಲಿದೆ ಎಂದು ಹೇಳಿದ್ದಾನೆ. ಆದರೆ, ಗುಲಾಂ ನಬಿ ಆಜಾದ್ ಅವರ ಈ ಹೇಳಿಕೆಯನ್ನು ಒಂದೆಡೆ ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಗುಲಾಂ ನಬಿ ಆಜಾದ್ ಅವರ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತವನ್ನು ಛಿದ್ರ ಮಾಡುವ ಶಕ್ತಿಗಳಿಗೆ ಬೆಂಬಲ ನೀಡುವ ಹೊಸ ಶಕ್ತಿಯಾಗಿ ರಾಹುಲ್ ಗಾಂಧಿ ಅಧ್ಯಕ್ಷತೆಯ ಕಾಂಗ್ರೆಸ್ ಉದಯಿಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ವ್ಯಂಗ್ಯವಾಡಿದ್ದಾರೆ.

ಅಷ್ಟೇ ಅಲ್ಲದೇ, 2012ರಲ್ಲಿ ಜಮ್ಮು-ಕಾಶ್ಮೀರದಲ್ಲಿ 72 ಉಗ್ರರು ಬಲಿಯಾಗಿದ್ದು, 2013ರಲ್ಲಿ 67 ಉಗ್ರರು ಸಾವನ್ನಪ್ಪಿದ್ದರು. ನಾವು 2014ರ ಜೂನ್ ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಧಿಕಾರದ ಗದ್ದುಗೆ ಏರಿದ್ದೇವು. 2014ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ 110 ಉಗ್ರರು ಬಲಿಯಾಗಿದ್ದರು. 2015ರಲ್ಲಿ 108 ಉಗ್ರರು, 2016ರಲ್ಲಿ 150 ಉಗ್ರರು, 2017ರಲ್ಲಿ 217 ಉಗ್ರರು ಹಾಗೂ 2018ರ ಮೇ ವರೆಗೆ 75 ಉಗ್ರರನ್ನು ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಅಂಕಿ, ಅಂಶಗಳ ಮಾಹಿತಿ ನೀಡಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ. ಹೀಗಾಗಿ ಗುಲಾಂ ನಬಿ ಆಜಾದ್ ಅವರು ಹೇಳಿಕೆಯನ್ನು ಲಷ್ಕರ್ ಎ ತೊಯ್ಬಾ ಸ್ವಾಗತಿಸುತ್ತಿದೆ ಎಂದು ಹೇಳಿದರು.

ಈಗಾಗಲೇ, ಪಾಕಿಸ್ತಾನದ ಗಡಿಯಲ್ಲಿ ಸೇನೆ ಗುಂಡಿನ ದಾಳಿ ಆರಂಭಿಸಿದ್ದು, ಇತ್ತ ದೇಶದಲ್ಲಿದ್ದುಕೊಂಡು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಪ್ರತ್ಯೇಕತವಾದಿಗಳಿಗೆ ತಕ್ಕ ಪಾಠವನ್ನು ಕಲಿಸಲು ಮುಂದಾಗಿದೆ. ಅಷ್ಟೇ ಅಲ್ಲದೇ, ಜಮ್ಮು ಕಾಶ್ಮೀರ ಬಂದ್ ಘೋಷಿಸಿರುವ ಪ್ರತ್ಯೇಕತವಾದಿ ಮುಖಂಡರನ್ನು ಬಂಧಿಸಲು ಆರಂಭಿಸಿದೆ. ಗುರುವಾರ ಮೂರು ಗಂಟೆಯಲ್ಲೇ ಪ್ರಮುಖ ಮೂರು ನಾಯಕರನ್ನು ಬಂಧಿಸಿದ್ದು, ಅದರಲ್ಲಿ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲ್ಲಿಕ್ ನನ್ನು ಶ್ರೀನಗರದಲ್ಲಿ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಅದರ ಮರುಕ್ಷಣವೇ ಮತ್ತೋರ್ವ ಪ್ರತ್ಯೇಕವಾದಿ ಉಗ್ರ ಹಸ್ತಕ ಹಿಲಲ್ ವಾರ್ನನ್ನು ಬಂಧಿಸಲಾಗಿದೆ. ವಾರ್ ನ ಬಂಧನ ಸುದ್ದಿ ಕೇಳಿ ಮತ್ತೋರ್ವ ಪ್ರತ್ಯೇಕತವಾದಿ ಮಿರ್ವೈಸ್ ಉಮರ್ ಫಾರೂಕ್ ಬಂಧನ ಘೋಷಿಸಿದ್ದರಿಂದ ಆತನನ್ನು ಬಂಧಿಸಿ, ಪೊಲೀಸರು ಗೃಹ ಬಂಧನಕ್ಕೆ ದೂಡಿದ್ದಾರೆ. ಕೇವಲ ಮೂರು ಗಂಟೆಯ ಅವಧಿಯಲ್ಲಿ ಮೂವರು ಪ್ರತ್ಯೇಕತವಾದಿ ನಾಯಕರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು ಉಗ್ರ ನಿಗ್ರಹ ಕಾರ್ಯಾಚರಣೆಗೆ ಮಿಂಚಿನ ವೇಗ ದೊರೆತಿರುವುದೇ ಉಗ್ರರ ಪಾಲಿಗೆ ಮರಣ ಮೃದಂಗ ಬಾರಿಸಿದಂತಾಗಿದೆ.

ಮೂಲ:
http://www.kannadaprabha.com/nation/army-kills-more-civilians-than-terrorists-congress-leader-ghulam-nabi-azad-/318705.html

– ಅಲೋಖಾ

Tags

Related Articles

Close