ಪ್ರಚಲಿತ

 ಬ್ರೇಕಿಂಗ್: ಸಿಎಂ ಗೆ ಓಪನ್ ಛಾಲೆಂಜ್ ನೀಡಿದ ಬಳ್ಳಾರಿ ಕಿಂಗ್.! ರಾಮುಲು ಆರ್ಭಟಕ್ಕೆ ಕಂಗಾಲಾದ ಸಿದ್ದರಾಮಯ್ಯ.!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಹೆಚ್ಚಾಗುತ್ತಿದ್ದಂತೆ ರಾಜಕೀಯ ನಾಯಕರ ಪರಸ್ಪರ ವಾಗ್ದಾಳಿಯೂ ಭಾರೀ ಜೋರಾಗುತ್ತಿದೆ. ರಾಜ್ಯ ರಾಜಕಾರಣದಲ್ಲಿಯೇ ಈ ಹಿಂದೆ ನೋಡಿರದಂತಹ ಸ್ಥಿತಿ ಸದ್ಯ ರಾಜ್ಯದಲ್ಲಿದೆ ಎಂದರೆ , ಈ ಬಾರಿಯ ಚುನಾವಣೆ ಯಾವ ಮಟ್ಟಿಗೆ ಜನರ ನಿದ್ದೆ ಕೆಡಿಸಿದೆ ಎಂಬುದು ತಿಳಿಯುತ್ತದೆ. ಯಾಕೆಂದರೆ ತಮ್ಮ ಪಕ್ಷದ ಪರ ಪ್ರಚಾರ ಮಾಡುವ ವೇಳೆ ಎದುರಾಳಿ ಪಕ್ಷಗಳನ್ನು ದೂರುವುದು ಮಾಮೂಲಿ, ಆದರೆ ಈ ಬಾರಿ ನಡೆಯುತ್ತಿರುವ ಸಮರ ಇಡೀ ರಾಜಕೀಯ ವಲಯದಲ್ಲೇ ಸುದ್ದಿ ಮಾಡುತ್ತಿದೆ.

ಇಡೀ ರಾಜ್ಯವೇ ಸಿದ್ದರಾಮಯ್ಯನವರ ಜನವಿರೋಧಿ ನೀತಿಗೆ ದಿಕ್ಕಾರ ಹಾಕಿ, ಕಾಂಗ್ರೆಸನ್ನು ಕುತ್ತೊಗೆಯಬೇಕೆಂಬ ನಿರ್ಧಾರಕ್ಕೆ ಬಂದು ಹೊಸ ಸರಕಾರ ರಚನೆಯಾಗಲಿ ಎಂಬ ಕುತೂಹಲದಲ್ಲಿದ್ದಾರೆ . ಇತ್ತ ಸಿದ್ದರಾಮಯ್ಯನವರು ಸೋಲುವ ಭೀತಿಯಲ್ಲಿ ಎರಡೆರಡು ಕಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.ಆದರೆ ಸಿಎಂ ಸ್ಪರ್ಧಿಸುತ್ತಿರುವ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸನ್ನು ಮಣಿಸಲು ಸಜ್ಜಾದ ಬಿಜೆಪಿ , ಬಳ್ಳಾರಿ ಕಿಂಗ್ ಶ್ರೀ ರಾಮುಲು ಅವರನ್ನು ಕಣಕ್ಕಿಳಿಸಿರುವುದು ಈಗಾಗಲೇ ತಿಳಿದಿರುವ ವಿಚಾರ‌. ಶ್ರೀ ರಾಮುಲು ಪರ ಭರ್ಜರಿ ಪ್ರಚಾರ ನಡೆಯುತ್ತಿದ್ದಂತೆ ಇಂದು ರಾಮುಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲೆಸೆದಿದ್ದಾರೆ..!

Image result for siddaramaiah

ಸಿಎಂಗೆ ಸವಾಲೆಸೆದ ರಾಮುಲು..!

ಶ್ರೀರಾಮುಲು ಅವರ ಮಾತೇ ಹಾಗೆ. ಯಾವ ಅಧಿಕಾರದ ಬಲಕ್ಕೂ ಬಗ್ಗುವವರಲ್ಲ. ಸಿದ್ದರಾಮಯ್ಯನವರ ವಿರುದ್ದ ಪದೇ ಪದೇ ಹೇಳಿಕೆ ನೀಡಿ ಕಾಂಗ್ರೆಸ್ ನ್ನು ಬೆಚ್ಚಿಬೀಳಿಸುತ್ತಿದ್ದ ರಾಮುಲು ಇಂದು ಸಿದ್ದರಾಮಯ್ಯನವರಿಗೆ ಓಪನ್ ಛಾಲೆಂಜ್ ಹಾಕುವ ಮೂಲಕ ಮತ್ತೆ ಕಾಂಗ್ರೆಸ್ ಗೆ ನಡುಕ ಹುಟ್ಟಿಸಿದ್ದಾರೆ. ಬಾದಾಮಿಯಲ್ಲಿ ಪಕ್ಷದ ಪ್ರಚಾರ ಮಾಡುತ್ತಿರುವ ಶ್ರೀ ರಾಮುಲು , ಸಿದ್ದರಾಮಯ್ಯನವರು ತಾಕತ್ತಿದ್ದರೆ ನನ್ನ ಬಳಿ ಚರ್ಚೆಗೆ ಬರಲಿ , ಅವರು ಈವರೆಗೆ ಮಾಡಿರುವ ಎಲ್ಲಾ ಹಗರಣಗಳನ್ನು ನಾನು ಬಯಲಿಗೆಳೆಯುತ್ತೇನೆ , ಇದನ್ನು ಸ್ವೀಕರಿಸಲು ಸಿಎಂ ಸಾಹೇಬ್ರು ತಯಾರಾಗಿದ್ದಾರೆಯೇ? ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯನವರು ಕಳೆದ ೫ ವರ್ಷದಲ್ಲಿ ಮಾಡಿರುವ ಲೂಟಿ, ಅಧಿಕಾರಿಗಳ ಆತ್ಮಹತ್ಯೆ, ಸಾವಿರಾರು ರೈತರ ಆತ್ಮಹತ್ಯೆ ಇವೆಲ್ಲದಕ್ಕೂ ಸಿದ್ದರಾಮಯ್ಯನವರೇ ನೇರ ಕಾರಣ. ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ಇವೆಲ್ಲದರ ಹಿಂದೆ ರಾಜ್ಯ ಸರಕಾರದ ನೇರ ಕೈವಾಡ ಇದೆ. ನೀವು ಒಪ್ಪಿಕೊಳ್ಳದೇ ಇದ್ದರೆ , ದಾಖಲೆ ಸಮೇತ ನನ್ನ ಬಳಿ ಚರ್ಚೆಗೆ ಬರಬಹುದು ಎಂಬುದಾಗಿ ಸಲಾಲೆಸೆದಿದ್ದಾರೆ.

ಶ್ರೀ ರಾಮುಲು ಅವರ ಛಾಲೆಂಜ್ ಗೆ ಕಂಗಾಲಾಗಿರುವ ಸಿದ್ದರಾಮಯ್ಯನವರು ಯಾವುದೇ ಪ್ರತಿಕ್ರಿಯೆ ನೀಡದೆ ತೆಪ್ಪಗಾಗಿದ್ದಾರೆ. ಯಾಕೆಂದರೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಯೊಂದು ಗಲಭೆಗಳ ಹಿಂದೆಯೂ ರಾಜ್ಯ ಸರಕಾರವೇ ಬೆಂಗಾವಲಾಗಿ ನಿಂತಿರುವುದರಿಂದ ಶ್ರೀ ರಾಮುಲು ಅವರ ಸಾವಾಲಿಗೆ ಯಾವುದೇ ಪ್ರತಿಕ್ರಿಯೆ ಕೇಳಿ ಬಂದಿಲ್ಲ..!

–ಅರ್ಜುನ್

Tags

Related Articles

Close