ಪ್ರಚಲಿತ

ಧರ್ಮ ವಿರೋಧಿ ಡಸ್ಟ್ ಆಸ್ಕಿಂಗ್ ಪ್ರಕಾಶ್ ರಾಜ್‌ರಿಂದ ಮತ್ತೊಂದು ವಿವಾದ

ಜಸ್ಟ್ ಆಸ್ಕಿಂಗ್ ಡಸ್ಟ್ ಮೈಂಡೆಡ್ ಪ್ರಕಾಶ್ ರಾಜ್ ಮತ್ತು ವಿವಾದಗಳಿಗೆ ಅದೇನೋ ಒಂದು ರೀತಿಯ ನಂಟು. ತಾನು ತೆರೆಮರೆಗೆ ಸರಿಯುತ್ತಿದ್ದೇನೆ ಎಂಬುದರ ಅರಿವಾದರೆ ಸಾಕು, ಏನೋ ಒಂದು ವಿವಾದ ಸೃಷ್ಟಿಸಿ ಮತ್ತೆ ಸುದ್ದಿಗೆ ಬರುತ್ತಾರೆ. ಜನರಿಂದ ಉಗಿಸಿಕೊಂಡರೂ ಪರವಾಗಿಲ್ಲ, ತಾನು ಸುದ್ದಿಯಲ್ಲಿ ಇರಬೇಕು. ತಾನು ಗಂಜಿ ಗಿಟ್ಟಿಸಿಕೊಳ್ಳಬೇಕು ಎನ್ನುವ ಹಪಹಪಿಯಲ್ಲಿ ಏನೋ ಒಂದು ಅವಾಂತರ ಮಾಡಿಕೊಳ್ಳುವುದನ್ನೇ ಪ್ರಕಾಶ್ ರಾಜ್ ತಪಸ್ಸಿನ ಹಾಗೆ ಅನುಸರಿಸಿಕೊಂಡು ಬರುತ್ತಿದ್ದಾರೆ ಎನ್ನುವುದು ಸತ್ಯ.

ಕಳೆದ ಕೆಲ ಸಮಯದ ಹಿಂದಷ್ಟೇ ಇಸ್ರೋ ಚಂದ್ರಯಾನವನ್ನು, ಭಾರತದ ವಿಜ್ಞಾನಿಗಳ ಶ್ರಮವನ್ನು, ಪ್ರಧಾನಿ ಮೋದಿ ಅವರನ್ನು, ಇಸ್ರೋದ ಮಾಜಿ ಅಧ್ಯಕ್ಷ ಕೆ. ಶಿವನ್ ಅವರನ್ನು ವ್ಯಂಗ್ಯವಾಡಿ ಟ್ವೀಟ್ ಮಾಡುವ ಮೂಲಕ ಕೋಟ್ಯಾಂತರ ಜನರ ಆಕ್ರೋಶಕ್ಕೆ ಕಾರಣವಾಗಿ ಉಗಿಸಿಕೊಂಡಿದ್ದ ಪ್ರಕಾಶ್ ರಾಜ್, ಸದ್ಯ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಜನರು ತನ್ನನ್ನೆಲ್ಲಿ ಮರೆತು ಬಿಟ್ಟಿದ್ದಾರೋ ಎಂಬ ಸಂದೇಹ ಬಂತೋ ಏನು, ತಕ್ಷಣ ಸನಾತನ ಧರ್ಮವನ್ನು ಅವಹೇಳನ ಮಾಡಿ ಟ್ವೀಟ್ ಮಾಡುವ ಮೂಲಕ ಜನರಿಂದ ಮತ್ತೆ ಉಗಿಸಿಕೊಳ್ಳುವ ಕೆಲಸ ಮಾಡಿಕೊಂಡಿದ್ದಾರೆ.

ಚಂದ್ರಯಾನದ ಯಶಸ್ಸು ಡಸ್ಟ್ ಆಸ್ಕಿಂಗ್ ಪ್ರಕಾಶ್‌ಗೆ ಸಹಿಸಲಸಾಧ್ಯ ಎಂಬಂತೆ ಉರಿಸಿತ್ತು. ಈಗ ಸನಾತನ ಧರ್ಮದ ಉರಿ ತಾಳಲಾಗದೆ ವಿವಾದಾತ್ಮಕ ಹೇಳಿಕೆ ನೀಡಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕಡಿಮೆ ಪದಗಳನ್ನು ಆದರೆ ಕಠಿಣ ಪದಗಳನ್ನು ಬಳಕೆ ಮಾಡಿ ಸನಾತನ ಧರ್ಮವನ್ನು ಅವಹೇಳನ ಮಾಡುವ ಮೂಲಕ ಈ ಬಾರಿ ಪ್ರಕಾಶ್ ರಾಜ್ ಸುದ್ದಿಯಲ್ಲಿರುವುದು.

ಹಿಂದೂಗಳು ತನಾತನಿಗಳಲ್ಲ. ಆದರೆ ತನಾತನಿಗಳು ಮಾನವ ವಿರೋಧಿಗಳು. ಈ ಅಂಶಕ್ಕೆ ನಿಮ್ಮ ಒಪ್ಪಿಗೆ ಇದೆ ಎಂದಾದರೆ ರಿ ಟ್ವೀಟ್ ಮಾಡಿ ಎಂದಿದ್ದಾರೆ. ಈ ಟ್ವೀಟ್‌ಗೆ ಇ.ವಿ. ರಾಮ ಸ್ವಾಮಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿತ್ರಗಳನ್ನು ಬಳಕೆ ಮಾಡಿದ್ದಾರೆ. ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಬಳಸಿ ಈ ಡಸ್ಟ್ ಮೈಂಡೆಡ್ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದು, ಇದು ಸದ್ಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ.

ಭಾರತದ ಬೇರು ಸನಾತನ ಧರ್ಮ. ಹಿಂದೂ ರಾಷ್ಟ್ರದಲ್ಲಿದ್ದುಕೊಂಡು ಸನಾತನ ಧರ್ಮದ ವಿರುದ್ಧ ಮಾತನಾಡುವ ಪ್ರಕಾಶ್ ರಾಜ್ ವ್ಯಕ್ತಿತ್ವಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಹೀಗಿದ್ದರೂ ಎಚ್ಚೆತ್ತುಕೊಳ್ಳದ ಡಸ್ಟ್ ಆಸ್ಕಿಂಗ್ ಪ್ರಕಾಶ್ ರಾಜ್, ಮತ್ತೆ ಮತ್ತೆ ಹಿಂದೂಗಳನ್ನು ಕೆಣಕುತ್ತಿದ್ದು, ಅಪಾಯವನ್ನು ಬೇಕು ಬೇಕೆಂದೇ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆಯೋ ಎಂಬ ಸಂದೇಹ ಬಂದರೂ ಅದನ್ನು ತಪ್ಪು ಎನ್ನುವ ಹಾಗಿಲ್ಲ.

ಚಲನಚಿತ್ರಗಳನ್ನು ಮಾಡಿಕೊಂಡು ಹಣ ಗಳಿಸಿದ್ದು ಸಾಲದೆ, ಧರ್ಮ ವಿರೋಧಿ, ರಾಷ್ಟ್ರ ವಿರೋಧಿ ಹೇಳಿಕೆಗಳ ಮೂಲಕವೇ ಸುದ್ದಿಯಾಗಲು ಹೊರಟ ಪ್ರಕಾಶ್ ರಾಜ್, ಹೀಗೆಯೇ ತಮ್ಮ ಧೋರಣೆ ಮುಂದುವರೆಸಿದಲ್ಲಿ ಮತ್ತಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ನಾಲಿಗೆ ಮೇಲೆ ಹಿಡಿತ ಸಾಧಿಸದೇ ಹೋದಲ್ಲಿ ಪ್ರಕಾಶ್ ರಾಜ್ ಮುಂದಿನ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಬಹುದು ಎನ್ನುವುದು ನಿಸ್ಸಂಶಯ.

Tags

Related Articles

Close